ಹೆರಿಗೆ ಆಗಿ ತಿಂಗಳಾಗುವ ಮೊದಲೇ ಕೆಲಸಕ್ಕೆ ಹಾಜರಾದ ಎಂಪಿ ನುಸ್ರತ್​ ಜಹಾನ್; ಮಗುವಿನ ತಂದೆ ಬಗ್ಗೆ ಮಾತನಾಡಿದ ನಟಿ

ನುಸ್ರತ್​ ಜಹಾನ್​ ವೈಯಕ್ತಿಕ ಬದುಕಿನ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಹಲವರು ವ್ಯಂಗ್ಯ ಮಾಡಿದ್ದರು. ನಟಿಗೆ ಕಾಲೆಳೆದಿದ್ದರು. ಮಗುವಿನ ತಂದೆಯ ಬಗ್ಗೆಯೂ ಪ್ರಶ್ನೆ ಮಾಡಿದ್ದರು.

ಹೆರಿಗೆ ಆಗಿ ತಿಂಗಳಾಗುವ ಮೊದಲೇ ಕೆಲಸಕ್ಕೆ ಹಾಜರಾದ ಎಂಪಿ ನುಸ್ರತ್​ ಜಹಾನ್; ಮಗುವಿನ ತಂದೆ ಬಗ್ಗೆ ಮಾತನಾಡಿದ ನಟಿ
ಮಗು ಹುಟ್ಟಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಜಹಾನ್​

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್​ ಸಂಸದೆ (TMC MP), ನುಸ್ರತ್​ ಜಹಾನ್​ (Nusrat Jahan)ಕಳೆದ ನವೆಂಬರ್​ನಲ್ಲಿ ಪತಿಯಿಂದ ಬೇರೆಯಾಗಿದ್ದಾರೆ. ಹಾಗೇ ಆಗಸ್ಟ್​ 26ರಂದು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿ ಒಂದು ತಿಂಗಳೂ ಕಳೆದಿಲ್ಲ..ಜಹಾನ್​ ಇದೀಗ ತಮ್ಮ ಕೆಲಸ ಶುರು ಮಾಡಿದ್ದಾರೆ. ಮಗು ಜನಿಸಿದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನುಸ್ರತ್ ಜಹಾನ್​ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಹಾಗೇ ಮಗುವಿನ ತಂದೆಯ ಬಗ್ಗೆಯೂ ಮಾತನಾಡಿದ್ದಾರೆ.  

ನುಸ್ರತ್​ ಜಹಾನ್​ ವೈಯಕ್ತಿಕ ಬದುಕಿನ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಹಲವರು ವ್ಯಂಗ್ಯ ಮಾಡಿದ್ದರು. ನಟಿಗೆ ಕಾಲೆಳೆದಿದ್ದರು. ಮಗುವಿನ ತಂದೆಯ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ ಮೂಲಕ ಉತ್ತರ ನೀಡಿದ್ದ ನುಸ್ರತ್​ ನಿನ್ನೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರಾಗಿಯೇ ಮಗುವನ ತಂದೆ ಬಗ್ಗೆ ಮಾತು ತೆಗೆದರು. ‘ನಿಮ್ಮ ಮಗುವನ್ನು ಯಾವಾಗ ಸಾರ್ವಜನಿಕವಾಗಿ ತೋರಿಸುತ್ತೀರಿ’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನುಸ್ರತ್​ ಜಹಾನ್​, ‘ಈ ಪ್ರಶ್ನೆಯನ್ನು ನನ್ನ ಮಗುವಿನ ತಂದೆಯ ಬಳಿಯೇ ಕೇಳಬೇಕು..ಯಾಕೆಂದರೆ ಈ ಸಮಯದಲ್ಲಂತೂ ಅವರು ಹೊರಗಿನ ಯಾರಿಗೂ ಮಗುವನ್ನು ನೋಡಲು ಬಿಡುತ್ತಿಲ್ಲ’ ಎಂದು ಹೇಳಿದರು.

ತುಂಬು ಗರ್ಭಿಣಿಯಾಗಿದ್ದ ನುಸ್ರತ್ ಜಹಾನ್​ರನ್ನು ಆಗಸ್ಟ್​ 25ರಂದು ಬೆಂಗಾಳಿ ನಟ ಯಶ್​ ದಾಸ್​​ಗುಪ್ತಾ ಕೋಲ್ಕತ್ತದ ನಿಯೋಟಾ ಆಸ್ಪತ್ರೆಗೆ ದಾಖಲಿಸಿದ್ದರು. ಹೆರಿಗೆಯಾದ ಬಳಿಕವೂ ಕೂಡ, ನುಸ್ರತ್​ ಮತ್ತು ಆಕೆಯ ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು. ನುಸ್ರತ್ ಜಹಾನ್​ 2019ರ ಜೂನ್​ 19ರಲ್ಲಿ ಟರ್ಕಿಯಲ್ಲಿ  ನಿಖಿಲ್​ ಜೈನ್ ಎಂಬುವರನ್ನು ವಿವಾಹವಾಗಿದ್ದರು. ಆದರೆ 2021ರಲ್ಲಿ ತಮ್ಮ ಮದುವೆ ಜೀವನದ ಬಗ್ಗೆ ಮಾತನಾಡಿದ್ದ ಅವರು, ನಾವಿಬ್ಬರೂ ಟರ್ಕಿಯಲ್ಲಿ ವಿವಾಹವಾಗಿದ್ದೇವೆ. ಆದರೆ ಭಾರತದ ಕಾನೂನಿನ ಅನ್ವಯ ಆ ವಿವಾಹ ಮಾನ್ಯವಾಗಿಲ್ಲ. ನಾವು 2020ರ ನವೆಂಬರ್​​ನಿಂದ ಪ್ರತ್ಯೇಕವಾಗಿದ್ದೇವೆ ಎಂದು ತಿಳಿಸಿದ್ದರು.

ಇದನ್ನೂ ಓದಿ:  ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ- 20 ವರ್ಷ ಕಠಿಣ ಜೈಲು; ಮೈಸೂರಿನಲ್ಲಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

ರಜತ್​ ಬೇಡಿ ಕಾರು ಡಿಕ್ಕಿಯಿಂದ ಗಾಯಗೊಂಡಿದ್ದ ವ್ಯಕ್ತಿ ನಿಧನ; ಬಾಲಿವುಡ್​ ನಟನಿಗೆ ಹೆಚ್ಚಿತು ಸಂಕಷ್ಟ

(Nusrat Jahan opens up about her child’s father in Public At West Bengal)

Click on your DTH Provider to Add TV9 Kannada