PM KISAN 8th Installment LIVE: 9.5 ಕೋಟಿ ರೈತರ ಬ್ಯಾಂಕ್ ಖಾತೆಗೆ ₹19,000 ಕೋಟಿ ಬಿಡುಗಡೆ ಮಾಡಿದ ಮೋದಿ ಸರ್ಕಾರ

Skanda
| Updated By: Digi Tech Desk

Updated on:May 14, 2021 | 1:06 PM

PM Kisan Samman Nidhi Yojana, 8th Installment Announcement LIVE in Kannada: ಕಾರ್ಯಕ್ರಮದಲ್ಲಿ ಮೋದಿಯವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್ ಸಹ ಉಪಸ್ಥಿತರಿರಲಿದ್ದಾರೆ.

PM KISAN 8th Installment LIVE: 9.5 ಕೋಟಿ ರೈತರ ಬ್ಯಾಂಕ್ ಖಾತೆಗೆ ₹19,000 ಕೋಟಿ ಬಿಡುಗಡೆ ಮಾಡಿದ ಮೋದಿ ಸರ್ಕಾರ
ಸಾಂದರ್ಭಿಕ ಚಿತ್ರ

ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (ಪಿಎಂ–ಕಿಸಾನ್‌) ಯೋಜನೆಯಡಿ 8ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೊ ಕಾನ್ಫರೆನ್ಸ್‌ ವಿಧಾನದ ಮೂಲಕ ನಡೆಯುವ ಕಾರ್ಯಕ್ರಮದಲ್ಲಿ 9.5 ಕೋಟಿಗೂ ಅಧಿಕ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ₹19,000 ಕೋಟಿಗೂ ಅಧಿಕ ಮೊತ್ತವನ್ನುಪ್ರಧಾನಿ ಮೋದಿ  ವರ್ಗಾಯಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಮೋದಿಯವರು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್ ಸಹ ಉಪಸ್ಥಿತರಿರಲಿದ್ದಾರೆ.

LIVE NEWS & UPDATES

The liveblog has ended.
  • 14 May 2021 12:27 PM (IST)

    ಕೊವಿಡ್ ಲಸಿಕೆ ಆದಷ್ಟು ಬೇಗನೆ ಎಲ್ಲ ನಾಗರಿಕರನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ

    ಕೊವಿಡ್ ಲಸಿಕೆ ಆದಷ್ಟು ಬೇಗನೆ ನಾಗರಿಕರನ್ನು ತಲುಪುವಂತೆ ರಾಜ್ಯ ಸರ್ಕಾರಗಳ ಜೊತೆಗೆ ಕೇಂದ್ರವು ಸರ್ಕಾರ ಪ್ರಯತ್ನಿಸುತ್ತಿದೆ.   ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸಿ, ಎರಡು ಗಜ ಶಾರೀರಿಕ ಅಂತರ ಕಾಪಾಡಿ. ಕೊವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ನಮ್ಮ ಹೋರಾಟ ಮುಂದುವರಿದಿದೆ ಎಂದು  ಹೇಳಿ ಮೋದಿ ಭಾಷಣ ಮುಗಿಸಿದ್ದಾರೆ.

  • 14 May 2021 12:24 PM (IST)

    ಮಾಸ್ಕ್ ಸರಿಯಾಗಿ ಧರಿಸಿ, ನಿರ್ಲಕ್ಷ್ಯ ಸಲ್ಲದು: ಮೋದಿ

    ಜನರು ಮಾಸ್ಕ್ ಅನ್ನು ಸರಿಯಾಗಿ ಧರಿಸಿ ಎಂದು ನಾನು ಒತ್ತಾಯಿಸುತ್ತೇನೆ. ವೈದ್ಯಕೀಯ ವಿಧಾನವನ್ನು ವಿಳಂಬ ಮಾಡಬೇಡಿ, ನಿಮಗೆ ಮೊದಲ ರೋಗಲಕ್ಷಣ ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗಿ. ಕೊವಿಡ್ ಲಸಿಕೆ ವೈರಸ್ ಅನ್ನು ಸೋಲಿಸುವ ಒಂದು ಮಾರ್ಗವಾಗಿದೆ.  18 ಕೋಟಿ ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ

    ನಾವು #LargestVaccinationDrive ಅನ್ನು ಚಾಲನೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಕೊವಿಡ್ ಲಸಿಕೆಗಾಗಿ ತಮ್ಮ  ಹೆಸರು ನೋಂದಾಯಿಸಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ.  ಎಲ್ಲಾ ಸಮಯದಲ್ಲೂ ಸೂಕ್ತವಾದ ಮಾರ್ಗಸೂಚಿಗಳನ್ನು  ಪಾಲಿಸಿ ಎಂದು ನಾನು ಮನವಿ ಮಾಡುತ್ತಿದ್ದೇನೆ- ನರೇಂದ್ರ ಮೋದಿ

  • 14 May 2021 12:20 PM (IST)

    ಸಂಕಷ್ಟದ ಹೊತ್ತಲ್ಲಿ ಭರವಸೆ ಕಳೆದುಕೊಳ್ಳುವ ರಾಷ್ಟ್ರವಲ್ಲ ಭಾರತ

    ನಮ್ಮ ದೇಶದ ಫಾರ್ಮಾ ವಲಯವು ದೊಡ್ಡ ಪ್ರಮಾಣದಲ್ಲಿ ಔಷಧಿಗಳನ್ನು ತಯಾರಿಸಿ ತಲುಪಿಸುತ್ತಿದೆ.ಔ ಷಧಗಳು ಮತ್ತು ವೈದ್ಯಕೀಯ ಸರಬರಾಜುಗಳ ದಂಧೆಯನ್ನು ಎದುರಿಸಲು ಕಠಿಣ ಕಾನೂನುಗಳನ್ನು ಕೈಗೊಳ್ಳಬೇಕೆಂದು ನಾನು  ರಾಜ್ಯ ಸರ್ಕಾರಗಳಿಗೆ ವಿನಂತಿಸುತ್ತೇನೆ. ಭಾರತವು ಕಷ್ಟದ ಹೊತ್ತಲ್ಲಿ ಭರವಸೆ ಕಳೆದುಕೊಳ್ಳುವ ರಾಷ್ಟ್ರವಲ್ಲ. ನಮ್ಮ ಸವಾಲು ಮತ್ತು ಸಮರ್ಪಣೆಯೊಂದಿಗೆ ನಾವು ಈ ಸವಾಲನ್ನೂ ಜಯಿಸುತ್ತೇವೆ ಎಂದು ನನಗೆ ಖಾತ್ರಿಯಿದೆ.  ಕೊವಿಡ್ ಈಗ ಗ್ರಾಮೀಣ ಪ್ರದೇಶಗಳಲ್ಲೂ ಹರಡುತ್ತಿದೆ. ಆಯಾ ಪ್ರದೇಶಗಳಲ್ಲಿ ಸರಿಯಾದ ಜಾಗೃತಿ ಮತ್ತು ನೈರ್ಮಲ್ಯವನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಗ್ರಾಮ ಪಂಚಾಯಿತಿಗಳಿಗೆ ನಾನು ಕೋರುತ್ತೇನೆ- ಮೋದಿ

  • 14 May 2021 12:16 PM (IST)

    ದೇಶದ ಜನರ ನೋವು ನನಗರ್ಥವಾಗುತ್ತಿದೆ: ನರೇಂದ್ರ ಮೋದಿ

    ಈ ದೇಶದ ಪ್ರಧಾನ ಮಂತ್ರಿಯಾಗಿ, ನನ್ನ ದೇಶವಾಸಿಗಳು ಅನುಭವಿಸುವ ಪ್ರತಿಯೊಂದು ನೋವನ್ನೂ ನಾನು ಅನುಭವಿಸುತ್ತೇನೆ. ನಾವು ನಮ್ಮ ಎಲ್ಲಾ ಶಕ್ತಿಯಿಂದ ಕೊವಿಡ್ ವಿರುದ್ಧ ಹೋರಾಡುತ್ತಿದ್ದೇವೆ. ನಮ್ಮ ರಾಷ್ಟ್ರದ ನೋವನ್ನು ಕಡಿಮೆ ಮಾಡಲು ಪ್ರತಿ ಸರ್ಕಾರಿ ಇಲಾಖೆಯು ಹಗಲು ರಾತ್ರಿ ಕೆಲಸ ಮಾಡುತ್ತಿರುವುದನ್ನು ನಾವು ಖಾತ್ರಿಪಡಿಸಿಕೊಳ್ಳುತ್ತಿದ್ದೇವೆ.

    ಕೊವಿಡ್ ಆಸ್ಪತ್ರೆಗಳು ಮತ್ತು ಕೊವಿಡ್ ಆರೈಕೆ ಕೇಂದ್ರಗಳನ್ನು ಸಜ್ಜುಗೊಳಿಸಲು ಸರ್ಕಾರವು ಬದ್ಧವಾಗಿದೆ. ಆಮ್ಲಜನಕ ಸ್ಥಾವರಗಳನ್ನು ಇತ್ತೀಚಿನ ತಂತ್ರಜ್ಞಾನದೊಂದಿಗೆ ಸ್ಥಾಪಿಸಲಾಗುತ್ತಿದೆ. ಈ ಕಠಿಣ ಕಾಲದಲ್ಲಿ ಆಮ್ಲಜನಕದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಶಸ್ತ್ರ ಪಡೆಗಳು ಸಂಪೂರ್ಣ ಬಲದಿಂದ ಕಾರ್ಯನಿರ್ವಹಿಸುತ್ತಿವೆ  ಎಂದು  ಮೋದಿ ಹೇಳಿದ್ದಾರೆ.

  • 14 May 2021 12:12 PM (IST)

    ಮೇ ಮತ್ತು ಜೂನ್ ತಿಂಗಳಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ PMGKY ಅಡಿಯಲ್ಲಿ ಉಚಿತ ಪಡಿತರ

    ನಾವು ವಿಶ್ವದ ಅತಿದೊಡ್ಡ ಪಡಿತರ ಯೋಜನೆಯನ್ನು ಹೊಂದಿದ್ದೇವೆ. ಮೇ ಮತ್ತು ಜೂನ್ ತಿಂಗಳಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ PMGKY ಅಡಿಯಲ್ಲಿ ಉಚಿತ ಪಡಿತರವನ್ನು ನೀಡಲಾಗುತ್ತಿದೆ. ಅಗತ್ಯವಿರುವ ಜನರಿಗೆ ಉಚಿತ ಪಡಿತರವನ್ನು ನೀಡುವಾಗ ಯಾವುದೇ ಅಡೆತಡೆಗಳು ಬರದಂತೆ ನೋಡಿಕೊಳ್ಳಬೇಕೆಂದು ನಾನು ಜನರನ್ನು ಕೋರುತ್ತೇನೆ ಎಂದಿದ್ದಾರೆ ಪ್ರಧಾನಿ

  • 14 May 2021 12:10 PM (IST)

    2 ಕೋಟಿಗಿಂತ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಿದ್ದೇವೆ: ಮೋದಿ

    ಕೃಷಿ ಮತ್ತು ತೋಟಗಾರಿಕೆಯಲ್ಲಿ ರೈತರು ದಾಖಲೆಗಳನ್ನು ನಿರ್ಮಿಸಿದ್ದಾರೆ.ಕೊವಿಡ್ ನ ಕಠಿಣ ಸವಾಲುಗಳ ಮಧ್ಯೆ, ಸರ್ಕಾರವು ಕನಿಷ್ಠ ಬೆಂಬಲ ಬೆಲೆಯಲ್ಲಿ ಹೊಸ ಖರೀದಿ ದಾಖಲೆಗಳನ್ನು ಸ್ಥಾಪಿಸುತ್ತಿದೆ.

