ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ: ಮೋಹನ್ ಭಾಗವತ್‍ಗೆ ಓವೈಸಿ ತಿರುಗೇಟು

ಆರ್‌ಎಸ್‌ಎಸ್ ಸರಸಂಘ ಚಾಲಕ್ ಮೋಹನ್ ಭಾಗವತ್ ಅವರ ಇತ್ತೀಚಿನ ಜನಸಂಖ್ಯೆಯ ಅಸಮತೋಲನದ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ.

ಮುಸ್ಲಿಮರು ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಾರೆ: ಮೋಹನ್ ಭಾಗವತ್‍ಗೆ ಓವೈಸಿ ತಿರುಗೇಟು
Asaduddin Owaisi And Mohan Bhagwat
Follow us
| Updated By: ರಮೇಶ್ ಬಿ. ಜವಳಗೇರಾ

Updated on:Oct 09, 2022 | 3:25 PM

ಹೈದರಾಬಾದ್ : ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ. ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸುತ್ತಿರುವವರೇ ಮುಸ್ಲಿಮರು ಎಂದು ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ತಿರುಗೇಟು ನೀಡಿದ್ದಾರೆ.

ಹೈದರಾಬಾದ್‍ನಲ್ಲಿ (Hyderabad) ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಓವೈಸಿ, ಮುಸ್ಲಿಮರ ಜನಸಂಖ್ಯೆಯು ಹೆಚ್ಚಾಗುತ್ತಿಲ್ಲ, ಬದಲಾಗಿ ಕಡಿಮೆಯಾಗುತ್ತಿದೆ. ಮುಸ್ಲಿಮರಲ್ಲಿ ಮಕ್ಕಳ ನಡುವಿನ ಅಂತರವೂ ಹೆಚ್ಚುತ್ತಿದೆ. ಕಾಂಡೋಮ್ (Condoms) ಯಾರು ಹೆಚ್ಚು ಬಳಸುತ್ತಿದ್ದಾರೆ? ನಾವು ಬಳಸುತ್ತಿದ್ದೇವೆ. ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದು ಬೇಕಾಗಿಲ್ಲ ಎಂದು ಟಾಂಗ್ ಕೊಟ್ಟರು.

ಇದನ್ನೂ ಓದಿ: ಅಖಂಡ ಭಾರತ ನಿರ್ಮಾಣ, ಹಿಂದೂರಾಷ್ಟ್ರದ ನಿಲುವು, ನೂತನ ಜನಸಂಖ್ಯಾ ನೀತಿಯ ಬಗ್ಗೆ ಮೋಹನ್ ಭಾಗವತ್ ಪ್ರಸ್ತಾಪ

ಮೋಹನ್ ಭಾಗವತ್ ಹೇಳಿದ್ದೇನು? ನಾಗಪುರದಲ್ಲಿರುವ (Nagapura) ಆರ್‌ಎಸ್‍ಎಸ್ (RSS) ಕೇಂದ್ರ ಕಚೇರಿಯಲ್ಲಿ ಅಕ್ಟೋಬರ್ 5 ನಡೆದಿದ್ದ ವಿಜಯದಶಮಿ (Viajayadashami) ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, ದೇಶದಲ್ಲಿರುವ ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಅನ್ವಯವಾಗುವಂತೆ ಜನಸಂಖ್ಯಾ ನೀತಿಯನ್ನು ಜಾರಿಗೆ ತರಬೇಕು ಎಂದು ಹೇಳಿದ್ದರು. ಜನಸಂಖ್ಯೆಯಿಂದ ಧರ್ಮ ಆಧಾರಿತ ಅಸಮತೋಲನ ಮತ್ತು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದಿದ್ದರು.

ವಿಶ್ವದಲ್ಲಿ ಎರಡು ರೀತಿಯಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿದೆ. ಒಂದು ದೇಶದ ಸಂಪನ್ಮೂಲವಾಗಿ ಬಳಕೆಯಾಗುವ ಜನಸಂಖ್ಯೆಯ ಏರಿಕೆ. ಮತ್ತೊಂದು ದೇಶಕ್ಕೆ ಹೊರೆಯಾಗುವ ಜನಸಂಖ್ಯೆ. ಎರಡನೇ ಸ್ವರೂಪದ ಜನಸಂಖ್ಯೆ ಏರಿಕೆಯಾಗುತ್ತಲೇ ಇದ್ದರೆ ಅದು ಹೊರಲಾಗದ ಹೊರೆಯಾಗುತ್ತದೆ. ಒಬ್ಬ ಮಹಿಳೆ ಎಷ್ಟು ಮಕ್ಕಳನ್ನು ಹೆತ್ತಿದ್ದಾಳೆ ಎಂಬುದು ಆಕೆಯ ಮಾನಸಿಕ ಆರೋಗ್ಯ, ಜತೆಗೆ ಆರ್ಥಿಕ ಸ್ಥಿತಿಯನ್ನೂ ಬಾಧಿಸುತ್ತದೆ. ದೇಶದ ಪರಿಸರವನ್ನೂ ಬಾಧಿಸುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ಹಿಂದೂ-ಮುಸ್ಲಿಂ ಡಿಎನ್​ಎ ಒಂದೇ ಎಂದಮೇಲೆ ಅಸಮತೋಲನ ಎಲ್ಲಿದೆ?; ಮೋಹನ್ ಭಾಗವತ್​ಗೆ ಓವೈಸಿ ತಿರುಗೇಟು

