AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali Telemedicine: ಪತಂಜಲಿ ಮತ್ತೊಂದು ದೈತ್ಯ ಹೆಜ್ಜೆ; ವಿಶ್ವದ ಅತಿದೊಡ್ಡ ಆಯುರ್ವೇದ ಟೆಲಿಮೆಡಿಸಿನ್ ಸೆಂಟರ್​​ಗೆ ಚಾಲನೆ

Baba Ramdev's Patanjali Revolutionizes Ayurveda with Telemedicine: ಪತಂಜಲಿ ಆಯುರ್ವೇದವು ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಆಯುರ್ವೇದ ಟೆಲಿಮೆಡಿಸಿನ್ ಪ್ಲಾಟ್‌ಫಾರ್ಮ್ ಅನ್ನು ಉದ್ಘಾಟಿಸಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ಈ ಯೋಜನೆಯನ್ನು ಉದ್ಘಾಟಿಸಿದರು. ಉಚಿತ ಆನ್‌ಲೈನ್ ಸಮಾಲೋಚನೆ, ಅನುಭವಿ ವೈದ್ಯರ ತಂಡ ಮತ್ತು ಸುಲಭ ಪ್ರವೇಶ ಇದರ ಪ್ರಮುಖ ಲಕ್ಷಣಗಳು. ಭಾರತೀಯ ಆಯುರ್ವೇದ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.

Patanjali Telemedicine: ಪತಂಜಲಿ ಮತ್ತೊಂದು ದೈತ್ಯ ಹೆಜ್ಜೆ; ವಿಶ್ವದ ಅತಿದೊಡ್ಡ ಆಯುರ್ವೇದ ಟೆಲಿಮೆಡಿಸಿನ್ ಸೆಂಟರ್​​ಗೆ ಚಾಲನೆ
ಪತಂಜಲಿ ಆಯುರ್ವೇದ ಸಂಸ್ಥೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 09, 2025 | 6:34 PM

Share

ಹರಿದ್ವಾರ, ಜುಲೈ 9: ಜಾಗತಿಕ ಆಯುರ್ವೇದ ಕ್ಷೇತ್ರದಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆ (Patanjali Ayurveda) ಮಹತ್ವದ ಹೆಜ್ಜೆ ಇರಿಸಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ನೇತೃತ್ವದ ಈ ಸಂಸ್ಥೆಯು ಇಂದು ಟೆಲಿಮೆಡಿಸಿನ್ ಕೇಂದ್ರವನ್ನು (Patanjali telemedicine center) ಉದ್ಘಾಟಿಸಿದೆ. ಇದು ವಿಶ್ವದ ಅತಿ ದೊಡ್ಡ ಮತ್ತು ಅಧಿಕೃತ ಆಯುರ್ವೇದ ಟೆಲಿಮೆಡಿಸಿನ್ ಪ್ಲಾಟ್​​ಫಾರ್ಮ್ ಎನಿಸಿದೆ. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ವೇದ ಮಂತ್ರೋಚ್ಛಾರ ಮತ್ತು ಯಜ್ಞಗಳ ಮೂಲಕ ಈ ಪತಂಜಲಿ ಟೆಲಿ ಮೆಡಿಸಿನ್ ಸೆಂಟರ್ ಅನ್ನು ಔಪಚಾರಿಕವಾಗಿ ಅನಾವರಣಗೊಳಿಸಿದರು.

ಈ ಟೆಲಿಮೆಡಿಸಿನ್ ಸೆಂಟರ್ ಹರಿದ್ವಾರದಿಂದ ಹಿಡಿದು ದೇಶದ ಪ್ರತೀ ಮನೆ ಬಾಗಿಲಿಗೂ ಭಾರತದ ಋಷಿ ಪರಂಪರೆಯನ್ನು ಹರಡುವ ದೈವಿಕ ಸಾಧನವಾಗಲಿದೆ ಎಂದು ಈ ಸಂದರ್ಭದಲ್ಲಿ ಬಾಬಾ ರಾಮದೇವ್ ಹೇಳಿದರು. ಈಗ ವೈದ್ಯಕೀಯ ಸೇವೆಗಳು ಆನ್‌ಲೈನ್‌ನಲ್ಲೇ ಲಭ್ಯ ಇದ್ದು, ಅನಾರೋಗ್ಯ ಪೀಡಿತರಿಗೆ ಇದು ಬಹಳ ಅನುಕೂಲವಾಗುತ್ತದೆ. ಪತಂಜಲಿಯ ಟೆಲಿಮೆಡಿಸಿನ್ ಕೇಂದ್ರವು ಮಾನವ ಸೇವೆಯ ಅತ್ಯುತ್ತಮ ಉಪಕ್ರಮವಾಗಿದೆ ಎಂದು ಪತಂಜಲಿ ಸಂಸ್ಥಾಪಕರು ಬಣ್ಣಿಸಿದರು.

ಇದನ್ನೂ ಓದಿ: Divya Medha Vati: ತಲೆನೋವು, ನಿದ್ರಾಹೀನತೆ ಸಮಸ್ಯೆಗೆ ಪತಂಜಲಿ ದಿವ್ಯ ಮೇಧಾ ವಟಿ ಪರಿಹಾರ

ಇದನ್ನೂ ಓದಿ
Image
ತಲೆನೋವು, ನಿದ್ರಾಹೀನತೆ ನೀಗಿಸುತ್ತೆ ಈ ಪತಂಜಲಿ ಔಷಧಿ
Image
ಪತಂಜಲಿ ದಿವ್ಯ ಶ್ವಾಸಾರಿ ವಟಿ: ಉಸಿರಾಟದ ಆರೋಗ್ಯಕ್ಕಾಗಿ ಮಾರ್ಗಸೂಚಿ
Image
ನೋವು ನಿವಾರಕವಾದ ಪತಂಜಲಿ ಸರಳ ವ್ಯಾಯಾಮಗಳು
Image
ದೇಹದ ಆರೋಗ್ಯಕ್ಕೆ ವಿವಿಧ ಮುದ್ರೆಗಳು: ಪತಂಜಲಿ ಮಾಹಿತಿ

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಆಚಾರ್ಯ ಬಾಲಕೃಷ್ಣ, ಇಂದು ಇಡೀ ಜಗತ್ತು ಯೋಗಕ್ಕಾಗಿ ಭಾರತದತ್ತ ನೋಡುತ್ತಿರುವಂತೆ, ಆಯುರ್ವೇದ ಮತ್ತು ಅದರ ಸೇವೆಗಳಿಗಾಗಿಯೂ ಜಗತ್ತು ಈಗ ಭಾರತದತ್ತ ಭರವಸೆಯಿಂದ ನೋಡುತ್ತಿದೆ ಎಂದು ಹೇಳಿದರು. ಈ ಟೆಲಿಮೆಡಿಸಿನ್ ಕೇಂದ್ರವು ಆ ದಿಕ್ಕಿನಲ್ಲಿ ಒಂದು ಉತ್ತಮ ಹೆಜ್ಜೆಯಾಗಿದೆ. ಪತಂಜಲಿ ಟೆಲಿಮೆಡಿಸಿನ್ ಕೇಂದ್ರವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ಮತ್ತು ಸುಸಂಘಟಿತ ಮಾದರಿಯಾಗಿದೆ ಎಂದು ಆಚಾರ್ಯರು ಅಭಿಪ್ರಾಯಪಟ್ಟರು.

ಪತಂಜಲಿ ಟೆಲಿಮೆಡಿಸಿನ್ ಸೆಂಟರ್​​ನ ವಿಶೇಷತೆಗಳು

  • ಉಚಿತ ಆನ್‌ಲೈನ್ ಆಯುರ್ವೇದ ಸಮಾಲೋಚನೆ
  • ಟೆಲಿಮೆಡಿಸಿನ್ ನಂಬರ್- 18002961111
  • ಉನ್ನತ ತರಬೇತಿ ಪಡೆದ ವೈದ್ಯರ ತಂಡ
  • ಪ್ರಾಚೀನ ಗ್ರಂಥಗಳಲ್ಲಿ ತಿಳಿಸಲಾಗಿರುವ ಮತ್ತು ವ್ಯಕ್ತಿಗತಗೊಳಿಸಲಾಗಿರುವ ಹರ್ಬಲ್ ಸಂಯೋಜನೆಗಳು
  • ಡಿಜಿಟಲ್ ಹೆಲ್ತ್ ರೆಕಾರ್ಡ್ ಮತ್ತು ವ್ಯವಸ್ಥಿತವಾದ ಫಾಲೋಅಪ್
  • WhatsApp, ಫೋನ್ ಮತ್ತು ವೆಬ್ ಆಧಾರಿತ ಪ್ಲಾಟ್​​ಫಾರ್ಮ್​ಗಳ ಮೂಲಕ ಸುಲಭ ಪ್ರವೇಶ

ಈ ಉಪಕ್ರಮವು ಪ್ರತಿ ಮನೆಯಲ್ಲೂ ಅಧಿಕೃತ, ಶಾಸ್ತ್ರಾಧಾರಿತ ಆಯುರ್ವೇದ ಆರೋಗ್ಯ ಪರಿಹಾರಗಳಿಗೆ ಆಧಾರವಾಗಿರುತ್ತದೆ. ದೂರದ ಪ್ರದೇಶಗಳಲ್ಲಿರುವ ಮತ್ತು ವಿದೇಶಗಳಲ್ಲಿ ವಾಸಿಸುವ ಮತ್ತು ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದಿರುವ ಜನರಿಗೆ ಈ ಟೆಲಿಮೆಡಿಸಿನ್ ಸೆಂಟರ್ ಪ್ರಯೋಜನ ಆಗಬಹುದು.

ಇದನ್ನೂ ಓದಿ: Patanjali ದಿವ್ಯ ಶ್ವಾಸಾರಿ ವಟಿ: ಪ್ರಯೋಜನಗಳು, ಡೋಸೇಜ್ ಮತ್ತು ಮುನ್ನೆಚ್ಚರಿಕೆಗಳು

ಯಜ್ಞವನ್ನು ಪೂರ್ಣಗೊಳಿಸುವುದರೊಂದಿಗೆ ಈ ಟೆಲಿಮೆಡಿಸಿನ್ ಸೆಂಟರ್ ಉದ್ಘಾಟನಾ ಸಮಾರಂಭವು ಮುಕ್ತಾಯವಾಯಿತು. ಪತಂಜಲಿ ಆಯುರ್ವೇದ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಪತಂಜಲಿ ಆಯುರ್ವೇದ ಕಾಲೇಜಿನ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(ಪತ್ರಿಕಾ ಪ್ರಕಟಣೆ)

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್