Tv9 Kannada News Live: ಕೇರಳದಲ್ಲಿ ಹಾಲಿನ ದರ ಏರಿಕೆ, ಪ್ಲೇಆಫ್​ಗೂ ಮುನ್ನ RCBಗೆ ಗುಡ್ ನ್ಯೂಸ್, ಇಲ್ಲಿವೆ ಮಧ್ಯಾಹ್ನದವರೆಗಿನ ಪ್ರಮುಖ ಸುದ್ದಿಗಳು

Tv9 Kannada News Live: ಕೇರಳದಲ್ಲಿ ಹಾಲಿನ ದರ ನಾಲ್ಕು ರೂ. ಏರಿಕೆ ಮಾಡಲಾಗಿದೆ. ಕೇರಳ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ದರ ಏರಿಕೆ ಮಾಡಿದ್ದು, ಜೂನ್ 1ರಿಂದ ಪರಿಷ್ಕೃತ ಹಾಲಿನ ದರ ಜಾರಿಯಾಗಲಿದೆ.ಅತ್ತೆಯ ಅಂತ್ಯಕ್ರಿಯೆಗೆಂದು ಬಂದಿದ್ದ ಅಳಿಯನನ್ನು ಮೊಸಳೆ(Crocodile)ಯೊಂದು ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.ಇಂಡಿಯನ್ ಪ್ರೀಮಿಯರ್ ಲೀಗ್​ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 65 ಪಂದ್ಯಗಳು ಮುಗಿದ್ದು, ಈ ಮ್ಯಾಚ್​ಗಳ ಮುಕ್ತಾಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ.

Tv9 Kannada News Live: ಕೇರಳದಲ್ಲಿ ಹಾಲಿನ ದರ ಏರಿಕೆ, ಪ್ಲೇಆಫ್​ಗೂ ಮುನ್ನ RCBಗೆ ಗುಡ್ ನ್ಯೂಸ್, ಇಲ್ಲಿವೆ ಮಧ್ಯಾಹ್ನದವರೆಗಿನ ಪ್ರಮುಖ ಸುದ್ದಿಗಳು
ಸುದ್ದಿ ಸುರುಳಿ

Updated on: May 21, 2026 | 2:00 PM

ನವದೆಹಲಿ, ಮೇ 21: ಕೇರಳದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತಲೇ ಜನರಿಗೆ ಹಾಲು ದರ ಏರಿಕೆಯ ಶಾಕ್ ನೀಡಿದೆ. ಕೇರಳದ ಜನಪ್ರಿಯ ಬ್ರಾಂಡ್ ಮಿಲ್ಮಾ ಹಾಲಿನ ದರ 4 ರೂ.ಏರಿಕೆ ಮಾಡಲಾಗಿದೆ. ಕೇರಳ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ದರ ಏರಿಕೆ ಮಾಡಿದ್ದು, ಜೂನ್ 1ರಿಂದ ಪರಿಷ್ಕೃತ ಹಾಲಿನ ದರ ಜಾರಿಯಾಗಲಿದೆ. ನಾವು ಹಾಲಿನ ದರ ಏರಿಸಿಲ್ಲ, ಹಿಂದಿನ ಸರ್ಕಾರ ಏರಿಸಿದ್ದ ದರವನ್ನು ನಾವು ಜಾರಿಗೆ ತಂದಿದ್ದೀವಷ್ಟೇ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೆ ನೀಡಿದೆ.