    ಇತ್ತೀಚಿನ ವರ್ಷಗಳಲ್ಲಿ, ನಾವು 2 ಕೋಟಿಗಿಂತ ಹೆಚ್ಚು ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಿದ್ದೇವೆ. ಸರ್ಕಾರ ಹೊಸ ಪರಿಹಾರಗಳನ್ನು, ಕೃಷಿಯಲ್ಲಿ ಹೊಸ ಆಯ್ಕೆಗಳನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ. ನಾವು ಸಾವಯವ ಕೃಷಿಯನ್ನು ಉತ್ತೇಜಿಸುತ್ತಿದ್ದೇವೆ ಏಕೆಂದರೆ ಅಂತಹ ಬೆಳೆಗಳ ಬೆಲೆಯೂ ಕಡಿಮೆ, ಅವು ಮಣ್ಣು ಮತ್ತು ಮಾನವ ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ಅವುಗಳಿಗೆ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

  • 14 May 2021 12:07 PM (IST)

    ಸಾವಯವ ಕೃಷಿಯಿಂದ ಹೆಚ್ಚಿನ ಲಾಭ: ಮೋದಿ

    ಇದೇ ಮೊದಲ ಬಾರಿ  ಪಂಜಾಬ್ ಮತ್ತು ಹರ್ಯಾಣದ ರೈತರು ನೇರ ವರ್ಗಾವಣೆಯ ಲಾಭವನ್ನು ಪಡೆಯುತ್ತಿದ್ದಾರೆ. ಸಾವಯವ ಕೃಷಿಯು ಹೆಚ್ಚಿನ ಲಾಭವನ್ನು ನೀಡುತ್ತದೆ ಮತ್ತು ಈಗ ಇದನ್ನು ಯುವ ರೈತರು ರಾಷ್ಟ್ರದಾದ್ಯಂತ ಅಭ್ಯಾಸ ಮಾಡುತ್ತಿದ್ದಾರೆ  ಎಂದು ಮೋದಿ ಹೇಳಿದ್ದಾರೆ.

  • 14 May 2021 12:04 PM (IST)

    ಮೊದಲ ಬಾರಿ ಪಶ್ಚಿಮ ಬಂಗಾಳದ 7.03 ಲಕ್ಷ ರೈತರು ಫಲಾನುಭವಿಗಳಾಗಿದ್ದಾರೆ: ಮೋದಿ

    ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಸಣ್ಣ ರೈತರು ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಮೊದಲ ಬಾರಿ ಪಶ್ಚಿಮ ಬಂಗಾಳದ 7.03 ಲಕ್ಷ ರೈತರು ಸಹ ಈ ಯೋಜನೆಯಡಿ ಪ್ರಯೋಜನವನ್ನು ಪಡೆಯುತ್ತಾರೆ. ರೈತರಿಗೆ ಸವಲತ್ತುಗಳ ನೇರ ವರ್ಗಾವಣೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 10ಕ್ಕಿಂತ ಹೆಚ್ಚು ಗೋಧಿಯನ್ನು ಎಂಎಸ್‌ಪಿಯಲ್ಲಿ ಖರೀದಿಸಲಾಗಿದೆ ಎಂದಿದ್ದಾರೆ ಮೋದಿ.

  • 14 May 2021 12:01 PM (IST)

    ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

    ಇಂದು ನಾವು ಅಕ್ಷಯ ತೃತೀಯ, ಬಸವ ಜಯಂತಿ ಮತ್ತು ಈದ್ ಆಚರಿಸುತ್ತಿದ್ದೇವೆ. ಈ ರೀತಿಯ ಕಠಿಣ ಕಾಲದಲ್ಲಿಯೂ ಸಹ, ನಮ್ಮ ದೇಶದ ರೈತರು ದಾಖಲೆಯ ಕೃಷಿಯನ್ನು ಸಾಧಿಸಿದ್ದಾರೆ  ಎಂದು ಪ್ರಧಾನಿ  ನರೇಂದ್ರ ಮೋದಿ ಹೇಳಿದ್ದಾರೆ.ಪಶ್ಚಿಮ ಬಂಗಾಳದ ಲಕ್ಷಾಂತರ ರೈತರು ಇಂದು ಪಿಎಂ-ಕಿಸಾನ್ ಯೋಜನೆಯ ಲಾಭವನ್ನು ಪಡೆದಿದ್ದಾರೆ.

