ಗ್ರೇಟರ್ ನೋಯ್ಡಾದ ಸೂಪರ್‌ಟೆಕ್ ಇಕೋ ವಿಲೇಜ್ನಲ್ಲಿ ಕಲುಷಿತ ನೀರು ಕುಡಿದು 200 ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ನಾಲ್ಕು ಟವರ್‌ಗಳ ನಿವಾಸಿಗಳು, ನಿರ್ದಿಷ್ಟವಾಗಿ C-4, C-5, C-6 ಮತ್ತು C-7 ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿದಾಗ ಸಮಸ್ಯೆ ಬೆಳಕಿಗೆ ಬಂದಿತ್ತು. 160 ಕ್ಕೂ ಹೆಚ್ಚು ಫ್ಲಾಟ್‌ಗಳನ್ನು ಹೊಂದಿರುವ 20 ಅಂತಸ್ತಿನ ಕಟ್ಟಡಗಳನ್ನು ಒಳಗೊಂಡಿರುವ ಈ ಗೋಪುರಗಳು ಕಳೆದ ವಾರ ಮೂರು ದಿನಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ನಿವಾಸಿಗಳು ಕಲುಷಿತ ನೀರು ಕುಡಿಯುವಂತಾಗಿದೆ.
ಗ್ರೇಟರ್ ನೋಯ್ಡಾ ಸೆಪ್ಟೆಂಬರ್ 03: ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ (Greater Noida) ಸೂಪರ್‌ಟೆಕ್ ಇಕೋ ವಿಲೇಜ್ 2ನಲ್ಲಿ (Supertech Eco Village ) 200 ಕ್ಕೂ ಹೆಚ್ಚು ನಿವಾಸಿಗಳು ಕಲುಷಿತ ನೀರಿನಿಂದ ಅಸ್ವಸ್ಥರಾಗಿದ್ದಾರೆ ಎಂದು ಸೋಮವಾರ ವರದಿಯಾಗಿದೆ. ಇಲ್ಲಿನ ಮಕ್ಕಳಿಗೆ ವಾಂತಿ ಮತ್ತು ಅತಿಸಾರದಂತಹ ರೋಗಲಕ್ಷಣಳು ಕಾಣಿಸಿಕೊಂಡಿವೆ. ಟ್ಯಾಂಕ್ ಸ್ವಚ್ಛಗೊಳಿಸದೇ ಇದ್ದ ಕಾರಣ ಇದು ಸಂಭವಿಸಿದೆ ಎಂದು ನಿವಾಸಿಗಳು ದೂರಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ನಾಲ್ಕು ಟವರ್‌ಗಳ ನಿವಾಸಿಗಳು, ನಿರ್ದಿಷ್ಟವಾಗಿ C-4, C-5, C-6 ಮತ್ತು C-7 ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿದಾಗ ಸಮಸ್ಯೆ ಬೆಳಕಿಗೆ ಬಂದಿತ್ತು. 160 ಕ್ಕೂ ಹೆಚ್ಚು ಫ್ಲಾಟ್‌ಗಳನ್ನು ಹೊಂದಿರುವ 20 ಅಂತಸ್ತಿನ ಕಟ್ಟಡಗಳನ್ನು ಒಳಗೊಂಡಿರುವ ಈ ಗೋಪುರಗಳು ಕಳೆದ ವಾರ ಮೂರು ದಿನಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣ ನಿವಾಸಿಗಳು ಕಲುಷಿತ ನೀರು ಕುಡಿಯುವಂತಾಗಿದೆ.
ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ. ಸೋಮವಾರ ಬೆಳಗ್ಗೆ ಭೇದಿ, ಜ್ವರ ಮತ್ತು ವಾಂತಿಯಿಂದ ತಮ್ಮ ಮೂರು ವರ್ಷದ ಮಗ ಅಸ್ವಸ್ಥಗೊಂಡಿದ್ದು , ಇದೀಗ ನೋಯ್ಡಾದ ಸುರ್ಭಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ನಿವಾಸಿ ಅಭಿರಾಮ್ ಸಿಂಗ್ ಹೇಳಿದ್ದಾರೆ.
ದೂರುಗಳಿಗೆ ಸ್ಪಂದಿಸಿದ ಸೊಸೈಟಿ ನಿರ್ವಹಣಾ ತಂಡ ನೀರಿನ ತೊಟ್ಟಿಗಳನ್ನು ಪರಿಶೀಲಿಸಿ, ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದ್ದು , ಯಾವುದೇ ಲೋಪ ಕಂಡುಬಂದಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಕಾರಣರಾದವರು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಂಡ ಹೇಳಿದೆ.
“ನನ್ನ ಮಗ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಿಂದ ಬಂದು ಅನಾರೋಗ್ಯದ ಬಗ್ಗೆ ದೂರು ನೀಡಿದ್ದಾನೆ. ಅವ ಎರಡು ಬಾರಿ ವಾಂತಿ ಮಾಡಿಕೊಂಡಿದ್ದಾನೆ. ಸ್ವಲ್ಪ ಸಮಯದ ನಂತರ, 8 ವರ್ಷ ವಯಸ್ಸಿನ ನನ್ನ ಕಿರಿಯ ಮಗ ಅನಾರೋಗ್ಯದ ಬಗ್ಗೆ ದೂರು ನೀಡಲು ಪ್ರಾರಂಭಿಸಿದನು” ಎಂದು ಸೊಸೈಟಿಯ ನಿವಾಸಿಯೊಬ್ಬರನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
“ನಾನು ರಾತ್ರಿ 9 ಗಂಟೆಗೆ ಕಚೇರಿಯಿಂದ ಹಿಂತಿರುಗಿದೆ. ರಾತ್ರಿ 11 ರ ಸುಮಾರಿಗೆ ವಾಕರಿಕೆ ಅನುಭವಿಸಿದೆ. ನೀರು ಕಲುಷಿತಗೊಂಡಿರುವುದರಿಂದ ಹೀಗಾಗಿದೆ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಸೊಂಟಕ್ಕೆ ಕಬ್ಬಿಣದ ಸರಪಳಿ ಕಟ್ಟಿಕೊಂಡು ಪೊಲೀಸ್ ಪರೀಕ್ಷೆಗೆ ಹಾಜರಾದ ಅಭ್ಯರ್ಥಿ
ಭಾನುವಾರ ರಾತ್ರಿಯಿಂದ ಮಕ್ಕಳಿಗೆ ವಾಂತಿ, ಭೇದಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿತು. “ಮೊದಲಿಗೆ, ಮಕ್ಕಳು ಹೊರಗಡೆ ಏನಾದರೂ ತಿಂದಿದ್ದಾರೆ ಎಂದು ನಾವು ಭಾವಿಸಿದ್ದೇವೆ. ಆದರೆ ನಾವು ಸೊಸೈಟಿಯಲ್ಲಿ ನ ಹೆಚ್ಚಿನ ಜನರೊಂದಿಗೆ ಮಾತನಾಡುತ್ತಿದ್ದಂತೆ, ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಗೊತ್ತಾಯಿತು ಎಂದು ಅಲ್ಲಿನ ವ್ಯಕ್ತಿಯೊಬ್ಬರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಎರಡು ದಿನಗಳ ಹಿಂದೆ ಸೊಸೈಟಿಯ ನೀರಿನ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿದ ನಂತರ ದೂರುಗಳು ಬರಲಾರಂಭಿಸಿದವು ಎಂದು ಅವರು ಹೇಳಿದರು. ಇದೀಗ ಘಟನೆಯ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:23 pm, Tue, 3 September 24