ಕೊರೊನಾ 3ನೇ ಅಲೆಯ ಭೀತಿಯ ನೆರಳಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ: ಲಸಿಕೆ ಅಭಿಯಾನಕ್ಕೆ ಒತ್ತು ನೀಡಲು ಸೂಚನೆ
ಕೊವಿಡ್ ಪಿಡುಗಿಗೆ ಕಡಿವಾಣ ಹಾಕಲು ಲಸಿಕಾ ಅಭಿಯಾನಕ್ಕೆ ಒತ್ತು ಕೊಡಬೇಕು. ಆಮ್ಲಜನಕ ಸರಬರಾಜು ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂದು ಸೂಚಿಸಿದರು.
ದೆಹಲಿ: ದೇಶದಲ್ಲಿ ಕೊವಿಡ್ 3ನೇ ಅಲೆ ಕಾಣಿಸಿಕೊಳ್ಳಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದರು. ಕೊವಿಡ್ ಪಿಡುಗಿಗೆ ಕಡಿವಾಣ ಹಾಕಲು ಲಸಿಕಾ ಅಭಿಯಾನಕ್ಕೆ ಒತ್ತು ಕೊಡಬೇಕು. ಆಮ್ಲಜನಕ ಸರಬರಾಜು ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು ಎಂದು ಸೂಚಿಸಿದರು.
ದೇಶದ ಪ್ರಸ್ತುತ ಸ್ಥಿತಿಗತಿ, ಸಂಭಾವ್ಯ ಸವಾಲುಗಳನ್ನು ಎದುರಿಸಲು ಅರೋಗ್ಯ ಇಲಾಖೆಯ ಸಿದ್ಧತೆ, ವೈದ್ಯಕೀಯ ಆಮ್ಲಜನಕದ ಲಭ್ಯತೆ ಮತ್ತು ಲಸಿಕೆಗಳ ಉತ್ಪಾದನೆ, ಪೂರೈಕೆ ಮತ್ತು ಸರಬರಾಜು ವ್ಯವಸ್ಥೆಯ ಬಗ್ಗೆ ಚರ್ಚೆ ನಡೆಯಿತು ಎಂದು ಪ್ರೆಸ್ ಇನ್ಫರ್ಮೇಶನ್ ಬ್ಯೂರೊ ಪ್ರಕಟಣೆ ತಿಳಿಸಿದೆ.
ದೇಶದ ವೈದ್ಯಕೀಯ ಸೇವೆಗಳ ಸೌಕರ್ಯವನ್ನು ಹೇಗೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂಬ ಬಗ್ಗೆ ಮೋದಿ ಅವರಿಗೆ ಮಾಹಿತಿ ನೀಡಲಾಯಿತು. ಲಸಿಕೆ ಅಭಿಯಾನದ ಬಗ್ಗೆ ಪರಮಾರ್ಶೆ ನಡೆಸಿದರು. ಮುಂದಿನ ಕೆಲ ತಿಂಗಳ ಅವಧಿಯಲ್ಲಿ ಎಷ್ಟರಮಟ್ಟಿಗೆ ಲಸಿಕೆ ಅಭಿಯಾನ ಪ್ರಗತಿ ಸಾಧಿಸಲಿದೆ ಎಂಬ ಬಗ್ಗೆ ಮೋದಿ ಮಾಹಿತಿ ಪಡೆದುಕೊಂಡರು.
ಕೊರೊನಾ 3ನೇ ಅಲೆಯಿಂದ ಮಕ್ಕಳಿಗೆ ಹೆಚ್ಚು ತೊಂದರೆಯಾಗಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ದೇಶದಲ್ಲಿ ಮಕ್ಕಳ ಚಿಕಿತ್ಸೆಗೆ ಸಿದ್ಧಪಡಿಸಿರುವ ಬೆಡ್, ಇತರ ವ್ಯವಸ್ಥೆಗಳು ಹಾಗೂ ಕೊವಿಡ್ ತುರ್ತು ಪರಿಸ್ಥಿತಿ ಪ್ರತಿಕ್ರಿಯೆ ಬಗ್ಗೆ ಪ್ರಧಾನಿ ಹಲವು ಸೂಚನೆಗಳನ್ನು ನೀಡಿದರು.
ವಿವಿಧ ರಾಜ್ಯಗಳಿಗೆ ಈವರೆಗೆ ಒಂದು ಲಕ್ಷ ಆಮ್ಲಜನಕ ಸಾಂದ್ರಕಗಳು (Oxygen Concentrators) ಮತ್ತು ಮೂರು ಲಕ್ಷ ಆಮ್ಲಜನಕ ಸಿಲಿಂಡರ್ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು. ರೂಪಾಂತರಿಗಳ ಪತ್ತೆಗಾಗಿ ಜಿನೋಮ್ ಸಿಕ್ವಿನ್ಸೆಂಗ್ ನಿಯಮಿತವಾಗಿ ನಡೆಯಬೇಕು ಎಂದು ಪ್ರಧಾನಿ ಸಲಹೆ ಮಾಡಿದರು.
Chaired a meeting to review the COVID-19 and vaccination situation. Discussed ways to boost health infrastructure and further scale up vaccination. https://t.co/UnnLjNdZ7j
— Narendra Modi (@narendramodi) September 10, 2021
(Narendra Modi Heads Covid Meet Amid Threat of Covid 3rd Wave)
ಇದನ್ನೂ ಓದಿ: Coronavirus cases in India: ದೇಶದಲ್ಲಿ 34,973 ಹೊಸ ಕೊವಿಡ್ ಪ್ರಕರಣ ಪತ್ತೆ, 260 ಮಂದಿ ಸಾವು
ಇದನ್ನೂ ಓದಿ: ಕೊವಿಡ್ ಲಸಿಕೆ ಅಭಿಯಾನಕ್ಕೆ ಮುಂದಿನ ತಿಂಗಳೇ ಜಾನ್ಸನ್ ಅಂಡ್ ಜಾನ್ಸನ್ ಲಸಿಕೆಯೂ ಸೇರ್ಪಡೆಯಾಗುವ ಸಾಧ್ಯತೆ