AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲ್ಲುಗಳು ನಾಲಿಗೆಯನ್ನು ಕಚ್ಚಿದಾಕ್ಷಣ ಹಲ್ಲನ್ನು ನಾವು ಮುರಿಯುವುದಿಲ್ಲ: ಪ್ರಧಾನಿ ಮೋದಿ

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಘದ ನೂರು ವರ್ಷಗಳ ಪಯಣವನ್ನು ರಾಷ್ಟ್ರ ನಿರ್ಮಾಣದ ಅದ್ಭುತ ಉದಾಹರಣೆ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಅವರು 100 ರೂ.ಗಳ ಸ್ಮರಣಾರ್ಥ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಆರ್‌ಎಸ್‌ಎಸ್‌ನ ಈ ಪಯಣವು ರಾಷ್ಟ್ರೀಯ ಹಿತಾಸಕ್ತಿಗಾಗಿ ತ್ಯಾಗ, ಶಿಸ್ತು, ಸೇವೆ ಮತ್ತು ಸಮರ್ಪಣೆಯ ಜೀವಂತ ಕಥೆಯಾಗಿದೆ ಎಂದು ಮೋದಿ ಹೇಳಿದರು

ಹಲ್ಲುಗಳು ನಾಲಿಗೆಯನ್ನು ಕಚ್ಚಿದಾಕ್ಷಣ ಹಲ್ಲನ್ನು ನಾವು ಮುರಿಯುವುದಿಲ್ಲ: ಪ್ರಧಾನಿ ಮೋದಿ
ನರೇಂದ್ರ ಮೋದಿ Image Credit source: PTI
ನಯನಾ ರಾಜೀವ್
|

Updated on: Oct 01, 2025 | 12:58 PM

Share

ನವದೆಹಲಿ, ಅಕ್ಟೋಬರ್ 01: ಕೆಲವೊಮ್ಮೆ ಹಲ್ಲುಗಳು ನಾಲಿಗೆಯನ್ನು ಕಚ್ಚಿಬಿಡುತ್ತವೆ. ಹಾಗೆಂದ ಮಾತ್ರಕ್ಕೆ ನಾವು ಹಲ್ಲನ್ನು ಮುರಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಆರ್​​ಎಸ್​ಎಸ್​ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್​ಎಸ್​ಎಸ್​ ಮುಖ್ಯವಾಹಿನಿಗೆ ಬರದಂತೆ ತಡೆಯಲು ಲೆಕ್ಕವಿಲ್ಲದಷ್ಟು ಪ್ರಯತ್ನಗಳು ನಡೆದವು, ಹೆಗ್ಡೆವಾರ್ ಅವರನ್ನು ಹಲವು ಪ್ರಕರಣಗಳಲ್ಲಿ ಸಿಲುಕಿಸಲಾಯಿತು. ಆದರೆ ಹೆಗ್ಡೆವಾರ್ ಹೊರ ಬಂದಾಗ ಕೆಲವೊಮ್ಮೆ ನಾಲಿಗೆ ಹಲ್ಲುಗಳ ನಡುವೆ ಸಿಲುಕಿಕೊಂಡು ಗಾಯವಾಗುತ್ತದೆ, ಆದರೆ ನಾವು ಹಲ್ಲನ್ನು ಮುರಿಯುವುದಿಲ್ಲ. ಏಕೆಂದರೆ ಹಲ್ಲುಗಳು ನಮ್ಮವು ಮತ್ತು ನಾಲಿಗೆ ನಮ್ಮದು ಎಂದು ಸರಳವಾಗಿ ವಿವರಿಸಿದ್ದನ್ನು ನೆನಪಿಸಿಕೊಂಡರು.