ಯಾವುದೇ ಕುಟುಂಬ ಏನು ಬಯಸುತ್ತದೆ ಎಂಬುದೂ ಜನಸಂಖ್ಯೆಯ ಏರಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ರಾಷ್ಟ್ರೀಯ ಅಸ್ಮಿತೆ ಮತ್ತು ರಾಷ್ಟ್ರೀಯ ಭದ್ರತೆಗೆ ಪ್ರಸ್ತುತವಾಗುವಂತೆ ಜನಸಂಖ್ಯೆಯನ್ನು ರೂಪಿಸಿ, ರಕ್ಷಿಸಬೇಕಾಗುತ್ತದೆ. ಹೀಗಾಗಿ ಜನಸಂಖ್ಯೆಯ ನಿಯಂತ್ರಣ ನೀತಿ ಅತ್ಯಗತ್ಯ. ಆದರೆ ಜನಸಂಖ್ಯಾ ನಿಯಂತ್ರಣ ನೀತಿಯು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಸಮಾನವಾಗಿ ಅನ್ವಯವಾಗಬೇಕು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಹುದು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:25 pm, Sun, 9 October 22

ಸೋನಿಯ, ರಾಹುಲ್ ಗಾಂಧಿಯಾಗದ ಕೆಲಸವನ್ನು ಖರ್ಗೆ ಮಾಡಿದ್ದಾರೆ: ಸೋಮಣ್ಣ
ಸೋನಿಯ, ರಾಹುಲ್ ಗಾಂಧಿಯಾಗದ ಕೆಲಸವನ್ನು ಖರ್ಗೆ ಮಾಡಿದ್ದಾರೆ: ಸೋಮಣ್ಣ
ಅಮೆರಿಕದಲ್ಲಿ ದೀಪಾವಳಿ ಆಚರಿಸಿದ ಸಂಭ್ರಮಿಸಿದ ಕಮಲಾ ಹ್ಯಾರಿಸ್
ಅಮೆರಿಕದಲ್ಲಿ ದೀಪಾವಳಿ ಆಚರಿಸಿದ ಸಂಭ್ರಮಿಸಿದ ಕಮಲಾ ಹ್ಯಾರಿಸ್
ಕರ್ನಾಟಕದಂತೆ ಬೇರೆ ರಾಜ್ಯಕ್ಕೆ ತನ್ನ ಧ್ವಜ, ನಾಡಗೀತೆ ಇಲ್ಲ: ಶಿವಕುಮಾರ್
ಕರ್ನಾಟಕದಂತೆ ಬೇರೆ ರಾಜ್ಯಕ್ಕೆ ತನ್ನ ಧ್ವಜ, ನಾಡಗೀತೆ ಇಲ್ಲ: ಶಿವಕುಮಾರ್
ತಡವಾಗಿ ಆಗಮಿಸಿದ ಡಿಕೆ ಶಿವಕುಮಾರ್, ಅವರಿಗಾಗಿ ಕಾಯದ ಸಿದ್ದರಾಮಯ್ಯ
ತಡವಾಗಿ ಆಗಮಿಸಿದ ಡಿಕೆ ಶಿವಕುಮಾರ್, ಅವರಿಗಾಗಿ ಕಾಯದ ಸಿದ್ದರಾಮಯ್ಯ
ಸಾರ್ವಜನಿಕವಾಗಿ ಕಣ್ಣೀರು ಸುರಿಸುವ ಪರಂಪರೆ ಮುಂದುವರಿಸಿದ ನಿಖಿಲ್
ಸಾರ್ವಜನಿಕವಾಗಿ ಕಣ್ಣೀರು ಸುರಿಸುವ ಪರಂಪರೆ ಮುಂದುವರಿಸಿದ ನಿಖಿಲ್
ಹಾಸನಾಂಬ ದರ್ಶನ ಮುಗಿಸಿ ಹೋಗುತ್ತಿದ್ದವರಿಗೆ ಕಾರು ಡಿಕ್ಕಿ: ಇಬ್ಬರು ಸಾವು
ಹಾಸನಾಂಬ ದರ್ಶನ ಮುಗಿಸಿ ಹೋಗುತ್ತಿದ್ದವರಿಗೆ ಕಾರು ಡಿಕ್ಕಿ: ಇಬ್ಬರು ಸಾವು
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೇರ ಪ್ರಸಾರ ಇಲ್ಲಿ ನೋಡಿ
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೇರ ಪ್ರಸಾರ ಇಲ್ಲಿ ನೋಡಿ
ಮೋಕ್ಷಿತಾ ಜೊತೆ ಕುಟುಂಬದವರ ವಿಡಿಯೋ ಕಾಲ್; ಇದು ದೀಪಾವಳಿ ಗಿಫ್ಟ್
ಮೋಕ್ಷಿತಾ ಜೊತೆ ಕುಟುಂಬದವರ ವಿಡಿಯೋ ಕಾಲ್; ಇದು ದೀಪಾವಳಿ ಗಿಫ್ಟ್
ಶ್ರೀಶೈಲ ದೇವಾಲಯದ ಶಿಖರ ದರ್ಶನದ ಹಿಂದಿನ ರಹಸ್ಯ ಇದುವೇ ನೋಡಿ
ಶ್ರೀಶೈಲ ದೇವಾಲಯದ ಶಿಖರ ದರ್ಶನದ ಹಿಂದಿನ ರಹಸ್ಯ ಇದುವೇ ನೋಡಿ
ಇಂದು ಸರ್ವಸಿದ್ಧಿ ಕಾಲ ಎಷ್ಟೊತ್ತಿಗೆ, ದಿನ ಭವಿಷ್ಯ ಹೇಗಿರಲಿದೆ? ಇಲ್ಲಿದೆ
ಇಂದು ಸರ್ವಸಿದ್ಧಿ ಕಾಲ ಎಷ್ಟೊತ್ತಿಗೆ, ದಿನ ಭವಿಷ್ಯ ಹೇಗಿರಲಿದೆ? ಇಲ್ಲಿದೆ