PM Narendra Modi ಜೂನ್ 21ರ ನಂತರ ಎಲ್ಲ ರಾಜ್ಯಗಳಿಗೂ ಕೇಂದ್ರದಿಂದ ಉಚಿತ ಲಸಿಕೆ: ನರೇಂದ್ರ ಮೋದಿ

PM Modi Address the Nation: ಯಾರಿಗಾದರೂ ಉಚಿತ ಲಸಿಕೆಯ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುತ್ತೇವೆ ಎಂದಾದರೆ ಅದಕ್ಕೂ ಅವಕಾಶವಿದೆ. ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಲಸಿಕೆ ಡೋಸ್​ಗಳ ಪೈಕಿ ಶೇ 25ರಷ್ಟು ಖಾಸಗಿ ವೈದ್ಯಕೀಯ ಸಂಸ್ಥೆಗಳ ಖರೀದಿಗೆ ಅವಕಾಶ ನೀಡಲಾಗುವುದು

PM Narendra Modi ಜೂನ್ 21ರ ನಂತರ ಎಲ್ಲ ರಾಜ್ಯಗಳಿಗೂ ಕೇಂದ್ರದಿಂದ ಉಚಿತ ಲಸಿಕೆ: ನರೇಂದ್ರ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 07, 2021 | 5:52 PM

ದೆಹಲಿ: ದೇಶವನ್ನುದ್ದೇಶಿಸಿ ಮಾತನಾಡಿದ  ಪ್ರಧಾನಿ ನರೇಂದ್ರ  ಮೋದಿ ಅವರು ಯೋಗ ದಿನವೂ ಆಗಿರುವ ಜೂನ್ 21ರ ನಂತರ ದೇಶದಲ್ಲಿ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಕೊಡುವ ಅಭಿಯಾನ ಹೊಸ ವೇಗದಿಂದ ನಡೆಯಲಿದೆ. ಭಾರತ ಸರ್ಕಾರವೇ ಎಲ್ಲ ರಾಜ್ಯಗಳಿಗೂ ಉಚಿತವಾಗಿ ಕೊಡಲಿದೆ ಎಂದಿದ್ದಾರೆ. ಭಾರತದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಕೊಡಲಾಗುವುದು. ಬಡವರು, ಮಧ್ಯಮ ವರ್ಗದವರು ಎಂಬ ಭೇದ ಇರುವುದಿಲ್ಲ. ಯಾರಿಗಾದರೂ ಉಚಿತ ಲಸಿಕೆಯ ಬದಲು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುತ್ತೇವೆ ಎಂದಾದರೆ ಅದಕ್ಕೂ ಅವಕಾಶವಿದೆ. ಖಾಸಗಿ ಆಸ್ಪತ್ರೆಗಳು ಲಸಿಕೆಗಳಿಗೆ ಸೇವಾ ಶುಲ್ಕವಾಗಿ 150 ರೂ. ಮಾತ್ರ ವಿಧಿಸಬಹುದು. ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಲಸಿಕೆ ಡೋಸ್​ಗಳ ಪೈಕಿ ಶೇ 25ರಷ್ಟು ಖಾಸಗಿ ವೈದ್ಯಕೀಯ ಸಂಸ್ಥೆಗಳ ಖರೀದಿಗೆ ಅವಕಾಶ ನೀಡಲಾಗುವುದು ಎಂದು ಮೋದಿ ಹೇಳಿದ್ದಾರೆ.

ಕೊರೊನಾದ 2ನೇ ಅಲೆಯ ಮೊದಲೇ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಕೊಡದಿದ್ದರೆ ಏನಾಗ್ತಿತ್ತು ಯೋಚಿಸಿ. ವೈದ್ಯರು, ನರ್ಸಿಂಗ್ ಸಿಬ್ಬಂದಿ, ಆ್ಯಂಬುಲೆನ್ಸ್​ ಡ್ರೈವರ್​, ಸ್ವಚ್ಛತಾ ಕಾರ್ಮಿಕರಿಗೆ ಲಸಿಕೆ ಹಾಕಿಸದಿದ್ದರೆ ಏನಾಗುತ್ತಿತ್ತು? ಅವರಿಗೆ ಲಸಿಕೆ ಸಿಕ್ಕ ಕಾರಣದಿಂದಲೇ ಅವರು ಇತರರ ಆರೋಗ್ಯ ಕಾಪಾಡಲು ತೊಡಗಿಸಿಕೊಳ್ಳಲು ಆಯಿತು. ಒಂದು ಅಳತೆ ಎಲ್ಲರಿಗೂ ಅನ್ವಯಿಸುವುದಿಲ್ಲ ಎಂಬ ಮಾತು ಕೇಳಿಬಂತು. ಸಂವಿಧಾನದ ಪ್ರಕಾರ ಆರೋಗ್ಯ ಎನ್ನುವುದು ರಾಜ್ಯ ಹೊಣೆಗಾರಿಕೆ. ಹೀಗಾಗಿಯೇ ಕೇಂದ್ರ ಸರ್ಕಾರವು ಬೃಹತ್ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ರಾಜ್ಯಗಳಿಗೆ ಕೊಟ್ಟಿತು.

