‘ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯಾಗಿಲ್ಲ’; ಭಾರತೀಯ ಸೇನೆ ಸ್ಪಷ್ಟನೆ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿ ಯಾವುದೇ ಕದನ ವಿರಾಮ ಉಲ್ಲಂಘನೆಯಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ. ಪೂಂಚ್ ಬಳಿ ಗಡಿಯಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ ಎಂದು ಸೇನಾ ಅಧಿಕಾರಿ ಹೇಳಿದ್ದಾಗಿ ವರದಿಯಾಗಿತ್ತು. ಆದರೆ, ಆ ಸುದ್ದಿ ಬಂದ ಕೆಲವೇ ನಿಮಿಷಗಳಲ್ಲಿ ಭಾರತೀಯ ಸೇನೆ ಆ ರೀತಿಯ ಯಾವುದೇ ದಾಳಿ ನಡೆದಿಲ್ಲ ಎಂದು ನಿರಾಕರಿಸಿದೆ.

ನವದೆಹಲಿ, ಆಗಸ್ಟ್ 5: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಳಿಯ ಪೂಂಚ್ ವಲಯದ ಎಲ್ಒಸಿಯಲ್ಲಿ ಪಾಕಿಸ್ತಾನದ (Pakistan) ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಕದನವಿರಾಮ (Ceasefire) ಉಲ್ಲಂಘಿಸಿದೆ ಎಂದು ಸೇನಾ ಅಧಿಕಾರಿ ಹೇಳಿರುವುದಾಗಿ ಮಾಹಿತಿ ಲಭ್ಯವಾಗಿತ್ತು. ಆದರೆ, ಆ ಸುದ್ದಿಯನ್ನು ಭಾರತೀಯ ಸೇನೆ ನಿರಾಕರಿಸಿದೆ. ಇಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕದನ ವಿರಾಮ ಉಲ್ಲಂಘನೆಯ ವರದಿಗಳನ್ನು ಭಾರತೀಯ ಸೇನೆ ತಳ್ಳಿ ಹಾಕಿದೆ.
ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಯಾವುದೇ ಕದನ ವಿರಾಮ ಉಲ್ಲಂಘನೆಯಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟನೆ ನೀಡಿದೆ. ಈ ಹಿಂದೆ ವರದಿಗಳ ಪ್ರಕಾರ, ಪೂಂಚ್‌ನ ಕೃಷ್ಣ ಘಾಟಿ ವಲಯದಲ್ಲಿ ಪಾಕಿಸ್ತಾನದ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆಯು ಪ್ರತಿದಾಳಿ ನಡೆಸಿದೆ ಎನ್ನಲಾಗಿತ್ತು. ಗುಂಡಿನ ಚಕಮಕಿ 15 ನಿಮಿಷಗಳ ಕಾಲ ಮುಂದುವರೆದಿದ್ದು, ಯಾವುದೇ ಸಾವುನೋವು ಸಂಭವಿಸಿಲ್ಲ ಎನ್ನಲಾಗಿತ್ತು. ಆದರೆ, “ಗಡಿ ನಿಯಂತ್ರಣ ರೇಖೆಯಲ್ಲಿ ಯಾವುದೇ ಕದನ ವಿರಾಮ ಉಲ್ಲಂಘನೆಯಾಗಿಲ್ಲ” ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
Indian Army’s Clarification: There have been some media and social media reports regarding ceasefire violations in the Poonch region.
It is clarified that there has been no ceasefire violation along the Line of Control.
Please avoid spreading unverified information. pic.twitter.com/aDUUdXxEcy
— Press Trust of India (@PTI_News) August 5, 2025
ಇದನ್ನೂ ಓದಿ: ಭಾರತ-ಪಾಕ್ ನಡುವೆ ನೇರ ಮಾತುಕತೆ ಮೂಲಕ ಕದನವಿರಾಮ; ಮತ್ತೊಮ್ಮೆ ಜೈಶಂಕರ್ ಸ್ಪಷ್ಟನೆ
ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ನಡುವೆ ಈ ಹಿಂದಿನ ಕದನ ವಿರಾಮ ಉಲ್ಲಂಘನೆ ಮೇ ತಿಂಗಳಲ್ಲಿ ಸಂಭವಿಸಿತ್ತು. ಪಾಕಿಸ್ತಾನ ರೇಂಜರ್‌ಗಳು ಮೇ 9ರಂದು ತಡರಾತ್ರಿ ಜಮ್ಮು ಸೆಕ್ಟರ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪೋಸ್ಟ್‌ಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದರು. ಮೇ 10ರ ಘಟನೆಯು 3,323 ಕಿ.ಮೀ ಭಾರತ-ಪಾಕಿಸ್ತಾನ ಗಡಿಯನ್ನು ಕಾಯಲು ನಿಯೋಜಿಸಲಾದ ಭಾರತದ ಗಡಿ ಕಾವಲು ಪಡೆ ಬಿಎಸ್‌ಎಫ್‌ನಿಂದ ತೀಕ್ಷ್ಣ ಪ್ರತಿಕ್ರಿಯೆಯನ್ನು ಪಡೆಯಿತು.
There have been some media and social media reports regarding ceasefire violations in the Poonch region. It is clarified that there has been no ceasefire violation along the Line of Control: Indian Army pic.twitter.com/OhCLA9yh3b
— ANI (@ANI) August 5, 2025
ಏಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ 7ರಂದು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಪಾಕ್ ಮನವಿಯ ಮೇರೆಗೆ ಕದನ ವಿರಾಮ ಘೋಷಿಸಲಾಗಿತ್ತು. ಈ ದಾಳಿಯಲ್ಲಿ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ಭಯೋತ್ಪಾದಕರು ಪಹಲ್ಗಾಮ್ನಲ್ಲಿ 26 ಜನರನ್ನು ಕೊಂದಿದ್ದರು. ಆ ದಾಳಿಯ ಸಂಚು ರೂಪಿಸಿದ್ದ ಮೂವರು ಉಗ್ರರನ್ನು ಈಗಾಗಲೇ ಎನ್ಕೌಂಟರ್ ಮಾಡಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 pm, Tue, 5 August 25




