PM Modi in Gujarat: 8 ವರ್ಷದಲ್ಲಿ ಗಾಂಧೀಜಿ, ಸರ್ದಾರ್ ಪಟೇಲ್ ಕನಸಿನ ಭಾರತ ನಿರ್ಮಿಸಲು ಪ್ರಯತ್ನಿಸಿದ್ದೇವೆ; ರಾಜ್ಕೋಟ್ನಲ್ಲಿ ನರೇಂದ್ರ ಮೋದಿ ಭಾಷಣ
2014ಕ್ಕಿಂತ ಮೊದಲು ನಾವು ಕೇಂದ್ರ ಸರ್ಕಾರದ ಬಳಿ ಹೋದಾಗ ಅವರು ಮೋದಿಯನ್ನು ಮಾತ್ರ ನೋಡುತ್ತಿದ್ದರೇ ವಿನಃ ನಮ್ಮ ಯೋಜನೆಯನ್ನು ಜಾರಿ ಮಾಡಲಿಲ್ಲ. ಅವರು ಸರ್ದಾರ್ ಸರೋವರ ಯೋಜನೆಗೆ ಅವಕಾಶ ನೀಡಲಿಲ್ಲ. ಈಗ ವಿಶ್ವದ ಅತಿ ಎತ್ತರದ ಸರ್ದಾರ್ ಪ್ರತಿಮೆಯನ್ನು ಗುಜರಾತ್‌ನಲ್ಲಿ ಸ್ಥಾಪಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.
ರಾಜ್‌ಕೋಟ್: ನಾನು ರಾಷ್ಟ್ರ ಸೇವೆಯಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಕೊವಿಡ್ ಮತ್ತು ಯುದ್ಧದ ನಡುವೆ ನಾವು ದೇಶಕ್ಕೆ ಸೇವೆ ಸಲ್ಲಿಸಿದ್ದೇವೆ ಎಂದು ಗುಜರಾತ್‌ನ ರಾಜ್‌ಕೋಟ್ (Rajkot Rally) ಮೆಗಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಪ್ರಯತ್ನಗಳು ಬಡ ಮತ್ತು ಮಧ್ಯಮ ವರ್ಗದ ಜೀವನವನ್ನು ಸುಲಭಗೊಳಿಸುತ್ತದೆ. ಬಡವರಿಗಾಗಿ ಕೆಲಸ ಮಾಡಲು ಸರ್ಕಾರ ಸಮರ್ಪಿತವಾಗಿದೆ ಎಂದು ರಾಜ್‌ಕೋಟ್ ರ್ಯಾಲಿಯಲ್ಲಿ ಪ್ರಧಾನಿ ಮೋದಿ (Narendra Modi) ಗುಜರಾತ್‌ನ ಜನರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
“ಜನಧನ್ ಯೋಜನೆಯಿಂದ ಬಡ ಜನರು ಪ್ರಯೋಜನ ಪಡೆದಿದ್ದಾರೆ. ಕಠಿಣ ಕೋವಿಡ್ ಸಮಯದಲ್ಲಿ, ಜನರು ಉಚಿತ ಲಸಿಕೆಗಳನ್ನು ಪಡೆಯುವಂತೆ ನಾವು ಖಚಿತಪಡಿಸಿದ್ದೇವೆ. ಜನರ ಪ್ರಯತ್ನಗಳು ಸರ್ಕಾರದ ಪ್ರಯತ್ನಗಳೊಂದಿಗೆ ಸೇರಿದಾಗ ಜನರ ಸೇವೆ ಮಾಡುವ ನಮ್ಮ ಶಕ್ತಿ ಹೆಚ್ಚಾಗುತ್ತದೆ. ಇದಕ್ಕೆ ರಾಜ್‌ಕೋಟ್‌ನಲ್ಲಿರುವ ಈ ಆಧುನಿಕ ಆಸ್ಪತ್ರೆ (ಕೆಡಿಪಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ) ಪ್ರಮುಖ ಉದಾಹರಣೆಯಾಗಿದೆ ಎಂದು ಗುಜರಾತ್‌ನ ರಾಜ್‌ಕೋಟ್‌ನ ಅಟ್‌ಕೋಟ್‌ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
When people’s efforts connects with Govt’s efforts, our strength to serve increases. This modern hospital (KDP Multispeciality Hospital) in Rajkot is a major example for this: Prime Minister Narendra Modi at a public function at Atkot, Rajkot in Gujarat pic.twitter.com/SX0tKRfBXe
— ANI (@ANI) May 28, 2022
