‘ನಮ್ಮಜ್ಜಿ ಹೇಳಿದ್ದು’; ಪಟಾಕಿ ಸಿಡಿಸಿದರೆ ಕಾಯಿಲೆ ಗುಣವಾಗುತ್ತವೆ ಎಂಬ ಹೇಳಿಕೆ ಹಿಂಪಡೆದ ಬಂಗಾಳದ ಬಿಜೆಪಿ ಶಾಸಕಿ
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಗಾಳಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ನಾಶವಾಗುತ್ತವೆ ಹಾಗೂ ಇದರಿಂದ ಕಾಯಿಲೆಗಳು ಗುಣವಾಗುತ್ತವೆ ಎಂದು ಬಂಗಾಳದ ಬಿಜೆಪಿ ಶಾಸಕಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ವೈಜ್ಞಾನಿಕ ಆಧಾರವಿಲ್ಲದ ಈ ಹೇಳಿಕೆಗೆ ಪರಿಸರ ಪ್ರೇಮಿಗಳು, ವೈದ್ಯರು ಮತ್ತು ವಿಪಕ್ಷ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದ ಭುಗಿಲೆದ್ದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಶಾಸಕಿ ಪಾಪಿಯಾ ಅಧಿಕಾರಿ, "ನಮ್ಮ ಅಜ್ಜಿ ಮತ್ತು ಹಳೆಯ ತಲೆಮಾರಿನವರು ಈ ರೀತಿ ಹೇಳುತ್ತಿದ್ದುದನ್ನು ನಾನು ಸಣ್ಣವಳಿದ್ದಾಗ ಕೇಳಿದ್ದೆ. ಆ ಜನಪದ ನಂಬಿಕೆಯನ್ನು ಆಧರಿಸಿ ಮಾತು ಹೇಳಿದ್ದೆನೇ ಹೊರತು ಯಾವುದೇ ವೈಜ್ಞಾನಿಕ ಪ್ರತಿಪಾದನೆ ಮಾಡುವ ಉದ್ದೇಶ ನನಗಿರಲಿಲ್ಲ. ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಅಥವಾ ಗೊಂದಲ ಉಂಟಾಗಿದ್ದರೆ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ" ಎಂದು ಹೇಳಿದ್ದಾರೆ.
ಕೊಲ್ಕತ್ತಾ, ನವೆಂಬರ್ 9: ಪಟಾಕಿಗಳನ್ನು ಸಿಡಿಸುವುದರಿಂದ ಕ್ರಿಮಿಕೀಟಗಳು ನಾಶವಾಗಿ ರೋಗಗಳು ಗುಣವಾಗುತ್ತವೆ ಎಂಬ ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಈಡಾಗಿದ್ದ ಪಶ್ಚಿಮ ಬಂಗಾಳದ ಶಾಸಕಿ ಪಾಪಿಯಾ ಅಧಿಕಾರಿ ತೀವ್ರ ಟೀಕೆಗಳ ಬೆನ್ನಲ್ಲೇ ತಮ್ಮ ಮಾತುಗಳನ್ನು ಹಿಂಪಡೆದಿದ್ದಾರೆ. ತಮ್ಮ ಹಿರಿಯರು ಹೇಳುತ್ತಿದ್ದ ಮಾತುಗಳನ್ನು ಉಲ್ಲೇಖಿಸಿ ತಾವು ಈ ರೀತಿ ಹೇಳಿದ್ದಾಗಿ ಶಾಸಕರು ಸ್ಪಷ್ಟನೆ ನೀಡಿದ್ದಾರೆ. ದೀಪಾವಳಿ ಹಾಗೂ ಕಾಳಿ ಪೂಜೆ ಆಚರಣೆಯ ವೇಳೆ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದ ಕುರಿತು ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದ್ದಾಗ ಶಾಸಕಿ ಪಾಪಿಯಾ ಅಧಿಕಾರಿ ನೀಡಿದ್ದ ಈ ವಿಚಿತ್ರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಗಾಳಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ನಾಶವಾಗುತ್ತವೆ ಹಾಗೂ ಇದರಿಂದ ಕಾಯಿಲೆಗಳು ಗುಣವಾಗುತ್ತವೆ ಎಂದು ಬಂಗಾಳದ ಬಿಜೆಪಿ ಶಾಸಕಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ವೈಜ್ಞಾನಿಕ ಆಧಾರವಿಲ್ಲದ ಈ ಹೇಳಿಕೆಗೆ ಪರಿಸರ ಪ್ರೇಮಿಗಳು, ವೈದ್ಯರು ಮತ್ತು ವಿಪಕ್ಷ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದ ಭುಗಿಲೆದ್ದ ಬೆನ್ನಲ್ಲೇ ಸ್ಪಷ್ಟನೆ ನೀಡಿದ ಶಾಸಕಿ ಪಾಪಿಯಾ ಅಧಿಕಾರಿ, “ನಮ್ಮ ಅಜ್ಜಿ ಮತ್ತು ಹಳೆಯ ತಲೆಮಾರಿನವರು ಈ ರೀತಿ ಹೇಳುತ್ತಿದ್ದುದನ್ನು ನಾನು ಸಣ್ಣವಳಿದ್ದಾಗ ಕೇಳಿದ್ದೆ. ಆ ಜನಪದ ನಂಬಿಕೆಯನ್ನು ಆಧರಿಸಿ ಮಾತು ಹೇಳಿದ್ದೆನೇ ಹೊರತು ಯಾವುದೇ ವೈಜ್ಞಾನಿಕ ಪ್ರತಿಪಾದನೆ ಮಾಡುವ ಉದ್ದೇಶ ನನಗಿರಲಿಲ್ಲ. ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಅಥವಾ ಗೊಂದಲ ಉಂಟಾಗಿದ್ದರೆ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

