AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಬಿಟ್ಟು ಹೋಗಿದ್ದಕ್ಕೆ ಇಡೀ ಪ್ರಪಂಚದ ಮೇಲೆ ಸೇಡು: ಮುಂಬೈನಲ್ಲಿ 15 ಸಾವಿರ ಜನರನ್ನು ಮುಗಿಸಲು ಇಲಿ ವಿಷದಿಂದಲೇ ಮಾತ್ರೆ ತಯಾರಿಸಿದ್ದ ಸೈಕೋ

ಮುಂಬೈನ ಮೊಹರಂ ಮೆರವಣಿಗೆಯಲ್ಲಿ 15,000 ಜನರಿಗೆ ವಿಷ ನೀಡಲು ಸಂಚು ರೂಪಿಸಿದ್ದ ಆರೋಪಿ ಫಯ್ಯಾಜ್ ಪ್ರೇಮ್‌ಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಂಕ್ ಫಾಸ್ಫೈಡ್ ಬಳಸಿ ವಿಷದ ಮಾತ್ರೆಗಳನ್ನು ತಯಾರಿಸಿದ್ದ ಈತ, ವೈಯಕ್ತಿಕ ಸೇಡಿಗಾಗಿ ಸಾಮೂಹಿಕ ಹತ್ಯೆಗೆ ಯತ್ನಿಸಿದ್ದಾನೆ. ಎಟಿಎಸ್ ತಂಡವು ಅಂತರರಾಷ್ಟ್ರೀಯ ನಂಟು ಮತ್ತು ಉಗ್ರಗಾಮಿ ಸಂಬಂಧಗಳ ಕುರಿತು ತೀವ್ರ ತನಿಖೆ ನಡೆಸುತ್ತಿದೆ. ಇದು ದೇಶವನ್ನೇ ಬೆಚ್ಚಿಬೀಳಿಸಿದ ಘಟನೆ.

ಪತ್ನಿ ಬಿಟ್ಟು ಹೋಗಿದ್ದಕ್ಕೆ ಇಡೀ ಪ್ರಪಂಚದ ಮೇಲೆ ಸೇಡು: ಮುಂಬೈನಲ್ಲಿ 15 ಸಾವಿರ ಜನರನ್ನು ಮುಗಿಸಲು ಇಲಿ ವಿಷದಿಂದಲೇ ಮಾತ್ರೆ ತಯಾರಿಸಿದ್ದ ಸೈಕೋ
, ಫಯ್ಯಾಜ್ ಪ್ರೇಮ್‌ಜಿ Image Credit source: Google
ಅಕ್ಷಯ್​ ಪಲ್ಲಮಜಲು​​
|

Updated on: Jun 29, 2026 | 7:27 AM

Share

ಮುಂಬೈ, ಜೂ.29: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಇಡೀ ದೇಶವೇ ನಡುಗುವಂತಹ ಭೀಕರ ಹತ್ಯಾಕಾಂಡದ ಸಂಚೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ಶುಕ್ರವಾರ ನಡೆದ ಮೊಹರಂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕೋಟ್ಯಂತರ ಜನರ ಪೈಕಿ 15,000 ಜನರನ್ನು ವಿಷದ ಗುಳಿಗೆ ನೀಡಿ ಕೊಲ್ಲಲು ಸಂಚು ರೂಪಿಸಿದ್ದ 39 ವರ್ಷದ ಆರೋಪಿ ಫಯ್ಯಾಜ್ ಪ್ರೇಮ್‌ಜಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇಲಿಗಳನ್ನು ಕೊಲ್ಲಲು ಬಳಸುವ ತೀವ್ರ ವಿಷಕಾರಿ ರಾಸಾಯನಿಕದಿಂದ ಈತ ಮಾತ್ರೆಗಳನ್ನು ತಯಾರಿಸಿದ್ದಾಗಿ ತನಿಖೆಯ ವೇಳೆ ಬಯಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಪುಣೆಯ ವಿಮಾನ ನಗರದ ನಿವಾಸಿಯಾದ ಫಯ್ಯಾಜ್ ಪ್ರೇಮ್‌ಜಿ ಬಿಬಿಎ (BBA) ಪದವೀಧರನಾಗಿದ್ದು, ಆತನ ಮನೆಯ ಸುತ್ತಮುತ್ತ ಇದ್ದ ಅತಿಯಾದ ಇಲಿಗಳ ಕಾಟದಿಂದಲೇ ಈ ಪ್ಲಾನ್ ಹೊಳೆದಿದೆ. ಇಲಿಗಳನ್ನು ಸಾಯಿಸಲು ಬಳಸುವ ಜಿಂಕ್ ಫಾಸ್ಫೈಡ್ ಎಂಬ ತೀವ್ರ ವಿಷಕಾರಿ ಪುಡಿಯನ್ನು ಬಳಸಿ ಈತ ಕ್ಯಾಪ್ಸೂಲ್‌ಗಳನ್ನು ತಯಾರಿಸಿದ್ದ. ಈ ವಿಷದ ಪುಡಿ ಮಾನವ ದೇಹದ ಮೇಲೆ ಎಷ್ಟು ಪ್ರಮಾಣದಲ್ಲಿ ಮತ್ತು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಈತ ಗೂಗಲ್ ಮತ್ತು ಎಐ ತಂತ್ರಜ್ಞಾನದ ಮೂಲಕ ವ್ಯಾಪಕವಾಗಿ ಸಂಶೋಧನೆ ನಡೆಸಿ, ಆನ್‌ಲೈನ್‌ನಲ್ಲಿ 50 ಕೆಜಿ ಜಿಂಕ್ ಫಾಸ್ಫೈಡ್ ಹಾಗೂ 30,000 ಖಾಲಿ ಕ್ಯಾಪ್ಸೂಲ್‌ಗಳನ್ನು ಆರ್ಡರ್ ಮಾಡಿದ್ದ.