ಸೌರಾಷ್ಟ್ರದ ಜನರು ವಲಸೆ ಹೋಗಬೇಕಾಗಿತ್ತು, ಈಗ ಪ್ರಪಂಚವು ಸೌರಾಷ್ಟ್ರ ಮತ್ತು ಕಚ್‌ಗೆ ವಲಸೆ ಹೋಗುತ್ತಿದೆ. ಸೌರಾಷ್ಟ್ರ ಮತ್ತು ಗುಜರಾತ್‌ಗೆ ದೊಡ್ಡ ಫಾರ್ಮಾ ಉದ್ಯಮಗಳು ಬರಲಿವೆ. ಹಲವು ಕ್ಷೇತ್ರಗಳಲ್ಲಿ ಗುಜರಾತ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಗುಜರಾತ್ ಜನರಿಗೆ ಬುಲೆಟ್ ರೈಲಿನ ಲಾಭ ಸಿಗಲಿದೆ. ಬಂದರು ಅಭಿವೃದ್ಧಿಗೆ ಹೆದ್ದಾರಿಗಳು ಉತ್ತಮ ಸಂಪರ್ಕವನ್ನು ಒದಗಿಸುತ್ತವೆ. ಗುಜರಾತ್ ಉತ್ತಮ ವಿಮಾನ ಸಂಪರ್ಕ ಹೊಂದಿದೆ. ನಾವು ಹೇಗೆ ಅಭಿವೃದ್ಧಿ ಮಾಡಬಹುದು ಎಂಬುದನ್ನು ನಾವು ಇಂದು ನೋಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಒಂದಾನೊಂದು ಕಾಲದಲ್ಲಿ ವಡೋದರಾದಿಂದ ವಾಪಿ ನಡುವೆ ಕೈಗಾರಿಕೆಗಳು ಅಭಿವೃದ್ಧಿಗೊಂಡವು. ಇಂದು ರಾಜ್ಯದ ಪ್ರತಿಯೊಂದು ದಿಕ್ಕಿನಲ್ಲೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ನಮ್ಮ ಡಬಲ್ ಇಂಜಿನ್ ಸರ್ಕಾರವು ಗುಜರಾತ್ ಅಭಿವೃದ್ಧಿಗೆ ಹೊಸ ಆದ್ಯತೆ ನೀಡಿದೆ. 2014ಕ್ಕಿಂತ ಮೊದಲು ಗುಜರಾತ್‌ನ ಹಲವು ಯೋಜನೆಗಳಿದ್ದವು. ಕೇಂದ್ರ ಸರ್ಕಾರದ ಬಳಿ ಹೋದಾಗ ಅವರು ಮೋದಿಯನ್ನು ಮಾತ್ರ ನೋಡುತ್ತಿದ್ದರೇ ವಿನಃ ನಮ್ಮ ಯೋಜನೆಯನ್ನು ಜಾರಿ ಮಾಡಲಿಲ್ಲ. ಅವರು ಸರ್ದಾರ್ ಸರೋವರ ಯೋಜನೆಗೆ ಅವಕಾಶ ನೀಡಲಿಲ್ಲ. ಈಗ ವಿಶ್ವದ ಅತಿ ಎತ್ತರದ ಸರ್ದಾರ್ ಪ್ರತಿಮೆಯನ್ನು ಗುಜರಾತ್‌ನಲ್ಲಿ ಸ್ಥಾಪಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ.
Prime Minister Narendra Modi to address a public rally shortly at Atkot, Rajkot in Gujarat. Earlier, he inaugurated the newly built Matushri KDP Multispeciality Hospital here. pic.twitter.com/bj1ZC2Kx7R
— ANI (@ANI) May 28, 2022
ರಾಜ್ಯದಲ್ಲಿ ಈಗ 30 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ ಎಂದು ತಿಳಿದರೆ ಬಹಳ ಸಂತೋಷವಾಗುತ್ತದೆ. ಮೊದಲು ಕೇವಲ ಒಂಬತ್ತು ವೈದ್ಯಕೀಯ ಕಾಲೇಜುಗಳು ಮತ್ತು ಕೇವಲ 1100 ಸೀಟುಗಳು ಇದ್ದವು. ಇಂದು ಒಟ್ಟು 30 ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ ಎಂದು ತಿಳಿದು ಸಂತೋಷವಾಗುತ್ತದೆ. ಆರ್ಥಿಕವಾಗಿ ದುರ್ಬಲವಾಗಿರುವ ಪೋಷಕರು ಕೂಡ ತಮ್ಮ ಮಕ್ಕಳು ವೈದ್ಯರಾಗಬೇಕೆಂದು ಬಯಸುತ್ತಾರೆ. ಆದರೆ ಪ್ರವೇಶದ ಸಮಯದಲ್ಲಿ ಅವರು ಮೊದಲು ಕೇಳಿದ್ದು ನಿಮಗೆ ಇಂಗ್ಲಿಷ್ ತಿಳಿದಿದೆಯೇ? ಎಂದು. ಇದು ದೊಡ್ಡ ಅನ್ಯಾಯವಾಗಿದೆ. ಆದರೀಗ ನಾವು ನಿಯಮಗಳನ್ನು ಬದಲಾಯಿಸಿದ್ದೇವೆ. ಈಗ ಗುಜರಾತಿ ಭಾಷೆಯ ಶೈಕ್ಷಣಿಕ ಹಿನ್ನೆಲೆಯ ವಿದ್ಯಾರ್ಥಿಗಳು ಸಹ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಬಹುದು ಎಂದು ಮೋದಿ ಹೇಳಿದ್ದಾರೆ.
