Nepal Flood Impact: ನೇಪಾಳ ಜಲಪ್ರಳಯದ ಎಫೆಕ್ಟ್: ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡಕ್ಕೆ ಹೈ ಅಲರ್ಟ್,ಮುಂದಿನ 24 ಗಂಟೆ ಅತ್ಯಂತ ನಿರ್ಣಾಯಕ

ನೇಪಾಳದಲ್ಲಿ ಹಿಮನದಿ ಸ್ಫೋಟದಿಂದ ಉಂಟಾದ ಭೀಕರ ಪ್ರವಾಹದ ಪರಿಣಾಮವಾಗಿ ಭಾರತದ ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ. ನದಿಗಳ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದು, ಮುಂದಿನ 24 ಗಂಟೆಗಳು ಅತ್ಯಂತ ನಿರ್ಣಾಯಕ. ಗಂಡಕ್ ಬ್ಯಾರೇಜ್ ಗೇಟ್‌ಗಳನ್ನು ತೆರೆದು, ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಪಡೆಗಳನ್ನು ನಿಯೋಜಿಸಿ ತುರ್ತು ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ಮಾಡಲಾಗಿದೆ.

Nepal Flood Impact: ನೇಪಾಳ ಜಲಪ್ರಳಯದ ಎಫೆಕ್ಟ್: ಬಿಹಾರ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡಕ್ಕೆ ಹೈ ಅಲರ್ಟ್,ಮುಂದಿನ 24 ಗಂಟೆ ಅತ್ಯಂತ ನಿರ್ಣಾಯಕ
ನೇಪಾಳ

Updated on: Aug 27, 2026 | 12:44 PM

ನವದೆಹಲಿ, ಆಗಸ್ಟ್​ 27: ನೇಪಾಳ(Nepal)ದಲ್ಲಿ ಹಿಮನದಿ ಸ್ಫೋಟದಿಂದ ಉಂಟಾದ ಭೀಕರ ಪ್ರವಾಹದಲ್ಲಿ ಸಾವಿನ ಸಂಖ್ಯೆ 163 ಕ್ಕೆ ತಲುಪಿದ್ದು, 750 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ ಜಲಪ್ರಳಯದ ನೇರ ಪರಿಣಾಮವಾಗಿ ಭಾರತದ ನೆರೆ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ನದಿಗಳ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದು, ಮುಂದಿನ 24 ಗಂಟೆಗಳು ಅತ್ಯಂತ ನಿರ್ಣಾಯಕ ಎಂದು ಘೋಷಿಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ತುರ್ತು ಮಾತುಕತೆ ನಡೆಸಿ ವಿಪತ್ತು ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ. ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿ ನಗರ ಬಳಿಯ ಗಂಡಕ್ ಬ್ಯಾರೇಜ್‌ನ ಎಲ್ಲಾ 36 ಗೇಟ್‌ಗಳನ್ನು ತೆರೆದು ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

ಹೈ ಅಲರ್ಟ್ ಜಿಲ್ಲೆಗಳು: ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಗೋಪಾಲ್‌ಗಂಜ್, ಮುಜಫರ್‌ಪುರ, ಸಿವಾನ್, ಸರನ್, ಶಿಯೋಹರ್, ಸೀತಾಮರ್ಹಿ ಮತ್ತು ವೈಶಾಲಿ. ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿರುವ ಸಾವಿರಾರು ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಉತ್ತರ ಪ್ರದೇಶದ 7 ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಮಹಾರಾಜ್‌ಗಂಜ್, ಕುಶಿನಗರ, ಪಿಲಿಭಿತ್, ಶ್ರಾವಸ್ತಿ, ಬಲರಾಂಪುರ, ಸಿದ್ಧಾರ್ಥನಗರ ಮತ್ತು ಗೋರಖ್‌ಪುರ.

