AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swati Mohan Interview | ಸೋಲಿರಲಿ, ಗೆಲುವಿರಲಿ..! ಏನು ಕಲಿಯುತ್ತೇವೆ, ಮುಂದಿನ ಹೆಜ್ಜೆ ಹೇಗೆ ಇಡುತ್ತೇವೆ? ಎಂಬುದೇ ಮುಖ್ಯ

Swati Mohan Interview | ಯಾವುದೇ ಉತ್ತಮ ಕೆಲಸಕ್ಕೆ ಪರಿಶ್ರಮ ಪಡಿ. ಅದು ಯಶಸ್ಸಾಗಬಹುದು ಅಥವಾ ಅದರಿಂದ ಸೋಲು ಉಂಟಾಗಬಹುದು. ಏನೇ ಆದರೂ ಕಲಿಯಲು ವಿಷಯ ಇದ್ದೇ ಇರುತ್ತದೆ. ನಾವು ಏನು ಕಲಿಯುತ್ತೇವೆ, ಮುಂದಿನ ಹೆಜ್ಜೆ ಹೇಗೆ ಇಡುತ್ತೇವೆ ಎಂಬುದು ಮುಖ್ಯ.

Swati Mohan Interview | ಸೋಲಿರಲಿ, ಗೆಲುವಿರಲಿ..! ಏನು ಕಲಿಯುತ್ತೇವೆ, ಮುಂದಿನ ಹೆಜ್ಜೆ ಹೇಗೆ ಇಡುತ್ತೇವೆ? ಎಂಬುದೇ ಮುಖ್ಯ
ಡಾ. ಸ್ವಾತಿ ಮೋಹನ್
Follow us
ganapathi bhat
|

Updated on:Feb 20, 2021 | 1:24 PM

ದೆಹಲಿ: ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್​ನ (NASA) ಅತಿದೊಡ್ಡ ಹಾಗೂ ಅತ್ಯಾಧುನಿಕ ಪರ್ಸಿವೆರೆನ್ಸ್ ರೋವರ್ (Perseverance Rover) ನಿನ್ನೆ (ಫೆ.19) ಮಂಗಳ ಗ್ರಹವನ್ನು ಸ್ಪರ್ಶಿಸಿದೆ. ನಾಸಾದ ಯೋಜನೆಯ ಈ ತಂಡದಲ್ಲಿ ಭಾರತೀಯ ಮೂಲದ ಡಾ. ಸ್ವಾತಿ ಮೋಹನ್ ಮುಖ್ಯ ಪಾತ್ರವಹಿಸಿದ್ದರು. ಬಾಹ್ಯಾಕಾಶ ನೌಕೆ ಮಂಗಳನಲ್ಲಿ ಕಾಲಿರಿಸಿದಾಗ ಅದನ್ನು ಘೋಷಿಸಿದವರು ಕೂಡ ಡಾ. ಸ್ವಾತಿ ಆಗಿದ್ದರು. ಸ್ವಾತಿ ಮೋಹನ್ (Dr Swati Mohan) ಸಾಧನೆಯ ಜತೆಗೆ ಅವರ ಹಣೆಯ ಮೇಲಿನ ಬಿಂದಿ ವಿಚಾರ ಕೂಡ ನಿನ್ನೆ ವೈರಲ್ ಆಗಿತ್ತು. ಅವರನ್ನು ಟಿವಿ9 ಕನ್ನಡ ಸೋದರ ಸಂಸ್ಥೆ ಟಿವಿ9 ಭಾರತ್​ವರ್ಷ್ ಸಂದರ್ಶನ ನಡೆಸಿದೆ. ಅದರ ವಿವರಗಳನ್ನು ಟಿವಿ9 ಕನ್ನಡ ಡಿಜಿಟಲ್ ಪ್ರಸ್ತುತಪಡಿಸುತ್ತಿದೆ.

