Natural Farming ಕೃಷಿಯನ್ನು ಕೆಮಿಸ್ಟ್ರಿ ಲ್ಯಾಬ್ನಿಂದ ಹೊರತರಬೇಕು, ನೈಸರ್ಗಿಕ ಕೃಷಿ ತಂತ್ರ ಅಳವಡಿಸಿ: ನರೇಂದ್ರ ಮೋದಿ
Narendra Modi ರಸಗೊಬ್ಬರಗಳು ಹಸಿರು ಕ್ರಾಂತಿಗೆ ಕಾರಣವಾದವು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನಾವು ಪರ್ಯಾಯಗಳ ಮೇಲೆ ಕೆಲಸ ಮಾಡುತ್ತಲೇ ಇರಬೇಕೆಂಬುದು ಕೂಡ ನಿಜ. ಇದಕ್ಕೆ ಮುಖ್ಯ ಕಾರಣವೆಂದರೆ ನಾವು ಬೇರೆ ದೇಶಗಳಿಗೆ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳಬೇಕು, ಇದು ಕೃಷಿ ವೆಚ್ಚವನ್ನು ಹೆಚ್ಚಿಸುತ್ತದೆ
ದೆಹಲಿ: ರೈತರ ಅನುಕೂಲಕ್ಕಾಗಿ ಕಳೆದ ಏಳು ವರ್ಷಗಳಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ಉಲ್ಲೇಖಿಸಿದ್ದು ಅವು ಕೃಷಿ ಕ್ಷೇತ್ರವನ್ನು ಪರಿವರ್ತಿಸುತ್ತವೆ ಎಂದು ಹೇಳಿದರು. ಅದೇ ವೇಳೆ ಮಣ್ಣಿನ ಉತ್ತಮ ಉತ್ಪನ್ನ ಮತ್ತು ದೀರ್ಘಾಯುಷ್ಯವನ್ನು ಖಚಿತಪಡಿಸಿಕೊಳ್ಳಲು ನೈಸರ್ಗಿಕ ಕೃಷಿ ತಂತ್ರಗಳನ್ನು(natural farming )ಅಳವಡಿಸಿಕೊಳ್ಳುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದರು. ರಸಗೊಬ್ಬರಗಳು ಹಸಿರು ಕ್ರಾಂತಿಗೆ ಕಾರಣವಾದವು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನಾವು ಪರ್ಯಾಯಗಳ ಮೇಲೆ ಕೆಲಸ ಮಾಡುತ್ತಲೇ ಇರಬೇಕೆಂಬುದು ಕೂಡ ನಿಜ. ಇದಕ್ಕೆ ಮುಖ್ಯ ಕಾರಣವೆಂದರೆ ನಾವು ಬೇರೆ ದೇಶಗಳಿಗೆ ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳಬೇಕು, ಇದು ಕೃಷಿ ವೆಚ್ಚವನ್ನು ಹೆಚ್ಚಿಸುತ್ತದೆ. ಆದ್ದರಿಂದ, (ನೈಸರ್ಗಿಕ ಕೃಷಿಯ ಬಗ್ಗೆ) ತಿಳಿದಿರುವ ಅವಶ್ಯಕತೆಯಿದೆ ಎಂದು ಕೃಷಿ ಮತ್ತು ಆಹಾರ ಸಂಸ್ಕರಣೆ ಕುರಿತ ರಾಷ್ಟ್ರೀಯ ಶೃಂಗಸಭೆಯನ್ನು(National Summit on Agro and Food Processing) ಉದ್ದೇಶಿಸಿ ಮಾತನಾಡಿದ ಮೋದಿ ಹೇಳಿದ್ದಾರೆ.ಕೃಷಿಯನ್ನು ರಸಾಯನಶಾಸ್ತ್ರ ಪ್ರಯೋಗಾಲಯದಿಂದ ಹೊರತೆಗೆಯಬೇಕು ಮತ್ತು ಪ್ರಕೃತಿಯ ಸ್ವಂತ ಪ್ರಯೋಗಾಲಯದೊಂದಿಗೆ ಸಂಪರ್ಕಿಸಬೇಕು. ಗೊಬ್ಬರಗಳಿಗೆ ಯಾವ ಶಕ್ತಿ ಇದೆಯೋ ಅದನ್ನು ಪ್ರಕೃತಿಯಲ್ಲಿಯೂ ಕಾಣಬಹುದು. ನಾವು ಅದನ್ನು ಅನ್ವೇಷಿಸಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
Addressing the National Conclave on #NaturalFarming. https://t.co/movK2DPtfb
— Narendra Modi (@narendramodi) December 16, 2021
ಇತ್ತೀಚಿನ ವರ್ಷಗಳಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಬಹುಮಟ್ಟಿಗೆ ಹೆಚ್ಚಿಸಲು ನೈಸರ್ಗಿಕ ಕೃಷಿ ಹೇಗೆ ಸಹಾಯ ಮಾಡಿದ್ದಾರೆ ಎಂಬುದರ ಕುರಿತು ವಿವರಗಳನ್ನು ನೀಡಿದ ಗುಜರಾತ್ ಗವರ್ನರ್ ಆಚಾರ್ಯ ದೇವವ್ರತ್ ಅವರ ಭಾಷಣವನ್ನು ಶ್ಲಾಘಿಸಿದ ಮೋದಿ, ನೈಸರ್ಗಿಕ ಕೃಷಿಯು ವಿಜ್ಞಾನವನ್ನು ಆಧರಿಸಿದೆ ಎಂದು ಹೇಳಿದರು. ಜಗತ್ತು ತಾಂತ್ರಿಕವಾಗಿ ಪ್ರಗತಿ ಹೊಂದಿದ್ದರೂ ಅದರ ಬೇರುಗಳಿಗೂ ಬೆರೆತಿದ್ದು, ಇದನ್ನು ಕೃಷಿಯಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದರು.
