AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Electric Vehicles: ಪೆಟ್ರೋಲ್​, ಡೀಸೆಲ್​ ವಾಹನ ಬದಲು ಎಲೆಕ್ಟ್ರಿಕ್​ ವಾಹನ ಬಳಸಿದರೆ ಭಾರಿ ಹಣ ಉಳಿತಾಯ ಆಗುತ್ತೆ: ನಿತಿನ್​ ಗಡ್ಕರಿ

Electric Vehicle: ದೆಹಲಿಯಲ್ಲಿ 10 ಸಾವಿರ ವಿದ್ಯುತ್​ ಚಾಲಿತ ವಾಹನಗಳನ್ನು ಬಳಸಲು ಆರಂಭಿಸಿದರೆ ತಿಂಗಳಿಗೆ ಒಟ್ಟಾರೆ ಸುಮಾರು ₹30 ಕೋಟಿ ಉಳಿತಾಯ ಮಾಡಬಹುದು. ಇಂಧನದ ಮೇಲೆ ವ್ಯಯಿಸುವ ಹಣ ಉಳಿತಾಯ ಆಗುವ ಜೊತೆಗೆ ವಾಹನಗಳಿಂದ ಹೊರಹೊಮ್ಮಿ ಪರಿಸರಕ್ಕೆ ಹಾನಿ ಮಾಡುವ ಹೊಗೆಯನ್ನೂ ತಡೆಗಟ್ಟಬಹುದು.

Electric Vehicles: ಪೆಟ್ರೋಲ್​, ಡೀಸೆಲ್​ ವಾಹನ ಬದಲು ಎಲೆಕ್ಟ್ರಿಕ್​ ವಾಹನ ಬಳಸಿದರೆ ಭಾರಿ ಹಣ ಉಳಿತಾಯ ಆಗುತ್ತೆ: ನಿತಿನ್​ ಗಡ್ಕರಿ
ನಿತಿನ್​ ಗಡ್ಕರಿ (ಸಂಗ್ರಹ ಚಿತ್ರ)
Skanda
| Edited By: ಸಾಧು ಶ್ರೀನಾಥ್​|

Updated on: Feb 20, 2021 | 3:28 PM

Share

ದೇಶದಲ್ಲಿ ದಿನೇದಿನೇ ಇಂಧನ ಬೆಲೆ ಗಗನಮುಖಿಯಾಗಿ ಸಾಗುತ್ತಿದೆ. ಈಗಾಗಲೇ ಕೆಲ ನಗರಗಳಲ್ಲಿ ಒಂದು ಲೀಟರ್​ ಪೆಟ್ರೋಲ್ ದರ ಶತಕದ ಗಡಿ ದಾಟಿದೆ. ಅಂಕೆಯಿಲ್ಲದೇ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಕಂಡು ಜನಸಾಮಾನ್ಯರು ಕಂಗಾಲಾಗಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವ ನಿತಿನ್ ಗಡ್ಕರಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಮಾತುಗಳನ್ನಾಡಿದ್ದಾರೆ. ಇಂಧನಗಳ ಮೇಲೆ ವ್ಯಯಿಸುತ್ತಿರುವ ಹಣ ಉಳಿತಾಯ ಮಾಡುವುದಕ್ಕೆ ಹಾಗೂ ವಾಯುಮಾಲಿನ್ಯ ನಿಯಂತ್ರಿಸುವುದಕ್ಕೆ ವಿದ್ಯುತ್ ಚಾಲಿತ ವಾಹನಗಳು ಸಹಕಾರಿಯಾಗಲಿವೆ. ಹೀಗಾಗಿ ನಮ್ಮ ಇಲಾಖೆಯ ಎಲ್ಲಾ ಅಧಿಕಾರಿಗಳೂ ವಿದ್ಯುತ್ ಶಕ್ತಿಯ ಸಹಾಯದಿಂದ ಚಲಿಸುವ ವಾಹನಗಳನ್ನೇ ಬಳಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನಿತಿನ್ ಗಡ್ಕರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ 10 ಸಾವಿರ ವಿದ್ಯುತ್​ ಚಾಲಿತ ವಾಹನಗಳನ್ನು ಬಳಸಲು ಆರಂಭಿಸಿದರೆ ತಿಂಗಳಿಗೆ ಒಟ್ಟಾರೆ ಸುಮಾರು ₹30 ಕೋಟಿ ಉಳಿತಾಯ ಮಾಡಬಹುದು. ಇಂಧನದ ಮೇಲೆ ವ್ಯಯಿಸುವ ಇಷ್ಟು ದೊಡ್ಡ ಮಟ್ಟದ ಹಣ ಉಳಿತಾಯ ಆಗುವ ಜೊತೆಗೆ ವಾಹನಗಳಿಂದ ಹೊರಹೊಮ್ಮಿ ಪರಿಸರಕ್ಕೆ ಹಾನಿ ಮಾಡುವ ಹೊಗೆಯನ್ನೂ ತಡೆಗಟ್ಟಬಹುದು. ಇದಕ್ಕಾಗಿ ನಾವು ವಿದ್ಯುತ್ ಶಕ್ತಿಯ ಸಹಾಯದಿಂದ ಚಲಿಸುವ ವಾಹನಗಳ ಬಳಕೆಗೆ ಹೆಚ್ಚು ಒತ್ತು ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪೆಟ್ರೋಲ್​ ದರ ₹93.61 ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್​ಗೆ ₹93.61ಕ್ಕೆ ಏರಿಕೆ ಕಂಡಿದೆ. ಆ ಮೂಲಕ ಶತಕದತ್ತ ಸಾಗುವ ಮುನ್ಸೂಚನೆ ಸಿಕ್ಕಿದೆ. ಕ್ರಿಕೆಟ್​​ ಆಟದಲ್ಲಿ ಶತಕವೆಂದರೆ ಸಂಭ್ರಮಿಸಬಹುದು. ಆದರೆ ದೈನಂದಿನ ಬದುಕಿನಲ್ಲಿ ಈ ಪರಿಯ ಶತಕ ಗ್ರಾಹಕರನ್ನು ನಿರಾಶೆ ಮತ್ತು ಆಕ್ರೋಶದ ಮಡುವಿಗೆ ದೂಡಿದೆ. ಈ ನಡುವೆ ತೈಲೋತ್ಪನ್ನಗಳ ದರ ಏರಿಕೆಗೆ ಕಡಿವಾಣ ಹಾಕುವ ಬದಲು, ಅವುಗಳ ಬಳಕೆಗೆ ಕಡಿವಾಣ ಹಾಕುವುದು ಮತ್ತು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದಷ್ಟೇ ಇದಕ್ಕೆ ಪರಿಹಾರ ಎಂಬ ಧಾಟಿಯಲ್ಲಿ ಕೇಂದ್ರ ಸರ್ಕಾರ ಮಾತನಾಡಿದೆ. ಅದರ ಬೆನ್ನಲ್ಲೇ ಸಚಿವ ನಿತಿನ್ ಗಡ್ಕರಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ: ಒಂದು ಸಿಕ್ಸರ್​​ ಬಾರಿಸಿದರೆ ಶತಕ ಗ್ಯಾರಂಟಿ! ಆದರೆ ಗ್ರಾಹಕರಿಗೆ ನಿರಾಶೆ, ಆಕ್ರೋಶ

Follow Us
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