    ಕೊವಿಡ್ನ ಈ ಸಮಯದಲ್ಲಿಯೂ  ನಮ್ಮ ರೈತರು ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಮನೋಭಾವವನ್ನು ತೋರಿಸಿದ್ದಾರೆ. ಅವರು ತಮ್ಮ ಕೃಷಿ ತಂತ್ರಗಳನ್ನು ನವೀಕರಿಸುವ ಮೂಲಕ ದಾಖಲೆ ಸಂಗ್ರಹವನ್ನು ಮಾಡಿದ್ದಾರೆ  ಎಂದಿದ್ದಾರೆ.

  • 14 May 2021 11:58 AM (IST)

    ಪಿಎಂ ಕಿಸಾನ್ ಯೋಜನೆಯ ಲಾಭ ಪಡೆದ ಮಹಾರಾಷ್ಟ್ರದ ರೈತ

    ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ, ಸೌತೆಕಾಯಿಯಂತಹ ತರಕಾರಿಗಳನ್ನು ಸಾವಯವ ಕೃಷಿ ವಿಧಾನದ ಮೂಲಕ ಬೆಳೆಯುವ  ಶ್ರೀನಗರ ಜಮ್ಮು ಕಾಶ್ಮೀರದ  ಮೂಲದ ಖುರ್ಷಿದ್ ಅಹ್ಮದ್ ಜಿ ಅವರನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ಖುರ್ಷಿದ್ ಜಿ ತನ್ನ ಜ್ಞಾನ ಮತ್ತು ತರಬೇತಿಯನ್ನು ಜಮ್ಮು ಮತ್ತು ಕಾಶ್ಮೀರದ  ಸ್ಥಳೀಯ ಮಾರುಕಟ್ಟೆಗಳಲ್ಲಿ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಮಾರಾಟ ಮಾಡಲು ಬಳಸುತ್ತಿದ್ದಾರೆ.

    ಮಹಾರಾಷ್ಟ್ರದ ಲಾತೂರ್ ಮೂಲದ ಬಾಬಾ ನರಾರೆ  ಅವರಿಗೆ ಪಿಎಂ-ಕಿಸಾನ್ ಯೋಜನೆಯಿಂದ ಆರ್ಥಿಕವಾಗಿ ಲಾಭವಾಗಿದೆ. ಅವರ ಸಾಲವನ್ನು 2 ದಿನಗಳಲ್ಲಿ ಮಂಜೂರು ಮಾಡಲಾಯಿತು. ಇದರಿಂದಾಗಿ ಕೃಷಿ ಮುಂದುವರಿಸಲು ಸಾಧ್ಯವಾಯಿತು ಎಂದಿದ್ದಾರೆ ಬಾಬಾ ನರಾರೆ.

  • 14 May 2021 11:53 AM (IST)

    ಸಾವಯವ ಕೃಷಿ ವಿಧಾನ ಅಳವಡಿಸಿಕೊಂಡ ರೈತರಿಗೆ ಮೋದಿ ಮೆಚ್ಚುಗೆ

    ಮೇಘಾಲಯದ  ಬೆಟ್ಟ ಪ್ರದೇಶಗಳಲ್ಲಿ ಶುಂಠಿ, ಅರಶಿಣ ಮತ್ತು ದಾಲ್ಚೀನಿ  ಬೆಳೆ ಬೆಳೆದ ರೈತ  ರವಿ ಅವರನ್ನು ಮೋದಿ ಶ್ಲಾಘಿಸಿದ್ದಾರೆ. ಮೇಘಾಲಯದ ರೈತರ ಜತೆ ಸಂವಾದ ನಡೆಸಿದ ನಂತರ ಅಂಡಮಾನ್ ನಿಕೊಬಾರ್ ದ್ವೀಪದಲ್ಲಿನ  ಕಾರ್ ನಿಕೊಬಾರ್ ನಿಂದ ಮಾತನಾಡಿದ ಪ್ಯಾಟ್ರಿಕ್  ಅವರು  ಸಾವಯವ ಕೃಷಿ ಮಾಡುತ್ತಿರುವುದಾಗಿ  ಹೇಳಿದ್ದಾರೆ. ಬದನೆಕಾಯಿ ಸೇರಿದಂತೆ ಹಲವಾರು ತರಕಾರಿಗಳನ್ನು ಸಾವಯವ  ಕೃಷಿವಿಧಾನದಲ್ಲಿ ಬೆಳೆಯುತ್ತಿರುವುದಾಗಿ ಪ್ಯಾಟ್ರಿಕ್ ಹೇಳಿದ್ದು,ಮೋದಿ ಈ ರೈತರನ್ನು ಶ್ಲಾಘಿಸಿದ್ದಾರೆ.

