
ನವದೆಹಲಿ, ಜುಲೈ 10: ಈ ವರ್ಷದ ಮಳೆಗಾಲದಲ್ಲಿ ಪ್ರವಾಹ (Flood) ಮತ್ತು ಭೂಕುಸಿತದಿಂದ (Landslide) ಹಾನಿಗೊಳಗಾದ ಭಾರತದ 6 ರಾಜ್ಯಗಳಿಗೆ ಕೇಂದ್ರ ಸರ್ಕಾರ 1,066 ಕೋಟಿ ರೂ.ಗಳಿಗೂ ಹೆಚ್ಚು ಸಹಾಯವನ್ನು ಅನುಮೋದಿಸಿದೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್‌ಡಿಆರ್‌ಎಫ್) ಅಡಿಯಲ್ಲಿ ಕೇಂದ್ರದ ಸರ್ಕಾರದಿಂದ ಈ ಹಣವನ್ನು ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಪಡೆಯುವ 6 ರಾಜ್ಯಗಳೆಂದರೆ ಉತ್ತರಾಖಂಡ, ಅಸ್ಸಾಂ, ಕೇರಳ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂ. ಉತ್ತರಾಖಂಡವು 455.60 ಕೋಟಿ ರೂ.ಗಳ ಅತಿ ಹೆಚ್ಚು ಪಾಲನ್ನು ಪಡೆದಿದೆ. ನಂತರ ಅಸ್ಸಾಂಗೆ 375.60 ಕೋಟಿ ರೂ.ಗಳು, ಕೇರಳಕ್ಕೆ 153.20 ಕೋಟಿ ರೂ.ಗಳು, ಮಣಿಪುರಕ್ಕೆ 29.20 ಕೋಟಿ ರೂ., ಮೇಘಾಲಯಕ್ಕೆ 30.40 ಕೋಟಿ ರೂ. ಮತ್ತು ಮಿಜೋರಾಂಗೆ 22.80 ಕೋಟಿ ರೂ.ಗಳನ್ನು ನೀಡಲಾಗುತ್ತದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಪ್ರವಾಹ ಮತ್ತು ಭೂಕುಸಿತ ಪೀಡಿತ ರಾಜ್ಯಗಳಿಗೆ ಕೇಂದ್ರ ಸರ್ಕಾರ 1,066.80 ಕೋಟಿ ರೂ.ಗಳನ್ನು ಅನುಮೋದಿಸಿದೆ ಎಂದು ಹೇಳಿದ್ದಾರೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (SDRF) ಅಡಿಯಲ್ಲಿ ಕೇಂದ್ರದ ಪಾಲಿನ ರೂಪದಲ್ಲಿ ಈ ಹಣವನ್ನು ಬಿಡುಗಡೆ ಮಾಡಲಾಗುವುದು. ಈ ಹಣಕಾಸಿನ ನೆರವು ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ಕೇರಳ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇವು ಇತ್ತೀಚೆಗೆ ಭಾರೀ ಮಳೆ, ಪ್ರವಾಹ, ಭೂಕುಸಿತ ಮತ್ತು ಮೋಡ ಸ್ಫೋಟಗಳಿಂದ ತೀವ್ರ ಸವಾಲುಗಳನ್ನು ಎದುರಿಸಿದ ಪ್ರದೇಶಗಳಾಗಿವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾಹಪೀಡಿತರಿಗೆ ಪರಿಹಾರ ನೀಡಲು ನಾನು ಸಚಿವೆಯಲ್ಲ; ವಿವಾದಕ್ಕೀಡಾದ ಸಂಸದೆ ಕಂಗನಾ ರಣಾವತ್
ಆರ್ಥಿಕ ನೆರವಿನ ಜೊತೆಗೆ, ಅಗತ್ಯವಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಸೇನೆ ಮತ್ತು ವಾಯುಪಡೆಯ ನಿಯೋಜನೆ ಸೇರಿದಂತೆ ಎಲ್ಲಾ ಲಾಜಿಸ್ಟಿಕ್ ಸಹಾಯವನ್ನು ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Modi govt stands resolutely beside the states in all situations.
Today the central government has approved ₹1066.80 crore for flood- and landslide-affected states of Assam, Manipur, Meghalaya, Mizoram, Kerala, and Uttarakhand as part of the Central share under SDRF. More than…
— Amit Shah (@AmitShah) July 10, 2025
ಮೋದಿ ಸರ್ಕಾರವು ಈ ವರ್ಷ ವಿವಿಧ ರಾಜ್ಯಗಳಿಗೆ ಎಸ್‌ಡಿಆರ್‌ಎಫ್/ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ 8,000 ಕೋಟಿ ರೂ.ಗೂ ಹೆಚ್ಚು ಹಣವನ್ನು ನೀಡಿದೆ. ಈಗಾಗಲೇ 14 ರಾಜ್ಯಗಳಿಗೆ SDRFನಿಂದ 6,166.00 ಕೋಟಿ ರೂ.ಗಳನ್ನು ಮತ್ತು 12 ರಾಜ್ಯಗಳಿಗೆ NDRFನಿಂದ 1,988.91 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ, 5 ರಾಜ್ಯಗಳಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 726.20 ಕೋಟಿ ರೂ.ಗಳನ್ನು ಮತ್ತು 2 ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 17.55 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