ಶುಕ್ರವಾರ ಮುಂಬೈನ ಬೈಕುಲ್ಲಾದಲ್ಲಿ ಮೊಹರಂ ಮೆರವಣಿಗೆ ನಡೆಯುತ್ತಿದ್ದಾಗ, ಈತ ಜನರ ಬಳಿ ತೆರಳಿ ಇವು ದೇಹದ ನೋವು ನಿವಾರಕ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳೆಂದು ಸುಳ್ಳು ಹೇಳಿ ಹಂಚುತ್ತಿದ್ದ. ಈತನ ವಿಚಿತ್ರ ವರ್ತನೆಯನ್ನು ಗಮನಿಸಿದ ಅಲ್ಲಿನ ಕೆಲವು ಮಹಿಳಾ ಸ್ವಯಂಸೇವಕರು ತಕ್ಷಣವೇ ಈತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಾಗಲೇ ಈ ಮಾತ್ರೆಗಳನ್ನು ಸೇವಿಸಿದ್ದ ಹಲವು ಭಕ್ತರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಬಂಧನದ ವೇಳೆ ಈತನ ಬಳಿ ಸುಮಾರು 15,000 ಜೀವಂತ ವಿಷದ ಮಾತ್ರೆಗಳು ಪತ್ತೆಯಾಗಿದ್ದು, ಇದನ್ನು ಪುಣ್ಯದ ಕೆಲಸ ಎಂದು ನಂಬಿಸಿ ಇತರರಿಂದಲೂ ಹಂಚಿಸಲು ಈತ ಪ್ರಯತ್ನಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಮನೆ ಶಿಫ್ಟ್ ಮಾಡಿದವರಿಗೆ ಬಿಗ್ ಶಾಕ್ ಕಾದಿದೆ; ನಾಳೆಯಿಂದ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ‘SIR’ ಮತದಾರರ ಪಟ್ಟಿ ಪರಿಷ್ಕರಣೆ

ಪತ್ನಿ ಬಿಟ್ಟು ಹೋಗಿದ್ದಕ್ಕೆ ಇಡೀ ಪ್ರಪಂಚದ ಮೇಲೆ ಸೇಡು:

ಆರೋಪಿ ಫಯ್ಯಾಜ್ ಪ್ರೇಮ್‌ಜಿ ಪುಣೆಯ ಕೊನಾರ್ಕ್ ನಗರ ಟೌನ್‌ಶಿಪ್‌ನ ರೋ ಹೌಸ್ ಸಂಖ್ಯೆ 25ರಲ್ಲಿ ವಾಸವಿದ್ದ ಹಾಗೂ ಆತನ ತಂದೆಯ ಪೇಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ವರ್ಷಗಳ ಹಿಂದೆ ಈತನ ಪತ್ನಿ ಈತನನ್ನು ತೊರೆದು ಹೋಗಿದ್ದರಿಂದ ಮಾನಸಿಕ ನಿಯಂತ್ರಣ ಕಳೆದುಕೊಂಡಿದ್ದ ಈತ, ಇಡೀ ಪ್ರಪಂಚದ ಮೇಲೆ ಸೇಡು ತೀರಿಸಿಕೊಳ್ಳಲು ಈ ಸಾಮೂಹಿಕ ಹತ್ಯೆಯ ಸ್ಕೆಚ್ ಹಾಕಿದ್ದ ಎಂದು ನೆರೆಹೊರೆಯವರು ಹಾಗೂ ಪೊಲೀಸರು ತಿಳಿಸಿದ್ದಾರೆ.

