Rahul Gandhi: ನನ್ನ ಹೇಳಿಕೆ ಸರ್ಕಾರ ಅಥವಾ ದೇಶದ ಬಗ್ಗೆ ಆಗಿರಲಿಲ್ಲ, ನಾನು ಏನನ್ನೂ ಹೇಳಿಲ್ಲ: ರಾಹುಲ್ ಗಾಂಧಿ
ನನ್ನ ಹೇಳಿಕೆ ಸರ್ಕಾರ ಅಥವಾ ದೇಶದ ವಿರುದ್ಧವಾಗಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಲಂಡನ್ಗೆ ತೆರಳಿದ್ದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ,
ನನ್ನ ಹೇಳಿಕೆ ಸರ್ಕಾರ ಅಥವಾ ದೇಶದ ವಿರುದ್ಧವಾಗಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಲಂಡನ್ಗೆ ತೆರಳಿದ್ದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ, ನಾವು ಮಾತನಾಡುವಾಗ ಮೈಕ್ ಆಫ್ ಮಾಡುತ್ತಾರೆ, ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎನ್ನುವ ಹೇಳಿಕೆ ನೀಡಿದ್ದರು. ಇದೀಗ ಈ ಕುರಿತು ಸಮಜಾಯಿಷಿ ನೀಡಿರುವ ಅವರು ಆಡಳಿತಾರೂಢ ಬಿಜೆಪಿ ಹೇಳಿಕೊಳ್ಳುವ ರೀತಿಯಲ್ಲಿ ನಾನು ಮಾತನಾಡಿಲ್ಲ ಸರ್ಕಾರ ಹಾಗೂ ದೇಶದ ಕುರಿತು ಏನೂ ಮಾತಾಡಿಲ್ಲ ಎಂದಿದ್ದಾರೆ.
ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಎತ್ತಿದ್ದಾರೆ ಎನ್ನುವ ಕಾರಣಕ್ಕೆ ರಾಷ್ಟ್ರವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಅವರ ವಿದೇಶಿ ಹೇಳಿಕೆಗೆ ಕೋಲಾಹಲ ಉಂಟಾಗಿದೆ. ಸಂಸತ್ತಿನಲ್ಲಿ ನಿರಂತರ ಹೋರಾಟದ ನಡೆಯುತ್ತಿದೆ. ರಾಹುಲ್ ಗಾಂಧಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಕೇಳುತ್ತಿದೆ.
ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮೌನ ಮುರಿದಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಭೆಯಲ್ಲಿ, ಅವರು ಲಂಡನ್‌ನಲ್ಲಿ ನೀಡಿದ ಹೇಳಿಕೆಗಳನ್ನು ಸ್ಪಷ್ಟಪಡಿಸಿದರು ಮತ್ತು ಅವರ ಹೇಳಿಕೆಯು ವ್ಯಕ್ತಿಯ ಬಗ್ಗೆ ಎಂದು ಹೇಳಿದರು. ಇದು ಸರ್ಕಾರ ಅಥವಾ ದೇಶದ ಬಗ್ಗೆ ಅಲ್ಲ. ಲಂಡನ್ ಹೇಳಿಕೆ ವಿಚಾರವನ್ನು ಬಿಜೆಪಿ ಸಂಸದರು ಪ್ರಸ್ತಾಪಿಸಿದಾಗ ರಾಹುಲ್ ಈ ಸ್ಪಷ್ಟನೆ ನೀಡಿದ್ದಾರೆ.
ಮತ್ತಷ್ಟು ಓದಿ: Rahul Gandhi: ನಾನು ಲಂಡನ್‌ನಲ್ಲಿ ಭಾರತದ ವಿರುದ್ಧ ಏನನ್ನೂ ಹೇಳಿಲ್ಲ: ರಾಹುಲ್ ಗಾಂಧಿ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಯ ಸಭೆಯು ಶನಿವಾರ (ಮಾರ್ಚ್ 18) ಭಾರತದ ಜಿ 20 ಅಧ್ಯಕ್ಷತೆಯಲ್ಲಿ ನಡೆಯಿತು. ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷಗಳ ಎಲ್ಲಾ ನಾಯಕರು ಇಲ್ಲಿ ಉಪಸ್ಥಿತರಿದ್ದರು. ಈ ವೇಳೆ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯಿತು.
ರಾಹುಲ್ ವಿದೇಶದಲ್ಲಿ ನೀಡಿರುವ ಹೇಳಿಕೆಗಳಿಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಇದಾದ ನಂತರವೇ ರಾಹುಲ್ ತಮ್ಮ ಸ್ಪಷ್ಟೀಕರಣ ಹೇಳಿಕೆ ನೀಡಿದ್ದಾರೆ.
ಸಭೆಯಲ್ಲಿ ಏನಾಯಿತು ಆಡಳಿತಾರೂಢ ಬಿಜೆಪಿ ಹೇಳಿಕೊಳ್ಳುವ ರೀತಿಯಲ್ಲಿ ನಾನು ಮಾತನಾಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ಸಂಸದರೊಬ್ಬರು ರಾಹುಲ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾತನಾಡಲು ಸಭೆ ಸೂಕ್ತ ವೇದಿಕೆಯಲ್ಲ ಎಂದಿದ್ದಾರೆ. ಸಭೆಯಲ್ಲಿ ಉಪಸ್ಥಿತರಿದ್ದ ಇತರ ಕೆಲವು ಸಂಸದರು ಕೂಡ ಇದನ್ನೇ ಹೇಳಿದರು, ಆದರೆ ವಿರೋಧ ಪಕ್ಷದ ನಾಯಕರು ರಾಹುಲ್ ಗಾಂಧಿ ಅವರ ಸ್ಪಷ್ಟೀಕರಣದ ಹಕ್ಕನ್ನು ಬೆಂಬಲಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