Bomb Threat: ಜೈಪುರದಲ್ಲಿ ಇಳಿಸದೇ ಚೀನಾಕ್ಕೆ ಇರಾನ್ ವಿಮಾನ ಕೊಂಡೊಯ್ದ ಪೈಲಟ್​ಗಳು, ಬಾಂಬ್ ಬೆದರಿಕೆ ಹಿಂದೆ ಹಲವು ಅನುಮಾನ

‘ಒಟ್ಟಾರೆ ಪ್ರಕರಣದಲ್ಲಿ ಏನೋ ಒಳಸಂಚು ಇದ್ದಂತೆ ಇದೆ’ ಎಂದು ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.

Bomb Threat: ಜೈಪುರದಲ್ಲಿ ಇಳಿಸದೇ ಚೀನಾಕ್ಕೆ ಇರಾನ್ ವಿಮಾನ ಕೊಂಡೊಯ್ದ ಪೈಲಟ್​ಗಳು, ಬಾಂಬ್ ಬೆದರಿಕೆ ಹಿಂದೆ ಹಲವು ಅನುಮಾನ
ಇರಾನ್ ವಿಮಾನವು ಪ್ರಸ್ತುತ ಭಾರತದ ವಾಯುಗಡಿಯಿಂದ ಆಚೆ ಹೋಗಿದೆ.Image Credit source: flightradar24
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 03, 2022 | 1:07 PM

ದೆಹಲಿ: ಇರಾನ್​ನಿಂದ ಚೀನಾಕ್ಕೆ ಹೊರಟಿದ್ದ ‘ಮಹಾನ್’ ವಾಯುಯಾನ ಸಂಸ್ಥೆಯ ಪ್ರಯಾಣಿಕರ ವಿಮಾನದಲ್ಲಿ ಬಾಂಬ್​ ಇರಿಸಲಾಗಿದೆ ಎಂಬ ಬೆದರಿಕೆ ಕೇಳಿಬಂದಿದೆ. ವಿಮಾನವು ಭಾರತದ ವಾಯುಗಡಿಯಲ್ಲಿ ಇದ್ದಾಗ ಪಾಕಿಸ್ತಾನದ ಲಾಹೋರ್ ವಿಮಾನ ನಿಯಂತ್ರಣಾ ಕೇಂದ್ರದಿಂದ (Air Traffic Controller – ATC) ದೆಹಲಿಯ ಎಟಿಸಿಗೆ ಸೋಮವಾರ (ಅ 10) ಮಾಹಿತಿ ರವಾನೆಯಾಯಿತು. ದೆಹಲಿಯ ಎಟಿಸಿ ಸಿಬ್ಬಂದಿ ತಕ್ಷಣ ವಾಯುಪಡೆಗೆ ಮಾಹಿತಿ ರವಾನಿಸಿದರು. ಸಂಭಾವ್ಯ ಅನಾಹುತ ತಪ್ಪಿಸಲು ಜೋಧ್​ಪುರ್ ಮತ್ತು ಆಗ್ರಾ ವಾಯುನೆಲೆಯಲ್ಲಿ ಯುದ್ಧವಿಮಾನಗಳನ್ನು ಸನ್ನದ್ಧ ಸ್ಥಿತಿಗೆ ತರಲಾಯಿತು.

ಇರಾನ್ ರಾಜಧಾನಿ ತೆಹರಾನ್​ನಿಂದ ಚೀನಾದ ನಗರ ಗೌನ್​ಗ್​ಝ್​ಹೌ ಎಂಬಲ್ಲಿಗೆ ವಿಮಾನವು ತೆರಳುತ್ತಿತ್ತು. ಬಾಂಬ್ ಬೆದರಿಕೆ ಕೇಳಿ ಬಂದ ನಂತರ ಸ್ವಲ್ಪ ಸಮಯ ವಿಮಾನವು ಜೈಪುರ-ದೆಹಲಿ ನಡುವಣ ವಾಯುಮಾರ್ಗದಲ್ಲಿ ಎತ್ತರ ತಗ್ಗಿಸಿಕೊಂಡಿದ್ದು ಆತಂಕ ಮೂಡಿಸಿತ್ತು. ವಿಮಾನ ಸಂಚಾರ ನಿಯಂತ್ರಕರು ದೆಹಲಿಯಲ್ಲಿ ವಿಮಾನವನ್ನು ಭೂಸ್ಪರ್ಶ (ಲ್ಯಾಂಡ್) ಮಾಡಲು ಅನುಮತಿ ನಿರಾಕರಿಸಿ, ಜೈಪುರದಲ್ಲಿ ಭೂಸ್ಪರ್ಶ ಮಾಡುವಂತೆ ಸೂಚಿಸಿದರು. ಆದರೆ ಪೈಲಟ್​ಗಳು ದೆಹಲಿಯಿಂದ ಜೈಪುರಕ್ಕೆ ತೆರಳಿದರು ನಿರಾಕರಿಸಿದಾಗ ತುಸುಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಹಂತದಲ್ಲಿ ವಿಮಾನವು ದೆಹಲಿಯಲ್ಲಿ ಲ್ಯಾಂಡ್ ಆಗುವುದನ್ನು ತಡೆಯಲು ಮತ್ತು ಭಾರತದಿಂದ ಹೊರಗೆ ಕಳಿಸಲು ವಾಯುಪಡೆಯು ಯುದ್ಧ ವಿಮಾನಗಳನ್ನು ನಿಯೋಜಿಸಲಾಯಿತು. flightradar24

ಆದರೆ ಹೆಚ್ಚಿನ ಕಾರ್ಯಾಚರಣೆಗೆ ಅವಕಾಶ ಇಲ್ಲದಂತೆ ಪೈಲಟ್​ಗಳು ವಿಮಾನವನ್ನು ಚೀನಾದತ್ತ ಕೊಂಡೊಯ್ದರು. ವಿಮಾನದಲ್ಲಿ ಇರಿಸಿರುವ ಬಾಂಬ್ ಎಂಥದ್ದು ಎಂಬ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

‘ವಿಮಾನವು ಪಾಕಿಸ್ತಾನದ ವಾಯುಗಡಿಯ ಮೂಲಕವೇ ಭಾರತಕ್ಕೆ ಬಂದಿದೆ. ಹೀಗಿರುವಾಗ ಅಲ್ಲಿಯೇ ಏಕೆ ವಿಮಾನವನ್ನು ಇಳಿಸಿಕೊಳ್ಳಲಿಲ್ಲ? ದೆಹಲಿಯಲ್ಲಿಯೇ ವಿಮಾನ ಇಳಿಸಬೇಕು ಎಂದು ಪೈಲಟ್​ಗಳು ಯೋಚಿಸಿದ್ದು ಏಕೆ? ಜೈಪುರದಲ್ಲಿ ವಿಮಾನ ಇಳಿಸಲು ನಿರಾಕರಿಸಿ ಮರಳಿ ಚೀನಾಕ್ಕೆ ಕೊಂಡೊಯ್ದದ್ದು ಏಕೆ? ಒಟ್ಟಾರೆ ಪ್ರಕರಣದಲ್ಲಿ ಏನೋ ಒಳಸಂಚು ಇದ್ದಂತೆ ಇದೆ’ ಎಂದು ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರು ‘ಇಂಡಿಯಾ ಟುಡೇ’ ಸುದ್ದಿವಾಹಿನಿಗೆ ನೀಡಿದ ಲೈವ್ ಸಂದರ್ಶನದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

Published On - 12:59 pm, Mon, 3 October 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್