ಬಾಹ್ಯಾಕಾಶ ನೌಕೆ, ಪರ್ಸಿವೆರೆನ್ಸ್ ರೋವರ್ ಮಂಗಳ ಗ್ರಹಕ್ಕೆ ಪಾದಾರ್ಪಣೆ ಮಾಡುವ ರೋಚಕ ಘಳಿಗೆಯಲ್ಲಿ ನಿಮ್ಮ ಮನಸ್ಸು, ಅನುಭವ ಹೇಗಿತ್ತು ಎಂಬ ಪ್ರಶ್ನೆಗೆ ಡಾ. ಸ್ವಾತಿ ಉತ್ತರಿಸಿದ್ದಾರೆ. ಆ ಸಂದರ್ಭದಲ್ಲಿ ಕೆಲಸದ ಬಗ್ಗೆ ಮಾತ್ರ ಗಮನಹರಿಸಿದ್ದೆ. ರೋವರ್ ಲ್ಯಾಂಡಿಂಗ್ ವಿಚಾರ ಘೋಷಿಸುತ್ತಿದ್ದಂತೆ ನಾಸಾದ ಇಡೀ ತಂಡ ಚಪ್ಪಾಳೆ ತಟ್ಟಿ ಚಿಯರ್ ಮಾಡಿದರು. ಪರ್ಸಿವೆರೆನ್ಸ್ ರೋವರ್ ಮಂಗಳನಲ್ಲಿ ಕಾಲಿಟ್ಟಿತು ಎಂದು ಹೇಳುತ್ತಿದ್ದಂತೆ ಎಲ್ಲರೂ ಸಂಭ್ರಮಪಟ್ಟರು. ನಾನು ಅರೆಕ್ಷಣ ಸುತ್ತಮುತ್ತ ಏನಾಗುತ್ತಿದೆ ಎಂದು ಯೋಚಿಸುತ್ತಾ ಹಾಗೇ ಕೂತಿದ್ದೆ. ಬಳಿಕ, ಎಲ್ಲರೊಂದಿಗೆ ಸಂತಸ ಹಂಚಿಕೊಂಡೆ ಎಂದು ತಿಳಿಸಿದರು.

ಇಂಥಾ ಸವಾಲಿನ ಯೋಜನೆಗೆ ತುಂಬಾ ಸಮಯ ವ್ಯಯಿಸಿ ಕೆಲಸ ಮಾಡುತ್ತೇವೆ. ಅದರ ಯಶಸ್ಸಿಗೆ ಶ್ರಮಿಸುತ್ತೇವೆ. ಜತೆಗೆ, ಯೋಜನೆ ವಿಫಲವಾದರೆ ಎಂದೂ ಕೂಡ ಯೋಚಿಸುತ್ತೇವೆ. ಪರ್ಸಿವೆರೆನ್ಸ್ ರೋವರ್ ಮಂಗಳಯಾನ ಯೋಜನೆ ಯಶಸ್ವಿಯಾಗಿದೆ.. ಹಾಗಾಗಿ ಸಂಭ್ರಮಪಟ್ಟೆವು ಎಂದು ಡಾ. ಸ್ವಾತಿ ವಿಚಾರ ಹಂಚಿಕೊಂಡರು.

ಪರ್ಸಿವೆರೆನ್ಸ್ ರೋವರ್ ಮಿಷನ್ ಯಶಸ್ವಿಯಾದ ಖುಷಿ, ಸಮಾಧಾನ, ಸಾರ್ಥಕ ಭಾವವಿತ್ತು. ರಾತ್ರಿ ಬೇಗ ಮಲಗಲು ಪ್ರಯತ್ನಿಸಿದರೂ ನಿದ್ದೆ ಹತ್ತಲಿಲ್ಲ. ಕಳೆದ ಎರಡು ವಾರಗಳಿಂದ ಪ್ರತಿನಿತ್ಯ ಬೆಳಗ್ಗೆ 4.30ಕ್ಕೆ, ಮೊದಲ ಶಿಫ್ಟ್​ನಲ್ಲಿ ಕೆಲಸಕ್ಕೆ ಹೋಗುತ್ತಿದ್ದೆ. ಹಾಗಾಗಿ, ಈಗಲೂ ಬೆಳಗ್ಗೆ ಬೇಗ ಎಚ್ಚರವಾಗುತ್ತಿದೆ. ಈ ಸಮಯವನ್ನು ಸ್ವಲ್ಪ ವಿಶ್ರಾಂತಿ ಮಾಡುತ್ತಾ ಕಳೆಯುತ್ತಿದ್ದೇನೆ ಎಂದು ತಿಳಿಸಿದರು.

