ಭಾರತ ಅತ್ಯಂತ ಕಷ್ಟದ ಸಂದರ್ಭಗಳಲ್ಲಿಯೂ ಹೊಸತನವನ್ನು ಕಂಡುಕೊಳ್ಳುವ ಶಕ್ತಿ ಹೊಂದಿದೆ: ಸೌರಾಷ್ಟ್ರ ತಮಿಳು ಸಂಗಮದಲ್ಲಿ ಮೋದಿ ಮಾತು
ಸಾಮರಸ್ಯ ಮತ್ತು ಸಾಂಸ್ಕೃತಿಕ ಘರ್ಷಣೆಗಳನ್ನು ದೂರವಿಡುವ ಅಗತ್ಯವಿದೆ. ನಾವು ಸಮನ್ವಯಕ್ಕೆ ಒತ್ತು ನೀಡಬೇಕೇ ಹೊರತು ಸಾಂಸ್ಕೃತಿಕ ಘರ್ಷಣೆಗಳಲ್ಲ. ನಾವು ಭಿನ್ನಾಭಿಪ್ರಾಯಗಳನ್ನು ಹುಡುಕಲು ಬಯಸುವುದಿಲ್ಲ. ನಾವು ಭಾವನಾತ್ಮಕ ಸಂಬಂಧಗಳನ್ನು ಹೊಂದಲು ಬಯಸುತ್ತೇವೆ
ದೆಹಲಿ: ಸೌರಾಷ್ಟ್ರ ಮತ್ತು ತಮಿಳುನಾಡಿನ (Tamil Nadu) ಹಂಚಿಕೆಯ ಇತಿಹಾಸವು ಭಾರತವು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿಯೂ ಹೊಸತನವನ್ನು ಕಂಡುಕೊಳ್ಳುವ ಶಕ್ತಿಯನ್ನು ಹೊಂದಿದೆ ಎಂಬ ಭರವಸೆಯನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ ಹೇಳಿದ್ದಾರೆ. ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸೌರಾಷ್ಟ್ರ ತಮಿಳು ಸಂಗಮದ (Saurashtra Tamil Sangamam) ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಮೋದಿ, ಸಂಗಮವು ಸರ್ದಾರ್ ಪಟೇಲ್ ಮತ್ತು ಸುಬ್ರಮಣ್ಯ ಭಾರತಿ ಅವರ ರಾಷ್ಟ್ರೀಯತೆಯ ಉತ್ಸಾಹದ ಸಂಗಮವಾಗಿದೆ ಎಂದು ಹೇಳಿದರು. ಸೌರಾಷ್ಟ್ರ-ತಮಿಳು ಸಂಗಮದಂತಹ ಮಹಾನ್ ಹಬ್ಬಗಳ ಮೂಲಕ ನಮ್ಮ ದೇಶದ ಏಕತೆ ರೂಪುಗೊಳ್ಳುತ್ತಿರುವ ಈ ಸಮಯದಲ್ಲಿ ಸರ್ದಾರ್ ಸಾಹಬ್ ನಮಗೆಲ್ಲ ಆಶೀರ್ವಾದವನ್ನು ಕಳುಹಿಸುತ್ತಿರುತ್ತಾರೆ. ದೇಶದ ಏಕತೆಯ ಈ ಆಚರಣೆಯು ಒಂದು ಭಾರತ, ಶ್ರೇಷ್ಠ ಭಾರತವನ್ನು ನೋಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಸೌರಾಷ್ಟ್ರ-ತಮಿಳು ಸಂಗಮದಂತಹ ಹೊಸ ಸಾಂಸ್ಕೃತಿಕ ಸಂಪ್ರದಾಯಕ್ಕೆ ದೇಶ ಸಾಕ್ಷಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸಾಮರಸ್ಯ ಮತ್ತು ಸಾಂಸ್ಕೃತಿಕ ಘರ್ಷಣೆಗಳನ್ನು ದೂರವಿಡುವ ಅಗತ್ಯವಿದೆ. ನಾವು ಸಮನ್ವಯಕ್ಕೆ ಒತ್ತು ನೀಡಬೇಕೇ ಹೊರತು ಸಾಂಸ್ಕೃತಿಕ ಘರ್ಷಣೆಗಳಲ್ಲ. ನಾವು ಭಿನ್ನಾಭಿಪ್ರಾಯಗಳನ್ನು ಹುಡುಕಲು ಬಯಸುವುದಿಲ್ಲ. ನಾವು ಭಾವನಾತ್ಮಕ ಸಂಬಂಧಗಳನ್ನು ಹೊಂದಲು ಬಯಸುತ್ತೇವೆ. ಇದು ಭಾರತದ ಅಮರ ಸಂಪ್ರದಾಯವಾಗಿದೆ. ಇಲ್ಲಿನ ಜವರು ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಾರೆ ಮತ್ತು ಒಳಗೊಳ್ಳುವಿಕೆಯೊಂದಿಗೆ ಮುನ್ನಡೆಯುತ್ತಾರೆ, ಎಲ್ಲರನ್ನು ಸ್ವೀಕರಿಸುತ್ತಾರೆ ಮತ್ತು ಮುನ್ನಡೆಯುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.
