National Voters’ Day 2023; ರಾಷ್ಟ್ರೀಯ ಮತದಾರರ ದಿನದ ಮಹತ್ವ, ಇತಿಹಾಸ, ಧ್ಯೇಯ ತಿಳಿಯಿರಿ

1950ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ನೆನಪಿಗಾಗಿ ಈ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.

National Voters’ Day 2023; ರಾಷ್ಟ್ರೀಯ ಮತದಾರರ ದಿನದ ಮಹತ್ವ, ಇತಿಹಾಸ, ಧ್ಯೇಯ ತಿಳಿಯಿರಿ
ರಾಷ್ಟ್ರೀಯ ಮತದಾರರ ದಿನ
Follow us
TV9 Web
| Updated By: ಆಯೇಷಾ ಬಾನು

Updated on:Jan 25, 2023 | 8:26 AM

13 ನೇ ರಾಷ್ಟ್ರೀಯ ಮತದಾರರ ದಿನ 2023: ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಮತದಾನದ ಹಕ್ಕಿರುತ್ತೆ. ಇದರ ಮಹತ್ವವನ್ನು ಸಾರುವ ಉದ್ದೇಶದಿಂದ ಹಾಗೂ 1950 ರಲ್ಲಿ ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಹೊಸ ಮತದಾರರನ್ನು, ಯುವಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. 1950ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನದ ನೆನಪಿಗಾಗಿ ಈ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. 2011ರಲ್ಲಿ ಮೊದಲ ಬಾರಿಗೆ ದೇಶಾದ್ಯಂತ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. 2011 ರಲ್ಲಿ ಅಂದಿನ ರಾಷ್ಟ್ರಪತಿಯಾಗಿದ್ದ ಪ್ರತಿಭಾ ದೇವಿ ಪಾಟೀಲ್ ಅವರು ಭಾರತದ ಚುನಾವಣಾ ಆಯೋಗದ 61ನೇ ಸಂಸ್ಥಾಪನಾ ದಿನದಂದು ಈ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಣೆ ಮಾಡಲು ಘೋಷಿಸಿದರು. ಇದನ್ನು ಪ್ರತಿ ವರ್ಷ ನಿರ್ದಿಷ್ಟ ಧ್ಯೇಯದೊಂದಿಗೆ ಆಚರಿಸಲಾಗುತ್ತದೆ. ಇದು ಯುವಜನರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದಲ್ಲದೆ, ಮತದಾನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಕೇಂದ್ರೀಕರಿಸುತ್ತದೆ.

ಚುನಾವಣಾ ಆಯೋಗದ ಮುಖ್ಯ ಉದ್ದೇಶ ಮತದಾರರ ನೋಂದಣಿಯನ್ನು ಹೆಚ್ಚಿಸುವುದು, ಮೊದಲು ಮತದಾರರ ಅರ್ಹತೆಯ ವಯಸ್ಸು 21 ವರ್ಷವಾಗಿತ್ತು ಆದರೆ 1988 ರಲ್ಲಿ ಅದನ್ನು 18 ವರ್ಷಕ್ಕೆ ಇಳಿಸಲಾಯಿತು. 1998 ರ 61ನೇ ತಿದ್ದುಪಡಿ ಮಸೂದೆಯು ಭಾರತದಲ್ಲಿ ಮತದಾರರ ಅರ್ಹತೆಯ ವಯಸ್ಸನ್ನು ಕಡಿಮೆ ಮಾಡಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಕೇವಲ 400 ದಿನಗಳು ಬಾಕಿ ಉಳಿದಿವೆ‌, ಎಲ್ಲ ಮತದಾರರನ್ನು ತಲುಪಿ: ಪ್ರಧಾನಿ ಮೋದಿ