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ‘ಸಂಯುಕ್ತ ಪ್ರಜಾಸತ್ತಾತ್ಮಕ ರಂಗ’ (UDF) ದಶಕದ ಸುದೀರ್ಘ ಕಾಯುವಿಕೆಯ ನಂತರ ಅಧಿಕಾರಕ್ಕೆ ಮರಳಿದೆ. ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಇವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ 20 ಮಂದಿ ಸಚಿವರಿದ್ದು, 14 ಮಂದಿ ಹೊಸಬರಿಗೆ ಅವಕಾಶ ನೀಡಲಾಗಿದೆ.ನೂತನ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (KSRTC) ಮತ್ತು ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರಯು ನದಿಗೆ ಅತ್ತೆಯ ಅಂತ್ಯಕ್ರಿಯೆಗೆ ಬಂದಿದ್ದ ಅಳಿಯನನ್ನು ಎಳೆದೊಯ್ದ ಮೊಸಳೆ
ಅತ್ತೆಯ ಅಂತ್ಯಕ್ರಿಯೆಗೆಂದು ಬಂದಿದ್ದ ಅಳಿಯನನ್ನು ಮೊಸಳೆ(Crocodile)ಯೊಂದು ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಧವಾರ ಉತ್ತರ ಪ್ರದೇಶದ ಸರಯು ನದಿಯ ದಡದಲ್ಲಿ 30 ವರ್ಷದ ಯುವಕನೊಬ್ಬನ ಮೇಲೆ ಮೊಸಳೆ ದಾಳಿ ನಡೆಸಿ, ನದಿಯ ಆಳಕ್ಕೆ ಎಳೆದೊಯ್ದಿರುವ ಅತ್ಯಂತ ದಾರುಣ ಘಟನೆ ವರದಿಯಾಗಿದೆ. ಗ್ರೇಟರ್ ನೋಯ್ಡಾ ನಿವಾಸಿಯಾದ ದೀಪಕ್ ಶರ್ಮಾ ಎಂಬ ವ್ಯಕ್ತಿ, ತಮ್ಮ ಅತ್ತೆಯ ನಿಧನದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಗೊಂಡಾ ಜಿಲ್ಲೆಯ ಉಮ್ರಿ ಗ್ರಾಮಕ್ಕೆ ಬಂದಿದ್ದರು. ನದಿಯ ದಡದಲ್ಲಿ ಅಂತ್ಯಕ್ರಿಯೆಯ ಚಿತೆಯನ್ನು ಸಿದ್ಧಪಡಿಸಲು ಸಹಾಯ ಮಾಡಿದ ನಂತರ, ಅವರು ಸ್ನಾನ ಮಾಡಲು ಸರಯು ನದಿಗೆ ಇಳಿದಿದ್ದಾರೆ. ಅವರು ನೀರಿನಲ್ಲಿದ್ದಾಗ ಹಠಾತ್ ಆಗಿ ಬಂದ ದೊಡ್ಡ ಮೊಸಳೆಯೊಂದು, ದೀಪಕ್ ಅವರ ತಲೆಯನ್ನು ತನ್ನ ಬಲವಾದ ದವಡೆಗಳಿಂದ ಕಚ್ಚಿ ಹಿಡಿದು ಕೆಲವೇ ಸೆಕೆಂಡುಗಳಲ್ಲಿ ನದಿಯೊಳಗೆ ಎಳೆದೊಯ್ದಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿದೆ ಲಿಂಕ್: ಸರಯು ನದಿಗೆ ಅತ್ತೆಯ ಅಂತ್ಯಕ್ರಿಯೆಗೆ ಬಂದಿದ್ದ ಅಳಿಯನನ್ನು ಎಳೆದೊಯ್ದ ಮೊಸಳೆ

ತಮಿಳುನಾಡು ಸರ್ಕಾರದ ಸಂಪುಟ ವಿಸ್ತರಣೆ, ವಿಜಯ್ ಸಂಪುಟ ಸೇರಿದ 23 ಶಾಸಕರು
ತಮಿಳುನಾಡು(Tamil Nadu) ಮುಖ್ಯಮಂತ್ರಿ ಜೋಸೆಫ್ ವಿಜಯ್ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.. ಇಂದು (ಗುರುವಾರ) ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲರು ಒಟ್ಟು 23 ಶಾಸಕರಿಗೆ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ವಿಸ್ತರಣೆಯು ತಮಿಳುನಾಡು ರಾಜಕೀಯದಲ್ಲಿ ಹೊಸದೊಂದು ಯುಗಕ್ಕೆ ನಾಂದಿ ಹಾಡಿದೆ.ಈ ಸಂಪುಟ ವಿಸ್ತರಣೆಯ ಅತ್ಯಂತ ಪ್ರಮುಖ ಹೈಲೈಟ್ ಎಂದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ 59 ವರ್ಷಗಳ ಸುದೀರ್ಘ ರಾಜಕೀಯ ಬರಗಾಲ ಕೊನೆಗೊಂಡಿದೆ. ಬರೋಬ್ಬರಿ 59 ವರ್ಷಗಳ ನಂತರ ಕಾಂಗ್ರೆಸ್ ತಮಿಳುನಾಡಿನಲ್ಲಿ ಸರ್ಕಾರದ ಭಾಗವಾಗಿದೆ. ಕಾಂಗ್ರೆಸ್‌ನ ಒಟ್ಟು 5 ಶಾಸಕರಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರೊಂದಿಗೆ ಮೈತ್ರಿಪಕ್ಷವಾದ ವಿಸಿಕೆ (VCK) ಯ ಇಬ್ಬರು ಶಾಸಕರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಲಿಂಕ್: ತಮಿಳುನಾಡು ಸರ್ಕಾರದ ಸಂಪುಟ ವಿಸ್ತರಣೆ, ವಿಜಯ್ ಸಂಪುಟ ಸೇರಿದ 23 ಶಾಸಕರು

ಮಗಳು ಕಾಣೆಯಾಗಿದ್ದಾಳೆ ಸ್ವಾಮಿ ಹುಡುಕಿಕೊಡಿ ಅಂದ್ರೆ, ಗಾಡೀಲಿ ಡೀಸೆಲ್​ ಇಲ್ಲ ಹಣ ಕೊಡಿ ಎಂದ ಪೊಲೀಸ್

