Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡಿ ಕಂಪನಿಗಳನ್ನು ಆಕರ್ಷಿಸಿ; ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ದೇಶದಲ್ಲಿ ಸ್ಟಾರ್ಟ್​ಅಪ್ ಗಳನ್ನ ಬಲಪಡಿಸುವ ಅಗತ್ಯವಿದೆ ಎಂದು ಉಚ್ಛರಿಸಿದ ಅವರು, ದೇಶದ ಅನೇಕ ಜಿಲ್ಲೆಗಳ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ ರಪ್ತು ಕೈಗೊಳ್ಳಲು ಅವಕಾಶವಿದೆ. ಮತ್ಸ್ಯ ಉದ್ಯೋಗ, ಮೀನು ರಫ್ತಿಗೆ ಬಹಳ ಅವಕಾಶಗಳಿವೆ. ಮೀನುಗಾರಿಕಾ ಸಮುದಾಯ ಈ ಅವಕಾಶವನ್ನು ಅಗತ್ಯವಾಗಿ ಬಳಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡಿ ಕಂಪನಿಗಳನ್ನು ಆಕರ್ಷಿಸಿ; ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ ಪ್ರಧಾನಿ ನರೇಂದ್ರ ಮೋದಿ
ಈ ಬಾರಿಯ ಬಜೆಟ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಕೇಳಿಬಂದಿದೆ: ನರೇಂದ್ರ ಮೋದಿ
Follow us
guruganesh bhat
|

Updated on:Feb 20, 2021 | 1:07 PM

ದೆಹಲಿ: ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡುವುದರ ಮೂಲಕ ರಾಜ್ಯ ಸರ್ಕಾರಗಳು ಕಂಪನಿಗಳನ್ನು ಹೂಡಿಕೆ ಮಾಡುವಂತೆ ಆಕರ್ಷಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನೀತಿ ಆಯೋಗದ 6ನೇ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದರು. 2014 ರ ನಂತರ ದೇಶದಲ್ಲಿ 2.40 ಕೋಟಿ ಮನೆ ನಿರ್ಮಿಸಲಾಗಿದ್ದು, ಹೊಸ ಮಾದರಿಯ ಮನೆಗಳ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದೆ. ಗ್ರಾಮೀಣ ಪ್ರದೇಶಗಳ 3.5 ಕೋಟಿ ಮನೆಗಳಿಗೆ ಪೈಪ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ ಎಂದು ಅವರು ಅಂಕಿಅಂಶಗಳನ್ನು ಅವರು ಬಿಚ್ಚಿಟ್ಟರು.

ಈ ಬಾರಿಯ ಬಜೆಟ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಕೇಳಿಬಂದಿದೆ. ದೇಶದ ಜನತೆ ಅಭಿವೃದ್ಧಿಯತ್ತ ಮುನ್ನಡೆಯಲು ಬಯಸುತ್ತದೆ. ಭಾರತದಂಥ ದೇಶದ ಯುವಜನರ ಆಕಾಂಕ್ಷೆಗೆ ತಕ್ಕಂತೆ ಮೂಲಸೌಕರ್ಯ ನಿರ್ಮಿಸಬೇಕಿದೆ ಎಂದು ಅವರು ಭವಿಷ್ಯದ ಯೋಜನೆಗಳ ಕುರಿತು ಸುಳಿವು ನೀಡಿದರು.

ಮೀನುಗಾರಿಕಾ, ಕೃಷಿ ಸಮುದಾಯಕ್ಕೆ ಮಾರ್ಗದರ್ಶನ ಅವಶ್ಯಕ ದೇಶದಲ್ಲಿ ಸ್ಟಾರ್ಟ್​ಅಪ್ ಗಳನ್ನ ಬಲಪಡಿಸುವ ಅಗತ್ಯವಿದೆ ಎಂದು ಉಚ್ಛರಿಸಿದ ಅವರು, ದೇಶದ ಅನೇಕ ಜಿಲ್ಲೆಗಳ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ ರಫ್ತು ಕೈಗೊಳ್ಳಲು ಅವಕಾಶವಿದೆ. ಮೀನುಗಾರಿಕೆ, ಮೀನು ರಫ್ತಿಗೆ ಬಹಳ ಅವಕಾಶಗಳಿವೆ. ಮೀನುಗಾರಿಕಾ ಸಮುದಾಯ ಈ ಅವಕಾಶವನ್ನು ಅಗತ್ಯವಾಗಿ ಬಳಸಿಕೊಳ್ಳಬೇಕು. ರೈತ ಸಮುದಾಯಕ್ಕೆ ಈಕುರಿತು ಮಾರ್ಗದರ್ಶನ ನೀಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವ, ಸಹಕಾರಗಳ ಕುರಿತು ಮಾತನಾಡಿದ ಅವರು, ಎರಡೂ ಆಡಳಿತಗಳು ಪರಸ್ಪರ ಸಹಕಾರ ತತ್ವವನ್ನು ಆಧರಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಈ ಸಹಕಾರ ತತ್ವ ಕೇವಲ ರಾಜ್ಯ- ಕೇಂದ್ರ ಸರ್ಕಾರಗಳ ನಡುವೆ ಮಾತ್ರ ಅಲ್ಲದೇ, ಜಿಲ್ಲೆಜಿಲ್ಲೆಗಳ ನಡುವೆಯೂ ವಿಸ್ತೃತವಾಗಿ ಜಾರಿಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು. ತಳಮಟ್ಟದಲ್ಲಿ ಪರಸ್ಪರ ಸಹಕಾರ ಪದ್ಧತಿ ಜಾರಿಗೊಂಡರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.