Glad to see the enthusiasm for Saurashtra-Tamil Sangamam. This initiative will further cultural exchange. https://t.co/4ZQfyiT5hp
— Narendra Modi (@narendramodi) April 26, 2023
ನಾವು ಶತಮಾನಗಳಿಂದ ‘ಸಂಗಮ’ದ ಸಂಪ್ರದಾಯವನ್ನು ಪೋಷಿಸುತ್ತಾ ಬಂದಿದ್ದೇವೆ. ತೊರೆಗಳ ಒಮ್ಮುಖವು ಸಂಗಮದ ಸೃಷ್ಟಿಗೆ ಕಾರಣವಾಗುವಂತೆ, ನಮ್ಮ ಕುಂಭಗಳು ನಮ್ಮ ವೈವಿಧ್ಯತೆಗಳ ಕಲ್ಪನೆಗಳು ಮತ್ತು ಸಂಸ್ಕೃತಿಗಳಿಗೆ ಸಂಗಮಗಳಾಗಿವೆ. ಇದಕ್ಕೆ ನಮ್ಮನ್ನು, ನಮ್ಮ ದೇಶವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವಿದೆ. ಸಂಗಮ್‌ನ ಶಕ್ತಿ ಅಂತಹದು ಎಂದಿದ್ದಾರೆ ಮೋದಿ.
ಇಂದು ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ, ಸೌರಾಷ್ಟ್ರ-ತಮಿಳು ಸಂಗಮಂನಂಥಾ ಹೊಸ ಸಂಪ್ರದಾಯದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಈ ಸಂಗಮವು ನರ್ಮದಾ ಮತ್ತು ವೈಗೈ ಸಂಗಮವಾಗಿದೆ. ಈ ಸಂಗಮವು ದಾಂಡಿಯಾ ಮತ್ತು ಕೋಲಾಟ್ಟಂನ ಸಂಗಮವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸಮಾರೋಪ ಸಮಾರಂಭದಲ್ಲಿ, ಶ್ರೀ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯದ ‘ಸೌರಾಷ್ಟ್ರ-ತಮಿಳು ಸಂಗಮಪ್ರಶಸ್ತಿ’ ಪುಸ್ತಕವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.
ಇದನ್ನೂ ಓದಿ: ಮತದಾರರ ಬಳಿಗೆ ಹೋಗುವ ಮುನ್ನ ಕರ್ನಾಟಕದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ನಾಳೆ ಮೋದಿ ಮಾತು!
ಸೌರಾಷ್ಟ್ರ ತಮಿಳು ಸಂಗಮಂ ಗುಜರಾತ್ ಮತ್ತು ತಮಿಳುನಾಡು ನಡುವೆ ಹಂಚಿಕೊಂಡ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವ ಕಾರ್ಯಕ್ರಮವಾಗಿದೆ.ಶತಮಾನಗಳ ಹಿಂದೆ, ಸೌರಾಷ್ಟ್ರ ಪ್ರದೇಶದಿಂದ ಅನೇಕ ಜನರು ತಮಿಳುನಾಡಿಗೆ ವಲಸೆ ಬಂದರು. ಸೌರಾಷ್ಟ್ರ ತಮಿಳು ಸಂಗಮಂ ಸೌರಾಷ್ಟ್ರೀಯ ತಮಿಳರು ತಮ್ಮ ಬೇರುಗಳೊಂದಿಗೆ ಮರುಸಂಪರ್ಕಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಪಿಎಂಒ ಹೇಳಿಕೆ ತಿಳಿಸಿದೆ.
10 ದಿನಗಳ ಸಂಗಮದಲ್ಲಿ 3000 ಕ್ಕೂ ಹೆಚ್ಚು ಸೌರಾಷ್ಟ್ರೀಯ ತಮಿಳರು ವಿಶೇಷ ರೈಲಿನಲ್ಲಿ ಸೋಮನಾಥಕ್ಕೆ ಬಂದರು. ಕಾರ್ಯಕ್ರಮವು ಏಪ್ರಿಲ್ 17 ರಂದು ಪ್ರಾರಂಭವಾಗಿದ್ದು ಸಮಾರೋಪ ಸಮಾರಂಭವು ಇಂದು ಸೋಮನಾಥದಲ್ಲಿ ನಡೆದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