ಸುಸ್ಥಿರ ಅಭಿವೃದ್ಧಿ ಗುರಿಗಳ ಅಜೆಂಡಾದಲ್ಲಿ ಭಾರತದ ರ‍್ಯಾಂಕಿಂಗ್ 4 ದಕ್ಷಿಣ ಏಷ್ಯಾ ರಾಷ್ಟ್ರಗಳಿಗಿಂತ ಕೆಳಗೆ: ವರದಿ

ಭಾರತದ ಎಸ್​ಡಿಜಿ ರ‍್ಯಾಕಿಂಗ್ ನಾಲ್ಕು ದಕ್ಷಿಣ ಏಷ್ಯಾ ರಾಷ್ಟ್ರಗಳಾಗಿರುವ ಭೂತಾನ್, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಗಿಂತ ಕೆಳಗಿದೆ. ಭಾರತದ ಒಟ್ಟಾರೆ ಎಸ್​ಡಿಜಿ ಸ್ಕೋರ್ 100 ರಲ್ಲಿ 61.9 ಆಗಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳ ಅಜೆಂಡಾದಲ್ಲಿ ಭಾರತದ ರ‍್ಯಾಂಕಿಂಗ್ 4 ದಕ್ಷಿಣ ಏಷ್ಯಾ ರಾಷ್ಟ್ರಗಳಿಗಿಂತ ಕೆಳಗೆ: ವರದಿ
ಸುಸ್ಥಿರ ಅಭಿವೃದ್ಧಿ ಗುರಿಗಳ ಅಜೆಂಡಾ

ವಿಶ್ವಸಂಸ್ಥೆಯ193 ರಾಷ್ಟ್ರಗಳ 17 ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (ಎಸ್​ಡಿಜಿ) ಸಂಬಂಧಿಸಿದಂತೆ 2015ರಲ್ಲಿ ಮಾಡಿಕೊಂಡ 2030ರ ಅಜೆಂಡಾ ಪ್ರಕಾರ, ಭಾರತದ ರ‍್ಯಾಕಿಂಗ್ ಎರಡು ಸ್ಥಾನ ಕುಸಿದು 117 ಕ್ಕೆ ಬಂದಿದೆ ಎಂದು ವರದಿಯೊಂದರ ಮೂಲಕ ಗೊತ್ತಾಗಿದೆ. ಭಾರತದ ಪರಿಸರ 2021 ರ ವರದಿಯಲ್ಲಿ ಬೆಳಕಿಗೆ ಬಂದಿರುವ ಹಾಗೆ ಕಳೆದ ವರ್ಷ 115 ಇದ್ದ ಭಾರತದ ರ‍್ಯಾಕಿಂಗ್ ಈ ವರ್ಷ 117 ಕ್ಕೆ ಕುಸಿದಿದೆ. ಇದಕ್ಕೆ ಪ್ರಮುಖ ಕಾರಣಗಳೆಂದರೆ, ದೇಶದಲ್ಲಿ ಹಸಿವು ನಿರ್ಮೂಲಗೊಳಿಸಿ ಆಹಾರ ಸುರಕ್ಷತೆಯನ್ನು ಸಾಧಿಸುವುದು (ಎಸ್​ಡಿಜಿ 2), ಲಿಂಗ ಸಮಾನತೆಯನ್ನು ಸಾಧಿಸುವುದು ಮತ್ತು ಸುಭದ್ರ ಇನ್​ಫ್ರಾಸ್ಟ್ರಕ್ಚರ್ ನಿರ್ಮಾಣ, ಸುಸ್ಥಿರ ಕೈಗಾರೀಕರಣಕ್ಕೆ ಉತ್ತೇಜನ ನೀಡುವುದು ಮತ್ತು ಸೃಜನಶೀಲತೆಗೆ ಇಂಬು ನೀಡುವುದು (ಎಸ್​ಡಿಜಿ9) ಮೊದಲಾದ ಗುರಿಗಳನ್ನು ಸಾಧಿಸುವಲ್ಲಿ ಭಾರತ ಹಿಂದೆ ಬಿದ್ದಿರುವುದು.

ಭಾರತದ ರ‍್ಯಾಕಿಂಗ್ ನಾಲ್ಕು ದಕ್ಷಿಣ ಏಷ್ಯಾ ರಾಷ್ಟ್ರಗಳಿಗಿಂತ ಕೆಳಗಿದೆ

ಭಾರತದ ಎಸ್​ಡಿಜಿ ರ‍್ಯಾಕಿಂಗ್ ನಾಲ್ಕು ದಕ್ಷಿಣ ಏಷ್ಯಾ ರಾಷ್ಟ್ರಗಳಾಗಿರುವ ಭೂತಾನ್, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಗಿಂತ ಕೆಳಗಿದೆ. ಭಾರತದ ಒಟ್ಟಾರೆ ಎಸ್​ಡಿಜಿ ಸ್ಕೋರ್ 100 ರಲ್ಲಿ 61.9 ಆಗಿದೆ.

