AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Omicron in India: ಭಾರತದಲ್ಲಿ ಈಗಾಗಲೇ ಹರಡಿದೆ ಒಮಿಕ್ರಾನ್, ಆದರೆ ನಾವು ಹೆದರಬೇಕಿಲ್ಲ: ವಿಜ್ಞಾನಿ ಡಾ ರಾಕೇಶ್ ಮಿಶ್ರಾ

ಲಸಿಕಾಕರಣಕ್ಕೆ ಹೊಸ ವೇಗ ನೀಡಿರುವುದರಿಂದ ಭಾರತದಲ್ಲಿ ಪರಿಸ್ಥಿತಿ ಅಷ್ಟು ಬಿಗಡಾಯಿಸಲಾರದು. ಈಗ ನಾವು ಜೀನೋಮ್ ಸೀಕ್ವೆನ್ಸಿಂಗ್​ಗೆ ಹೆಚ್ಚು ಗಮನ ನೀಡಬೇಕಿದೆ.

Omicron in India: ಭಾರತದಲ್ಲಿ ಈಗಾಗಲೇ ಹರಡಿದೆ ಒಮಿಕ್ರಾನ್, ಆದರೆ ನಾವು ಹೆದರಬೇಕಿಲ್ಲ: ವಿಜ್ಞಾನಿ ಡಾ ರಾಕೇಶ್ ಮಿಶ್ರಾ
ವಿಜ್ಞಾನಿ ರಾಕೇಶ್ ಮಿಶ್ರಾ
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 04, 2021 | 5:15 PM

Share

ಒಮಿಕ್ರಾನ್ ಪ್ರಭೇದ ಕೇವಲ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಪತ್ತೆಯಾಗಿದೆ ಎಂದೇನೂ ಇಲ್ಲ. ಭಾರತದಲ್ಲೂ ಈಗಾಗಲೇ ಎಲ್ಲ ಪ್ರಮುಖ ನಗರಗಳಲ್ಲಿ ಒಮಿಕ್ರಾನ್ (Omicron) ಪ್ರಭೇದದ ವೈರಸ್ ಇದೆ ಎಂದು ಸಿಎಸ್‌ಐಆರ್‌-ಸಿಸಿಎಂಬಿ (CSIR-CCMB) ಮುಖ್ಯಸ್ಥ ಡಾಕ್ಟರ್ ರಾಕೇಶ್ ಮಿಶ್ರಾ ಹೇಳಿದ್ದಾರೆ. ಆದರೆ, ಭಾರತದಲ್ಲಿ ಈಗಾಗಲೇ ಶೇ 80ಕ್ಕಿಂತ ಹೆಚ್ಚು ಜನರು ಮೊದಲ ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ. ಇದರಿಂದ ಹೆಚ್ಚಿನ ರಕ್ಷಣೆ ಸಿಗುತ್ತೆ ಎಂದು ರಾಕೇಶ್ ಮಿಶ್ರಾ ಹೇಳಿದ್ದಾರೆ. ಭಾರತದಲ್ಲಿ ಯಾವುದೇ ವಿದೇಶ ಪ್ರಯಾಣದ ಇತಿಹಾಸವಿಲ್ಲದ ಕೋವಿಡ್ ಪಾಸಿಟಿವ್ ವ್ಯಕ್ತಿಯಲ್ಲಿ ಓಮಿಕ್ರಾನ್ ರೂಪಾಂತರದ ವೈರಸ್ ಪತ್ತೆಯಾಗಿದೆ. ಹೀಗಾಗಿ ‘ಭಾರಿ ರೂಪಾಂತರಿತ’ ಒಮಿಕ್ರಾನ್ ವೈರಸ್ ಕೇವಲ ವಿಮಾನ ನಿಲ್ದಾಣಗಳಿಂದ ಬರುತ್ತಿಲ್ಲ. ಈಗಾಗಲೇ ಭಾರತದಲ್ಲೇ ಒಮಿಕ್ರಾನ್ ಪ್ರಭೇದದ ವೈರಸ್ ಇದೆ. ಎಲ್ಲಾ ಪ್ರಮುಖ ನಗರಗಳಲ್ಲಿ ಒಮಿಕ್ರಾನ್ ಪ್ರಭೇದದ ವೈರಸ್ ಇದೆ ಎಂದಿದ್ದಾರೆ ಸಿಸಿಎಂಬಿ ನಿರ್ದೇಶಕ ಡಾ.ರಾಕೇಶ್ ಮಿಶ್ರಾ. ಪ್ರಭೇದದ ಸಕಾರಾತ್ಮಕ ಅಂಶವೆಂದರೆ ರೂಪಾಂತರವು ಅತ್ಯಲ್ಪ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಅದರ ಸಂಭವನೀಯ ಸಮುದಾಯ ಹರಡುವಿಕೆಯ ಹೊರತಾಗಿಯೂ, ಇದು ಇಲ್ಲಿಯವರೆಗೆ ದೊಡ್ಡ ಪರಿಣಾಮವನ್ನು ಬೀರಿಲ್ಲ.

ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲಿಕ್ಯುಲರ್ ಬಯಾಲಜಿ (CCMB) ಒಂದು ಮೂಲಭೂತ ಜೀವ ವಿಜ್ಞಾನ ಸಂಶೋಧನಾ ಸಂಸ್ಥೆಯಾಗಿದ್ದು, ಇದು ಭಾರತ ಸರ್ಕಾರವು ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಯಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಗುರುವಾರ, ಭಾರತವು ಕರ್ನಾಟಕದಲ್ಲಿ ಒಮಿಕ್ರಾನ್ ರೂಪಾಂತರದ ಮೊದಲ ಎರಡು ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಇದು ಅಂತರರಾಷ್ಟ್ರೀಯ ಪ್ರಯಾಣಿಕರ ಕಣ್ಗಾವಲು ಹೆಚ್ಚಿಸಲು ಸರ್ಕಾರವನ್ನು ಪ್ರೇರೇಪಿಸಿತು. ಇಬ್ಬರು ರೋಗಿಗಳಲ್ಲಿ ಒಬ್ಬರು 46 ವರ್ಷದ ಬೆಂಗಳೂರಿನ ನಿವಾಸಿಯಾಗಿದ್ದು, ಯಾವುದೇ ವಿದೇಶ ಪ್ರಯಾಣದ ಇತಿಹಾಸವಿಲ್ಲ.

ಇದು ಖಂಡಿತವಾಗಿಯೂ ಎಲ್ಲಾ ಒಮಿಕ್ರಾನ್ ಪ್ರಭೇದದ ಪ್ರಕರಣಗಳು ವಿಮಾನ ನಿಲ್ದಾಣಗಳಿಂದ ಬರುತ್ತಿಲ್ಲ ಎಂದರ್ಥ ಎಂದು ರಾಕೇಶ್ ಮಿಶ್ರಾ ತಿಳಿಸಿದರು. ಒಮಿಕ್ರಾನ್ ಈಗಾಗಲೇ ಭಾರತದಲ್ಲೇ ಇದೆ ಎಂದರ್ಥ. ನಾವು ಏನನ್ನು ಪತ್ತೆಹಚ್ಚುತ್ತೇವೆಯೋ ಅದು ಮಾತ್ರ ವ್ಯಾಪ್ತಿಯಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ವಾಸ್ತವವಾಗಿ ಭಾರತದ ಹೆಚ್ಚಿನ ಪ್ರಮುಖ ನಗರಗಳು ಈ ಒಮಿಕ್ರಾನ್ ಪ್ರಭೇದದ ರೂಪಾಂತರವನ್ನು ಹೊಂದಿವೆ ಎಂದು ಡಾಕ್ಟರ್ ರಾಕೇಶ್ ಮಿಶ್ರಾ ಹೇಳಿದರು.

ವ್ಯಾಪಕವಾದ ಮೇಲ್ವಿಚಾರಣೆ ಮತ್ತು ಜೀನೋಮ್ ಸಿಕ್ವೇನ್ಸಿಂಗ್‌ ಅಗತ್ಯವಾಗುತ್ತಿದೆ. ಆದರೆ ಈ ಸೋಂಕಿನ ಉಪಸ್ಥಿತಿಯ ಹೊರತಾಗಿಯೂ, ಇದು ಆಸ್ಪತ್ರೆಗೆ ದಾಖಲು ಅಥವಾ ಮರಣದ ಹೆಚ್ಚಳಕ್ಕೆ ಕಾರಣವಾಗುವುದಿಲ್ಲ ಎಂಬ ಧನಾತ್ಮಕ ಹೆಜ್ಜೆಯನ್ನು ನಾವು ಗಮನಿಸಬೇಕು. ಆದಾಗ್ಯೂ, ಕೊರೊನಾ ರೂಪಾಂತರದ ಪುನರಾಗಮನವು ಎಲ್ಲಾ ಭಾರತೀಯರಿಗೆ ಎಚ್ಚರಿಕೆಯ ಕರೆಯಾಗಿದೆ. ‘ಮುಂಬರುವ ಎರಡು ವಾರಗಳಲ್ಲಿ, ನಾನು ಅದನ್ನು ಹೆಚ್ಚು ದೃಢವಾಗಿ ಹೇಳಲು ಸಾಧ್ಯವಾಗುತ್ತದೆ. ಈ ರೂಪಾಂತರವು ಸೌಮ್ಯವಾಗಿದ್ದರೆ, ತೊಂದರೆಯಲ್ಲಿಯೂ ಅನುಕೂಲವಾಗಬಹುದು. ಪ್ರಕರಣಗಳ ಸಂಖ್ಯೆಯಲ್ಲಿನ ಕುಸಿತ ಅಥವಾ ವ್ಯಾಕ್ಸಿನೇಷನ್ ಕಾರಣದಿಂದಾಗಿ ಭಾರತೀಯರು ಕೋವಿಡ್ ತಡೆ ನಿಯಮ ಪಾಲನೆ ನಿಲ್ಲಿಸಿದ್ದಾರೆ. ಈಗ ಮತ್ತೆ ಅವುಗಳನ್ನ ಪಾಲಿಸಲು ಒಮಿಕ್ರಾನ್ ಅವಕಾಶ ಕೊಟ್ಟಿದೆ.

ಮುಖಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಕೈಗಳ ಸ್ವಚ್ಛತೆ ಅತ್ಯಂತ ಮಹತ್ವದ್ದಾಗಿದೆ. ಲಸಿಕಾಕರಣಕ್ಕೆ ಹೊಸ ವೇಗ ನೀಡಿರುವುದರಿಂದ ಭಾರತದಲ್ಲಿ ಪರಿಸ್ಥಿತಿ ಅಷ್ಟು ಬಿಗಡಾಯಿಸಲಾರದು. ಈಗ ನಾವು ಜೀನೋಮ್ ಸೀಕ್ವೆನ್ಸಿಂಗ್​ಗೆ ಹೆಚ್ಚು ಗಮನ ನೀಡಬೇಕಿದೆ. ಪ್ರಕರಣಗಳನ್ನು ಪತ್ತೆಹಚ್ಚಲು ಹೆಚ್ಚಿನ ಸಂಖ್ಯೆಯ ಮಾದರಿಗಳ ಜೆನೋಮ್ ಸಿಕ್ವೇನ್ಸಿಂಗ್‌ ಅಗತ್ಯವಿದೆ. ಲಸಿಕೆಗಳು ಹೆಲ್ಮೆಟ್‌ಗಳಿದ್ದಂತೆ. ಹೆಲ್ಮೆಟ್‌ಗಳು ಅಪಘಾತವನ್ನು ತಡೆಯುವುದಿಲ್ಲ. ಆದರೆ ಅಪಘಾತವಾದರೆ ನಮ್ಮ ಜೀವ ಉಳಿಸಬಲ್ಲವು. ಅದೇ ರೀತಿ ಲಸಿಕೆಗಳು ಕೋವಿಡ್-19 ಸೋಂಕು ತಡೆಯುವುದಿಲ್ಲ. ಆದರೆ ಒಂದು ವೇಳೆ ಸೋಂಕು ತಗುಲಿದರೂ ನಮ್ಮನ್ನು ಸಾವಿನಿಂದ ರಕ್ಷಸಬಲ್ಲದು.

ರಾಕೇಶ್ ಮಿಶ್ರಾ ಪ್ರಕಾರ, ಓಮಿಕ್ರಾನ್ ವಿರುದ್ಧದ ಹೋರಾಟದಲ್ಲಿ ಭಾರತವು ಸುರಕ್ಷಿತ ಸ್ಥಿತಿಯಲ್ಲಿದೆ. ‘ನಮ್ಮ ಸೆರೋ-ಪಾಸಿಟಿವಿಟಿ ಹೆಚ್ಚಾಗಿದೆ ಮತ್ತು ದೇಶದ ಅರ್ಧದಷ್ಟು ಜನರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ದೇಶದ ವಯಸ್ಕ ಜನಸಂಖ್ಯೆಯ ಶೇ 80ರಷ್ಟು ಜನರು ಈಗಾಗಲೇ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಈ ಹಿಂದೆ ನೈಸರ್ಗಿಕವಾಗಿ ಕೋವಿಡ್-19 ಒಳಗಾಗಿದ್ದ ಜನಸಂಖ್ಯೆಯೂ ಅಧಿಕವಾಗಿದೆ. ಆದ್ದರಿಂದ, ಒಮಿಕ್ರಾನ್ ಬಗ್ಗೆ ಹೆಚ್ಚು ಆತಂಕ ಅಗತ್ಯವಿಲ್ಲ.

ಇದನ್ನೂ ಓದಿ: Omicron in India: ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದ ವ್ಯಕ್ತಿಗೆ ಒಮಿಕ್ರಾನ್ ಪಾಸಿಟಿವ್: ಗುಜರಾತ್​ನಲ್ಲಿ ಆತಂಕ ಇದನ್ನೂ ಓದಿ: ವೈದ್ಯರ ಸಮ್ಮೇಳನದಲ್ಲಿ ಭಾಗಿಯಾದ ಬಳಿಕ ನನಗೆ ರೋಗ ಲಕ್ಷಣ ಪತ್ತೆಯಾಗಿತ್ತು, ಒಮಿಕ್ರಾನ್ ಸೋಂಕಿತ ವೈದ್ಯ ಬಿಚ್ಚಿಟ್ಟ ಮಾಹಿತಿ

ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು