AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ ಹಿಂದಷ್ಟೇ ಒಡಿಶಾದಲ್ಲಿ ಜನಿಸಿದ್ದ ಅಪರೂಪದ ಸಯಾಮಿ ಶಿಶುಗಳು ಸಾವು

ಒಡಿಶಾದಲ್ಲಿ ಜನಿಸಿದ್ದ ಅಪರೂಪದ ಡೈಸೆಫಾಲಿಕ್ ಸಯಾಮಿ ಅವಳಿ ಶಿಶುಗಳು ಒಂದು ವಾರದಲ್ಲಿ ನಿಧನರಾಗಿದ್ದಾರೆ. ಎರಡು ತಲೆ, ಒಂದೇ ಮುಂಡವಿದ್ದ ಈ ಶಿಶುಗಳನ್ನು ಉಳಿಸಲು ವೈದ್ಯರು ಮಾಡಿದ ಪ್ರಯತ್ನ ವಿಫಲವಾಯಿತು. ಇಂತಹ ಸಂಕೀರ್ಣ ವೈದ್ಯಕೀಯ ಸ್ಥಿತಿಯಲ್ಲಿ ಬದುಕುಳಿಯುವ ಸಾಧ್ಯತೆಗಳು ತೀರಾ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ. ಪೋಷಕರಿಗೆ ಕೌನ್ಸೆಲಿಂಗ್ ನಡೆಸಿ ಮೃತದೇಹ ಹಸ್ತಾಂತರಿಸಲಾಯಿತು.

ವಾರದ ಹಿಂದಷ್ಟೇ ಒಡಿಶಾದಲ್ಲಿ ಜನಿಸಿದ್ದ ಅಪರೂಪದ ಸಯಾಮಿ ಶಿಶುಗಳು ಸಾವು
ಶಿಶು
ನಯನಾ ರಾಜೀವ್
|

Updated on: Oct 19, 2026 | 8:12 AM

Share

ಬೆರ್ಹಾಂಪುರ್ , ಅಕ್ಟೋಬರ್ 19: ಎರಡು ಪ್ರತ್ಯೇಕ ತಲೆಗಳು ಹಾಗೂ ಒಂದೇ ದೇಹದೊಂದಿಗೆ ಜನಿಸಿ ವೈದ್ಯಕೀಯ ಲೋಕದಲ್ಲಿ ತೀವ್ರ ಅಚ್ಚರಿ ಮೂಡಿಸಿದ್ದ ಅಪರೂಪದ ಸಯಾಮಿ ಅವಳಿ ಗಂಡು ಶಿಶುಗಳು, ಜನಿಸಿದ ಕೇವಲ ಒಂದು ವಾರದಲ್ಲಿ ಕೊನೆಯುಸಿರೆಳೆದಿವೆ. ಸರ್ಕಾರಿ ಸ್ವಾಮ್ಯದ ಎಂಕೆಸಿಜಿ (MKCG) ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಜ್ಞ ತಂಡ ಎಷ್ಟೇ ಪ್ರಯತ್ನಿಸಿದರೂ ಕಂದಮ್ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಕಂಧಮಾಲ್ ಜಿಲ್ಲೆಯ ತುಮುಡಿಬಂಧ ವ್ಯಾಪ್ತಿಯ ದಿನಗೂಲಿ ಕಾರ್ಮಿಕ ದಂಪತಿಗೆ ಅಕ್ಟೋಬರ್ 11 ರಂದು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಈ ಅಪರೂಪದ ಶಿಶು ಜನಿಸಿತ್ತು. ಇದು ಆ ತಾಯಿಯ ಮೊದಲ ಗರ್ಭಧಾರಣೆಯಾಗಿತ್ತು. ವೈದ್ಯಕೀಯ ಪರಿಭಾಷೆಯಲ್ಲಿ ಈ ಸ್ಥಿತಿಯನ್ನು ‘ಡೈಸೆಫಾಲಿಕ್ ಪ್ಯಾರಾಪೇಗಸ್’ ಎಂದು ಕರೆಯಲಾಗುತ್ತದೆ. ಜನನದ ವೇಳೆ ಶಿಶು 2.25 ಕೆಜಿ ತೂಕವಿತ್ತು. ಮಗುವಿಗೆ ಪ್ರತ್ಯೇಕ ಎರಡು ತಲೆ, ಎರಡು ಕುತ್ತಿಗೆ ಮತ್ತು ಬೆನ್ನುಹುರಿಗಳಿದ್ದವು. ಆದರೆ ಮುಂಡ ಒಂದೇ ಆಗಿತ್ತು.

ಅಂಗಾಂಗ ಹಂಚಿಕೆ: ಆಶ್ಚರ್ಯಕರವೆಂದರೆ, ಶಿಶುವಿಗೆ ಒಂದೇ ಹೃದಯ ಮತ್ತು ಒಂದೇ ಯಕೃತ್ತು (ಲಿವರ್) ಇತ್ತು. ಜೊತೆಗೆ ಒಂದು ಜೋಡಿ ಕೈ ಮತ್ತು ಕಾಲುಗಳಿದ್ದವು. ಗಂಡು ಬಾಹ್ಯ ಜನನಾಂಗಗಳಿದ್ದರೂ ಮೂತ್ರನಾಳ ಒಂದೇ ಇತ್ತು ಹಾಗೂ ಗುದದ್ವಾರವೂ ಇರಲಿಲ್ಲ.

