AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Kisan Yojana: ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ

PM Kisan Samman Nidhi Yojana: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಂದು (ಮೇ 14, 2021) ಪಿಎಂ ಕಿಸಾನ್ ಯೋಜನೆಯ ಎಂಟನೇ ಕಂತನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು.

PM Kisan Yojana: ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ
ನರೇಂದ್ರ ಮೋದಿ
Srinivas Mata
|

Updated on:May 14, 2021 | 12:49 PM

Share

ಪ್ರಧಾನ್​ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರದಂದು (ಮೇ 14, 2021) ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ- ಕಿಸಾನ್) ಯೋಜನೆಯ ಎಂಟನೇ ಕಂತನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಈ ಕಂತಿನ ಭಾಗವಾಗಿ 19,000 ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು 9.5 ಕೋಟಿಗೂ ಹೆಚ್ಚು ರೈತರ ಬ್ಯಾಂಕ್​ ಖಾತೆಗಳಿಗೆ ವರ್ಗಾವಣೆ ಮಾಡಲಾಯಿತು. ಇದೇ ವೇಳೆ ಪ್ರಧಾನಿ ಮೋದಿ ಅವರು ಫಲಾನುಭವಿಗಳ ಜತೆಗೆ ಸಂವಾದ ನಡೆಸಿದರು. ಆಂಧ್ರಪ್ರದೇಶದ ರೈತರೊಬ್ಬರು ಬರಡು ನೆಲವನ್ನು ಸಾವಯವ ಕೃಷಿ ಯೋಗ್ಯ ಭೂಮಿ ಮಾಡಿದ್ದು, ಅವರ ಜತೆ ಮಾತನಾಡಿ, ನೀವು ಇತರರಿಗೆ ಮಾದರಿ ಸಿದ್ಧಪಡಿಸಿದ್ದೀರಿ. ನಿಮ್ಮ ವಿಶ್ವಾಸವೇ ಆತ್ಮವಿಶ್ವಾಸ ಹಾಗೂ ಅನುಭವವನ್ನು ಮಾತನಾಡುತ್ತದೆ ಎಂದರು. ದಕ್ಷಿಣ ರಾಜ್ಯದ ರೈತ ಮಹಿಳೆಯೊಬ್ಬರು, ವರ್ಷದಲ್ಲಿ ಮೂರು ಬೆಳೆ ಬೆಳೆಯುವುದಾಗಿ ಹೇಳಿದರು.

ಸಾವಯವ ಕೃಷಿ ಮಾದರಿ ಉದ್ಯಮ ಸ್ಥಾಪಿಸಿದ ಮೇಘಾಲಯದ ರೈತರೊಬ್ಬರ ಜತೆ ಮಾತನಾಡಿದ ಮೋದಿ, ದೇಶದಲ್ಲಿ 10,000 ರೈತ ಉತ್ಪಾದಕ ಒಕ್ಕೂಟ (FPO) ಸ್ಥಾಪಿಸಲಾಗಿದೆ ಮತ್ತು ಸಣ್ಣ ರೈತರು ಸಹ ಅವರೊಂದಿಗೆ ಸೇರಿದ್ದಾರೆ. “ನೀವು ಏನು ಮಾಡುತ್ತೀರಿ ಎಂಬ ಬಗ್ಗೆ ಇರುವ ವಿಶ್ವಾಸವು ಮಾದರಿಯಾಗಿರುತ್ತದೆ,” ಎಂದು ರೈತರಿಗೆ ಹೇಳಿದರು.

ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಹ ಇದ್ದರು. ಪಶ್ಚಿಮ ಬಂಗಾಲ ಸಹ ಯೋಜನೆಗೆ ಸೇರ್ಪಡೆ ಆಗಿದೆ. ಏಳು ಲಕ್ಷಕ್ಕೂ ಹೆಚ್ಚು ರೈತರು ಈ ಯೋಜನೆ ಅಡಿಯಲ್ಲಿ ಅನುಕೂಲ ಪಡೆಯಲಿದ್ದಾರೆ ಎಂದರು. ಪಿಎಂ ಕಿಸಾನ್ ಯೋಜನೆಯನ್ನು ಎನ್​ಡಿಎ ಸರ್ಕಾರ 2019ರಲ್ಲಿ ಆರಂಭಿಸಿತು. ದೇಶದ ರೈತರಿಗೆ ವರ್ಷಕ್ಕೆ 6000 ರೂಪಾಯಿ, 2000 ರೂಪಾಯಿಯಂತೆ ಮೂರು ಕಂತುಗಳಲ್ಲಿ ವಿತರಿಸಲಾಗುತ್ತದೆ. ಈ ತನಕ 1.15 ಲಕ್ಷ ಕೋಟಿ ರೂಪಾಯಿ ರೈತರ ಖಾತೆಗೆ ವರ್ಗಾವಣೆ ಆಗಿದೆ ಎಂದು ಗುರುವಾರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: PM Kisan Yojana ಒಂದೇ ದಿನದಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ 19 ಸಾವಿರ ಕೋಟಿ ಪಾವತಿಗೆ ಕೇಂದ್ರ ಸಿದ್ಧತೆ

ಇದನ್ನೂ ಓದಿ: PM Kisan Samman Nidhi: ಪಿಎಂ ಕಿಸಾನ್ ನಿಧಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ?

(PM Kisan Samman Nidhi 8th installment released through video conference by prime minister Narendra Modi through video conference)

Published On - 12:33 pm, Fri, 14 May 21