ಕೇಂದ್ರವೇ ಲಸಿಕೆ ಖರೀದಿಸಿ ರಾಜ್ಯಗಳಿಗೆ ನೀಡಬಹುದು: ಸುಳಿವು ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Nirmala Sitharaman: ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಬಜೆಟ್ ನಲ್ಲಿ ಲಸಿಕೆ ಖರೀದಿಗೆ ಇಟ್ಟಿರುವ 35 ಸಾವಿರ ಕೋಟಿ ರೂಪಾಯಿ ಏಕೆ ಬಳಸಬಾರದು ಎಂದು ಕೇಳಿದೆ. 18-44 ವರ್ಷ ವಯೋಮಾನದವರಿಗೆ ಉಚಿತ ಲಸಿಕೆಯನ್ನ ಕೇಂದ್ರ ಏಕೆ ನೀಡಬಾರದು ಎಂದೂ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ನವದೆಹಲಿ: ದೇಶವನ್ನು ಕಾಡುತ್ತಿರುವ ಕೊರೊನಾ ಪೆಡಂಭೂತದ ವಿರುದ್ಧ ಮುನ್ನೆಚ್ಚರಿಕೆಯ ಕ್ರಮವಾಗಿ ಲಸಿಕೆ ಹಾಕಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ತಡವಾಗಿಯಾದರೂ ಒಂದು ಉತ್ತಮ ನಿರ್ಧಾರಕ್ಕೆ ಬಂದಂತಿದೆ. ಕೇಂದ್ರ ಸರ್ಕಾರವೇ ಸಂಪೂರ್ಣ ಲಸಿಕೆ ಖರೀದಿಸಿ, ರಾಜ್ಯಗಳಿಗೆ ನೀಡಬಹುದು ಎಂದು ತಿಳಿದುಬಂದಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುಳಿವು ನೀಡಿದ್ದಾರೆ. ಕೇಂದ್ರ ಸರ್ಕಾರದಿಂದಲೇ ಸಂಪೂರ್ಣವಾಗಿ ಲಸಿಕೆ ಖರೀದಿಸುವ ಬಗ್ಗೆ ಪರಿಶೀಲನೆ ನಡೆಸಬಹುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಿರ್ಮಲಾ ಹೇಳಿಕೆಯಿಂದ ಕೇಂದ್ರ ಸರ್ಕಾರದ ಲಸಿಕಾ ಖರೀದಿ ನೀತಿಯಲ್ಲಿ ಮಹತ್ವದ ಬದಲಾವಣೆಯಾಗುವ ಬಗ್ಗೆ ಸುಳಿವು ಸಿಕ್ಕಿದೆ. ವಿಪಕ್ಷದ ಆಳ್ವಿಕೆಯ ರಾಜ್ಯಗಳು ಕೇಂದ್ರ ಸರ್ಕಾರದ ಮುಂದೆ ಆರಂಭದಿಂದಲೂ ಇದೇ ಬೇಡಿಕೆ ಇಟ್ಟಿವೆ. ಕರ್ನಾಟಕ, ಆಂಧ್ರ ಪ್ರದೇಶ ಸೇರಿದಂತೆ ಅನೇಕ ರಾಜ್ಯ ಸರ್ಕಾರಗಳ ಲಸಿಕೆ ಖರೀದಿಯ ಜಾಗತಿಕ ಟೆಂಡರ್ ಗೆ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಕೇಂದ್ರ ಸರ್ಕಾರವೇ ಲಸಿಕೆ ಖರೀದಿಸಿ, ರಾಜ್ಯಗಳಿಗೆ ಪೂರೈಸಲು ರಾಜ್ಯ ಸರ್ಕಾರಗಳು ಪಟ್ಟು ಹಿಡಿದಿವೆ. ಕೇರಳ, ಆಂಧ್ರಪ್ರದೇಶ, ಒರಿಸ್ಸಾ, ದೆಹಲಿ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಿಂದ ಕೇಂದ್ರದಿಂದ ಲಸಿಕೆ ಖರೀದಿಗೆ ಪಟ್ಟು ಹಿಡಿದಿವೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಬಜೆಟ್ ನಲ್ಲಿ ಲಸಿಕೆ ಖರೀದಿಗೆ ಇಟ್ಟಿರುವ 35 ಸಾವಿರ ಕೋಟಿ ರೂಪಾಯಿ ಏಕೆ ಬಳಸಬಾರದು ಎಂದು ಕೇಳಿದೆ. 18-44 ವರ್ಷ ವಯೋಮಾನದವರಿಗೆ ಉಚಿತ ಲಸಿಕೆಯನ್ನ ಕೇಂದ್ರ ಏಕೆ ನೀಡಬಾರದು ಎಂದೂ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಈ ಹಿನ್ನೆಲೆಯಲ್ಲಿ, ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಸರ್ಕಾರದ ಲಸಿಕಾ ಖರೀದಿ ನೀತಿ ಬದಲಾಗುವ ಬಗ್ಗೆ ಸುಳಿವು ನೀಡಿದ್ದಾರೆ.
ಈಗ ದೇಶದಲ್ಲಿ 18-44 ವರ್ಷದೊಳಗಿನವರಿಗೆ ರಾಜ್ಯ ಸರ್ಕಾರಗಳೇ ಲಸಿಕೆ ಖರೀದಿಸಿ ನೀಡುತ್ತಿವೆ. ಆದರೆ ರಾಜ್ಯಗಳಿಗೆ ಹೆಚ್ಚಿನ ಲಸಿಕೆ ಪೂರೈಕೆ ಆಗುತ್ತಿಲ್ಲ. ವಿದೇಶಿ ಕಂಪನಿಗಳ ಲಸಿಕೆಯನ್ನ ಕೇಂದ್ರ ಸರ್ಕಾರವೇ ಖರೀದಿಸಿ ರಾಜ್ಯಗಳಿಗೆ ನೀಡಬೇಕು ಎಂಬುದು ಬಹುತೇಕ ರಾಜ್ಯ ಸರ್ಕಾರಗಳ ಬೇಡಿಕೆಯಾಗಿದೆ.
(PM Modi lead union Government may purchase and distribute corona vaccine to state governments hint finance minister nirmala sitharaman)
ಇದನ್ನು ಓದಿ: ಕೊರೊನಾ ಲಸಿಕೆ ಖರೀದಿಗಾಗಿ ಗ್ಲೋಬಲ್ ಟೆಂಡರ್ ವಿಫಲ: ಒಗ್ಗೂಡಲು ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಜಗನ್ ಮೋಹನ್ ರೆಡ್ಡಿ
ಕೊರೊನಾ ಲಸಿಕೆ ಖರೀದಿಗಾಗಿ ಜಾಗತಿಕ ಟೆಂಡರ್ ಕೈಬಿಟ್ಟ ಕರ್ನಾಟಕ ಸರ್ಕಾರ: ಮುಂದೇನು?