AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಬರುವನು…ಬರುವನು ಸ್ವಾತಿ ಮಿಶ್ರಾ ಹಾಡಿಗೆ ಮೋದಿ ಫಿದಾ

ರಾಮಲಲ್ಲಾನ್ನು ಅಯೋಧ್ಯೆಗೆ ಸ್ವಾಗತಿಸುವ ಹಾಡೊಂದನ್ನು ಮೋದಿ ಅವರು ಹಂಚಿಕೊಂಡಿದ್ದಾರೆ. ವಿಡಿಯೋ ಎಲ್ಲ ಕಡೆ ವೈರಲ್​​ ಆಗಿದೆ. ಸ್ವಾತಿ ಮಿಶ್ರಾ ಅವರ ರಾಮ್​​​​ ಆಯೇಂಗೆ.. ಆಯೇಂಗೆ ಎಂಬ ಹಾಡಿಗೆ ಪ್ರಧಾನಿ ಮೋದಿ ಫಿದಾ ಆಗಿದ್ದಾರೆ.

ರಾಮ ಬರುವನು...ಬರುವನು ಸ್ವಾತಿ ಮಿಶ್ರಾ ಹಾಡಿಗೆ ಮೋದಿ ಫಿದಾ
ಅಕ್ಷಯ್​ ಪಲ್ಲಮಜಲು​​
|

Updated on: Jan 03, 2024 | 10:59 AM

Share

ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ (Ram Lala Pran Pratistha) ನೆರವೇರಲಿದೆ. ಈಗಾಗಲೇ ಎಲ್ಲ ಸಿದ್ದತೆಗಳನ್ನು ರಾಮಜನ್ಮ ಭೂಮಿ ಟ್ರಸ್ಟ್​​​​​ ನಡೆಸಿದೆ. ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಾಮನ ಜಪ ಈಡಿ ದೇಶದಲ್ಲಿ ಹಬ್ಬಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ಕರ್ನಾಟಕದ ಮೈಸೂರಿನ ಶಿಲ್ಪಿ ಕೆತ್ತಿದ ಮೂರ್ತಿಯೇ ಫೈನಲ್​​​ ಆಗಿದ್ದು ಇದು ಇನ್ನು ವಿಶೇಷವಾಗಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ (NarendraModi)  ಅವರು ಅಯೋಧ್ಯೆಯಲ್ಲಿ ಅನೇಕ ಕಾರ್ಯಕ್ರಮಗಳಿಗೆ ಹಾಗೂ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದರ ನಡುವೆ ಮೋದಿ ಅವರು ಒಂದು ವಿಶೇಷ ವಿಚಾರವೊಂದನ್ನು ಎಕ್ಸ್​​​ನಲ್ಲಿ ಹಂಚಿಕೊಂಡಿದ್ದಾರೆ. ರಾಮಲಲ್ಲಾನ್ನು ಅಯೋಧ್ಯೆಗೆ ಸ್ವಾಗತಿಸುವ ಹಾಡೊಂದನ್ನು ಮೋದಿ ಅವರು ಹಂಚಿಕೊಂಡಿದ್ದಾರೆ. ವಿಡಿಯೋ ಎಲ್ಲ ಕಡೆ ವೈರಲ್​​ ಆಗಿದೆ. ಸ್ವಾತಿ ಮಿಶ್ರಾ ಅವರ ರಾಮ್​​​​ ಆಯೇಂಗೆ.. ಆಯೇಂಗೆ ಎಂಬ ಹಾಡಿಗೆ ಪ್ರಧಾನಿ ಮೋದಿ ಫಿದಾ ಆಗಿದ್ದಾರೆ

ಈ ಹಾಡು ಎಲ್ಲರನ್ನೂ ಒಂದು ಬಾರಿ ಮಂತ್ರಮುಗ್ಧಗೊಳಿಸುತ್ತದೆ ಎಂದು ಹೇಳಿದ್ದಾರೆ. ಹಾಡಿನ ಯೂಟ್ಯೂಬ್​​​​ ಲಿಂಕ್​ನ್ನು ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಶ್ರೀ ರಾಮಲಲ್ಲಾ ಅವರನ್ನು ಸ್ವಾಗತಿಸುವ ಸ್ವಾತಿ ಮಿಶ್ರಾ ಜಿಯವರ ಈ ಭಕ್ತಿ ಭಜನೆ ಮಂತ್ರಮುಗ್ಧಗೊಳಿಸುತ್ತದೆ ಎಂದು ಎಕ್ಸ್​​ನಲ್ಲಿ ಮೋದಿ ಬರೆದುಕೊಂಡಿದ್ದಾರೆ.

ಸ್ವಾತಿ ಮಿಶ್ರಾ ಬಿಹಾರದ ಮೂಲದವರು, ಖ್ಯಾತ ಹಾಡುಗಾರ್ತಿಯಾಗಿರುವ ಸ್ವಾತಿ ಮಿಶ್ರಾ, ತಮ್ಮ ಯೂಟ್ಯೂಬ್​​​​ ಚಾನಲ್​​ನಲ್ಲಿ ಅನೇಕ ಇಂತಹ ಭಕ್ತಿಗೀತೆಗಳನ್ನು ಹಂಚಿಕೊಂಡಿದ್ದಾರೆ. ಇವರ ಹಲವು ಹಾಡುಗಳು ಭಾರೀ ವೈರಲ್​​​ ಆಗಿವೆ. ಇದೀಗ ಅಯೋಧ್ಯೆ ರಾಮಮಂದಿರಕ್ಕೆ ರಾಮಲಲ್ಲಾನ್ನು ಸ್ವಾಗತಿಸುವ ಹಾಡನ್ನು ಹಾಡಿದ್ದಾರೆ. ಇದನ್ನು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್​​​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸಾವಿರ ವರ್ಷಗಳವರೆಗೆ ದುರಸ್ತಿ ಅಗತ್ಯವಿಲ್ಲ, ಭೂಕಂಪಕ್ಕೂ ಅಲ್ಲಾಡಲ್ಲ ರಾಮ ಮಂದಿರ

ಸ್ವಾತಿ ಮಿಶ್ರಾ ಸದ್ಯ ಮುಂಬೈನಲ್ಲಿದ್ದು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ರಾಮಲಲ್ಲಾನ ಬಗ್ಗೆ ಹಾಡಿರುವ ಈ ಹಾಡು ಅಷ್ಟೊಂದು ವೈರಲ್​​ ಆಗಿರಲಿಲ್ಲ, ಆದರೆ ಇದೀಗ ಭಾರೀ ವೈರಲ್​​ ಆಗಿದೆ. ಇದನ್ನು ಪ್ರಧಾನಿ ಮೋದಿ ಕೂಡ ಹಂಚಿಕೊಂಡಿರುವುದು ಇನ್ನು ವಿಶೇಷವಾಗಿದ್ದು, ಇದರಿಂದ ಸ್ವಾತಿ ಮಿಶ್ರಾ ಅವರಿಗೆ ಮತ್ತಷ್ಟು ಪೋತ್ಸಾಹ ನೀಡಿದ್ದಂತಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?