AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರಯು ನದಿಗೆ ಅತ್ತೆಯ ಅಂತ್ಯಕ್ರಿಯೆಗೆ ಬಂದಿದ್ದ ಅಳಿಯನನ್ನು ಎಳೆದೊಯ್ದ ಮೊಸಳೆ

ಅತ್ತೆಯ ಅಂತ್ಯಕ್ರಿಯೆಗೆಂದು ಬಂದಿದ್ದ ಅಳಿಯನನ್ನು ಮೊಸಳೆಯೊಂದು ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಧವಾರ ಉತ್ತರ ಪ್ರದೇಶದ ಸರಯು ನದಿಯ ದಡದಲ್ಲಿ 30 ವರ್ಷದ ಯುವಕನೊಬ್ಬನ ಮೇಲೆ ಮೊಸಳೆ ದಾಳಿ ನಡೆಸಿ, ನದಿಯ ಆಳಕ್ಕೆ ಎಳೆದೊಯ್ದಿರುವ ಅತ್ಯಂತ ದಾರುಣ ಘಟನೆ ವರದಿಯಾಗಿದೆ. ಗ್ರೇಟರ್ ನೋಯ್ಡಾ ನಿವಾಸಿಯಾದ ದೀಪಕ್ ಶರ್ಮಾ ಎಂಬ ವ್ಯಕ್ತಿ, ತಮ್ಮ ಅತ್ತೆಯ ನಿಧನದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಗೊಂಡಾ ಜಿಲ್ಲೆಯ ಉಮ್ರಿ ಗ್ರಾಮಕ್ಕೆ ಬಂದಿದ್ದರು.

ಸರಯು ನದಿಗೆ ಅತ್ತೆಯ ಅಂತ್ಯಕ್ರಿಯೆಗೆ ಬಂದಿದ್ದ ಅಳಿಯನನ್ನು ಎಳೆದೊಯ್ದ ಮೊಸಳೆ
ಮೊಸಳೆ ದಾಳಿಗೆ ಬಲಿಯಾದ ವ್ಯಕ್ತಿImage Credit source: India Today
ನಯನಾ ರಾಜೀವ್
|

Updated on: May 21, 2026 | 12:37 PM

Share

ಲಕ್ನೋ, ಮೇ 21: ಅತ್ತೆಯ ಅಂತ್ಯಕ್ರಿಯೆಗೆಂದು ಬಂದಿದ್ದ ಅಳಿಯನನ್ನು ಮೊಸಳೆ(Crocodile)ಯೊಂದು ಎಳೆದೊಯ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬುಧವಾರ ಉತ್ತರ ಪ್ರದೇಶದ ಸರಯು ನದಿಯ ದಡದಲ್ಲಿ 30 ವರ್ಷದ ಯುವಕನೊಬ್ಬನ ಮೇಲೆ ಮೊಸಳೆ ದಾಳಿ ನಡೆಸಿ, ನದಿಯ ಆಳಕ್ಕೆ ಎಳೆದೊಯ್ದಿರುವ ಅತ್ಯಂತ ದಾರುಣ ಘಟನೆ ವರದಿಯಾಗಿದೆ. ಗ್ರೇಟರ್ ನೋಯ್ಡಾ ನಿವಾಸಿಯಾದ ದೀಪಕ್ ಶರ್ಮಾ ಎಂಬ ವ್ಯಕ್ತಿ, ತಮ್ಮ ಅತ್ತೆಯ ನಿಧನದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಗೊಂಡಾ ಜಿಲ್ಲೆಯ ಉಮ್ರಿ ಗ್ರಾಮಕ್ಕೆ ಬಂದಿದ್ದರು.

ನದಿಯ ದಡದಲ್ಲಿ ಅಂತ್ಯಕ್ರಿಯೆಯ ಚಿತೆಯನ್ನು ಸಿದ್ಧಪಡಿಸಲು ಸಹಾಯ ಮಾಡಿದ ನಂತರ, ಅವರು ಸ್ನಾನ ಮಾಡಲು ಸರಯು ನದಿಗೆ ಇಳಿದಿದ್ದಾರೆ. ಅವರು ನೀರಿನಲ್ಲಿದ್ದಾಗ ಹಠಾತ್ ಆಗಿ ಬಂದ ದೊಡ್ಡ ಮೊಸಳೆಯೊಂದು, ದೀಪಕ್ ಅವರ ತಲೆಯನ್ನು ತನ್ನ ಬಲವಾದ ದವಡೆಗಳಿಂದ ಕಚ್ಚಿ ಹಿಡಿದು ಕೆಲವೇ ಸೆಕೆಂಡುಗಳಲ್ಲಿ ನದಿಯೊಳಗೆ ಎಳೆದೊಯ್ದಿದೆ.

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸ್ಥಳೀಯರು ನದಿಯಲ್ಲಿ ಮೊಸಳೆಗಳ ಕಾಟ ಇರುವುದರಿಂದ ನೀರಿಗೆ ಇಳಿಯದಂತೆ ದೀಪಕ್ ಅವರಿಗೆ ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ, ಅವರು ಈ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ ನೀರಿಗೆ ಇಳಿದಿದ್ದೇ ದುರಂತಕ್ಕೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿ ರಾಜೇಶ್ ಶುಕ್ಲಾ ತಿಳಿಸಿದ್ದಾರೆ.

ಮತ್ತಷ್ಟು ಓದಿ: ದಾಂಡೇಲಿ: ಶೌಚಕ್ಕೆ ಕುಳಿತಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ; ಸ್ಥಳೀಯರ ಸಮಯಪ್ರಜ್ಞೆಯಿಂದ ಬಚಾವ್!