ಮಹಾರಾಷ್ಟ್ರದ ನಾಗ್ಪುರದಲ್ಲಿ ಇಡೀ ಪೊಲೀಸ್ ವ್ಯವಸ್ಥೆಯೇ ತಲೆತಗ್ಗಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಪಂಚಪಾವೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರದಿಂದ ಅಪ್ರಾಪ್ತ ಬಾಲಕಿಯೊಬ್ಬಳು ಕಾಣೆಯಾಗಿದ್ದಳು. ಗಾಬರಿಗೊಂಡ ಕುಟುಂಬಸ್ಥರು ತಕ್ಷಣವೇ ದೂರು ನೀಡಲು ಠಾಣೆಗೆ ಓಡಿ ಬಂದಾಗ, ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಬುರಾವ್ ರಾವತ್ ಅವರು, ನಮ್ಮ ವಾಹನದಲ್ಲಿ ಡೀಸೆಲ್ ಇಲ್ಲ, ನಿಮ್ಮ ಮಗಳನ್ನು ಹುಡುಕಬೇಕಾದರೆ ಇಂಧನಕ್ಕೆ ಹಣ ಕೊಡಿ ಎಂದು ಉಡಾಫೆಯಾಗಿ ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ:  ಮಗಳು ಕಾಣೆಯಾಗಿದ್ದಾಳೆ ಸ್ವಾಮಿ ಹುಡುಕಿಕೊಡಿ ಅಂದ್ರೆ, ಗಾಡೀಲಿ ಡೀಸೆಲ್​ ಇಲ್ಲ ಹಣ ಕೊಡಿ ಎಂದ ಪೊಲೀಸ್ 

ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕರಣ್ ಕುಂದ್ರಾ ಹಾಗೂ ಶ್ರುತಿ ಪ್ರಕಾಶ್ ಹಿಂದಿ ಬಿಗ್ ಬಾಸ್ ಮೂಲಕ ಪರಸ್ಪರ ಪರಿಚಯ ಆದವರು. ಈಗ ಕರಣ್ ಕುಂದ್ರಾ ಅವರು ಶ್ರುತಿಗೆ ಪ್ರಪೋಸ್ ಮಾಡಿದ್ದಾರೆ. ಮರಭೂಮಿಯ ಹಿನ್ನೆಲೆಯಲ್ಲಿ ಹೂವುಗಳಿಂದ ಅಲಂಕೃತಗೊಂಡ ವಿಶೇಷ ವೇದಿಕೆಯಲ್ಲಿ, ಮಂಡಿಯೂರಿ ಕರಣ್ ಕುಂದ್ರಾ ಪ್ರೀತಿ ಹೇಳಿಕೊಂಡಿದ್ದಾರೆ. ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದ ಆಪ್ತರು ಹಾಗೂ ಸ್ನೇಹಿತರು ಚಪ್ಪಾಳೆ ತಟ್ಟಿ ಸಡಗರದಿಂದ ನವಜೋಡಿಗೆ ಶುಭ ಹಾರೈಸಿದರು. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಈ ಘಟನೆ ಹೇಳುವಾಗ ಶ್ರುತಿ ಕಣ್ಣೀರು ಹಾಕಿದರು. ಇದು ರಿಯಾಲಿಟಿ ಶೋ ಒಂದರ ಭಾಗ ಆಗಿತ್ತು ಎನ್ನಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್

ಪ್ಲೇಆಫ್​ಗೂ ಮುನ್ನ RCBಗೆ ಗುಡ್ ನ್ಯೂಸ್

ಇಂಡಿಯನ್ ಪ್ರೀಮಿಯರ್ ಲೀಗ್​ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 65 ಪಂದ್ಯಗಳು ಮುಗಿದ್ದು, ಈ ಮ್ಯಾಚ್​ಗಳ ಮುಕ್ತಾಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಅಗ್ರಸ್ಥಾನದೊಂದಿಗೆ ಆರ್​ಸಿಬಿ ಪ್ಲೇಆಫ್​ನಲ್ಲಿ ಮೊದಲ ಕ್ವಾಲಿಫೈಯರ್ ಆಡುವುದನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇತ್ತ ಪ್ಲೇಆಫ್​ ಆಡುವುದನ್ನು ಖಚಿತಪಡಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆಗೆ ಗುಡ್​ ನ್ಯೂಸ್​ವೊಂದು ಸಿಕ್ಕಿದೆ. ಅದು ಕೂಡ ಸ್ಫೋಟಕ ದಾಂಡಿಗನ ರಿಎಂಟ್ರಿಯ ಸುದ್ದಿ ಎಂಬುದು ವಿಶೇಷ. ಹೌದು, ಪ್ಲೇಆಫ್​ ಪಂದ್ಯಕ್ಕೂ ಮುನ್ನ ಫಿಲ್ ಸಾಲ್ಟ್ ಆರ್​ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

 

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Follow Us