Sushant Singh Rajput: ಸುಶಾಂತ್​ ಸಾವಿನ ನಂತರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ನೀಡಿದ ಅಚ್ಚರಿಯ​ ಹೇಳಿಕೆಗಳು

Sushant Singh Rajput Death Anniversary: ಆ ದುರ್ಘಟನೆ ನಡೆಯುವುದಕ್ಕಿಂತ ಕೆಲವೇ ದಿನಗಳ ಹಿಂದೆ ಸುಶಾಂತ್​ ಜೊತೆ ಜಗಳ ಮಾಡಿಕೊಂಡು ರಿಯಾ ದೂರಾಗಿದ್ದರು. ಪ್ರಿಯಕರನ ಸಾವಿನ ಬಳಿಕ ಅವರು ಸಂದರ್ಶನ ನೀಡಿದರು.

Sushant Singh Rajput: ಸುಶಾಂತ್​ ಸಾವಿನ ನಂತರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ನೀಡಿದ ಅಚ್ಚರಿಯ​ ಹೇಳಿಕೆಗಳು
ಸುಶಾಂತ್​ ಸಿಂಗ್ ರಜಪೂತ್​, ರಿಯಾ ಚಕ್ರವರ್ತಿ
Follow us
ಮದನ್​ ಕುಮಾರ್​
|

Updated on:Jun 13, 2021 | 10:10 AM

ಜನಪ್ರಿಯ ನಟ ಸುಶಾಂತ್​ ಸಿಂಗ್​ ರಜಪೂರ್​ ನಿಧನರಾಗಿ 1 ವರ್ಷ ಕಳೆದಿದೆ. 2020ರ ಜೂನ್​ 14ರಂದು ಅವರು ಮೃತರಾದ ಸುದ್ದಿ ಹೊರಬಿದ್ದಿತ್ತು. ಅವರದ್ದು ಕೊಲೆಯೋ ಆತ್ಮಹತ್ಯೆಯೋ ಎಂಬುದು ಇನ್ನೂ ಬಗೆಹರಿಯದ ರಹಸ್ಯವಾಗಿ ಉಳಿದುಕೊಂಡಿದೆ. ಸುಶಾಂತ್​ ಸಾವಿನ ನಂತರ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಎಲ್ಲರ ಅನುಮಾನದ ದೃಷ್ಟಿ ಹರಿಯಿತು. ಯಾಕೆಂದರೆ ಸುಶಾಂತ್​ ಜೊತೆ ಸಿಕ್ಕಾಪಟ್ಟೆ ಆಪ್ತವಾಗಿದ್ದ ಅವರು ಆ ದುರ್ಘಟನೆ ನಡೆಯುವುದಕ್ಕಿಂತ ಕೆಲವೇ ದಿನಗಳ ಹಿಂದೆ ಸುಶಾಂತ್​ ಜೊತೆ ಜಗಳ ಮಾಡಿಕೊಂಡು ದೂರಾಗಿದ್ದರು. ಪ್ರಿಯಕರನ ಸಾವಿನ ಬಳಿಕ ರಿಯಾ ಹೇಳಿದ ಕೆಲವು ಅಚ್ಚರಿಯ​ ಮಾತುಗಳು ಇಲ್ಲವೆ..

ಕನಸಿನಲ್ಲಿ ಸುಶಾಂತ್ ಬಂದಿದ್ದ

‘ಸುಶಾಂತ್​ ನನ್ನ ಕನಸಿನಲ್ಲಿ ಬಂದಿದ್ದ. ಅದೇ ರೀತಿ ಅನೇಕರ ಕನಸಿನಲ್ಲಿ ಬಂದಿರಬಹುದು. ಎಲ್ಲರ ಎದುರು ನಿಜ ಹೇಳು. ನೀನು ಏನು ಎಂಬುದನ್ನು ಎಲ್ಲರಿಗೂ ತಿಳಿಸಿ ಹೇಳು ಅಂತ ಹೇಳಿದ್ದಾನೆ’ ಎಂದು ಸುಶಾಂತ್​ ಸಾವಿನ ಬಳಿಕ ರಿಯಾ ನೀಡಿದ ಮೊದಲ ಸಂದರ್ಶನದಲ್ಲಿ ಹೇಳಿದ್ದರು.

ನಾವು ಮದುವೆ ಬಗ್ಗೆ ಮಾತನ್ನೇ ಆಡಿಲ್ಲ!