ಸಂಘದ ದೊಡ್ಡ ಶಕ್ತಿ ಅದರ ಸ್ವಯಂಸೇವಕರಲ್ಲಿದೆ ಎಂದು ಪ್ರಧಾನಿ ಹೇಳಿದರು, ಅವರು ಯಾವಾಗಲೂ ವೈಯಕ್ತಿಕ ಹಿತಾಸಕ್ತಿಗಳನ್ನು ಮೀರಿ ರಾಷ್ಟ್ರೀಯ ಹಿತಾಸಕ್ತಿಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಇರಿಸುತ್ತಾರೆ. ಸ್ವಯಂಸೇವಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸುತ್ತಾ, ಈ ಪೀಳಿಗೆಯು ಸಂಘದ ಶತಮಾನೋತ್ಸವ ವರ್ಷವನ್ನು ವೀಕ್ಷಿಸುವ ಅದೃಷ್ಟಶಾಲಿಯಾಗಿದೆ ಎಂದು ಹೇಳಿದರು.

ಸಂಘದ ಸಂಸ್ಥಾಪಕ ಡಾ. ಹೆಡ್ಗೇವಾರ್ ಅವರಿಗೆ ಗೌರವ ಸಲ್ಲಿಸುತ್ತಾ, ಅವರು ಸಾಮಾನ್ಯ ಜನರನ್ನು ಆಯ್ಕೆ ಮಾಡಿದರು, ಅವರಲ್ಲಿ ಶಿಸ್ತು ಮತ್ತು ರಾಷ್ಟ್ರ ಸೇವೆಯ ಪ್ರಜ್ಞೆಯನ್ನು ತುಂಬಿದರು ಮತ್ತು ಅವರನ್ನು ರಾಷ್ಟ್ರದ ಉದ್ದೇಶಕ್ಕಾಗಿ ಅರ್ಪಿಸಿದರು ಎಂದು ಮೋದಿ ನೆನಪಿಸಿಕೊಂಡರು. ತಮ್ಮ ಭಾಷಣದಲ್ಲಿ ಪ್ರಧಾನಿ ನವರಾತ್ರಿ ಮತ್ತು ಮಹಾನವಮಿಗೆ ಶುಭಾಶಯಗಳನ್ನು ಸಲ್ಲಿಸಿದರು ಮತ್ತು ವಿಜಯದಶಮಿಯ ಸಂದೇಶವನ್ನು ಪುನರುಚ್ಚರಿಸಿದರು. ಈ ಹಬ್ಬವು ಅನ್ಯಾಯದ ಮೇಲೆ ನ್ಯಾಯದ, ಸುಳ್ಳಿನ ಮೇಲೆ ಸತ್ಯದ ಮತ್ತು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು.

ಆರ್​​ಎಸ್​ಎಸ್​ನ ತ್ಯಾಗ ಸ್ವಾತಂತ್ರ್ಯದ ನಂತರ, ಹೈದರಾಬಾದ್‌ನಲ್ಲಿ ನಿಜಾಮರ ದೌರ್ಜನ್ಯದ ವಿರುದ್ಧದ ಚಳವಳಿಯಿಂದ ಗೋವಾದ ಸ್ವಾತಂತ್ರ್ಯ ಚಳವಳಿಯವರೆಗೆ, ಸಂಘವು ರಾಷ್ಟ್ರ ಭಾವನೆಯನ್ನು ಮೊದಲು ಇಟ್ಟುಕೊಂಡು ಅನೇಕ ತ್ಯಾಗಗಳನ್ನು ಮಾಡಿದೆ. ತನ್ನ 100 ವರ್ಷಗಳ ಪ್ರಯಾಣದಲ್ಲಿ, ಸಂಘದ ಪ್ರಮುಖ ಕೆಲಸವೆಂದರೆ ಅದು ಪ್ರವೇಶಿಸಲಾಗದ ಮತ್ತು ತಲುಪಲು ಕಷ್ಟಕರವಾದ ಪ್ರದೇಶಗಳಲ್ಲಿಯೂ ಸಹ ಕಾರ್ಯನಿರ್ವಹಿಸುತ್ತಿದೆ. ನಮ್ಮ ದೇಶದಲ್ಲಿ 10 ಕೋಟಿ ಬುಡಕಟ್ಟು ಸಹೋದರ ಸಹೋದರಿಯರಿದ್ದಾರೆ ಆದರೆ ಸಂಘವು ಅವರ ಸಂಸ್ಕೃತಿ, ಹಬ್ಬಗಳು, ಆಚರಣೆಗಳು ಮತ್ತು ಅವರ ಭಾಷೆಗೆ ಆದ್ಯತೆ ನೀಡಿತು.

