ಹಿಂದೂ ಜೊತೆಗೆ ಗೆಳೆತನ ಮಾಡಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿ ಶಾಲೆಯಿಂದ ಅಮಾನತು
ಸಂದೀಪ್ ಎಂಬಾತ ಮುನವ್ವರ್ ಎಂಬಾತನನ್ನು ಭೇಟಿಯಾಗಲು ಆತನ ಕಾಲೇಜಿಗೆ ಗೆಳೆಯನೊಬ್ಬ ಹೋಗಿದ್ದ. ಇದನ್ನು ನೋಡಿದ ಶಾಲಾ ಆಡಳಿತ ಮಂಡಳಿ ಹಿಂದೂಗಳು ಹೇಗೆ ನಿಮ್ಮ ಗೆಳೆಯರಾಗುತ್ತಾರೆ? ಎಂದು ಮುನವ್ವರ್ನನ್ನು ಶಾಲೆಯಿಂದ ಅಮಾನತು ಮಾಡಿದ್ದಾರೆ. ಹಿಂದೂ-ಮುಸ್ಲಿಂ ಗೆಳೆಯರಾಗಿದ್ದನ್ನು ವಿರೋಧಿಸಿ ಈ ಕ್ರಮ ಕೈಗೊಂಡ ಕಾಲೇಜಿನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮುಜಾಫರ್ನಗರ: ಉತ್ತರ ಪ್ರದೇಶದ (Uttar Pradesh) ಮುಜಾಫರ್‌ನಗರದಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಆತನ ಹಿಂದೂ ಸ್ನೇಹಿತ ಭೇಟಿ ಮಾಡಲು ಬಂದಿದ್ದಕ್ಕೆ ಆತನನ್ನು ಶಾಲೆಯಿಂದ ಹೊರಹಾಕಲಾಗಿದೆ. ಸದ್ಯಕ್ಕೆ ಈ ಕುರಿತು ಶಿಕ್ಷಣ ಇಲಾಖೆ (Education Department) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಶಾಲೆಯಿಂದ ಮುಸ್ಲಿಂ ವಿದ್ಯಾರ್ಥಿಯೊಬ್ಬನನ್ನು ಹೊರಹಾಕಲಾಗಿದೆ. ಇದರ ನಂತರ, ಆ ವಿದ್ಯಾರ್ಥಿಯು ವಿಡಿಯೋವನ್ನು ವೈರಲ್ ಮಾಡಿದ್ದಾನೆ. ನನ್ನ ಶಾಲೆಗೆ ನನ್ನ ಮುಸ್ಲಿಮೇತರ ಸ್ನೇಹಿತ ನನ್ನನ್ನು ಭೇಟಿಯಾಗಲು ಬಂದಿದ್ದ. ಇದೇ ಕಾರಣಕ್ಕೆ ನನ್ನನ್ನು ಶಾಲೆಯಿಂದ ಅಮಾನತು ಮಾಡಲಾಗಿದೆ ಎಂದು ಶಾಲೆಯ ಮೇಲೆ ಆರೋಪ ಮಾಡಿದ್ದಾನೆ. ನಂತರ ಅವನನ್ನು ಶಾಲೆಯಿಂದ ಹೊರಹಾಕಲಾಯಿತು. ಸದ್ಯ ಈ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ಆರಂಭಿಸಿದೆ. ಈ ಕುರಿತು ಶಾಲಾ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿ ಉತ್ತರ ಕೇಳಲಾಗಿದೆ.
ಇದನ್ನೂ ಓದಿ: Mamata Banerjee: ಚುನಾವಣೆ ಪ್ರಚಾರದ ವೇಳೆ ಸಿಎಂ ಮಮತಾ ಬ್ಯಾನರ್ಜಿ ಡ್ಯಾನ್ಸ್; ವಿಡಿಯೋ ವೈರಲ್
ಮುಜಾಫರ್‌ನಗರದ ರತನ್‌ಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಥೇಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ನಿವಾಸಿ ಮುನವ್ವರ್ ಎಂಬ ವಿದ್ಯಾರ್ಥಿ ಸಮೀಪದ ಫೂಲತ್ ಗ್ರಾಮದ ವಿಷನ್ ಇಂಟರ್‌ನ್ಯಾಷನಲ್ ಅಕಾಡೆಮಿಯಲ್ಲಿ 8ನೇ ತರಗತಿ ಓದುತ್ತಿದ್ದ. ಆತ ಶಾಲೆಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ. ಮುನವ್ವರ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಕೆಲವು ದಿನಗಳ ಹಿಂದೆ ಸಂದೀಪ್ ಎಂಬ ಹಿಂದೂ ಸ್ನೇಹಿತ ತನ್ನ ಹಾಸ್ಟೆಲ್‌ಗೆ ಭೇಟಿಯಾಗಲು ಬಂದಿದ್ದ ಎಂದು ಶಾಲೆಯ ಆಡಳಿತದ ವಿರುದ್ಧ ಆರೋಪಿಸಿದ್ದಾರೆ.