ಇಂದು ಸಂಜೆ 4 ಗಂಟೆಗೆ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ‘ಸಹಕಾರ್ ಸೇ ಸಮೃದ್ಧಿ’ ಕುರಿತು ವಿವಿಧ ಸಹಕಾರಿ ಸಂಸ್ಥೆಗಳ ನಾಯಕರ ವಿಚಾರ ಸಂಕಿರಣವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಅಲ್ಲಿ ಅವರು ಇಫ್ಕೋ, ಕಲೋಲ್‌ನಲ್ಲಿ ನಿರ್ಮಿಸಲಾದ ನ್ಯಾನೋ ಯೂರಿಯಾ (ದ್ರವ) ಸ್ಥಾವರವನ್ನು ಉದ್ಘಾಟಿಸಲಿದ್ದಾರೆ. ಗುಜರಾತ್‌ನ ಸಹಕಾರಿ ಕ್ಷೇತ್ರವು ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಲ್ಲಿ 84,000 ಕ್ಕೂ ಹೆಚ್ಚು ಸಂಘಗಳಿವೆ. ಸುಮಾರು 231 ಲಕ್ಷ ಸದಸ್ಯರು ಈ ಸಂಘಗಳೊಂದಿಗೆ ಸಂಬಂಧ ಹೊಂದಿದ್ದಾರೆ. ರಾಜ್ಯದಲ್ಲಿ ಸಹಕಾರ ಆಂದೋಲನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ‘ಸಹಕಾರ ಸೇ ಸಮೃದ್ಧಿ’ ಕುರಿತು ವಿವಿಧ ಸಹಕಾರಿ ಸಂಸ್ಥೆಗಳ ಮುಖಂಡರ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ರಾಜ್ಯದ ವಿವಿಧ ಸಹಕಾರಿ ಸಂಸ್ಥೆಗಳ 7,000ಕ್ಕೂ ಹೆಚ್ಚು ಪ್ರತಿನಿಧಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ. ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವ ವಿಧಾನಗಳೊಂದಿಗೆ ರೈತರಿಗೆ ಮತ್ತಷ್ಟು ಒದಗಿಸುವ ಪ್ರಯತ್ನದಲ್ಲಿ, ಸುಮಾರು 175 ಕೋಟಿ ರೂಪಾಯಿ ವೆಚ್ಚದಲ್ಲಿ IFFCO, ಕಲೋಲ್‌ನಲ್ಲಿ ನಿರ್ಮಿಸಲಾದ ನ್ಯಾನೋ ಯೂರಿಯಾ (ದ್ರವ) ಸ್ಥಾವರವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
ನ್ಯಾನೋ ಯೂರಿಯಾ ಬಳಕೆಯಿಂದ ಬೆಳೆಗಳ ಇಳುವರಿ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಅಲ್ಟ್ರಾಮೋಡರ್ನ್ ನ್ಯಾನೋ ರಸಗೊಬ್ಬರ ಘಟಕವನ್ನು ಸ್ಥಾಪಿಸಲಾಗಿದೆ. ಸ್ಥಾವರವು ದಿನಕ್ಕೆ 500 ಮಿಲಿಯ ಸುಮಾರು 1.5 ಲಕ್ಷ ಬಾಟಲಿಗಳನ್ನು ಉತ್ಪಾದಿಸುತ್ತದೆ. ಪ್ರಧಾನಮಂತ್ರಿ ಮೋದಿ ಭೇಟಿ ನೀಡುತ್ತಿರುವ ಮಾತುಶ್ರೀ ಕೆಡಿಪಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಶ್ರೀ ಪಟೇಲ್ ಸೇವಾ ಸಮಾಜವು ನಿರ್ವಹಿಸುತ್ತದೆ.
ಇದು ಉನ್ನತ ಮಟ್ಟದ ವೈದ್ಯಕೀಯ ಉಪಕರಣಗಳನ್ನು ಲಭ್ಯವಾಗುವಂತೆ ಮಾಡುತ್ತದೆ ಮತ್ತು ಪ್ರದೇಶದ ಜನರಿಗೆ ವಿಶ್ವ ದರ್ಜೆಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ. ಭೇಟಿಯ ನಂತರ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಭಾಷಣ ಮಾಡಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:00 pm, Sat, 28 May 22