ಈ ಸ್ಟಾರ್ ನಟಿ ಹಲವು ಸಿನಿಮಾ ಆಫರ್ ಕಳೆದುಕೊಂಡರು; ಪತಿಯ ಆಸ್ತಿ 2,800 ಕೋಟಿ ರೂಪಾಯಿ
ಈ ಖ್ಯಾತ ನಟಿ ಬಾಲಿವುಡ್‌ನಲ್ಲಿ ಯಶಸ್ಸು ಕಂಡ ನಂತರ ಅವರು ಹಲವು ಸವಾಲುಗಳನ್ನು ಎದುರಿಸಿದರು. ನಂತರ 2800 ಕೋಟಿ ರೂಪಾಯಿ ಆಸ್ತಿಯ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾದರು. ಅವರ ಜೀವನದಲ್ಲಿನ ವಿವಾದಗಳು ಮತ್ತು ಯಶಸ್ಸು ಎರಡನ್ನೂ ಕಂಡರು. ಆ ನಟಿ ಯಾರು? ಆ ಬಗ್ಗೆ ಇಲ್ಲಿದೆ ವಿವರ.

ಈ ನಟಿಯು ಬಾಲಿವುಡ್ನ (Bollywood) ಫಿಟ್ ನಟಿ ಎನಿಸಿಕೊಂಡಿದ್ದಾರೆ. ಅವರನ್ನು ಹಲವು ಸಿನಿಮಾಗಳಿಂದ ತೆಗೆದು ಹಾಕಲಾಯಿತು. ಇದಕ್ಕೆ ನಾನಾ ಕಾರಣಗಳು ಇದ್ದವು. ಆ ಬಳಿಕ ಇವರು ಶ್ರೀಮಂತ ಉದ್ಯಮಿಯನ್ನು ವಿವಾಹ ಆದರು. ಅವರ ಪತಿಯ ಆಸ್ತಿ ಒಂದಲ್ಲ, ಎರಡಲ್ಲ ಬರೋಬ್ಬರಿ 2,800 ಕೋಟಿ ರೂಪಾಯಿ. ಹಾಗಾದರೆ ಯಾರು ಆ ನಟಿ? ಶಿಲ್ಪಾ ಶೆಟ್ಟಿ (Shilpa Shetty). ಅವರ ಬಗ್ಗೆ ಇಂದು ನಾವು ಮಾತನಾಡುತ್ತಿದ್ದೇವೆ.
ಮನರಂಜನಾ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸ್ಡ್ಯಾಂಗ್ ಆಗಿ ನಿಲ್ಲೋದು ಎಂದರೆ ಅದು ಸುಲಭ ಅಲ್ಲವೇ ಅಲ್ಲ. ಅದರಲ್ಲೂ ನಟಿಯರಿಗೆ ತುಂಬಾನೇ ಕಷ್ಟ. ಈ ಅವಧಿಯಲ್ಲಿ ಸಾಕಷ್ಟು ಗಾಸಿಪ್ಗಳು ಬರುತ್ತವೆ. ಅವುಗಳನ್ನು ಸಂಭಾಳಿಸಿಕೊಂಡು ಹೋಗಬೇಕು. ಇದರ ಜೊತೆ ಫಿಟ್ನೆಸ್ ಹಾಗೂ ಗ್ಲಾಮರ್ ಎರಡನ್ನೂ ಸಮದೂಗಿಸಿಕೊಂಡು ಹೋಗಬೇಕು. ಎಷ್ಟೇ ನೋವಿದ್ದರೂ ನಗಬೇಕು. ಶಿಲ್ಪಾ ಶೆಟ್ಟಿ ಎಲ್ಲವನ್ನೂ ಸಮದೂಗಿಸಿಕೊಂಡು ಬಂದರು.
ಶಿಲ್ಪಾ ಶೆಟ್ಟಿ ಬಾಲಿವುಡ್‌ನಲ್ಲಿ ಮಾತ್ರವಲ್ಲ ಕನ್ನಡದಲ್ಲೂ ಫೇಮಸ್ ಆಗಿದ್ದಾರೆ. ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಹಲವು ಸಿನಿಮಾಗಳಿಂದ ಅವರು ರಿಜೆಕ್ಟ್ ಆಗಿದ್ದರಂತೆ. ಇದಕ್ಕೆ ಕಾರಣ ತಿಳಿದಿಲ್ಲ. ಆದರೆ, ಅವರು ಸುಮ್ಮನಾಗಿಲ್ಲ. ಹಲವು ಚಿತ್ರಗಳನ್ನು ಮಾಡಿದರು. ಈಗಲೂ ಅವರು ಸಿನಿಮಾಗಳನ್ನು ಮಾಡುತ್ತಿದ್ದಾರೆ. ‘ಡರ್’, ‘ಇಂಡಿಯನ್’, ‘ಶೂನ್’, ‘ಮೇ ಖಿಲಾಡಿ ತೂ ಅನಾರಿ’ ರೀತಿಯ ಸಿನಿಮಾಗಳನ್ನು ಮಾಡಿದ್ದರು.
ಶಿಲ್ಪಾ ಶೆಟ್ಟಿ ಅವರು ಅಕ್ಷಯ್ ಕುಮಾರ್ ಕುಮಾರ್ ಜೊತೆ ರಿಲೇಶನ್ಶಿಪ್ ಹೊಂದಿದ್ದರು ಎನ್ನಲಾಗಿದೆ.ಆದರೆ, ಇವರು ಮದುವೆ ಆಗೋಕೆ ಸಾಧ್ಯವಾಗಿಲ್ಲ. ಆ ಬಳಿಕ ಅವರು ಉದ್ಯಮಿ ರಾಜ್ ಕುಂದ್ರಾ ಜೊತೆ ಮದುವೆ ಆದರು. ರಾಜ್ ಕುಂದ್ರಾ ಆಸ್ತಿ ಬರೋಬ್ಬರಿ 2800 ಕೋಟಿ ರೂಪಾಯಿ ಆಸ್ತಿ. ಶಿಲ್ಪಾ ಶೆಟ್ಟಿ ಅವರು ಶ್ರೀಮಂತ ನಟಿಯರಲ್ಲಿ ಒಬ್ಬರು. ಅವರ ಆಸ್ತಿ 340 ಕೋಟಿ ರೂಪಾಯಿ.
ಇದನ್ನೂ ಓದಿ: ‘ಶಿಲ್ಪಾ ಶೆಟ್ಟಿ ಕರೆದ್ರೆ ಬರ್ತಾ ಇರಲಿಲ್ಲ, ಒಂದೇ ವಾರದಲ್ಲಿ ನಾನ್ಯಾರು ಅಂತ ಗೊತ್ತಾಯ್ತು’; ರವಿಚಂದ್ರನ್
ರಾಜ್ ಕುಂದ್ರಾ ಅವರ ಹೆಸರು ಇತ್ತೀಚೆಗೆ ಬೇರೆ ಕಾರಣಕ್ಕೆ ಸುದ್ದಿ ಆಗುತ್ತಿದೆ. ಅಶ್ಲೀಲ ಚಿತ್ರ ನಿರ್ಮಾಣದಲ್ಲಿ ಅವರ ಹೆಸರು ಇದೆ. ಆದರೆ, ಅವರು ಪತಿಯನ್ನು ಬಿಟ್ಟುಕೊಡಲೇ ಇಲ್ಲ. ಅವರು ಇಬ್ಬರೂ ಒಟ್ಟಾಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