ರಾಷ್ಟ್ರೀಯ ಮತದಾರರ ದಿನದ ಮಹತ್ವ

ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರತಿಯೊಬ್ಬ ಪ್ರಜೆಗೂ ಮತದಾನದ ಮೂಲಭೂತ ಹಕ್ಕು ಇದೆ. ರಾಷ್ಟ್ರವನ್ನು ಮುನ್ನಡೆಸಲು, ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು, ಬದಲಾವಣೆಯನ್ನು ತರುತ್ತಾರೆ ಎಂದೆನಿಸುವ ನಾಯಕ, ಪಕ್ಷವನ್ನು ಗೆಲ್ಲಿಸುವ ಮೂಲಕ ದೇಶದ ಬದಲಾವಣೆಗೆ ತಮ್ಮ ಅತ್ಯಮೂಲ್ಯ ಮತವನ್ನು ಬಳಸಬಹುದು.

ನಾವು ಸರಿಯಾದ ನಾಯಕನನ್ನು ಆಯ್ಕೆ ಮಾಡದಿದ್ದರೆ ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಮತ್ತು ದೇಶದ ಜನರ ಮೇಲೂ ಪರಿಣಾಮ ಬೀರುತ್ತದೆ. ರಸ್ತೆಗಳ ನಿರ್ಮಾಣ, ವಿದ್ಯುತ್ ಸಂಪರ್ಕದ ಸಮಸ್ಯೆ ಸೇರಿದಂತೆ ಮೂಲ ವ್ಯವಸ್ಥೆಯನ್ನು ಸರಿಯಾಗಿ ಅಭಿವೃದ್ಧಿಪಡಿಸದ ನಾಯಕನನ್ನು ಆಯ್ಕೆ ಮಾಡಿದರೆ ಅದರಿಂದ ನಷ್ಟ ನಮಗೇ ಆಗುತ್ತದೆ. ಆದ್ರೆ ಒಬ್ಬ ಉತ್ತಮ ನಾಯಕನನ್ನು ಆಯ್ಕೆ ಮಾಡಿದರೆ ದೇಶದ ಪ್ರಗತಿ ಇಡೀ ಪ್ರಪಂಚಕ್ಕೆ ಮಾದರಿಯಾಗುತ್ತದೆ. ಹೀಗಾಗಿ ಮತದಾರರು ದೇಶದ ಪ್ರಗತಿಗೆ ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಬೇಕು. ಹಾಗೂ ಸರಿಯಾದ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕು.

ರಾಷ್ಟ್ರೀಯ ಮತದಾರರ ದಿನದ ಧ್ಯೇಯ

‘Nothing Like Voting, I Vote for Sure’: ಮತ ಚಲಾಯಿಸುವುದರಂತೆ ಬೇರೇನೂ ಇಲ್ಲ, ಮತಚಲಾವಣೆ ನಾನು ತಪ್ಪಿಸಲ್ಲ ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷದ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಹಾಗೂ ಈ ದಿನದ ವಿಶೇಷತೆ ಸಾರಲು ಲೋಗೋವನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ಭಾರತದ ಚುನಾವಣಾ ಆಯೋಗವು ನವದೆಹಲಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾದ ಶ್ರೀ ಕಿರಣ್ ರಿಜಿಜು ಅವರು ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು 2022 ರ ಅವಧಿಯಲ್ಲಿ ಚುನಾವಣಾ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ 2022 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಐಟಿ ಉಪಕ್ರಮಗಳು, ಭದ್ರತಾ ನಿರ್ವಹಣೆ, ಚುನಾವಣಾ ನಿರ್ವಹಣೆ, ಮತದಾರರ ಪಟ್ಟಿ ಮತ್ತು ಮತದಾರರ ಜಾಗೃತಿಗಾಗಿ ತಮ್ಮ ಅಮೂಲ್ಯ ಕೊಡುಗೆಗಾಗಿ ಸರ್ಕಾರಿ ಇಲಾಖೆಗಳು ಮತ್ತು ಮಾಧ್ಯಮ ಸಂಸ್ಥೆಗಳಂತಹ ಪ್ರಮುಖ ಪಾಲುದಾರರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:26 am, Wed, 25 January 23

