ನೋಯ್ಡಾ: ಸಾವಿನ ಹಾದಿ ತೋರಿದ ಗೂಗಲ್ ಮ್ಯಾಪ್, 30 ಅಡಿ ಆಳದ ಚರಂಡಿಗೆ ಬಿದ್ದು ವ್ಯಕ್ತಿ ಸಾವು
ಗ್ರೇಟರ್ ನೋಯ್ಡಾದಲ್ಲಿ 30 ಅಡಿ ಆಳದ ಚರಂಡಿಗೆ ಕಾರು ಬಿದ್ದು 31 ವರ್ಷದ ಸ್ಟೇಷನ್ ಮಾಸ್ಟರ್ ಸಾವನ್ನಪ್ಪಿದ್ದಾರೆ. ಮಂಗಳವಾರ ನಡೆದ ಅಪಘಾತದ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಶನಿವಾರ ಸೆಕ್ಟರ್ ಪಿ4 ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಮೃತರ ಹೆಸರು ಭರತ್ ಸಿಂಗ್, ಅವರು ದೆಹಲಿಯ ಮಾಂಡವಲಿ ಪ್ರದೇಶದ ನಿವಾಸಿಯಾಗಿದ್ದರು. ಅವರು ಮದುವೆಯಲ್ಲಿ ಪಾಲ್ಗೊಳ್ಳಲು ಗ್ರೇಟರ್ ನೋಯ್ಡಾಗೆ ಹೋಗುತ್ತಿದ್ದರು.

ನೋಯ್ಡಾ, ಮಾರ್ಚ್ 05: ಗೂಗಲ್ ಮ್ಯಾಪ್ ನಂಬಿ ಹೋಗಿ ಕಾರು ಸಮೇತ 30 ಅಡಿ ಆಳದ ಚರಂಡಿ(Drain)ಗೆ ಬಿದ್ದು ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಮ್ಯಾಪ್ ದಾರಿಯನ್ನು ತಪ್ಪಾಗಿ ತೋರಿಸಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಪೊಲೀಸರು ಅದನ್ನು ದೃಢೀಕರಿಸಿಲ್ಲ.
ಮೃತರನ್ನು ದೆಹಲಿಯ ಮಂದವಾಲಿ ನಿವಾಸಿ 31 ವರ್ಷದ ಭರತ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರು ಸ್ಟೇಷನ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮಾರ್ಚ್ 1 ರಂದು ಗ್ರೇಟರ್ ನೋಯ್ಡಾದ ಸೆಕ್ಟರ್ ಪಿ 4 ನಲ್ಲಿ ಶನಿವಾರ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭರತ್ ಸಿಂಗ್ ಮದುವೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಶನಿವಾರ ಮಧ್ಯಾಹ್ನ 3.30 ರ ಸುಮಾರಿಗೆ ಕೇಂದ್ರೀಯ ವಿಹಾರ್ ಪ್ರದೇಶದ ಬಳಿ ಕಾರು ಚರಂಡಿಗೆ ಬಿದ್ದಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು ಎಂದು ಬೀಟಾ 2 ಪೊಲೀಸ್ ಠಾಣೆಯ ಉಸ್ತುವಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಭರತ್ ಸಿಂಗ್ ರಾಣಿ ರಾಂಪುರದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಕುಮಾರ್ ಹೇಳಿದರು.
बिना कुछ जाने, आंख बंदकर गूगल मैप के रास्ते पर चलना खतरनाक साबित हो सकता है.
ग्रेटर नोएडा में गूगल मैप के गलत निर्देश के चलते कार 30 फीट गहरे नाले में गिरी, स्टेशन मास्टर भारत भाटी की दर्दनाक मौत।
पुलिस ने कड़ी मशक्कत से बाहर निकाला, लेकिन अस्पताल ले जाते समय हुई मौत। pic.twitter.com/76wuoXE54L
— VIVEK YADAV (@vivek4news) March 4, 2025
ರಸ್ತೆಯ ಕೊನೆಯಲ್ಲಿ ಯಾವುದೇ ಎಚ್ಚರಿಕೆ ಫಲಕಗಳು ಇರಲಿಲ್ಲ, ಇದರಿಂದಾಗಿ ಕಾರು ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿರಬಹುದು ಎಂದು ಹೇಳಿದರು.
ಪ್ರತ್ಯಕ್ಷದರ್ಶಿ ಸೌರಭ್ ಮಾತನಾಡಿ, ಕಾರು ವೇಗವಾಗಿ ಚಲಿಸುತ್ತಿತ್ತು, ಏಕಾಏಕಿ ಚರಂಡಿಗೆ ಬಿದ್ದಿದೆ ಎಂದಿದ್ದಾರೆ. ಸ್ಥಳೀಯರು ಸಹಾಯ ಮಾಡಲು ಧಾವಿಸಿದರು, ಆದರೆ ಕಾರು ಪಲ್ಟಿಯಾಗಿ ನೀರಿನಿಂದ ತುಂಬಿತ್ತು ಎಂದು ಅವರು ಹೇಳಿದರು.
ಮತ್ತಷ್ಟು ಓದಿ: Tech Info: ಗೂಗಲ್ ಮ್ಯಾಪ್ಸ್ ನಿಖರವಾದ ಟ್ರಾಫಿಕ್ ಮಾಹಿತಿಯನ್ನು ಹೇಗೆ ನೀಡುತ್ತೆ?, ಇದು ಹೇಗೆ ಕೆಲಸ ಮಾಡುತ್ತದೆ?
ರಸ್ತೆಯ ಕೊನೆಯಲ್ಲಿ ಮತ್ತು ಚರಂಡಿ ಬಳಿ ಎಚ್ಚರಿಕೆ ಫಲಕಗಳಿಲ್ಲದಿರುವುದು ಅಪಾಯವನ್ನುಂಟುಮಾಡುತ್ತದೆ. ಅಪಘಾತಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಮಾಧ್ಯಮದಲ್ಲಿ ಕಾರು ಸವಾರ ಗೂಗಲ್ ನಕ್ಷೆಯ ಸಹಾಯದಿಂದ ಹೋಗುತ್ತಿದ್ದಾಗ ರಸ್ತೆ ಕೊನೆಗೊಂಡಿತ್ತು ಆಗ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