ಕಟ್​ ಮನಿ ಸಂಸ್ಕೃತಿಯ ಟಿಎಂಸಿಯಿಂದ ಬಂದವರಿಗೆ ಬಿಜೆಪಿಯಲ್ಲಿ ಉಳಿಯುವುದು ಕಷ್ಟ: ದಿಲೀಪ್ ಘೋಷ್​

ನಮ್ಮ ಪಕ್ಷ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಅವರಿಗೆ ಜವಾಬ್ದಾರಿಯನ್ನೂ ವಹಿಸುತ್ತದೆ. ಆದರೆ ಒಂದಷ್ಟು ಮಂದಿಗೆ ಶಿಸ್ತಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಬಿಜೆಪಿಯ ಸಿದ್ಧಾಂತಕ್ಕೆ ಬದ್ಧರಾಗಿ ಇರಲು ಸಾಧ್ಯವಿಲ್ಲ ಎಂದು ದಿಲೀಪ್​ ಘೋಷ್​ ಹೇಳಿದ್ದಾರೆ.

ಕಟ್​ ಮನಿ ಸಂಸ್ಕೃತಿಯ ಟಿಎಂಸಿಯಿಂದ ಬಂದವರಿಗೆ ಬಿಜೆಪಿಯಲ್ಲಿ ಉಳಿಯುವುದು ಕಷ್ಟ: ದಿಲೀಪ್ ಘೋಷ್​
ದಿಲೀಪ್​ ಘೋಷ್​
Follow us
TV9 Web
| Updated By: Lakshmi Hegde

Updated on:Jun 13, 2021 | 10:01 AM

ಬಿಜೆಪಿಯನ್ನು ತೊರೆದ ಮುಕುಲ್​ ರಾಯ್​ಗೆ ಬಿಜೆಪಿ ಮುಖಂಡ ದಿಲೀಪ್​ ಘೋಷ್​ ತಿರುಗೇಟು ನೀಡಿದ್ದಾರೆ. ಟಿಎಂಸಿಯಲ್ಲಿದ್ದು ಕಟ್​ ಮನಿ (ಭ್ರಷ್ಟಾಚಾರ) ಸಂಸ್ಕೃತಿ ಅಭ್ಯಾಸ ಆದವರಿಗೆ ಬಿಜೆಪಿಗೆ ಬಂದು ಉಳಿಯುವುದು ತುಂಬ ಕಷ್ಟ ಎಂದು ವ್ಯಂಗ್ಯವಾಡಿದ್ದಾರೆ. ಹಾಗೇ, ಮುಕುಲ್​ ರಾಯ್​ ಪದೇಪದೆ ಪಕ್ಷ ಬದಲಿಸುತ್ತಾರೆ ಎಂಬುದನ್ನು ಅಲ್ಲಗಳೆದ ದಿಲೀಪ್​ ಘೋಷ್​, ಮುಕುಲ್​ಗೆ ಬಿಜೆಪಿಯಲ್ಲಿ ಉಳಿಯುವುದಷ್ಟೇ ಕಷ್ಟ ಎಂದಿದ್ದಾರೆ.

ಬಿಜೆಪಿಗೆ ಬರುವ ಇತರ ಪಕ್ಷದವರಿಗೆ ಇಲ್ಲಿ ಉಳಿದುಕೊಳ್ಳಲು ತಪಸ್ಸು ಮಾಡುವ ಅಗತ್ಯವಿಲ್ಲ. ಆದರೆ ಕಟ್​ ಮನಿ, ಸಿಂಡಿಕೇಟ್​ ಸಂಸ್ಕೃತಿಯಿರುವ ಟಿಎಂಸಿಯಿಂದ ಬಿಜೆಪಿಗೆ ಬಂದವರಿಗೆ ಇಲ್ಲಿ ಮುಂದುವರಿಯುವುದು ತುಂಬ ಕಷ್ಟ ಎಂದು ದಿಲೀಪ್​ ಘೋಷ್​ ಹೇಳಿದ್ದಾರೆ. ಮುಕುಲ್​ ರಾಯ್​ ಮತ್ತೆ ಬಿಜೆಪಿಯಿಂದ ಹೊರಹೋದಾಕ್ಷಣ ನಮ್ಮ ಪಕ್ಷಕ್ಕೆ ಯಾವ ನಷ್ಟವೂ ಅಲ್ಲ, ನಮಗೇನೂ ಬಾಧಿಸುವುದೂ ಇಲ್ಲ ಎಂದಿದ್ದಾರೆ.

ಮುಕುಲ್​ ರಾಯ್ ಒಬ್ಬ ಅನುಭವಿ ರಾಜಕಾರಣಿ. ಅವರೇನೇ ಮಾಡಿದರೂ, ಅದರ ಹಿಂದೊಂದು ಪ್ಲ್ಯಾನ್​ ಇದ್ದೇ ಇರುತ್ತದೆ. ಸಾವಿರಾರು ಜನರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ಆದರೆ ಕೆಲವೇ ಜನರಿಗೆ ಇಲ್ಲಿ ಒಗ್ಗಿಕೊಳ್ಳಲು ಸಮಸ್ಯೆಯಾಗುತ್ತದೆ. ಅದು ಅವರ ವೈಯಕ್ತಿಕ ಸಮಸ್ಯೆಯೇ ಹೊರತು ಪಕ್ಷದ್ದಲ್ಲ ಎಂದು ದಿಲೀಪ್​ ಘೋಷ್​ ಹೇಳಿದ್ದಾರೆ.

ನಮ್ಮ ಪಕ್ಷ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಅವರಿಗೆ ಜವಾಬ್ದಾರಿಯನ್ನೂ ವಹಿಸುತ್ತದೆ. ಆದರೆ ಒಂದಷ್ಟು ಮಂದಿಗೆ ಶಿಸ್ತಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಬಿಜೆಪಿಯ ಸಿದ್ಧಾಂತಕ್ಕೆ ಬದ್ಧರಾಗಿ ಇರಲು ಸಾಧ್ಯವಿಲ್ಲ. ಅಂಥವರು ಪಕ್ಷವನ್ನು ಬಿಟ್ಟು ಹೋಗುತ್ತಾರೆ ಎಂದು ದಿಲೀಪ್​ ಘೋಷ್​ ಹೇಳಿದ್ದಾರೆ. ನಮ್ಮ ಪಕ್ಷ ಸಂಘಟನೆಯಾಗಿದ್ದು ಹಳೇ ಕಾರ್ಯಕರ್ತರಿಂದ. ಅವರಿನ್ನೂ ಪಕ್ಷಕ್ಕೆ ಬದ್ಧರಾಗಿದ್ದಾರೆ. ಹೀಗೆ ಬಂದು..ಹಾಗೇ ಹೋಗುವವರ ಬಗ್ಗೆಯೆಲ್ಲ ನಾವು ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ದಿಲೀಪ್ ಘೋಷ್​ ಖಡಾಖಂಡಿತವಾಗಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Sushant Singh Rajput: ಸುಶಾಂತ್​ ಸಾವಿನ ನಂತರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ನೀಡಿದ ಅಚ್ಚರಿಯ​ ಹೇಳಿಕೆಗಳು

Published On - 9:58 am, Sun, 13 June 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್