ವಿದ್ಯಾರ್ಥಿ ಹೇಳಿದ್ದೇನು?:
ಈ ವಿಷಯ ಶಾಲೆಯ ಆಡಳಿತ ಮಂಡಳಿಗೆ ತಿಳಿದಾಗ ಮುಸ್ಲಿಮೇತರರು ನಿಮ್ಮ ಸ್ನೇಹಿತರಾದರೆ ಹೇಗೆ? ಎಂದು ಮುನವ್ವರ್ನನ್ನು ಶಾಲೆಯಿಂದ ಹೊರಹಾಕಿದ್ದಾರೆ. ಇದನ್ನು ಶಾಲೆಯ ಸಿಬ್ಬಂದಿ ಮನೆಯವರಿಗೆ ಏಕೆ ಹೇಳಲಿಲ್ಲ ಎಂದು ವಿದ್ಯಾರ್ಥಿ ವಿಡಿಯೋದಲ್ಲಿ ಹೇಳಿದ್ದಾನೆ. ವಿದ್ಯಾರ್ಥಿಯ ಪ್ರಕಾರ, ಅವನು ಶಾಲೆಯ ಸಿಬ್ಬಂದಿಗೆ 15ರಿಂದ 20 ನಿಮಿಷಗಳ ಕಾಲ ಕ್ಷಮೆ ಯಾಚಿಸುತ್ತಲೇ ಇದ್ದ. ಆದರೆ ಅವರು ಅವನ ಮಾತನ್ನು ಕೇಳಲಿಲ್ಲ ಮತ್ತು ಅವರನ್ನು ಶಾಲೆಯಿಂದ ಹೊರಹಾಕಲಾಯಿತು.
ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋ ನೋಡಿ ಶಿಕ್ಷಣ ಇಲಾಖೆಯಲ್ಲಿ ಸಂಚಲನ ಮೂಡಿದ್ದು, ತಕ್ಷಣ ಪೊಲೀಸರ ತಂಡ ಶಾಲೆಗೆ ಆಗಮಿಸಿ ತನಿಖೆ ಆರಂಭಿಸಿದೆ. ಅಲ್ಲದೆ, ಈ ವಿಷಯದ ತನಿಖೆಯ ಜವಾಬ್ದಾರಿಯನ್ನು ಖತೌಲಿ ಬ್ಲಾಕ್ ಶಿಕ್ಷಣಾಧಿಕಾರಿಗೆ ನೀಡಲಾಯಿತು. ಇದಾದ ಬಳಿಕ ಶಾಲಾ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಶಾಲಾ ಸಿಬ್ಬಂದಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಶಾಲಾ ಆರಂಭದ ಮೊದಲ ದಿನವೇ ಶಾಲೆಗೆ ಬೀಗ ಹಾಕಿದ ಎಸ್ಡಿಎಂಸಿ ಸದಸ್ಯರು; ಯಾಕೆ ಗೊತ್ತಾ?
ಈ ಬಗ್ಗೆ ಶಾಲಾ ಸಿಬ್ಬಂದಿ ಹೇಳುವುದೇ ಬೇರೆ ಕತೆ. ವಿದ್ಯಾರ್ಥಿಯ ವಿರುದ್ಧ ನಿರಂತರವಾಗಿ ದೂರುಗಳು ಬರುತ್ತಿವೆ ಎಂದು ಶಾಲೆಯ ಆಡಳಿತ ಮಂಡಳಿ ಹೇಳಿದೆ. ಶಾಲೆ, ಹಾಸ್ಟೆಲ್ ನಿಯಮಗಳನ್ನು ಉಲ್ಲಂಘಿಸಿ ಹೊರಗಿನಿಂದ ಹೆಣ್ಣು ಮಕ್ಕಳನ್ನು ಶಾಲೆಗೆ ಕರೆ ತರುತ್ತಿದ್ದ ಎಂದು ಆರೋಪಿಸಲಾಗಿದೆ. ಶಾಲೆಯ ಸಿಬ್ಬಂದಿ ಪ್ರಕಾರ, ವಿದ್ಯಾರ್ಥಿಯು ಈ ಹಿಂದೆಯೂ ಇದೆಲ್ಲವನ್ನೂ ಮಾಡಿದ್ದಾನೆ, ಅದಕ್ಕಾಗಿ ಎಚ್ಚರಿಕೆಯನ್ನೂ ನೀಡಲಾಯಿತು. ವಿದ್ಯಾರ್ಥಿಯ ಆರೋಪವನ್ನು ಶಾಲಾ ಸಿಬ್ಬಂದಿ ನಿರಾಕರಿಸಿದ್ದಾರೆ.
ಈ ಕುರಿತು ತನಿಖೆ ನಡೆಸುವಂತೆ ಬ್ಲಾಕ್ ಶಿಕ್ಷಣಾಧಿಕಾರಿ ಖತೌಲಿ ಅವರಿಗೆ ಆದೇಶ ನೀಡಲಾಗಿದೆ ಎಂದು ಮುಜಾಫರ್‌ನಗರದ ಮೂಲ ಶಿಕ್ಷಣಾಧಿಕಾರಿ ಶುಭಂ ಶುಕ್ಲಾ ತಿಳಿಸಿದ್ದಾರೆ. ಅಲ್ಲದೇ ಯಾರ ಅನುಮತಿ ಪಡೆದು ಹಾಸ್ಟೆಲ್ ನಡೆಸುತ್ತಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