ಸ್ಥಳೀಯ ಮಟ್ಟದಲ್ಲಿ ಕರ್ಫ್ಯೂ, ಲಾಕ್​ಡೌನ್, ಕಂಟೇನ್​ಮೆಂಟ್ ವಲಯದ ಅಧಿಕಾರ ರಾಜ್ಯ ಸರ್ಕಾರಗಳಿಗೆ ಕೊಡಲಾಯಿತು. ಜನವರಿಯಿಂದ ಏಪ್ರಿಲ್​ವರೆಗೆ ಲಸಿಕೆ ಅಭಿಯಾನ ಕೇಂದ್ರದ ಉಸ್ತುವಾರಿಯಲ್ಲಿಯೇ ನಡೆಯಿತು. ಜನರು ಉತ್ಸಾಹದಿಂದ ಲಸಿಕೆ ಹಾಕಿಸಿಕೊಳ್ಳುತ್ತಿದ್ದು ಕೆಲ ರಾಜ್ಯ ಸರ್ಕಾರಗಳು ಲಸಿಕೆ ಹೊಣೆಯನ್ನು ನಮಗೂ ಕೊಡಿ ಎಂದು ಕೇಳಿದವು. ಲಸಿಕೆಗಾಗಿ ವಯೋಮಿತಿ ಏಕೆ ಎಂಬೆಲ್ಲಾ ಪ್ರಶ್ನೆಗಳು ಬಂದವು.

ಮಾಧ್ಯಮದ ಒಂದು ವರ್ಗ ಈ ವಿಚಾರದಲ್ಲಿ ಒಂದು ಆಂದೋಲನವೇ ನಡೆಯಿತು. ಈ ವಿಚಾರದಲ್ಲಿ ಒಂದು ಸಹಮತ ಬಂದಿತು.   ರಾಜ್ಯ ಸರ್ಕಾರಗಳೂ ಪ್ರಯತ್ನ ಮಾಡುತ್ತವೆ ಎಂದರೆ ನಾವು ಅವಕಾಶ ಕೊಡಬೇಕಿತ್ತು. ಹೀಗಾಗಿ ನಾವು ಅಭಿಯಾನದಲ್ಲಿ ಒಂದು ಬದಲಾವಣೆ ತಂದೆವು. ಹೊಣೆಗಾರಿಕೆಯನ್ನು ಅವರಿಗೂ ಕೊಡೋಣ ಅಂತ ನಿರ್ಧರಿಸಿದೆವು.

ಅವರೂ ಪ್ರಯತ್ನಿಸಿದರು. ಅವರಿಗೆ ವಿಶ್ವದ ಪರಿಸ್ಥಿತಿ ಏನು ಅಂತ ಆಗ ಅರ್ಥವಾಯಿತು.

ಪ್ರಯತ್ನಗಳ ನಂತರ ಕೆಲ ರಾಜ್ಯಗಳು ಹಿಂದಿನ ವ್ಯವಸ್ಥೆಗಳೇ ಸರಿಯಿತ್ತು ಎಂಬ ಅಭಿಪ್ರಾಯಕ್ಕೆ ಬಂದವು. ಲಸಿಕೆಗಳ ವಿಚಾರದಲ್ಲಿ ರಾಜ್ಯಗಳು ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡವು. ನಮಗೂ ದೇಶದ ಜನರ ಹಿತವೇ ಮುಖ್ಯ. ಹೀಗಾಗಿಯೇ ಮತ್ತೆ ಜನವರಿಯಲ್ಲಿ ಇದ್ದ ವ್ಯವಸ್ಥೆಯನ್ನೇ ತಂದೆವು.

ರಾಜ್ಯಗಳಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಇದ್ದ ಶೇ 25ರಷ್ಟು ಹೊಣೆಗಾರಿಕೆಯನ್ನೂ ಭಾರತ ಸರ್ಕಾರವೇ ತೆಗೆದುಕೊಳ್ಳಲಿದೆ. ಮುಂದಿನ ಎರಡು ವಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊಸ ಮಾರ್ಗದರ್ಶಿ ಸೂತ್ರಗಳ ಅನ್ವಯ ಲಸಿಕೆ ಅಭಿಯಾನಕ್ಕೆ ಹೊಸ ವೇಗ ಕೊಡುತ್ತದೆ.