ದೀಪಕ್ ಅವರ ಕಿರುಚಾಟ ಕೇಳಿ ಸ್ಥಳೀಯರು ತಕ್ಷಣವೇ ನದಿಯಲ್ಲಿ ಹುಡುಕಾಟ ನಡೆಸಿದರೂ ಅವರ ಯಾವುದೇ ಸುಳಿವು ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಧಾವಿಸಿದ್ದಾರೆ. ಸದ್ಯ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಲಕ್ನೋದಿಂದ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವನ್ನು ಕರೆಯಿಸಲಾಗಿದೆ. ಇಡೀ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಯುವಕನ ದೇಹಕ್ಕಾಗಿ ನದಿಯ ದಡದಲ್ಲಿ ಕಣ್ಣೀರು ಹಾಕುತ್ತಾ ಕಾಯುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಪೊಲೀಸರಿಗೂ ಎಚ್ಚರಿಕೆ ಕೊಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಪೊಲೀಸರಿಗೂ ಎಚ್ಚರಿಕೆ ಕೊಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭೇಟಿಯಾದ ಡಿಕೆ ಶಿವಕುಮಾರ್
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭೇಟಿಯಾದ ಡಿಕೆ ಶಿವಕುಮಾರ್
36 ಸಾವಿರ ಕೋಟಿ ರೂ. ಲೂಟಿ ಆರೋಪ:ಲೋಕಾಯುಕ್ತಕ್ಕೂ ಬಿಜೆಪಿ ದೂರು
36 ಸಾವಿರ ಕೋಟಿ ರೂ. ಲೂಟಿ ಆರೋಪ:ಲೋಕಾಯುಕ್ತಕ್ಕೂ ಬಿಜೆಪಿ ದೂರು
ಜೂನ್​​ 12ರಂದು ಕೊಲ್ಲೂರಿಗೆ ತಮಿಳುನಾಡು ಸಿಎಂ ವಿಜಯ್​​ ಭೇಟಿ
ಜೂನ್​​ 12ರಂದು ಕೊಲ್ಲೂರಿಗೆ ತಮಿಳುನಾಡು ಸಿಎಂ ವಿಜಯ್​​ ಭೇಟಿ
ಬಿಸಿಎಂ ಹಾಸ್ಟೆಲ್​​​​​ನಲ್ಲಿ ಹುಡುಗ-ಹುಡುಗಿಯರಿಂದ ಬಿಂದಾಸ್ ಎಣ್ಣೆ ಪಾರ್ಟಿ
ಬಿಸಿಎಂ ಹಾಸ್ಟೆಲ್​​​​​ನಲ್ಲಿ ಹುಡುಗ-ಹುಡುಗಿಯರಿಂದ ಬಿಂದಾಸ್ ಎಣ್ಣೆ ಪಾರ್ಟಿ
ನಾಮಪತ್ರ ರದ್ದಾಗಲೆಂದೇ ಕಾಂಗ್ರೆಸ್ ಫಾರ್ಮ್ ತುಂಬಿತ್ತಾ? ಬಿಜೆಪಿ ಲೇವಡಿ
ನಾಮಪತ್ರ ರದ್ದಾಗಲೆಂದೇ ಕಾಂಗ್ರೆಸ್ ಫಾರ್ಮ್ ತುಂಬಿತ್ತಾ? ಬಿಜೆಪಿ ಲೇವಡಿ
ಏನಿದು ಕಸದಿಂದ ಕಾಸು? ಎಳೆ ಎಳೆಯಾಗಿ ಬಿಚ್ಚಿಟ್ಟ ಆರ್ ಅಶೋಕ್
ಏನಿದು ಕಸದಿಂದ ಕಾಸು? ಎಳೆ ಎಳೆಯಾಗಿ ಬಿಚ್ಚಿಟ್ಟ ಆರ್ ಅಶೋಕ್
ಕೇರಳದಲ್ಲಿ ಶಿಗೆಲ್ಲ ಮಾರಿಗೆ ಮಗು ಬಲಿ; ಏನಿದು ಶಿಗೆಲ್ಲ, ಇದು ಹರಡುವುದೇಗೆ?
ಕೇರಳದಲ್ಲಿ ಶಿಗೆಲ್ಲ ಮಾರಿಗೆ ಮಗು ಬಲಿ; ಏನಿದು ಶಿಗೆಲ್ಲ, ಇದು ಹರಡುವುದೇಗೆ?
ಸಕಲೇಶಪುರದಲ್ಲಿ ಕರುಗಳನ್ನು ಬೆನ್ನಟ್ಟಿದ ಆನೆ ಮರಿ
ಸಕಲೇಶಪುರದಲ್ಲಿ ಕರುಗಳನ್ನು ಬೆನ್ನಟ್ಟಿದ ಆನೆ ಮರಿ
ಅಪ್ರಾಪ್ತನಿಗೆ ಸಿಗರೇಟ್ ಸೇದಿಸಿ,ಬ್ಲಾಕ್‌ಮೇಲ್ ಮಾಡಿ 120 ಗ್ರಾಂ ಚಿನ್ನ ದರೋಡ
ಅಪ್ರಾಪ್ತನಿಗೆ ಸಿಗರೇಟ್ ಸೇದಿಸಿ,ಬ್ಲಾಕ್‌ಮೇಲ್ ಮಾಡಿ 120 ಗ್ರಾಂ ಚಿನ್ನ ದರೋಡ