ಭಾರತದ ಯಾವ ರಾಜ್ಯವು ಮದ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡುತ್ತೆ?
ಅನೇಕ ನಗರಗಳಲ್ಲಿ ಮದ್ಯದ ಅಂಗಡಿಗಳ ಹೊರಗೆ ಉದ್ದನೆಯ ಸರತಿ ಸಾಲುಗಳು ಕಂಡುಬರುತ್ತವೆ. ಕೇರಳದಲ್ಲಿ ಜನರು ಮದ್ಯ ಖರೀದಿಸಲು ಸರತಿಯಲ್ಲಿ ನಿಂತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತದೆ, ಆದರೆ ಜನರು ಮದ್ಯಕ್ಕಾಗಿ ಹೆಚ್ಚು ಹಣವನ್ನು ಎಲ್ಲಿ ಖರ್ಚು ಮಾಡುತ್ತಾರೆ ಎಂಬುದೇ ಮುಖ್ಯ ಪ್ರಶ್ನೆ. ಮತ್ತು ಮದ್ಯಕ್ಕಾಗಿ ಕಡಿಮೆ ಹಣವನ್ನು ಖರ್ಚು ಮಾಡುವ ರಾಜ್ಯ ಯಾವುದು?. ಹಣಕಾಸು ಸಚಿವಾಲಯದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿಯ (ಎನ್‌ಐಪಿಎಫ್‌ಪಿ) ಅಧ್ಯಯನದ ಪ್ರಕಾರ, ಆಂಧ್ರಪ್ರದೇಶ ಮತ್ತು ತೆಲಂಗಾಣವು ದೇಶದಲ್ಲೇ ಮದ್ಯದ ಮೇಲೆ ಅತಿ ಹೆಚ್ಚು ಖರ್ಚು ಮಾಡುವ ರಾಜ್ಯಗಳು ಎಂದು ಹೇಳಲಾಗಿದೆ.
ಭಾರತದಲ್ಲಿ ಮದ್ಯಕ್ಕಾಗಿ ಅತಿ ಹೆಚ್ಚು ಹಣ ಖರ್ಚು ಮಾಡುವ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿ (NIPFP) ಪ್ರಕಟಿಸಿದ ಆಲ್ಕೊಹಾಲ್ಯುಕ್ತ ಪಾನೀಯಗಳಿಂದ ಬರುವ ತೆರಿಗೆ ಆದಾಯ ಸಂಗ್ರಹ ವರದಿಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.
ತೆಲಂಗಾಣ ಮತ್ತು ಆಂಧ್ರಪ್ರದೇಶದ ಜನರು ಮದ್ಯಕ್ಕಾಗಿ ಅತಿ ಹೆಚ್ಚು ಹಣವನ್ನು ವ್ಯಯಿಸುತ್ತಾರೆ ಎಂದು ವರದಿ ಹೇಳಿದೆ. ಜನರು ವರ್ಷಕ್ಕೆ ತಾವು ಮಾಡುವ ಖರ್ಚಿನಲ್ಲಿ ಯಾವ ಪ್ರಮಾಣದ ಹಣವನ್ನು ಮದ್ಯಕ್ಕಾಗಿ ಮೀಸಲಿಟ್ಟಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ತೆಲಂಗಾಣದ ಜನರು ಮದ್ಯಕ್ಕಾಗಿ ವರ್ಷಕ್ಕೆ ಸರಾಸರಿ 1,623 ರೂ. (2022-23) ಖರ್ಚು ಮಾಡುತ್ತಾರೆ. ಆಂಧ್ರಪ್ರದೇಶದ ಜನರು ಸರಾಸರಿ 1306 ರೂ. ವ್ಯಯಿಸುತ್ತಾರೆ. ಛತ್ತೀಸ್‌ಗಢ 1,227 ರೂ, ಪಂಜಾಬ್ 1,245 ರೂ. ಮತ್ತು ಒಡಿಶಾ 1,156 ರೂ. ಕೇರಳ ಸರಾಸರಿ 379 ರೂ. ಈ ಪಟ್ಟಿಯಲ್ಲಿ ಕೇರಳ ಒಂಬತ್ತನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸೇವಿಸುವ ಒಟ್ಟು ಮದ್ಯವನ್ನು ಜನಸಂಖ್ಯೆಯಿಂದ ಭಾಗಿಸಿ ತಲಾವಾರು ಮದ್ಯ ಸೇವನೆಯನ್ನು ಲೆಕ್ಕಹಾಕಲಾಗುತ್ತದೆ.