ನನ್ನ ಹೆತ್ತವರು ಭಾರತದ ಮೂಲ ತತ್ವ, ಆದರ್ಶಗಳನ್ನು ಕಲಿಸಿದ್ದಾರೆ.. ಅವುಗಳಿಗೆ ಮಹತ್ವ ನೀಡಿದ್ದಾರೆ: ಭಾರತ ದೇಶದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ ಡಾ. ಸ್ವಾತಿ ಬಹಳ ಸಂತೋಷದಿಂದ ಮಾತನಾಡಿದರು. ನಾನು ತುಂಬಾ ಸಣ್ಣವಳಿದ್ದಾಗ ಅಮೆರಿಕಾಕ್ಕೆ ಬಂದೆ. ವಾಷಿಂಗ್ಟನ್ ಡಿಸಿಯಲ್ಲಿ ಬಾಲ್ಯ ಕಳೆದೆ. ಆದರೆ, ನನ್ನ ಹಿರಿಯರು, ಹೆತ್ತವರು ಭಾರತದ ಮೂಲ ತತ್ವ, ಆದರ್ಶಗಳನ್ನು ಕಲಿಸಿದ್ದಾರೆ. ಅವುಗಳಿಗೆ ಮಹತ್ವ ನೀಡಿದ್ದಾರೆ. ಅದರಂತೆ, ನನ್ನ ಶಿಕ್ಷಣ ಮತ್ತು ಕಲಿಕೆಗೂ ಪ್ರೋತ್ಸಾಹ ನೀಡಿದ್ದಾರೆ ಎಂದು ತಿಳಿಸಿದರು.

ತಾವು ಮಾಡಿದ ಸಾಧನೆಯಿಂದ ಯುವಕರು ಸ್ಪೂರ್ತಿ ಪಡೆಯಬೇಕು. ಯುವಜನತೆಗೆ ಏನು ಹೇಳಬಯಸುತ್ತೀರಿ ಎಂಬ ಪ್ರಶ್ನೆಗೆ ಬಹು ಸರಳವಾಗಿ, ಗಂಭೀರ ಉತ್ತರವನ್ನೇ ನೀಡಿದರು. ಕಠಿಣ ಪರಿಶ್ರಮ, ಮುಂದಿನ ಹೆಜ್ಜೆ ಅಥವಾ ಗುರಿ ತಲುಪಲು ಛಲದೊಂದಿಗೆ, ನಮ್ಮ ಆಸಕ್ತಿ ಕ್ಷೇತ್ರ ಹಿಂಬಾಲಿಸಿ ನಡೆದಾಗ ನಾವು ಕೂಡ ಒಂದಿಲ್ಲೊಂದು ಸಾಧನೆ ಮಾಡಬಹುದು ಎಂದು ಹೇಳಿದರು. ಯಾವುದೇ ಉತ್ತಮ ವಿಚಾರಕ್ಕಾಗಲಿ, ಪರಿಶ್ರಮ ಪಡಿ, ಅದು ಯಶಸ್ಸಾಗಬಹುದು ಅಥವಾ ಅದರಿಂದ ಸೋಲು ಉಂಟಾಗಬಹುದು. ಏನೇ ಆದರೂ ಕಲಿಯಲು ವಿಷಯ ಇದ್ದೇ ಇರುತ್ತದೆ. ನಾವು ಏನು ಕಲಿಯುತ್ತೇವೆ, ಮುಂದಿನ ಹೆಜ್ಜೆ ಹೇಗೆ ಇಡುತ್ತೇವೆ ಎಂಬುದು ಮುಖ್ಯ ಎಂದು ಯುವಜನತೆಗೆ ಕಿವಿಮಾತು ಹೇಳಿದರು.

ಡಾ. ಸ್ವಾತಿ ಮೋಹನ್ ಸಾಧನೆಗೆ ಭಾರತೀಯರು ಬಹಳಷ್ಟು ಶುಭಾಶಯಗಳು, ಪ್ರತಿಕ್ರಿಯೆಗಳನ್ನು ನೀಡಿ ಸಂಭ್ರಮಿಸಿದ್ದಾರೆ. ಆ ಬಗ್ಗೆಯೂ ಡಾ. ಸ್ವಾತಿ ಮಾತನಾಡಿದರು. ಭಾರತದಿಂದ ಬಂದ ಪ್ರತಿಕ್ರಿಯೆಗಳನ್ನು ನೋಡಿ ನಾನು ಅತ್ಯಾನಂದ ಪಟ್ಟಿದ್ದೇನೆ. ನೂರಾರು ಜನರು ಸಂದೇಶಗಳು, ಕರೆಗಳನ್ನು ಮಾಡಿ ಶುಭಾಶಯ ಹೇಳಿದ್ದಾರೆ ಎಂದು ತಿಳಿಸಿದರು.