‘2013ರಲ್ಲಿ ನಾವು ಮೊದಲ ಬಾರಿಗೆ ಯಶ್ ರಾಜ್​ ಸ್ಟುಡಿಯೋದ ಜಿಮ್​ನಲ್ಲಿ ಭೇಟಿ ಆದೆವು. ಎಂದಿಗೂ ನಾವು ಮದುವೆ ಬಗ್ಗೆ ಮಾತಾಡಿಲ್ಲ. ಆದರೆ ನನಗೊಬ್ಬ ಪುಟಾಣಿ ಸುಶಾಂತ್​ ಬೇಕು ಎಂದು ನಾನು ಆಗಾಗ ಹೇಳುತ್ತಿದ್ದೆ’ ಎಂದಿದ್ದರು ರಿಯಾ.

ಕೊಡಗಿಗೆ ಹೋಗಬೇಕು ಎಂದುಕೊಂಡಿದ್ದ

‘ಸುಶಾಂತ್​ಗೆ ಸಿನಿಮಾ ರಂಗದಲ್ಲಿ ಮುಂದುವರಿಯುವ ಆಲೋಚನೆ ಇರಲಿಲ್ಲ. ಆತ ಕೊಡಗಿಗೆ ಹೋಗಿ ಕೃಷಿ ಮಾಡಬೇಕು ಎಂದು ಪ್ಲ್ಯಾನ್​ ಮಾಡಿದ್ದ’ ಎಂದಿದ್ದರು ರಿಯಾ.

ಸುಶಾಂತ್​ ಗಾಂಜಾ ಸೇದುತ್ತಿದ್ದ

‘ಒಬ್ಬರು ನಿಧನರಾದ ಬಳಿಕ ಈ ರೀತಿ ಹೇಳುವುದು ಸರಿಯಲ್ಲ ಹೌದು. ಆದರೆ ಈಗ ನನ್ನ ಬಳಿ ಬೇರೆ ಯಾವುದೇ ಆಯ್ಕೆ ಉಳಿದಿಲ್ಲ. ಸುಶಾಂತ್​ ಗಾಂಜಾ ಸೇದುತ್ತಿದ್ದ. ಪದೇಪದೇ ಗಾಂಜಾ ಸೇದುವ ಚಟ ಅವನಿಗೆ ಇತ್ತು’

ನಾನೂ ಆತ್ಮಹತ್ಯೆಗೆ ಯೋಚಿಸಿದ್ದೆ

‘ನಾನು ಮತ್ತು ನನ್ನ ಕುಟುಂಬದವರು ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನಿಸುತ್ತದೆ. ಇಲ್ಲವಾದರೆ, ನಮ್ಮನ್ನು ಗುಂಡು ಹೊಡೆದು ಸಾಯಿಸಿ. ಈ ರೀತಿ ಅವಮಾನದಿಂದ ಬದುಕಲು ಸಾಧ್ಯವಿಲ್ಲ. ನಾವು ಮಧ್ಯಮವರ್ಗದವರು’ ಎಂದು ರಿಯಾ ಕಣ್ಣೀರು ಹಾಕಿದ್ದರು.

ಅಪ್ಪನ ಜೊತೆ ಸುಶಾಂತ್​ ಸಂಬಂಧ ಕೆಟ್ಟಿತ್ತು

‘ಅವರ ತಂದೆಯ ಜೊತೆಗೆ ಸುಶಾಂತ್​ ಸಂಬಂಧ ಚೆನ್ನಾಗಿ ಇರಲಿಲ್ಲ. ಚಿಕ್ಕ ವಯಸ್ಸಿನಿಂದಲೂ ಕೂಡ ತಂದೆಯ ಜೊತೆ ಅಸಮಾಧಾನ ಇತ್ತು ಎಂಬುದನ್ನು ಆತ ನನ್ನ ಬಳಿ ಹೇಳಿಕೊಂಡಿದ್ದ’ ಎಂದು ಎಲ್ಲರಿಗೂ ರಿಯಾ ಶಾಕ್​ ನೀಡಿದ್ದರು.

ಸುಶಾಂತ್​ಗೆ ಇತ್ತು ಡಿಪ್ರೆಷನ್​

‘ಬಹಳ ಹಿಂದೆಯೇ ತೀರಿಹೋದ ಅಮ್ಮನ ನೆನಪಿನಲ್ಲಿ ಸುಶಾಂತ್​ ಇರುತ್ತಿದ್ದ. ಅದೇ ಕಾರಣಕ್ಕೆ ಅವನಿಗೆ ಡಿಪ್ರೆಷನ್​ ಕಾಡುತ್ತಿತ್ತು. ಅವರ ತಾಯಿ ಕೂಡ ಮಾನಸಿಕ ಖಾಯಿಲೆಯಿಂದ ನಿಧನರಾಗಿದ್ದರು’ ಎನ್ನುವ ಮೂಲಕ ಸುಶಾಂತ್​ ಕುಟುಂಬದ ಗುಟ್ಟುಗಳನ್ನು ರಿಯಾ ತೆರೆದಿಟ್ಟಿದ್ದರು.

Published On - 9:59 am, Sun, 13 June 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್