AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Parliament: ಸರ್ಕಾರವು ಪ್ರಬುದ್ಧ ಆಡಳಿತದ ಬದಲು ಕಪಟ ವಿಚಾರಗಳಿಗೆ ಜೋತುಬಿದ್ದಿದೆ: ಶಶಿ ತರೂರ್

Shashi Tharoor Speech In Lok Sabha: ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯವನ್ನು ಕೊಟ್ಟಿದ್ದರು. ಮೋದಿಯವರು ಈ ಬಜೆಟ್​ನಲ್ಲಿ ನಮಗೆ 'ನಾ ಜವಾನ್ ನಾ ಕಿಸಾನ್' ಎಂಬ ಘೋಷವಾಕ್ಯ ಕೊಟ್ಟಿದ್ದಾರೆ ಎಂದಿದ್ದಾರೆ ತರೂರ್.

Parliament: ಸರ್ಕಾರವು ಪ್ರಬುದ್ಧ ಆಡಳಿತದ ಬದಲು ಕಪಟ ವಿಚಾರಗಳಿಗೆ ಜೋತುಬಿದ್ದಿದೆ: ಶಶಿ ತರೂರ್
ಲೋಕಸಭೆಯಲ್ಲಿ ಶಶಿ ತರೂರ್ ಭಾಷಣ
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 10, 2021 | 10:15 PM

Share

ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸಿದ ನಂತರ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ ಹಲವು ಅಭಿಪ್ರಾಯಗಳನ್ನು ವಿಪಕ್ಷ ನೇತಾರರು ಖಂಡಿಸಿದರು. ಮೋದಿ ಭಾಷಣ ಮುಗಿದ ಕೂಡಲೇ ಬಜೆಟ್ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ರಿಕೆಟ್ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ಈ ವರ್ಷದ ಆರಂಭದಲ್ಲಿ ಬ್ರಿಸ್ಬೇನ್‌ನಲ್ಲಿ ನಾವು ರೋಚಕ ಗೆಲುವು ಕಂಡಿದ್ದೇವೆ. ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳು ಧ್ವಂಸವಾಗಿವೆ. ಕೇಂದ್ರ ಸರ್ಕಾರವು ಪ್ರಬುದ್ಧ ರೀತಿಯಲ್ಲಿ ಆಡಳಿತ ನಡೆಸಲು ಗಮನ ನೀಡುವುದಕ್ಕಿಂತಲೂ, ಕಪಟ ದಾರಿಗಳಿಗೆ ಜೋತುಬಿದ್ದಿದೆ ಎಂದಿದ್ದಾರೆ.

ಬಜೆಟ್ ಮಧ್ಯಮ ವರ್ಗದ ಜನರನ್ನು ಕಡೆಗಣಿಸಿದೆ. ನೀವು ಇಂಧನ ಬೆಲೆ ಏರಿಕೆ ಮಾಡಿದಿರಿ. 2014ರಿಂದ ಪೆಟ್ರೋಲ್ ಮೇಲಿನ ಸೀಮಾ ಸುಂಕ ಶೇ 348ಕ್ಕೇರಿದೆ. ಶೀಘ್ರದಲ್ಲಿಯೇ ಬ್ಯಾಂಕ್​ಗಳೂ ಇಂಧನ ಖರೀದಿಗೆ ಸಾಲ ನೀಡುವಂತಾಗಬಹುದು ಎಂದಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯವನ್ನು ಕೊಟ್ಟಿದ್ದರು. ಮೋದಿಯವರು ಈ ಬಜೆಟ್​ನಲ್ಲಿ ನಮಗೆ ‘ನಾ ಜವಾನ್ ನಾ ಕಿಸಾನ್’ ಎಂಬ ಘೋಷವಾಕ್ಯ ಕೊಟ್ಟಿದ್ದಾರೆ ಎಂದಿದ್ದಾರೆ ತರೂರ್.

ರೈತರ ಭಾವನೆಗಳನ್ನು ನಾವು ಗೌರವಿಸುತ್ತೇವೆ. ಪಂಜಾಬ್​ನಲ್ಲಿ ರೈತರು ಪ್ರತಿಭಟನೆ ಆರಂಭಿಸಿದಾಗಲೇ ನಾವು ರೈತರೊಂದಿಗೆ ಮಾತುಕತೆ ನಡೆಸಿದ್ದೆವು ಎಂದು ಮೋದಿ ಹೇಳಿದ್ದರು. ಆದರೆ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆ ಕೇಂದ್ರ ಸರ್ಕಾರ ಸರಿಯಾದ ರೀತಿಯಲ್ಲಿ ಸಮೀಪಿಸಿಲ್ಲ ಎಂದು ತರೂರ್ ಟೀಕಿಸಿದ್ದಾರೆ.

ರೈತರ ಸಾವಿನ ಬಗ್ಗೆ ಮೋದಿ ಮಾತಾಡಿಲ್ಲ: ಹರ್ ಸಿಮ್ರತ್ ಕೌರ್ ಬಾದಲ್ ಪ್ರತಿಭಟನಾ ನಿರತ ರೈತರ ಸಾವಿನ ಬಗ್ಗೆ ಮೋದಿ ತಮ್ಮ ಭಾಷಣದಲ್ಲಿ ಹೇಳದೇ ಇರುವುದು ದುರದೃಷ್ಟಕರ ಎಂದು ಅಕಾಲಿದಳದ ಸಂಸದೆ ಹರ್​ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ. ರೈತರು ಪಂಜಾಬ್ ನಲ್ಲಿ ಪ್ರತಿಭಟನೆ ಮಾಡುತ್ತಿರುವಾಗ ಯಾರಾದರೂ ಸಚಿವರು ಅಲ್ಲಿಗೆ ಹೋಗಿದ್ದಾರೆಯೇ? ಕಳೆದ 75 ದಿನಗಳಿಂದ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲಿಗೆ ಯಾರಾದರೂ ಹೋಗಿದ್ದೀರಾ ಎಂದು ಬಾದಲ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:  Parliament Session: ಜನರನ್ನು ಯಾಚಕರನ್ನಾಗಿಯೇ ಉಳಿಸುವುದು ನಮ್ಮ ಉದ್ದೇಶವಲ್ಲ; ನರೇಂದ್ರ ಮೋದಿ