ಮತ್ತಷ್ಟು ಓದಿ: ನೇಪಾಳ ಪ್ರವಾಹ, 160ಕ್ಕೂ ಹೆಚ್ಚು ಮಂದಿ ಸಾವು, 133 ಭಾರತೀಯರು ಸೇರಿ 700ಕ್ಕೂ ಅಧಿಕ ಮಂದಿ ನಾಪತ್ತೆ

ಸಿಎಂ ಯೋಗಿ ಆದಿತ್ಯನಾಥ್ ನಿರ್ದೇಶನ: ಗಂಡಕ್ ಮತ್ತು ನಾರಾಯಣಿ ನದಿಗಳ ನೀರಿನ ಮಟ್ಟವನ್ನು ಪ್ರತಿ ಗಂಟೆಗೆ ಮೇಲ್ವಿಚಾರಣೆ ಮಾಡಲು ಹಾಗೂ ನೆರೆ ಪರಿಸ್ಥಿತಿಯನ್ನು ಎದುರಿಸಲು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಪಡೆಗಳನ್ನು ನಿಯೋಜಿಸಲು ಸಿಎಂ ಆದೇಶಿಸಿದ್ದಾರೆ.

ಪೋಸ್ಟ್​

ಉತ್ತರಾಖಂಡದಲ್ಲಿ ಶಾರದಾ ನದಿ ಮೇಲೆ ಹದ್ದಿನ ಕಣ್ಣು
ಗಡಿ ಜಿಲ್ಲೆ ಚಂಪಾವತ್‌ನ ಶಾರದಾ ಬ್ಯಾರೇಜ್ ಮತ್ತು ನದಿ ತೀರಗಳಲ್ಲಿ ಎಸ್‌ಡಿಆರ್‌ಎಫ್ ದಿನದ 24 ಗಂಟೆಯೂ ನಿರಂತರ ಕಣ್ಗಾವಲು ಇರಿಸಿದೆ.

ತುರ್ತು ಸಹಾಯವಾಣಿ ಸಂಖ್ಯೆಗಳು

ಟೋಲ್-ಫ್ರೀ: 1070

ಕಂಟ್ರೋಲ್ ರೂಂ: 0135-2710334, 0135-2710335, 8218867005

ನದಿಗಳ ಅಂತರ್ಸಂಪರ್ಕ ಜಾಲ: ನೇಪಾಳದ ಭೋಟೆಕೋಶಿ ನದಿಯು ತ್ರಿಶೂಲಿ ನದಿಯನ್ನು ಸೇರುತ್ತದೆ. ತ್ರಿಶೂಲಿ ನದಿಯು ದೇವಘಾಟ್ ಬಳಿ ಕಾಳಿ ಗಂಡಕಿ ನದಿಯೊಂದಿಗೆ ಸಂಗಮಗೊಂಡು ‘ನಾರಾಯಣಿ ನದಿ’ಯಾಗುತ್ತದೆ.

ಭಾರತ ಪ್ರವೇಶ: ಈ ನಾರಾಯಣಿ ನದಿಯೇ ಭಾರತದ ಗಡಿ ಪ್ರವೇಶಿಸಿದ ನಂತರ ‘ಗಂಡಕ್ ನದಿ’ ಎಂದು ಕರೆಯಲ್ಪಡುತ್ತದೆ. ಹೀಗಾಗಿ ನೇಪಾಳದ ಹಿಮಾಲಯ ಶ್ರೇಣಿಯಲ್ಲಿ ನೀರು ಹೆಚ್ಚಾದ ತಕ್ಷಣ ಭಾರತದ ಕೆಳಮುಖ ಗಂಡಕ್ ನದಿ ಜಲಾನಯನ ಪ್ರದೇಶದಲ್ಲಿ ದಿಢೀರ್ ಪ್ರವಾಹ ಪರಿಸ್ಥಿತಿ ತಲೆದೋರುತ್ತದೆ.

Published On - 11:39 am, Thu, 27 August 26

Loading...
Unable to load recommendations.
Follow Us