  • 14 May 2021 11:41 AM (IST)

    ಆದಿವಾಸಿ ರೈತರಿಗೆ ಮಾರ್ಗದರ್ಶನ ನೀಡಿದ ಆಂಧ್ರ ಪ್ರದೇಶದ ರೈತ ಮಹಿಳೆ

    ಆಂಧ್ರಪ್ರದೇಶದ ಅನಂತಪುರದಲ್ಲಿನ ಎನ್.ವೆನ್ನುರಮಾ ಅವರು ಕೈಗೊಂಡ ಪ್ರಯತ್ನವನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ಎನ್. ವೆನ್ನುರಮಾ ಅವರು ಆಂಧ್ರದಲ್ಲಿಕೃಷಿ ಮಾಡುತ್ತಿದ್ದಾರೆ. ಅವರು ತಮ್ಮ ಪ್ರದೇಶದ 170 ಕ್ಕೂ ಹೆಚ್ಚು ಆದಿವಾಸಿ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

  • 14 May 2021 11:35 AM (IST)

    ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಯುವ ರೈತನಿಗೆ ಪ್ರಧಾನಿ ಶ್ಲಾಘನೆ

    ಉತ್ತರ ಪ್ರದೇಶದ ಉನ್ನಾವ್  ಜಿಲ್ಲೆಯ ರೈತ  ಅರವಿಂದ್ ಅವರ ಜತೆ ಮಾತನಾಡಿದ  ಪ್ರಧಾನಿ  ನರೇಂದ್ರ ಮೋದಿ ಸಾವಯವ ಕೃಷಿಯಲ್ಲಿ  ತೊಡಗಿಸಿಕೊಂಡಿದ್ದಕ್ಕಾಗಿ,ಹೊಸ ತಂತ್ರಜ್ಞಾನಗಳ ಬಗ್ಗೆ ಇತರ ರೈತರಿಗೆ ತರಬೇತಿ ನೀಡಿದ್ದಕ್ಕಾಗಿ ಶ್ಲಾಘಿಸಿದ್ದಾರೆ.

  • 14 May 2021 11:29 AM (IST)

    9.5 ಕೋಟಿ ರೈತರ ಬ್ಯಾಂಕ್ ಖಾತೆಗೆ ₹19,000 ಕೋಟಿ ವರ್ಗಾವಣೆ

    ಪ್ರಧಾನಿ ನರೇಂದ್ರ ಮೋದಿಯವರು ಇಂದು  9.5 ಕೋಟಿ ರೈತರ ಬ್ಯಾಂಕ್  ಖಾತೆಗೆ  19,000  ಕೋಟಿ  ರೂಪಾಯಿ ವರ್ಗಾವಣೆ ಮಾಡಿದ್ದಾರೆ.

    Hon’ble PM digitally transfers the benefit to more than 9.5 crore farmers amounting more than Rs. 19,000 crore directly to their bank account. #PMKisan @AgriGoI @narendramodi @PMOIndia

    — MyGovIndia (@mygovindia) May 14, 2021

  • 14 May 2021 11:26 AM (IST)

    13 ತಿಂಗಳಲ್ಲಿ ಯೋಜನೆಯ ಲಾಭ ಪಡೆದವರು 9 ಕೋಟಿಗಿಂತಲೂ ಹೆಚ್ಚು

    ಪಿಎಂ ಕಿಸಾನ್ ಯೋಜನೆ ಆರಂಭವಾಗಿ 13 ತಿಂಗಳಲ್ಲಿ  9ಕೋಟಿ ಗಿಂತಹೆಚ್ಚು ಫಲಾನುಭವಿಗಳು  ಲಾಭ ಪಡೆದಿದ್ದಾರೆ.