ರಾಜಕಾರಣದಲ್ಲೇ ತೊಡಗಿಸಿಕೊಂಡಿದ್ದರೆ ಯಾವತ್ತೋ ಶಾಸಕನಾಗಿರುತ್ತಿದ್ದೆ: ನಿಖಿಲ್
ರಾಜಕಾರಣದಲ್ಲೇ ತೊಡಗಿಸಿಕೊಂಡಿದ್ದರೆ ಯಾವತ್ತೋ ಶಾಸಕನಾಗಿರುತ್ತಿದ್ದೆ: ನಿಖಿಲ್
2028ರ ವಿಧಾನಸಭಾ ಚುನಾವಣೆ ವೇಳೆಗೆ ರಮೇಶ್ ಜಾರಕಿಹೊಳಿ ಬಂಡಾಯ? ಕಾರಣ ಇಲ್ಲಿದೆ
2028ರ ವಿಧಾನಸಭಾ ಚುನಾವಣೆ ವೇಳೆಗೆ ರಮೇಶ್ ಜಾರಕಿಹೊಳಿ ಬಂಡಾಯ? ಕಾರಣ ಇಲ್ಲಿದೆ
ದೀಪಗಳಿಂದ ಅಲಂಕೃತಗೊಂಡಿರುವ ಇಡೀ ಧರ್ಮಸ್ಥಳವೇ ಝಗಮಗ, ಕಣ್ಣಿಗೆ ಹಬ್ಬ
ದೀಪಗಳಿಂದ ಅಲಂಕೃತಗೊಂಡಿರುವ ಇಡೀ ಧರ್ಮಸ್ಥಳವೇ ಝಗಮಗ, ಕಣ್ಣಿಗೆ ಹಬ್ಬ
ಬಿಗ್ ಬಾಸ್​​ನಲ್ಲಿ ಈ ವಾರ ಯಾರು ವೀಕ್ ಸ್ಪರ್ಧಿ? ಯಾರು ಎಲಿಮಿನೇಟ್?
ಬಿಗ್ ಬಾಸ್​​ನಲ್ಲಿ ಈ ವಾರ ಯಾರು ವೀಕ್ ಸ್ಪರ್ಧಿ? ಯಾರು ಎಲಿಮಿನೇಟ್?
ಶಾಸ್ತ್ರದ ಪ್ರಕಾರ ಬಾಳೆ ಎಲೆ ಊಟ ಹೇಗೆ ಮಾಡಬೇಕು? ವಿಡಿಯೋ ನೋಡಿ
ಶಾಸ್ತ್ರದ ಪ್ರಕಾರ ಬಾಳೆ ಎಲೆ ಊಟ ಹೇಗೆ ಮಾಡಬೇಕು? ವಿಡಿಯೋ ನೋಡಿ
Horoscope: ಈ ರಾಶಿಯವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ
Horoscope: ಈ ರಾಶಿಯವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ
ಟೀಂ ಇಂಡಿಯಾದ ನೂತನ ಏಕದಿನ ಜೆರ್ಸಿ ಹೇಗಿದೆ ಗೊತ್ತಾ?
ಟೀಂ ಇಂಡಿಯಾದ ನೂತನ ಏಕದಿನ ಜೆರ್ಸಿ ಹೇಗಿದೆ ಗೊತ್ತಾ?
ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್
ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್
ಸಿಎಂ, ಡಿಸಿಎಂ ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ: ಜಮೀರ್
ಸಿಎಂ, ಡಿಸಿಎಂ ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ: ಜಮೀರ್
ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!
ನಂಜನಗೂಡು ಶ್ರೀಕಂಠೇಶ್ವರ ಕೋಟಿ ಒಡೆಯ, ನಾಲ್ಕೈದು ದೇಶ ಕರೆನ್ಸಿ ಪತ್ತೆ!