AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರಿಚಿತ ವಾಹನ ಹತ್ತಲೇಬೇಡಿ, ಕಾರಿನೊಳಗೆ 9ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ

ನೀನು ಎಲ್ಲಿಗೆ ಹೋಗ್ಬೇಕು, ಅಲ್ಲಿಗೆ ಬಿಡ್ತೀನಿ ಬಾ ಎಂದು 9ನೇ ತರಗತಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು, ಕಾರೊಳಗೆ ಆಕೆ ಮೇಲಕೆ ಅತ್ಯಾಚಾರವೆಸಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಶುಕ್ರವಾರ ಸಂಜೆ ಬಾಲಕಿ ತನ್ನ ಅಕ್ಕನ ಮನೆಗೆ ಹೋಗಿ ನಂತರ ಗಣೇಶ ಪೂಜೆಯ ವಿಸರ್ಜನಾ ಮೆರವಣಿಗೆಯನ್ನು ವೀಕ್ಷಿಸಲು ದರಿಂಗ್‌ಬಾಡಿ ಮಾರುಕಟ್ಟೆಗೆ ಹೋಗಿ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ.

ಅಪರಿಚಿತ ವಾಹನ ಹತ್ತಲೇಬೇಡಿ, ಕಾರಿನೊಳಗೆ 9ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ
ಕ್ರೈಂ
ನಯನಾ ರಾಜೀವ್
|

Updated on: Sep 08, 2025 | 10:01 AM

Share

ಒಡಿಶಾ, ಸೆಪ್ಟೆಂಬರ್ 08: ನೀನು ಎಲ್ಲಿಗೆ ಹೋಗ್ಬೇಕು, ಅಲ್ಲಿಗೆ ಬಿಡ್ತೀನಿ ಬಾ ಎಂದು 9ನೇ ತರಗತಿ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು, ಕಾರೊಳಗೆ ಆಕೆ ಮೇಲಕೆ ಅತ್ಯಾಚಾರವೆಸಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಶುಕ್ರವಾರ ಸಂಜೆ ಬಾಲಕಿ ತನ್ನ ಅಕ್ಕನ ಮನೆಗೆ ಹೋಗಿ ನಂತರ ಗಣೇಶ ಪೂಜೆಯ ವಿಸರ್ಜನಾ ಮೆರವಣಿಗೆಯನ್ನು ವೀಕ್ಷಿಸಲು ದರಿಂಗ್‌ಬಾಡಿ ಮಾರುಕಟ್ಟೆಗೆ ಹೋಗಿ ಮನೆಗೆ ಹಿಂದಿರುಗುವಾಗ ಈ ಘಟನೆ ನಡೆದಿದೆ.

ಆಕೆ ಮನೆಗೆ ವಾಪಸ್ ಹೊರಟಿದ್ದಳು, ಅಪರಿಚಿತ ವಾಹನವೊಂದು ಬಂದು ಪಕ್ಕಕ್ಕೆ ನಿಂತಿತು, ಅದರಲ್ಲಿದ್ದ ವ್ಯಕ್ತಿ ನೀನು ಎಲ್ಲಿಗೆ ಹೋಗಬೇಕು, ಅಲ್ಲಿಗೆ ಬಿಡ್ತೀನಿ ಬಾ ಎಂದು ಕರೆದೊಯ್ದು, ಅತ್ಯಾಚಾರವೆಸಗಿದ್ದಾನೆ ಎಂದು ದರಿಂಗ್‌ಬಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಉಲ್ಲೇಖಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ ತನಿಖೆ ಆರಂಭಿಸಿದ್ದಾರೆ.

ಆರೋಪಿ ವಿವಾಹಿತನಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಕಂಧಮಲ್ ಎಸ್ಪಿ ಹರೀಶ ಬಿ.ಸಿ. ಈ ವಿಷಯ ತನಿಖೆ ಹಂತದಲ್ಲಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುತ್ತೇವ ಎಂದು ಹೇಳಿದರು.

ಮತ್ತಷ್ಟು ಓದಿ:  ಆರೋಪಿ ಮನೆಗೆ ಅತ್ಯಾಚಾರ ಸಂತ್ರಸ್ತೆಯ ಕಳುಹಿಸಿದ ಅಧಿಕಾರಿಗಳು, ಮತ್ತೆ ಆಕೆಯ ಮೇಲೆ ಅತ್ಯಾಚಾರ

ಹೀಗೆ ಯಾವ ಹೆಣ್ಣುಮಕ್ಕಳು ಕೂಡ ಅಪರಿಚಿತ ವಾಹನ ಹತ್ತುವ ಮುನ್ನ ತುಂಬಾ ಎಚ್ಚರಿಕೆಯಿಂದಿರಬೇಕು, ಯಾರೋ ಲಿಫ್ಟ್ಕೊಡುತ್ತೇನೆ ಎಂದು ಹೇಳಿದರೆ ಒಪ್ಪಿ ಹತ್ತಬಾರದು.

ಹುಟ್ಟುಹಬ್ಬದ ದಿನವೇ ಯುವತಿ ಮೇಲೆ ಅತ್ಯಾಚಾರ

ಹುಟ್ಟುಹಬ್ಬದಂದೇ 20 ವರ್ಷದ ಯುವತಿ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ದಕ್ಷಿಣ ಹೊರವಲಯದಲ್ಲಿರುವ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.ಅಪರಾಧದ ನಂತರ ನಾಪತ್ತೆಯಾಗಿದ್ದ ಇಬ್ಬರು ಆರೋಪಿಗಳನ್ನು ಚಂದನ್ ಮಲಿಕ್ ಮತ್ತು ದೀಪ್ ಎಂದು ಗುರುತಿಸಲಾಗಿದೆ. ದೀಪ್ ಸರ್ಕಾರಿ ಉದ್ಯೋಗಿ ಎಂದು ವರದಿಯಾಗಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಯುವತಿಗೆ ಚಂದನ್​​ ಜತೆ ಸ್ನೇಹವಿತ್ತು. ಹುಟ್ಟು ಹಬ್ಬದ ಪಾರ್ಟಿ ಮಾಡುವ ನೆಪದಲ್ಲಿ ಚಂದನ್ ದೀಪ್ ಮನೆಗೆ ಆಕೆಯನ್ನು ಕರೆದೊಯ್ದಿದ್ದ. ಅಲ್ಲಿ ಅವರು ಊಟ ಮಾಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್