ಭಾರತದಲ್ಲಿ ಎಸ್​ಡಿಜಿಗಳನ್ನು ಸಾಧಿಸಲು 2030 ಟಾರ್ಗೆಟ್​ ವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯವಾರು ತಯಾರಿಯನ್ನು ಗಮನಿಸಿದ್ದೇಯಾದರೆ, ಜಾರ್ಖಂಡ್ ಮತ್ತು ಬಿಹಾರ್ ತೀರ ಹಿಂದುಳಿದಿವೆ. 17 ಗುರಿಗಳ ಪೈಕಿ ಜಾರ್ಖಂಡ್​ 5ರಲ್ಲಿ ಹಿಂದೆ ಬಿದ್ದಿದ್ದರೆ, ಬಿಹಾರ 7 ರಲ್ಲಿ ಹಿಂದುಳಿದಿದೆ. ನಿಗದಿತ ಅವಧಿಯಲ್ಲಿ ಗುರಿ ಸಾಧಿಸುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇರಳ, ಹಿಮಾಚಲ ಪ್ರದೇಶ ಮತ್ತು ಚಂಡೀಗಡ್ ಸೇರಿವೆ.

ಭಾರತದ ಈಪಿಐ ರ‍್ಯಾಕಿಂಗ್ 180 ರಾಷ್ಟ್ರಗಳ ಪೈಕಿ 168 ಆಗಿದೆ

ಪರಿಸರದ ಸ್ವಾಸ್ಥ್ಯ, ಹವಾಮಾನ, ವಾಯು ಮಾಲಿನ್ಯ, ನೈರ್ಮಲ್ಯ ಹಾಗೂ ಕುಡಿಯುವ ನೀರು, ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯ ಮೊದಲಾದ ಅಂಶಗಳ ಮೇಲೆ ನಿರ್ಧರಿಸಲ್ಪಡುವ ಪರಿಸರ ಪ್ರದರ್ಶನ ಸೂಚ್ಯಂಕಕ್ಕೆ ಸಂಬಂಧಿಸಿದಂತೆ ಭಾರತದ ರ‍್ಯಾಕಿಂಗ್ 180 ರಾಷ್ಟ್ರಗಳಲ್ಲಿ 168ನೇಯದ್ದಾಗಿದೆ.

ಬೇರೆ ಬೇರೆ ರಾಷ್ಟ್ರಗಳು ಪರಿಸರದಿಂದಾಟಾಗುವ ಅನಾರೋಗ್ಯಗಳಿಂದ ತಮ್ಮ ಜನರನ್ನು ಹೇಗೆ ರಕ್ಷಿಸುತ್ತಿವೆ ಅನ್ನುವುದನ್ನು ಸೂಚಿಸುವ ಪರಿಸರ ಆರೋಗ್ಯ ಕೆಟೆಗಿರಿಯಲ್ಲಿ ಭಾರತದ ರ‍್ಯಾಕಿಂಗ್ 172 ಆಗಿತ್ತು.

ಯೇಲ್ ಯೂನಿವರ್ಸಿಟಿ ಬಿಡುಗಡೆ ಮಾಡಿರುವ ಈಪಿಐ 2020 ವರದಿ ಪ್ರಕಾರ, ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಮತ್ತು ತಮ್ಮ ಗಡಿಭಾಗದೊಳಗಿನ ಸಕಲ ಜೀವವೈವಿಧ್ಯತೆಯನ್ನು ಸಂರಕ್ಷಿಸುವಲ್ಲಿ ವಿವಿಧ ರಾಷ್ಟ್ರಗಳು ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸುವ ಜೀವವೈವಿಧ್ಯ ಕೆಟೆಗೆರಿಯಲ್ಲಿ ಭಾರತದ ರ‍್ಯಾಕಿಂಗ್ 148 ಆಗಿದ್ದು ಇದು 127 ನೇ ರ‍್ಯಾಂಕ್​ ಹೊಂದಿರುವ ಪಾಕಿಸ್ತಾನಕ್ಕಿಂತ 21 ಸ್ಥಾನ ಕೆಳಗಿದೆ.

ಇದನ್ನೂ ಓದಿ: SDG India Index 2020-21 ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ಕೇರಳ ಪ್ರಥಮ, ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

Read Full Article

Click on your DTH Provider to Add TV9 Kannada