ಇದರ ಜತೆಗೆ ಆರೋಪಿ ಫಯ್ಯಾಜ್ ಕಳೆದ ಕೆಲವು ವರ್ಷಗಳಲ್ಲಿ ಸುಮಾರು 19 ಬಾರಿ ಇರಾನ್ ಮತ್ತು ಇರಾಕ್‌ ದೇಶಗಳಿಗೆ ಪ್ರವಾಸ ಮಾಡಿದ್ದು, ಕಳೆದ ವರ್ಷವಷ್ಟೇ ಅಲ್ಲಿ ಒಂದೆರಡು ತಿಂಗಳು ಕೆಲಸ ಮಾಡಿದ್ದ. ಆತನ ತಾಯಿ ಮತ್ತು ಸಹೋದರಿ ಇರಾನ್‌ನಲ್ಲಿ ವಾಸಿಸುತ್ತಿದ್ದಾರೆ. ಈತ ಕೇವಲ 19 ದಿನಗಳ ಅಂತರದಲ್ಲಿ ಮೂರು ಬಾರಿ ಇರಾನ್‌ಗೆ ಭೇಟಿ ನೀಡಿರುವುದು ಪತ್ತೆಯಾಗಿದ್ದು, ಈ ಘಟನೆಯ ಹಿಂದೆ ಯಾವುದೇ ಅಂತರರಾಷ್ಟ್ರೀಯ ಸಂಚು ಅಥವಾ ಉಗ್ರಗಾಮಿ ನಂಟು ಇದೆಯೇ ಎಂಬ ನಿಟ್ಟಿನಲ್ಲಿ ಎಟಿಎಸ್ (ATS) ಹಾಗೂ ತನಿಖಾಧಿಕಾರಿಗಳು ಆತನ ಬ್ಯಾಂಕ್ ಖಾತೆ ಹಾಗೂ ಕರೆಗಳ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
'ನನ್ನ ದೇವರನ್ನೇ ಕಳೆದುಕೊಂಡೆ': ತಾಯಿ ನೆನೆದು ಗಳ ಗಳತೆ ಅತ್ತ ರೇವಣ್ಣ
'ನನ್ನ ದೇವರನ್ನೇ ಕಳೆದುಕೊಂಡೆ': ತಾಯಿ ನೆನೆದು ಗಳ ಗಳತೆ ಅತ್ತ ರೇವಣ್ಣ
ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಹೆಚ್​.ಡಿ. ಕುಮಾರಸ್ವಾಮಿ ಭಾವುಕ
ತಾಯಿ ಹೇಳಿಕೊಟ್ಟ ಬದುಕಿನ ಪಾಠ ಮರೆಯಲಾಗಲ್ಲ: ಹೆಚ್​.ಡಿ. ಕುಮಾರಸ್ವಾಮಿ ಭಾವುಕ
ಇಂದು ಈ ರಾಶಿಯವರಿಗೆ ದೈವಾನುಗ್ರಹದಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು
ಇಂದು ಈ ರಾಶಿಯವರಿಗೆ ದೈವಾನುಗ್ರಹದಿಂದ ಮಾಡಿದ ಕೆಲಸಗಳಲ್ಲಿ ಯಶಸ್ಸು
ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ
ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ
ಚೆನ್ನಮ್ಮನ ಆಸಿಡ್‌ ದಾಳಿ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ವಕೀಲ
ಚೆನ್ನಮ್ಮನ ಆಸಿಡ್‌ ದಾಳಿ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ವಕೀಲ
‘ಅವರು ನಮಗೆ ದೇವರು’: ಚೆನ್ನಮ್ಮ ಬಗ್ಗೆ ಸಹೋದರ ಭಾವುಕ ಮಾತು
‘ಅವರು ನಮಗೆ ದೇವರು’: ಚೆನ್ನಮ್ಮ ಬಗ್ಗೆ ಸಹೋದರ ಭಾವುಕ ಮಾತು
ಹೆಚ್​.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ ಯಾವಾಗ-ಎಲ್ಲಿ?
ಹೆಚ್​.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ ಯಾವಾಗ-ಎಲ್ಲಿ?
ದೇವೇಗೌಡರ ಪತ್ನಿ ಚೆನ್ನಮ್ಮನ ಮೇಲೆ ಆ್ಯಸಿಡ್ ದಾಳಿ ಯಾವಾಗ? ಎಲ್ಲಿ ಆಗಿತ್ತು?
ದೇವೇಗೌಡರ ಪತ್ನಿ ಚೆನ್ನಮ್ಮನ ಮೇಲೆ ಆ್ಯಸಿಡ್ ದಾಳಿ ಯಾವಾಗ? ಎಲ್ಲಿ ಆಗಿತ್ತು?
ತಮ್ಮ ಬೆನ್ನೆಲುಬಾಗಿದ್ದ ಪತ್ನಿಯ ಅಗಲಿಕೆಗೆ ಕಣ್ಣೀರಿಟ್ಟ ದೇವೇಗೌಡ್ರು
ತಮ್ಮ ಬೆನ್ನೆಲುಬಾಗಿದ್ದ ಪತ್ನಿಯ ಅಗಲಿಕೆಗೆ ಕಣ್ಣೀರಿಟ್ಟ ದೇವೇಗೌಡ್ರು
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಲೈವ್ ನೋಡಿ
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ: ಲೈವ್ ನೋಡಿ