ಮತ್ತಷ್ಟು ಓದಿ: Fatty Liver: ಮದ್ಯಪಾನ ಮಾಡದಿದ್ದರೂ ಫ್ಯಾಟಿ ಲಿವರ್ ಕಾಯಿಲೆ ಬರಲು ಕಾರಣವೇನು?
ಎನ್‌ಎಸ್‌ಎಸ್‌ಒ (ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ), ಕೇರಳ ( 486 ರೂ.), ಹಿಮಾಚಲ ಪ್ರದೇಶ (457 ರೂ.), ಪಂಜಾಬ್ (ರೂ. 453), ತಮಿಳುನಾಡು (ರೂ. 330), ರಾಜಸ್ಥಾನ (ರೂ. 308) ಸಮೀಕ್ಷೆಯ ಮಾಹಿತಿಯ ಪ್ರಕಾರ ಈ ಕೆಳಗಿನಂತಿವೆ.
ಮದ್ಯದ ಮೇಲೆ ಅತಿ ಕಡಿಮೆ ಅಬಕಾರಿ ಸುಂಕವನ್ನು ಹೇರುವ ರಾಜ್ಯ ಜಾರ್ಖಂಡ್ (67%) ಮತ್ತು ಅತಿ ಹೆಚ್ಚು ಗೋವಾ (722%). 2014 15ನೇ ಹಣಕಾಸು ವರ್ಷದಲ್ಲಿ ತೆಲಂಗಾಣದ ತಲಾವಾರು ವೆಚ್ಚವು ಆಲ್ಕೊಹಾಲ್ಯುಕ್ತ ಪಾನೀಯಗಳ ಮೇಲೆ 745 ರೂ. ಆದರೆ, 2022-23ರಲ್ಲಿ 1,623 ರೂ. 2014-15ರಲ್ಲಿ ಕೇರಳದಲ್ಲಿ ಮದ್ಯಕ್ಕೆ 1020 ರೂಪಾಯಿ ಖರ್ಚು ಮಾಡಿದ್ದು, 2022-23ರಲ್ಲಿ 379 ರೂಪಾಯಿಗೆ ಇಳಿಕೆಯಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.
ಅಬಕಾರಿ ಸುಂಕ ಸಂಗ್ರಹದಲ್ಲಿ ತೆಲಂಗಾಣವೂ ಮುಂದಿದೆ. ಎಲ್ಲಾ ರಾಜ್ಯಗಳು ಆಲ್ಕೊಹಾಲ್ಯುಕ್ತ ಪಾನೀಯಗಳ ಮೇಲೆ ರಾಜ್ಯ ಅಬಕಾರಿ ಮತ್ತು ಮಾರಾಟ ತೆರಿಗೆಯನ್ನು ಹೊಂದಿವೆ.
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ, ಒಟ್ಟು ತೆರಿಗೆ ಸಂಗ್ರಹದ ಶೇ.78 ಕ್ಕಿಂತ ಹೆಚ್ಚು ಮಾರಾಟ ತೆರಿಗೆ ಅಥವಾ ಹೆಚ್ಚುವರಿ ಅಬಕಾರಿ ಸುಂಕದಿಂದ ಬರುತ್ತದೆ, ಆದರೆ ಅಸ್ಸಾಂ, ಮಹಾರಾಷ್ಟ್ರ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳಕ್ಕೆ, ಸಂಯೋಜಿತ ತೆರಿಗೆ ಸಂಗ್ರಹದಲ್ಲಿ ಮಾರಾಟ ತೆರಿಗೆಯ ಸರಾಸರಿ ಪಾಲು ಇದೆ.
2014-15ನೇ ಸಾಲಿನಲ್ಲಿ ಯಾವ ರಾಜ್ಯದಲ್ಲಿ ಮದ್ಯ ಖರೀದಿ ಪ್ರಮಾಣ ಹೆಚ್ಚಿತ್ತೋ ಆ ಭಾಗಗಳಲ್ಲಿ 2022-23ನೇ ಸಾಲಿನಲ್ಲಿ ಕಡಿಮೆಯಾಗಿದೆ. ಹಾಗೆಯೇ ಯಾವ ಭಾಗದಲ್ಲಿ ಮದ್ಯ ಖರೀದಿ ಪ್ರಮಾಣ ಕಡಿಮೆ ಇತ್ತೋ ಅದೀಗ ಹೆಚ್ಚಾಗಿರುವುದು ಗಮನಾರ್ಹ ಸಂಗತಿಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Tue, 3 September 24