ಬಿಜೆಪಿಯ ಸಿದ್ಧಾಂತವನ್ನು ವಿರೋಧಿಸುವವರೆಲ್ಲರೂ ಒಂದಾಗಬೇಕು: ಪ್ರಿಯಾಂಕಾ ಗಾಂಧಿ

Congress 85th plenary session ಈಗ ನಮಗೆ ಒಂದು ವರ್ಷ ಮಾತ್ರ ಉಳಿದಿದೆ, ನಮ್ಮಲ್ಲಿ (ವಿರೋಧ) ನಿರೀಕ್ಷೆಗಳಿವೆ, ನಾವು ಒಂದಾಗಬೇಕಿದೆ. ಎಲ್ಲಾ ವಿರೋಧ ಪಕ್ಷಗಳು ಮತ್ತು ಬಿಜೆಪಿ ಸಿದ್ಧಾಂತವನ್ನು ವಿರೋಧಿಸುವ ಜನರು  ಒಗ್ಗಟ್ಟಿನಿಂದ ಹೋರಾಡಬೇಕು.

ಬಿಜೆಪಿಯ ಸಿದ್ಧಾಂತವನ್ನು ವಿರೋಧಿಸುವವರೆಲ್ಲರೂ ಒಂದಾಗಬೇಕು: ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
Follow us
ರಶ್ಮಿ ಕಲ್ಲಕಟ್ಟ
|

Updated on: Feb 26, 2023 | 3:30 PM

ಲೋಕಸಭೆ ಚುನಾವಣೆಗೂ ಮುನ್ನ ವಿರೋಧ ಪಕ್ಷಗಳು ಒಂದಾಗುವ ನಿರೀಕ್ಷೆಯಿದೆ. ಹೆಚ್ಚಿನ ನಿರೀಕ್ಷೆ ಕಾಂಗ್ರೆಸ್ ಮೇಲಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಹೇಳಿದ್ದಾರೆ. ಅದೇ ವೇಳೆ ಪಕ್ಷದ ಸಂದೇಶ ಮತ್ತು ಸರ್ಕಾರದ ವೈಫಲ್ಯಗಳನ್ನು ಜನರ ಬಳಿಗೆ ಕೊಂಡೊಯ್ಯುವಂತೆ ಅವರು ಕಾಂಗ್ರೆಸ್ (Congress) ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಕಾಂಗ್ರೆಸ್‌ನ 85 ನೇ ಸರ್ವಸದಸ್ಯರ ಅಧಿವೇಶನವನ್ನುದ್ದೇಶಿಸಿ(85th plenary session of the Congress) ಮಾತನಾಡಿದ ಪ್ರಿಯಾಂಕಾ, ಈಗ ನಮಗೆ ಒಂದು ವರ್ಷ ಮಾತ್ರ ಉಳಿದಿದೆ, ನಮ್ಮಲ್ಲಿ (ವಿರೋಧ) ನಿರೀಕ್ಷೆಗಳಿವೆ, ನಾವು ಒಂದಾಗಬೇಕಿದೆ. ಎಲ್ಲಾ ವಿರೋಧ ಪಕ್ಷಗಳು ಮತ್ತು ಬಿಜೆಪಿ ಸಿದ್ಧಾಂತವನ್ನು ವಿರೋಧಿಸುವ ಜನರು  ಒಗ್ಗಟ್ಟಿನಿಂದ ಹೋರಾಡಬೇಕು. ಪ್ರತಿಯೊಬ್ಬರಿಂದಲೂ ನಿರೀಕ್ಷೆಗಳಿವೆ. ಆದರೆ ಕಾಂಗ್ರೆಸ್ ನಿಂದ ಹೆಚ್ಚಿನ ನಿರೀಕ್ಷೆಗಳು ಇವೆ ಎಂದಿದ್ದಾರೆ.

ಪಕ್ಷಕ್ಕಾಗಿ ಹೋರಾಡುವ ಕಾಂಗ್ರೆಸ್ ಕಾರ್ಯಕರ್ತರ ಹೋರಾಟವನ್ನು ಅವರು ಶ್ಲಾಘಿಸಿದರು.

ಇದನ್ನೂ ಓದಿ: ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿ ಒಂದೇ: ರಾಹುಲ್ ಗಾಂಧಿ

“ನಿಮಗೆ ಬಿಜೆಪಿ ವಿರುದ್ಧ ಹೋರಾಡುವ ಧೈರ್ಯವಿದೆ ಎಂದು ನಮಗೆ ತಿಳಿದಿದೆ, ದೇಶಕ್ಕಾಗಿ ಆ ಧೈರ್ಯವನ್ನು ಪ್ರದರ್ಶಿಸುವ ಸಮಯ ಬಂದಿದೆ”.‘ಮಂಡಲ’ ಮಟ್ಟದಿಂದಲೇ ಕಾಂಗ್ರೆಸ್‌ ಸಂಘಟನೆ ಕಟ್ಟಬೇಕು ಮತ್ತು ಬಲಪಡಿಸಬೇಕು ಎಂದು ಪ್ರಿಯಾಂಕಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