ಮತ್ತಷ್ಟು ಓದಿ: ಅಕ್ಟೋಬರ್ 1ರಂದು ಆರ್​​ಎಸ್​ಎಸ್​ ಶತಮಾನೋತ್ಸವ, ಪ್ರಧಾನಿ ನರೇಂದ್ರ ಮೋದಿ ಭಾಗಿ

ನಾಣ್ಯ ಬಿಡುಗಡೆ ಭಾರತ ಸರ್ಕಾರ ವಿಶೇಷ ಅಂಚೆ ಚೀಟಿಗಳು ಮತ್ತು ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. 100 ರೂಪಾಯಿ ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವನ್ನು ಮತ್ತು ಇನ್ನೊಂದು ಬದಿಯಲ್ಲಿ ವರದ ಮುದ್ರೆಯಲ್ಲಿ ಸಿಂಹದೊಂದಿಗೆ ಭಾರತ ಮಾತೆಯ ಭವ್ಯವಾದ ಚಿತ್ರ ಮತ್ತು ಸ್ವಯಂಸೇವಕರು ಭಕ್ತಿಯಿಂದ ನಮಸ್ಕರಿಸುವ ಚಿತ್ರವಿದೆ.

ಯುದ್ಧಭೂಮಿಯಲ್ಲಿ ಸಂಘ 1967ರ ಯುದ್ಧದಲ್ಲಿ, ಆರ್‌ಎಸ್‌ಎಸ್ ಸ್ವಯಂಸೇವಕರು ಹಗಲಿರುಳು ಸೈನ್ಯದ ಜೊತೆ ನಿಂತು ಅವರಿಗೆ ಸಹಾಯ ಮಾಡಿದರು ಮತ್ತು ಅವರ ಮನೋಸ್ಥೈರ್ಯವನ್ನು ಹೆಚ್ಚಿಸಿದರು. 1971 ರಲ್ಲಿ, ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಲಕ್ಷಾಂತರ ನಿರಾಶ್ರಿತರಿಗೆ ಆರ್‌ಎಸ್‌ಎಸ್ ಪರಿಹಾರ ನೀಡಿತ್ತು.

ಸಮಾಜದಲ್ಲಿನ ತಾರತಮ್ಯದ ಕಲ್ಪನೆಯ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದರು. ಹಿಂದೂ ಸಮಾಜಕ್ಕೆ ತಾರತಮ್ಯವು ಒಂದು ಪ್ರಮುಖ ಸವಾಲಾಗಿದೆ, ಸಂಘವು ಅದನ್ನು ಪರಿಹರಿಸಲು ಶ್ರಮಿಸುತ್ತಿದೆ. . ಮಹಾತ್ಮ ಗಾಂಧಿ ಒಮ್ಮೆ ವಾರ್ಧಾದಲ್ಲಿನ ಸಂಘದ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿನ ಸಮಾನತೆಯನ್ನು ಶ್ಲಾಘಿಸಿದ್ದರು. ಪ್ರತಿಯೊಬ್ಬ ಮಹಾನ್ ವ್ಯಕ್ತಿ, ಪ್ರತಿಯೊಬ್ಬ ಸರಸಂಘಚಾಲಕ್, ನ ಹಿಂದೂ ಪತಿತೋ ಭವೇತ್ ಎಂದು ಹೇಳುವ ಮೂಲಕ ತಾರತಮ್ಯದ ವಿರುದ್ಧ ಹೋರಾಡಿದ್ದಾರೆ. ಇದರರ್ಥ ಪ್ರತಿಯೊಬ್ಬ ಹಿಂದೂ ಒಂದೇ ಕುಟುಂಬಕ್ಕೆ ಸೇರಿದವರು ಎಂದರ್ಥ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