AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂನಲ್ಲಿ ಪ್ರಧಾನಿ ಮೋದಿಯಿಂದ ಭಾರತರತ್ನ ಭೂಪೇನ್ ಹಜಾರಿಕಾ ಕುರಿತ ಪುಸ್ತಕ, 100 ರೂ. ಬೆಳ್ಳಿ ನಾಣ್ಯ ಬಿಡುಗಡೆ

ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ಗುವಾಹಟಿಗೆ ಆಗಮಿಸಿದ್ದಾರೆ. ಮಿಜೋರಾಂ ಮತ್ತು ಮಣಿಪುರಕ್ಕೆ ಒಂದು ದಿನದ ಭೇಟಿಯನ್ನು ಮುಗಿಸಿ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಡಾ. ಭೂಪೇನ್ ಹಜಾರಿಕಾ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಅವರನ್ನು ಗೌರವಿಸಲು ರಾಷ್ಟ್ರದ ನಿಜವಾದ ಗೌರವವಾಗಿ ಈ ನಾಣ್ಯವನ್ನು ಬಿಡುಗಡೆ ಮಾಡಿದರು. ಹಾಗೇ, ಅವರ ಕುರಿತಾದ ಪುಸ್ತಕ ಬಿಡುಗಡೆ ಮಾಡಿದರು.

ಸುಷ್ಮಾ ಚಕ್ರೆ
|

Updated on:Sep 13, 2025 | 8:27 PM

Share

ಗುವಾಹಟಿ, ಸೆಪ್ಟೆಂಬರ್ 13: ಅಸ್ಸಾಂನ ಪ್ರಸಿದ್ಧ ಗಾಯಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾದ ಭಾರತ ರತ್ನ ಡಾ. ಭೂಪೇನ್ ಹಜಾರಿಕಾ (Dr Bhupen Hazarika) ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಇಂದು ಗುವಾಹಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 100 ರೂ. ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡಿದರು. ಹಾಗೇ, ಪ್ರಸಿದ್ಧ ಲೇಖಕಿ ಅನುರಾಧಾ ಶರ್ಮಾ ಬೋರ್ಪುಜಾರಿ ಬರೆದ ಡಾ. ಭೂಪೇನ್ ಹಜಾರಿಕಾ ಅವರ ಜೀವನ ಚರಿತ್ರೆಯ ಪುಸ್ತಕವನ್ನು ಕೂಡ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು. ಡಾ. ಭೂಪೇನ್ ಹಜಾರಿಕಾ ಅವರು ಅಸ್ಸಾಂನಲ್ಲಿ ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ಗೌರವಿಸಲ್ಪಟ್ಟ ಮೊದಲ ವ್ಯಕ್ತಿಯಾಗಿದ್ದಾರೆ. ಹಣಕಾಸು ಸಚಿವಾಲಯದ ನಿರ್ದೇಶನದ ಮೇರೆಗೆ ಮುಂಬೈನ ಭಾರತ ಸರ್ಕಾರಿ ಟಂಕಸಾಲೆಯಲ್ಲಿ ಮುದ್ರಿಸಲಾದ 100 ರೂ. ನಾಣ್ಯವು ಒಟ್ಟು 40 ಗ್ರಾಂ ತೂಕವಿದ್ದು, ಶುದ್ಧ ಬೆಳ್ಳಿಯಿಂದ ಮಾಡಲ್ಪಟ್ಟಿದೆ.

ಈ ವೇಳೆ ಭೂಪೇನ್ ಹಜಾರಿಕಾ ಅವರ ಶತಮಾನೋತ್ಸವದ ಜನ್ಮ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಹಜಾರಿಕಾ ಭೌತಿಕವಾಗಿ ಇಲ್ಲದಿದ್ದರೂ, ಅವರ ಧ್ವನಿ ಜನರಿಗೆ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು. “ಕೆಲವೇ ದಿನಗಳ ಹಿಂದೆ, ಸೆಪ್ಟೆಂಬರ್ 8ರಂದು ಭೂಪೇನ್ ಹಜಾರಿಕಾ ಅವರ ಜನ್ಮದಿನದ ಸಂದರ್ಭದಲ್ಲಿ ಭೂಪೇನ್ ದಾ ಅವರಿಗೆ ಮೀಸಲಾಗಿರುವ ಲೇಖನದಲ್ಲಿ ನಾನು ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಅವರ ಜನ್ಮ ಶತಮಾನೋತ್ಸವ ವರ್ಷದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಾವೆಲ್ಲರೂ ಭೂಪೇನ್ ದಾ ಅವರನ್ನು ಪ್ರೀತಿಯಿಂದ ‘ಸುಧಾ ಕೊಂಥೋ’ ಎಂದು ಕರೆಯುತ್ತಿದ್ದೆವು. ಭೂಪೇನ್ ಹಜಾರಿಕಾ ಅವರ ಸಂಗೀತವು ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಯನ್ನು ಒಳಗೊಂಡಿದೆ. ಅವರು ಭಾರತದ ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಬೇರೂರಿದ್ದರು” ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಮಹಿಳಾ ಸಬಲೀಕರಣಕ್ಕೆ ಉದಾಹರಣೆ; ನೇಪಾಳದ ನೂತನ ಪ್ರಧಾನಿ ಸುಶೀಲಾ ಕರ್ಕಿಗೆ ಮೋದಿ ಅಭಿನಂದನೆ

“ದಶಕಗಳ ಹಿಂದೆ ಈಶಾನ್ಯವು ನಿರ್ಲಕ್ಷ್ಯಕ್ಕೆ ಬಲಿಯಾಗಿ, ಹಿಂಸಾಚಾರ ಮತ್ತು ಪ್ರತ್ಯೇಕತಾವಾದದ ಬೆಂಕಿಯಲ್ಲಿ ಸುಟ್ಟುಹೋದಾಗ ಭೂಪೇನ್ ದಾ ಆ ಕಷ್ಟದ ಸಮಯದಲ್ಲೂ ಭಾರತದ ಏಕತೆಗೆ ಧ್ವನಿ ನೀಡುತ್ತಲೇ ಇದ್ದರು. ಅವರು ಸಮೃದ್ಧ ಈಶಾನ್ಯದ ಕನಸು ಕಂಡಿದ್ದರು. ಅವರು ಈಶಾನ್ಯಕ್ಕಾಗಿ ಹಾಡುಗಳನ್ನು ಹಾಡಿದರು. ಅವರು ಅಸ್ಸಾಂಗಾಗಿ ಹಾಡುಗಳನ್ನು ಹಾಡಿದರು. ಇಂದು, ಈಶಾನ್ಯಕ್ಕಾಗಿ ಅವರ ಕನಸುಗಳನ್ನು ನನಸಾಗಿಸಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:18 pm, Sat, 13 September 25

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?