ನಿವೃತ್ತ ಪೊಲೀಸ್ ಅಧಿಕಾರಿಗೆ ಬೆಂಕಿ ಹಚ್ಚಿ ಕೊಂದ ಬಾಡಿಗೆದಾರ ಮಹಿಳೆ
ಮಹಿಳೆ ಬಾಡಿಗೆದಾರಳೊಬ್ಬಳು ನಿವೃತ್ತ ಪೊಲೀಸ್ ಅಧಿಕಾರಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಮೃತರನ್ನು ಹರಿಹರ ಸಾಹು ಎಂದು ಗುರುತಿಸಲಾಗಿದೆ. ಅವರು ನಿವೃತ್ತ ರಿಸರ್ವ್ ಇನ್ಸ್ಪಟೆಕ್ಟರ್, ಸುದೇಷ್ಣು ಜೇನಾ ಜತೆ ಸಂಬಂಧ ಬೆಳೆಸಿದ್ದರು.ಆಕೆ ಅವರ ಮನೆಯಲ್ಲಿ ಬಾಡಿಗೆದಾರಳಾಗಿ ವಾಸಿಸುತ್ತಿದ್ದಳು.ಇತ್ತೀಚಿನ ವಾರಗಳಲ್ಲಿ ಇಬ್ಬರ ನಡುವೆ ಉದ್ವಿಗ್ನತೆ ಉಂಟಾಗಿದ್ದು, ಇದೀಗ ಸಾವಿನ ಮೂಲಕ ಅಂತ್ಯಗೊಂಡಿದೆ.

ಒಡಿಶಾ, ಜೂನ್ 03: ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಬಾಡಿಗೆ ಮನೆಯಲ್ಲಿರುವ ಮಹಿಳೆ ಬೆಂಕಿ ಹಚ್ಚಿ ಕೊಲೆ (Murder)ಮಾಡಿರುವ ಘಟನೆ ಒಡಿಶಾದ ಬೆಹರಾಂಪುರದಲ್ಲಿ ನಡೆದಿದೆ. ತಮ್ಮ ವಿವಾಹೇತರ ಸಂಬಂಧದಲ್ಲಿ ಉಂಟಾದ ಜಗಳದಿಂದಾಗಿ ಬಾಡಿಗೆದಾರ ಮಹಿಳೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಸುಟ್ಟಗಾಯಗಳಿಂದ ಸಾವನ್ನಪ್ಪಿದ್ದಾರೆ.
ಮೃತರನ್ನು ಹರಿಹರ ಸಾಹು ಎಂದು ಗುರುತಿಸಲಾಗಿದೆ. ಅವರು ನಿವೃತ್ತ ರಿಸರ್ವ್ ಇನ್ಸ್ಪಟೆಕ್ಟರ್, ಸುದೇಷ್ಣು ಜೇನಾ ಜತೆ ಸಂಬಂಧ ಬೆಳೆಸಿದ್ದರು.ಆಕೆ ಅವರ ಮನೆಯಲ್ಲಿ ಬಾಡಿಗೆದಾರಳಾಗಿ ವಾಸಿಸುತ್ತಿದ್ದಳು.ಇತ್ತೀಚಿನ ವಾರಗಳಲ್ಲಿ ಇಬ್ಬರ ನಡುವೆ ಉದ್ವಿಗ್ನತೆ ಉಂಟಾಗಿದ್ದು, ಇದೀಗ ಸಾವಿನ ಮೂಲಕ ಅಂತ್ಯಗೊಂಡಿದೆ.
ಘಟನೆ ನಡೆದ ದಿನ, ಸುದೇಷ್ಣ ಸಾಹು ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ ಎನ್ನಲಾಗಿದೆ. ನೆರೆಹೊರೆಯವರು ಮತ್ತು ಕುಟುಂಬ ಸದಸ್ಯರಿಗೆ ಅವರ ನಡುವಿನ ಸಂಬಂಧ ಹದಗೆಟ್ಟಿರುವುದು ತಿಳಿದಿರಲಿಲ್ಲ ಎಂದು ವರದಿಯಾಗಿದೆ.
ಸಾಹು ಅವರನ್ನು ಆರಂಭದಲ್ಲಿ ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಅವರ ಗಾಯಗಳ ತೀವ್ರತೆಯಿಂದಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಪಡೆಯುತ್ತಿದ್ದಾಗ ಸುಟ್ಟಗಾಯಗಳಿಂದ ಅವರು ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ಅಂಕಿತಾ ಭಂಡಾರಿ ಕೊಲೆ ಪ್ರಕರಣ; ಹೃಷಿಕೇಶದ ರೆಸಾರ್ಟ್ ಮಾಲೀಕ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ
ಘಟನೆಯ ನಂತರ, ಸಾಹು ಅವರ ಮಗಳು ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಾರಣೆಯ ಸಮಯದಲ್ಲಿ, ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಮತ್ತು ಕೃತ್ಯವು ಪೂರ್ವ ಯೋಜಿತವಾಗಿದೆ ಎಂದು ಒಪ್ಪಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಮಹಿಳಾ ಬಾಡಿಗೆದಾರರೊಬ್ಬರು ಮಾಲೀಕರಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ಇದು ಪೂರ್ವ ಯೋಜಿತ ಕೊಲೆ ಎಂದು ಒಪ್ಪಿಕೊಂಡಿರುವುದಾಗಿ ಬೆರ್ಹಾಂಪುರ್ ಪೊಲೀಸ್ ವರಿಷ್ಠಾಧಿಕಾರಿ ಶ್ರವಣ್ ವಿವೇಕ್ ಎಂ ಹೇಳಿದ್ದಾರೆ.ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಸ್ತುತ ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








