
ಇಸ್ಲಾಮಾಬಾದ್, (ಮೇ 11): ಭಾರತ (India) ಹಾಗೂ ಪಾಕಿಸ್ತಾನದ (Pakistan) ನಡುವೆ ಏರ್ಪಟ್ಟಿದ್ದು, ಈ ದಾಳಿ ಪ್ರತಿದಾಳಿಯಲ್ಲಿ ಪಾಕಿಸ್ತಾನ ದೊಡ್ಡ ನಷ್ಟ ಅನುಭವಿಸಿದೆ ಎಂದು ವರದಿಯಿಂದ ತಿಳಿದುಬಂದಿದೆ. ಈ ಮೂಲಕಗಳ ಪ್ರಕಾರ ಭಾರತದ ಕ್ಚಿಪಣಿ ದಾಳಿಗೆ ಪಾಕಿಸ್ತಾನದ 10 ಸೇನಾ ನೆಲೆಗಳು ಧ್ವಂಸಗೊಂಡಿವೆ. ಅದರಲ್ಲೂ ಪ್ರಮುಖವಾಗಿ ಪಾಕಿಸ್ತಾನ ಮಿಲಿಟರಿಯ ಅತಿ ಮುಖ್ಯ ಏರ್ಬೇಸ್ ಆಗಿರುವ ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ವಾಯುನೆಲೆ (Rahim Yar Khan airbase) ಛಿದ್ರ ಛಿದ್ರವಾಗಿದೆ ಎಂದು ವರದಿಗಳು ತಿಳಿಸಿವೆ. ಇದಕ್ಕೆ ಪೂಕರವೆಂಬಂತೆ ಇದೀಗ ನೂರ್ ಖಾನ್ (Nur Khan) ವಾಯುನೆಲೆ ಮೇಲೆ ಹಾರಿಸಿದ್ದ ಕ್ಷಿಪಣಿಯ ಸ್ಯಾಟ್‌ಲೈಟ್ ಚಿತ್ರಗಳು ಬಿಡುಗಡೆಯಾಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಮ್ ಯಾರ್ ಖಾನ್ ವಾಯುನೆಲೆಯ ಮೇಲೆ ಭಾರತ ಸೇನಾಪಡೆ ದಾಳಿ ನಡೆಸಿದ್ದು, ಭಾರತದ ಕ್ಷಿಪಣಿಗೆ ರಹೀಮ್ ಯಾರ್ ಖಾನ್ ವಾಯುನೆಲೆಗೆ ಹಾನಿಯಾಗಿದೆ. ಈ ಸಂಬಂಧ ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರ (ಪಿಸಿಎಎ) ಶನಿವಾರ ಸಂಜೆ ಹೊರಡಿಸಿದ ನೋಟಿಸ್ ನಲ್ಲಿ ತಿಳಿಸಲಾಗಿದೆ. ಭಾರತ ಮಿಲಿಟರಿ ದಾಳಿ ಹಿನ್ನೆಲೆಯಲ್ಲಿ ವಾಯುನೆಲೆಯಲ್ಲಿರುವ ಏಕೈಕ ರನ್‌ವೇಯನ್ನು ಒಂದು ವಾರದವರೆಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಇಸ್ಲಾಮಾಬಾದ್ನಿಂದ 10 ಕಿಮೀ ದೂರದಲ್ಲಿದೆ. ಪಾಕಿಸ್ತಾನದ ಮಿಲಿಟರಿಯ ಮುಖ್ಯ ಸಾಗಣೆ ಕೇಂದ್ರಗಳಲ್ಲಿ ನೂರ್ ಖಾನ್ ವಾಯುನೆಲೆ ಸಹ ಒಂದು. ಯುದ್ಧವಿಮಾನಗಳಿಗೆ ರೀಫುಯಲೆಂಗ್ ವ್ಯವಸ್ಥೆ ಹೊಂದಿದೆ. ಸೇನೆಯ ಹೆಡ್ಕ್ವಾರ್ಟರ್ಸ್ ಪಕ್ಕದಲ್ಲೇ ಇದೆ. ಪಾಕಿಸ್ತಾನದ ನ್ಯಾಷನಲ್ ಏರೋಸ್ಪೇಸ್ ಸೆಂಟರ್ ಇರುವ ಬೇನಜೀರ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಕೂಡ ಸಮೀಪದಲ್ಲಿದೆ.
ನೂರ್ ಖಾನ್ ಮಾತ್ರವಲ್ಲ, ಚಕ್ಲಾಲ, ಮುರಿದ್, ರಫಿಕಿ, ರಹೀಂ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ ಮತ್ತಿತರ ವಾಯುನೆಲೆಗಳ ಮೇಲೆ ಭಾರತ ನಿಖರವಾಗಿ ಕ್ಷಿಪಣಿ ದಾಳಿ ಮಾಡಿದ್ದು ಪಾಕಿಸ್ತಾನವನ್ನು ಕಂಗೆಡೆಸಿತ್ತು. ನೂರ್ ಖಾನ್ ನೆಲೆಯಲ್ಲಿ ಎರಡು ಸ್ಫೋಟಗಳಾದವು. ಹೀಗೇ ಮುಂದುವರಿದಿದ್ದಲ್ಲಿ ಪಾಕಿಸ್ತಾನದ ನ್ಯೂಕ್ಲಿಯಾರ್ ಕಮಾಂಡ್ ಅಥಾರಿಟಿ ಮಣ್ಣುಪಾಲಾಗುವ ಸಾಧ್ಯತೆ ಇತ್ತು. ಹೀಗಾಗಿ ಪಾಕ್ ಕದನ ವಿರಾಮಕ್ಕಾಗಿ ಅಮೆರಿಕದ ಮೊರೆ ಹೋಗಿತ್ತು ಎನ್ನುವುದು ತಿಳಿದುಬಂದಿದೆ.