ಗೆಲುವು ಬೇಕಾದವರು ಸುಲಭವಾಗಿ ಸೋಲೊಪ್ಪುವುದಿಲ್ಲ. ಕಠಿಣ ಪರಿಶ್ರಮದಿಂದ ಹೋರಾಡುತ್ತಾರೆ. ಪರಿಸ್ಥಿತಿ ಬದಲಾದಂತೆ ತಮ್ಮ ತಂತ್ರಗಳನ್ನೂ ಬದಲಿಸಿಕೊಳ್ಳುತ್ತಾರೆ. ಲಸಿಕೆ ವಿಚಾರದಲ್ಲಿ ಭಾರತವು ವಿಶ್ವದ ಹಲವು ದೇಶಗಳಿಗಿಂತ ಮುಂದಿದೆ. ಭಾರತದ ಕೊವಿನ್ ಮಾದರಿಯ ಪ್ಲಾಟ್​ಫಾರಂ ರೂಪಿಸಲು ಹಲವು ದೇಶಗಳು ಮುಂದೆ ಬಂದಿವೆ. ನಮಗೆ ಪ್ರತಿ ಡೋಸ್​ನ ಮಹತ್ವ ಅರ್ಥವಾಗಿದೆ. ಒಂದು ಡೋಸ್ ಲಸಿಕೆ ಒಂದು ಜೀವ ಉಳಿಸಬಹುದು. ರಾಜಕಾರಣದ ಮಾತುಗಳು ಈ ವೇಳೆ ಬೇಡ. ಅದು ಯಾರಿಗೂ ಇಷ್ಟವಾಗುವುದಿಲ್ಲ. ಲಸಿಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾಗಲಿದೆ. ಇದನ್ನು ಜನರಿಗೆ ತಲುಪಿಸುವುದು ಎಲ್ಲ ಜನನಾಯಕರ ಕರ್ತವ್ಯವಾಗಿದೆ. ಮಹಾಪಿಡುಗಿನ ಈ ಸಮಯದಲ್ಲಿ ಬಡವರ ಎಲ್ಲ ಅಗತ್ಯಗಳನ್ನು ಗಮನಿಸಿ, ನಾವು ಅವರ ಜೊತೆಗೆ ಇರುತ್ತೇವೆ.

ನವೆಂಬರ್​ವರೆಗೂ ಬಡವರಿಗೆ ಉಚಿತ ಆಹಾರ ಧಾನ್ಯ ಕೊಡುತ್ತೇವೆ. ದೇಶದ 80 ಕೋಟಿ ಜನರಿಗೆ ಉಚಿತ ಧಾನ್ಯ ಸಿಗಲಿದೆ. ಭಾರತದಲ್ಲಿ ಲಸಿಕೆ ಅಭಿಯಾನ ಆರಂಭವಾದಾಗ ಬಡವರಿಗೆ ಸಿಗುತ್ತೋ ಇಲ್ವೋ ಎಂಬ ಆತಂಕವಿತ್ತು. ಆದರೆ ಭಾರತಕ್ಕೆ ಲಸಿಕೆ ಬಂದಾಗ ಇಂಥ ಚರ್ಚೆಗಳೂ ಹೆಚ್ಚಾದವು. ಲಸಿಕೆಯ ಆಧರಿಸಿ ಅನುಮಾನ ಬಿತ್ತುತ್ತಿರುವವರನ್ನೂ ದೇಶದ ಜನರು ಗಮನಿಸುತ್ತಿದ್ದಾರೆ. ಈ ಪಿಡುಗಿನ ಸಂದರ್ಭದಲ್ಲಿ ನಾವೆಲ್ಲರೂ ಜೊತೆಯಾಗಿರಬೇಕು.

ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಜಯಗಳಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿ ಮೋದಿ ಭಾಷಣ ಮುಗಿಸಿದ್ದಾರೆ.

ಇದನ್ನೂ ಓದಿ:  PM Narendra Modi ಕೊವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆಯೇ ನಮ್ಮ ಸುರಕ್ಷಾ ಕವಚ: ನರೇಂದ್ರ ಮೋದಿ

(PM Narendra Modi announces centralized vaccine drivevaccines will be procured by Govt of India and given to States for free)

Published On - 5:39 pm, Mon, 7 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್