ಒಂದೂವರೆ ವರ್ಷ (1.5 Mars Years) ಮಂಗಳನಲ್ಲಿ ಕಾರ್ಯನಿರ್ವಹಿಸಲಿದೆ ರೋವರ್ ಪರ್ಸಿವೆರೆನ್ಸ್ ರೋವರ್ ಯೋಜನೆಯಲ್ಲಿ ತಮ್ಮ ಜವಾಬ್ದಾರಿಯ ಕುರಿತಾಗಿ ಡಾ. ಸ್ವಾತಿ ಬೆಳಕು ಚೆಲ್ಲಿದರು. ಈ ಯೋಜನೆಗೆ ಸಂಬಂಧಿಸಿ ಯಾವುದಾದರೂ ವಿಚಾರ ಸರಿಯಾಗಿ ಕಾರ್ಯರೂಪಕ್ಕೆ ಬರದಿದ್ದರೆ, ನೌಕೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ, ಇತ್ಯಾದಿ ಸನ್ನಿವೇಶಗಳಲ್ಲಿ ಏನು ಮಾಡಬೇಕು, ಹೇಗೆ ಸರಿಪಡಿಸಬೇಕು ಎಂದು ಚಾರ್ಟ್ ತಯಾರಿಸಿದ್ದೆ. ಅದನ್ನು ಜತೆಗೆ ಇಟ್ಟುಕೊಂಡಿದ್ದೆ. ಬಹಳ ಜಾಗರೂಕವಾಗಿ ಈ ಕಠಿಣ ಯೋಜನೆ ಯಶಸ್ವಿಯಾಗಿದೆ ಎಂದು ಡಾ. ಸ್ವಾತಿ ವಿವರಣೆ ನೀಡಿದರು.

ಈ ಬಾಹ್ಯಾಕಾಶ ನೌಕೆಯು ಮಂಗಳನಲ್ಲಿ ಒಂದೂವರೆ ವರ್ಷ (1.5 Mars Years), 2 ಭೂ ವರ್ಷ (2 Earth Years) ಕಾರ್ಯನಿರ್ವಹಿಸಲಿದೆ. ಅದಕ್ಕೆ ಸರಿಯಾಗಿ ರೋವರ್​ನ್ನು ರೂಪಿಸಲಾಗಿದೆ ಎಂದು ಹೇಳಿದರು. ರೋವರ್ ದಕ್ಷಿಣ ಕ್ಯಾಲಿಫೋರ್ನಿಯಾದ ಜೆಟ್​ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಗುರುವಾರ ಸ್ಥಳೀಯ ಸಮಯ ಮಧ್ಯಾಹ್ನ 3.35ಕ್ಕೆ ನಾಸಾ ರೋವರ್ ಮಂಗಳ ಗ್ರಹದ ಮೇಲೆ ಕಾಲಿರಿಸಿದೆ. ಈ ನೌಕೆಯು ಮಂಗಳ ಗ್ರಹದಲ್ಲಿ ಜೀವಗಳ ಅಸ್ತಿತ್ವದ ಬಗ್ಗೆ ಅಧ್ಯಯನ ನಡೆಸಲಿದೆ.

ಕಳೆದ ವರ್ಷ ಜುಲೈ 30ರಂದು ಹೊರಟ ರೋವರ್, 203 ದಿನಗಳ ಸುದೀರ್ಘ ಪ್ರಯಾಣದ ಬಳಿಕ 293 ಮೈಲು (472 ಮಿಲಿಯನ್ ಕಿ.ಮೀ.) ದೂರ ಸಾಗಿ ಮಂಗಳ ಗ್ರಹವನ್ನು ಯಶಸ್ವಿಯಾಗಿ ಸ್ಪರ್ಶಿಸಿದೆ. ಫ್ಲೋರಿಡಾದ ಕೇಪ್ ಕ್ಯಾನವೆರಲ್​ನಿಂದ ಈ ಬಾಹ್ಯಾಕಾಶ ನೌಕೆಯು ಉಡಾವಣೆಗೊಂಡಿತ್ತು. ಯೋಜನೆಯಲ್ಲಿ ಭಾರತೀಯ ಮೂಲದ ಡಾ. ಸ್ವಾತಿ ಮೋಹನ್ ಮುಖ್ಯ ಪಾತ್ರವಹಿಸಿದ್ದರು.

ಇದನ್ನೂ ಒದಿ: Swati Mohan ವ್ಯಕ್ತಿ ವ್ಯಕ್ತಿತ್ವ | ಮಂಗಳನ ಅಂಗಳದಲ್ಲಿ ಜೀವ ಕುರುಹು ಹುಡುಕುವ ನಾಸಾ ತಂಡದಲ್ಲಿ ಭಾರತ ಸಂಜಾತೆ ಡಾ. ಸ್ವಾತಿ ಮೋಹನ್

Photo Gallery | Perseverance Rover: ಮಂಗಳನ ಅಂಗಳದಲ್ಲಿ ಹೆಜ್ಜೆಯೂರಿದ ನಾಸಾ ನೌಕೆ; ತಜ್ಞರ ತಂಡದಲ್ಲಿ ಭಾರತೀಯ ಮೂಲದ ಮಹಿಳೆ!

Published On - 1:11 pm, Sat, 20 February 21

ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