ಮೀನುಗಾರಿಕಾ, ಕೃಷಿ ಸಮುದಾಯಕ್ಕೆ ಮಾರ್ಗದರ್ಶನದ ಅವಶ್ಯಕತೆಗಳನ್ನು ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಈ ಸಮುದಾಯಗಳು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಯನ್ನು ಕಾಣಲಿದ್ದು, ಮೀನುಗಾರಿಕೆ, ಮೀನು ರಫ್ತಿಗೆ ಬಹಳ ಅವಕಾಶಗಳಿವೆ. ಅಂತೆಯೇ ಇತರ ಪ್ರಾದೇಶಿಕ ಉತ್ಪನ್ನಗಳನ್ನು ಸಹ ಮೌಲ್ಯವರ್ಧನೆಗೊಳಿಸಿ ಮುಮದಿನ ದಿನಗಳಲ್ಲಿ ಹೊರದೇಶಗಳಿಗೆ ರಪ್ತು ಮಾಡಬೇಕಿದೆ ಎಂದು ತಿಳಿಸಿದರು. ಈ ವಲಯಗಳಲ್ಲಿ ನವೋದ್ಯಮಗಳನ್ನು ಸ್ಥಾಪಿಸುವ ಅವಕಾಶಗಳೂ ಇವೆ ಎಂಬ ಸೂಚನೆ ಅವರ ಮಾತುಗಳಲ್ಲಿ ಪ್ರತಿಫಲನವಾಗುತ್ತಿತ್ತು.

ಆತ್ಮನಿರ್ಭರ ಭಾರತ; ಖಾಸಗಿಯವರಿಗೂ ಅವಕಾಶ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆತ್ಮನಿರ್ಭರ ಭಾರತದ ಕುರಿತು ಪ್ರಸ್ತಾಪಿಸಿದ ಅವರು, ಆತ್ಮನಿರ್ಭರ ಭಾರತದಲ್ಲಿ ಖಾಸಗಿಯವರಿಗೂ ಅವಕಾಶ ನೀಡುವ ಕುರಿತು ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ಆತ್ಮನಿರ್ಭರ ಭಾರತದಡಿ ಹಲವು ಮಹತ್ವದ ಯೋಜನೆಗಳನ್ನು ಮಂಡಿಸುವ ಕುರಿತು ಅವರ ಮಾತು ಸುಳಿವು ನೀಡಿತು.

ಮಮತಾ ಬ್ಯಾನರ್ಜಿ, ಕ್ಯಾ.ಅಮರೀಂದರ್ ಸಿಂಗ್ ಗೈರು! ನೀತಿ ಆಯೋಗದ ಕಳೆದ ಸಭೆಯಂತೆಯೇ ಈ ಸಭೆಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಗೈರಾಗಿದ್ದರು. ಅವರ ಗೈರುಹಾಜರನ್ನು ಪರಿಗಣಿಸಿಯೇ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಕಾರ ಮತ್ತು ಸಹಭಾಗಿತ್ವವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಜತೆಗೆ ಸಹಕಾರ ತತ್ವವನ್ನು ಅನುಸರಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ಭಾವ ಅವರ ಮಾತಿನಲ್ಲಿತ್ತು.

ಈ ಮುನ್ನವೇ ನೀತಿ ಆಯೋಗದ ಸಭೆಗೆ ಗೈರಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀತಿ ಆಯೋಗದ ಬಳಿ ಯಾವುದೇ ಹಣಕಾಸಿನ ಅಧಿಕಾರ ಇಲ್ಲ, ಅಲ್ಲದೇ ರಾಜ್ಯ ಸರ್ಕಾರದ ಯೋಜನೆಗಳಿಗೆ ನೀತಿ ಆಯೋಗ ಯಾವುದೇ ಸಹಕಾರ ನೀಡುತ್ತಿಲ್ಲಎಂದು ಪ್ರತಿಪಾದಿಸಿ ನೀತಿ ಆಯೋಗದ ಸಭೆಗೆ ಗೈರಾಗಿದ್ದರು. ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮ ಅನಾರೋಗ್ಯದ ಕಾರಣಗಳಿಂದ ಸಭೆಗೆ ಗೈರಾಗಿದ್ದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಶತಕ ಬಾರಿಸಿದ ಪೆಟ್ರೋಲ್​ ಬೆಲೆ; ಇದಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಎಂದ ಪ್ರಧಾನಿ ಮೋದಿ

SAARC Workshop on COVID-19 Management ಕೊರೊನಾ ನಿರ್ವಹಣೆ ಕಾರ್ಯಾಗಾರ: ನೆರೆಯ 10 ದೇಶಗಳ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

Published On - 12:37 pm, Sat, 20 February 21

ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
ಚಿಕ್ಕಬಳ್ಳಾಪುರದಲ್ಲಿ ಅಗ್ನಿ ಅವಘಡ: ಬಸ್​, ಬೈಕ್​ಗಳು ಬೆಂಕಿಗಾಹುತಿ
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