ಮತ್ತಷ್ಟು ಓದಿ: 2 ತಲೆ, 2 ಬೆನ್ನುಹುರಿ, ಒಂದೇ ಹೃದಯ: ಒಡಿಶಾದಲ್ಲಿ ಅಪರೂಪದ ಸಯಾಮಿ ಅವಳಿಗಳ ಜನನ, ವೈದ್ಯಕೀಯ ಲೋಕ ದಿಗ್ಭ್ರಮೆ

ಶಸ್ತ್ರಚಿಕಿತ್ಸೆಗೆ ಅಡ್ಡಿ: ಅಂಗಾಗಗಳನ್ನು ಬೇರ್ಪಡಿಸುವ ಅಥವಾ ಜೀವ ಉಳಿಸುವ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಯೋಚಿಸಿದ್ದರಾದರೂ, ಜನಿಸಿದ ಮರುದಿನವೇ ಉಸಿರಾಟದ ತೀವ್ರ ತೊಂದರೆ ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆ ಅಸಾಧ್ಯವಾಗಿತ್ತು. ವಿಶೇಷ ನವಜಾತ ಶಿಶು ಆರೈಕೆ ಘಟಕದಲ್ಲಿ (SNCU) ಲೈಫ್ ಸಪೋರ್ಟ್‌ನಲ್ಲಿದ್ದ ಶಿಶು ಶನಿವಾರ ಸಾವನ್ನಪ್ಪಿದೆ.

ಅಸಾಮಾನ್ಯ ರೂಪದೊಂದಿಗೆ ಜನಿಸಿದ ಮಗುವನ್ನು ಕಂಡು ಬಡ ಪೋಷಕರು ಆರಂಭದಲ್ಲಿ ತೀವ್ರ ಆಘಾತಕ್ಕೊಳಗಾಗಿದ್ದರು. ಮಗು ಸಾವನ್ನಪ್ಪಿದ ಬಳಿಕ ಮೃತದೇಹವನ್ನು ತಮ್ಮೂರಿಗೆ ಕೊಂಡೊಯ್ಯಲು ನಿರಾಕರಿಸಿದ್ದರು. ನಂತರ ಗಂಜಾಂ ಜಿಲ್ಲಾಡಳಿತ ಮತ್ತು ಆಸ್ಪತ್ರೆಯ ಅಧಿಕಾರಿಗಳು ದಂಪತಿಗೆ ಕೌನ್ಸೆಲಿಂಗ್ ನಡೆಸಿ ಮನವೊಲಿಸಿ, ಸರ್ಕಾರಿ ಶವವಾಹನದ ಮೂಲಕ ಮೃತದೇಹವನ್ನು ಅವರ ಹುಟ್ಟೂರಿಗೆ ಕಳುಹಿಸಿಕೊಟ್ಟರು. ವೈದ್ಯಕೀಯ ಅಂಕಿಅಂಶಗಳ ಪ್ರಕಾರ, ಇಂತಹ ಸಮ್ಮಿಶ್ರ ಅವಳಿಗಳ ಜನನವು ಪ್ರತಿ 2 ರಿಂದ 3 ಲಕ್ಷ ಹೆರಿಗೆಗಳಲ್ಲಿ ಒಂದರಲ್ಲಿ ಮಾತ್ರ ಕಂಡುಬರುತ್ತದೆ.

ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ: ಗರ್ಭಾವಸ್ಥೆಯಲ್ಲಿ ಭ್ರೂಣವು ಸಂಪೂರ್ಣವಾಗಿ ಎರಡು ಭಾಗಗಳಾಗಿ ವಿಭಜನೆಯಾಗಲು ವಿಫಲವಾದಾಗ ಈ ಸ್ಥಿತಿ ಉಂಟಾಗುತ್ತದೆ. ಪ್ರಮುಖ ಅಂಗಗಳಾದ ಹೃದಯ, ಶ್ವಾಸಕೋಶ ಮತ್ತು ಯಕೃತ್ತು ಒಂದೇ ಆಗಿರುವುದರಿಂದ ಶಸ್ತ್ರಚಿಕಿತ್ಸೆಯ ಮೂಲಕ ಇಬ್ಬರನ್ನೂ ಬೇರ್ಪಡಿಸುವುದು ವೈದ್ಯಕೀಯವಾಗಿ ಬಹುತೇಕ ಅಸಾಧ್ಯ. ಇಂತಹ ಶಿಶುಗಳು ಜನಿಸಿದ ಕೆಲವೇ ಗಂಟೆಗಳು ಅಥವಾ ದಿನಗಳಲ್ಲಿ ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪುವ ಸಂಭವವೇ ಹೆಚ್ಚು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ಸಂಸತ್ ಭವನದಲ್ಲಿ ಮಹನೀಯರ ಫೋಟೋ ಜತೆ ಟಿಪ್ಪು ಫೋಟೋ ಇಡಬೇಕು: ವಾಟಾಳ್ ನಾಗರಾಜ್
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ಗಾನವಿ ಬುಸ್ ಅಂದ್ರೆ ಭಯ ಬೀಳ್ತಾರಾ ತಾಂಡವ್ ರಾಮ್?
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ರಾಜ್​ ಸಂಬಂಧಿ ಮನೆಯಲ್ಲಿ ಸ್ಫೋಟ: ಸ್ಥಳ ಮಹಜರು ವೇಳೆ ಹೈಡ್ರಾಮಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಎನ್​ಡಿಎ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭದ್ರಾವತಿಯ ಶ್ರೇಯಾ
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ಬರ ಪರಿಹಾರದಲ್ಲಿ ವ್ಯತ್ಯಾಸ: ಆಕ್ರೋಶ; ಸರ್ಕಾರಕ್ಕೆ ಚೆಕ್ ಬರೆದ ಅನ್ನದಾತರು
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು