ನಾಸಿಕ್​ನಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌, ಚಾಕುಗಳು ಪತ್ತೆ

ನಾಸಿಕ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಶಾಲೆಯೊಂದರ 7ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಕಾಂಡೋಮ್ ಪ್ಯಾಕೆಟ್‌ಗಳು, ಚಾಕುಗಳು, ಇಸ್ಪೀಟ್ ಮತ್ತು ಇತರ ಹಲವಾರು ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿವೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ನಾಸಿಕ್​ನಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌, ಚಾಕುಗಳು ಪತ್ತೆ
Nashik Boy School Bag

Updated on: Apr 08, 2025 | 6:31 PM

ನಾಸಿಕ್, ಏಪ್ರಿಲ್ 8: ನಾಸಿಕ್‌ನಲ್ಲಿ ಆಘಾತಕಾರಿ ಘಟನೆಯೊಂದು (Shocking News) ಬೆಳಕಿಗೆ ಬಂದಿದೆ. ಘೋಟಿಯ ಶಾಲೆಯೊಂದರಲ್ಲಿ 7ರಿಂದ 10ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಚಾಕುಗಳು, ಕಾಂಡೋಮ್‌ಗಳು ಪತ್ತೆಯಾಗಿವೆ. ಈ ಸುದ್ದಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದು ಪೋಷಕರಿಂದ ಹಿಡಿದು ವೃದ್ಧರವರೆಗೆ ಎಲ್ಲರಲ್ಲೂ ಆತಂಕ ಮೂಡಿಸಿದೆ. ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಕಾಂಡೋಮ್ ಪ್ಯಾಕೆಟ್‌ಗಳು, ಚಾಕುಗಳು, ಇಸ್ಪೀಟ್ ಎಲೆಗಳು ಮತ್ತು ಇತರ ಹಲವು ಆಕ್ಷೇಪಾರ್ಹ ವಸ್ತುಗಳು ಕಂಡುಬಂದಿವೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಲೆಯ ಉಪ ಪ್ರಾಂಶುಪಾಲರು, ತಪಾಸಣೆಯ ಸಮಯದಲ್ಲಿ ಈ ವಸ್ತುಗಳು ಕಂಡುಬಂದಿವೆ ಎಂದು ಹೇಳಿದ್ದಾರೆ. “ಮಕ್ಕಳ ಬ್ಯಾಗ್‌ಪ್ಯಾಕ್‌ಗಳಲ್ಲಿ ಕಂಡುಬಂದ ಆಕ್ಷೇಪಾರ್ಹ ವಸ್ತುಗಳು ಒಂದೇ ಬಾರಿಗೆ ಕಂಡುಬಂದಿಲ್ಲ. ಕಳೆದ ಹಲವು ದಿನಗಳಿಂದ ವಿವಿಧ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ವಿಭಿನ್ನ ವಸ್ತುಗಳು ಕಂಡುಬಂದಿವೆ. ವಿದ್ಯಾರ್ಥಿಗಳು ಅಪರಾಧ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದನ್ನು ತಡೆಯಲು, ನಾವು ಪ್ರತಿದಿನ ಅವರ ಬ್ಯಾಗ್‌ಗಳನ್ನು ಪರಿಶೀಲಿಸುತ್ತೇವೆ” ಎಂದು ಶಿಕ್ಷಕರು ಹೇಳಿದ್ದಾರೆ.

ಇದನ್ನೂ ಓದಿ
ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು


ಇದನ್ನೂ ಓದಿ: ಆಕೆ ದೇವರಿಗೆ ಮಾತ್ರ ಹೆದ್ರೋದು: ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ

ಏತನ್ಮಧ್ಯೆ, ವಿದ್ಯಾರ್ಥಿಗಳ ಬ್ಯಾಕ್​ಪ್ಯಾಕ್​ಗಳನ್ನು ಪರಿಶೀಲಿಸುವ ಶಾಲೆಯ ಕ್ರಮವನ್ನು ಪೋಷಕರು ಸ್ವಾಗತಿಸಿದ್ದಾರೆ. “ಶಾಲಾ ಶಿಕ್ಷಕರು ಮತ್ತು ಪ್ರಾಂಶುಪಾಲರು ತೆಗೆದುಕೊಂಡ ಉಪಕ್ರಮವು ಶ್ಲಾಘನೀಯ. ಏಕೆಂದರೆ ಈ ವಯಸ್ಸಿನಲ್ಲಿ ಮಕ್ಕಳು ಬೇಗನೆ ದಾರಿ ತಪ್ಪುತ್ತಾರೆ. ಪೋಷಕರ ನಂತರ, ಶಿಕ್ಷಕರು ಮಾತ್ರ ಮಕ್ಕಳಲ್ಲಿ ಉತ್ತಮ ನೈತಿಕ ಗುಣಗಳನ್ನು ಬೆಳೆಸಲು ಸಾಧ್ಯ, ಆದ್ದರಿಂದ ನಾವು ಈ ಉಪಕ್ರಮವನ್ನು ಬೆಂಬಲಿಸುತ್ತೇವೆ” ಎಂದು ಪೋಷಕರೊಬ್ಬರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