  • 14 May 2021 11:17 AM (IST)

    ಕೊವಿಡ್ ಮೊದಲನೇ  ಅಲೆಯ ಹೊತ್ತಲ್ಲಿ ಫಲಾನುಭವಿಗಳಿಗೆ  42,962.47 ಕೋಟಿ ರೂಪಾಯಿ  ಬಿಡುಗಡೆ

    ಕೊವಿಡ್ ಮೊದಲನೇ  ಅಲೆಯ ಹೊತ್ತಲ್ಲಿ ಫಲಾನುಭವಿಗಳಿಗೆ  42,962.47 ಕೋಟಿ ರೂಪಾಯಿ  ಬಿಡುಗಡೆ ಮಾಡಲಾಗಿದೆ

    ◾️#PMKisan has benefitted millions of farmers since its launch on 24th Feb 2019

    ◾️Rs 42,962.47 crore were released to the beneficiaries during the first wave of #COVID19.

    Take a look to know more! pic.twitter.com/7ouoLULGTA

    — PIB India (@PIB_India) May 14, 2021

  • 14 May 2021 11:14 AM (IST)

    ಯೋಜನೆ ಆರಂಭವಾಗಿ ಒಂದು ವರ್ಷದೊಳಗೆ 8.4 ಕೋಟಿ ಫಲಾನುಭವಿಗಳು

    ಯೋಜನೆ ಆರಂಭವಾಗಿ  ಒಂದು ವರ್ಷದೊಳಗೆ8.4 ಕೋಟಿ ಫಲಾನುಭವಿಗಳಿಗೆ ಇದರ ಲಾಭ ಸಿಕ್ಕಿದೆ.ನೋಂದಣಿ, ದಾಖಲೆಗಳ ತಿದ್ದುಪಡಿ ಮತ್ತು ಸ್ಥಿತಿ ಪರಿಶೀಲನೆಗಾಗಿ ರೈತರಿಗೆ ನೇರ ಸೇವೆಗಳನ್ನು ಒದಗಿಸಲು ದೇಶಾದ್ಯಂತದ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಕ್ರಿಯಗೊಳಿಸಲಾಗಿದೆ.

  • 14 May 2021 11:12 AM (IST)

    PM-KISAN ಯೋಜನೆಗೆ 3 ಕೋಟಿಗಿಂತೂ ಹೆಚ್ಚು ಫಲಾನುಭವಿಗಳು

    ಪಿಎಂ ಕಿಸಾನ್  ಯೋಜನೆ ಆರಂಭವಾಗಿ 35 ದಿನಗಳಲ್ಲಿ  3 ಕೋಟಿಗಿಂತೂ ಹೆಚ್ಚು  ಫಲಾನುಭವಿಗಳು ಲಾಭ ಪಡೆದಿದ್ದಾರೆ.

  • 14 May 2021 11:02 AM (IST)

    ಏನಿದು ಪಿಎಂ ಕಿಸಾನ್ ಯೋಜನೆ?

    ದೇಶದ ಬಡ ರೈತರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರ ವರ್ಷಕ್ಕೆ 6 ಸಾವಿರ ರೂಪಾಯಿ ನೀಡುತ್ತದೆ. 4 ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಗಳಂತೆ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತದೆ. ಈ ಯೋಜನೆಯಡಿ, ಇದುವರೆಗೆ ಕೇಂದ್ರ ಸರ್ಕಾರ 1.15 ಲಕ್ಷ ಕೋಟಿ ರೂಪಾಯಿಗಳನ್ನು ರೈತರ ಕುಟುಂಬಗಳಿಗೆ ವರ್ಗಾಯಿಸಿದೆ.

  • Published On - May 14,2021 12:27 PM

    Follow us