“ಬೀಜದಿಂದ ಮಣ್ಣಿನವರೆಗೆ, ನೀವು ಎಲ್ಲವನ್ನೂ ನೈಸರ್ಗಿಕ ರೀತಿಯಲ್ಲಿ ಸಂಸ್ಕರಿಸಬಹುದು. ನೈಸರ್ಗಿಕ ಕೃಷಿಯು ರಸಗೊಬ್ಬರಗಳ ಮೇಲೆ ಅಥವಾ ಕೀಟನಾಶಕಗಳ ಮೇಲೆ ಖರ್ಚು ಮಾಡುವುದನ್ನು ಒಳಗೊಂಡಿರುವುದಿಲ್ಲ. ಇದಕ್ಕೆ ಕಡಿಮೆ ನೀರಾವರಿ ಅಗತ್ಯವಿರುತ್ತದೆ ಮತ್ತು ಪ್ರವಾಹ ಮತ್ತು ಅನಾವೃಷ್ಟಿಗಳನ್ನು ಎದುರಿಸಲು ಸಮರ್ಥವಾಗಿದೆ. ನೈಸರ್ಗಿಕ ಕೃಷಿಯು ಭಾರತದ ರೈತರು ಸ್ವಾವಲಂಬಿಯಾಗಲು ಸಹಾಯ ಮಾಡುತ್ತದೆ. ಕೃಷಿಯ ಜೊತೆಗೆ ರೈತರು ಪಶುಸಂಗೋಪನೆ, ಜೇನುಸಾಕಣೆ, ಮೀನುಗಾರಿಕೆ, ಸೌರಶಕ್ತಿ ಮತ್ತು ಜೈವಿಕ ಇಂಧನದಂತಹ ಅನೇಕ ಪರ್ಯಾಯ ಆದಾಯದ ಮೂಲಗಳೊಂದಿಗೆ ನಿರಂತರವಾಗಿ ಸಂಪರ್ಕ ಸಾಧಿಸುತ್ತಿದ್ದಾರೆ. ಗ್ರಾಮಗಳಲ್ಲಿ ಸಂಗ್ರಹಣೆ, ಶೀತಲ ಸರಪಳಿ ಮತ್ತು ಆಹಾರ ಸಂಸ್ಕರಣೆಯನ್ನು ಬಲಪಡಿಸಲು ಲಕ್ಷ ಕೋಟಿಗಳನ್ನು ಒದಗಿಸಲಾಗಿದೆ ಎಂದಿದ್ದಾರೆ ಮೋದಿ .
ಪ್ರಧಾನಿ ಮೋದಿಯವರಿಗಿಂತ ಮುಂಚೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಗುಜರಾತ್ ರಾಜ್ಯಪಾಲರು, ಎರೆಹುಳುಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳಾದ ದನದ ಸಗಣಿ, ಬೆಲ್ಲ ಮತ್ತು ಇತರವುಗಳು ಮಣ್ಣಿನ ಪೌಷ್ಟಿಕಾಂಶವನ್ನು ಹೆಚ್ಚಿಸಲು ಮತ್ತು ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಹೇಗೆ ಕಾರಣವಾಗುತ್ತವೆ ಎಂಬುದರ ಕುರಿತು ಮಾತನಾಡಿದರು. ನೈಸರ್ಗಿಕವಾಗಿ ಗೊಬ್ಬರ ತಯಾರಿಸುವ ಪ್ರಕ್ರಿಯೆಯ ಬಗ್ಗೆಯೂ ಅವರು ಕಿರುನೋಟ ನೀಡಿದರು. ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಮೂರು ದಿನಗಳ ಶೃಂಗಸಭೆಯು ಡಿಸೆಂಬರ್ 14 ರಂದು ಪ್ರಾರಂಭವಾಗಿದ್ದು ಮತ್ತು ಡಿಸೆಂಬರ್ 16 ರಂದು ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ಲೈಂಗಿಕ ಹಗರಣ ಆರೋಪ: ಗೋವಾ ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸಚಿವ ಮಿಲಿಂದ್ ನಾಯಕ್ ರಾಜೀನಾಮೆ
Published On - 1:54 pm, Thu, 16 December 21