ಇಡೀ ಜಗತ್ತು ಭಾರತದ ಯುವಕರನ್ನು ಭರವಸೆಯಿಂದ ನೋಡುತ್ತಿದೆ; ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಪ್ರಧಾನಿ ಮೋದಿ ಘಟಿಕೋತ್ಸವ ಭಾಷಣ
Narendra Modi Speech: ಇಡೀ ಜಗತ್ತು ಭಾರತದ ಯುವಕರನ್ನು ಭರವಸೆಯಿಂದ ನೋಡುತ್ತಿದೆ. ಏಕೆಂದರೆ ನೀವು ದೇಶದ ಬೆಳವಣಿಗೆಯ ಎಂಜಿನ್ ಆಗಿದ್ದೀರಿ ಎಂದು ಅಣ್ಣಾ ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ನರೇಂದ್ರ ಮೋದಿ ಹೇಳಿದ್ದಾರೆ.
ಚೆನ್ನೈ: ತಮಿಳುನಾಡಿನ ಚೆನ್ನೈಗೆ 2ನೇ ಬಾರಿ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಅಣ್ಣಾ ವಿಶ್ವವಿದ್ಯಾನಿಲಯದ (Anna University) 42ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಚೆನ್ನೈನಲ್ಲಿ ಇಂದು ನಡೆದ ಅಣ್ಣಾ ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ (CM MK Stalin), ರಾಜ್ಯಪಾಲ ಆರ್.ಎನ್. ರವಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಘಟಿಕೋತ್ಸವ ಭಾಷಣ ಮಾಡಿದ್ದಾರೆ. ಯುವಕರು ಈ ದೇಶದ ಅಭಿವೃದ್ಧಿಯ ಇಂಜಿನ್ಗಳು. ನಮ್ಮ ದೇಶದ ಯುವಕರನ್ನು ಇಡೀ ಜಗತ್ತೇ ಭರವಸೆಯಿಂದ ನೋಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಯುವಕರ ಅಭಿವೃದ್ಧಿಯೇ ದೇಶದ ಬೆಳವಣಿಗೆ. ನಿಮ್ಮ ಕಲಿಕೆಯೇ ಭಾರತದ ಅಭಿವೃದ್ಧಿ. ನಿಮ್ಮ ಗೆಲುವೇ ಭಾರತದ ಗೆಲುವು. ನೀವು ಈಗಾಗಲೇ ನಿಮ್ಮ ಮನಸ್ಸಿನಲ್ಲಿ ನಿಮಗಾಗಿ ಭವಿಷ್ಯವನ್ನು ನಿರ್ಮಿಸಿಕೊಂಡಿದ್ದೀರಿ. ಆದ್ದರಿಂದ, ಇಂದು ಸಾಧನೆಗಳ ದಿನ ಮಾತ್ರವಲ್ಲದೆ ಆಕಾಂಕ್ಷೆಯ ದಿನವೂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Prime Minister Narendra Modi attends the 42nd convocation of Anna University in Chennai
Tamil Nadu Governor RN Ravi and CM MK Stalin also present pic.twitter.com/xyyTHgqeZC
— ANI (@ANI) July 29, 2022
ಇಡೀ ಜಗತ್ತು ಭಾರತದ ಯುವಕರನ್ನು ಭರವಸೆಯಿಂದ ನೋಡುತ್ತಿದೆ. ಏಕೆಂದರೆ ನೀವು ದೇಶದ ಬೆಳವಣಿಗೆಯ ಎಂಜಿನ್‌ಗಳು. ಹಾಗೇ, ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಿದೆ. ನಿಮ್ಮೆಲ್ಲರ ಕನಸುಗಳೂ ಈಡೇರಲಿ ಎಂದು ನಾನು ಹಾರೈಸುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
Today is not only a day of achievement, but also of aspirations. I wish that all the dreams of our youth come true. To teachers & other staff members, you are nation-builders, who are creating the leaders of tomorrow: PM Modi at Anna University pic.twitter.com/DVdxkp6Z9N
— ANI (@ANI) July 29, 2022
ಇದನ್ನೂ ಓದಿ: International Bullion Exchange: ಭಾರತದ ಮೊದಲ ಜಾಗತಿಕ ಚಿನ್ನ-ಬೆಳ್ಳಿ ವಿನಿಮಯ ಕೇಂದ್ರಕ್ಕೆ ಇಂದು ನರೇಂದ್ರ ಮೋದಿ ಚಾಲನೆ
ಕಳೆದ ವರ್ಷ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿತ್ತು. ಈಗೀಗ ನಾವೀನ್ಯತೆಯೇ ಜೀವನ ವಿಧಾನವಾಗುತ್ತಿದೆ. ಕಳೆದ 6 ವರ್ಷಗಳಲ್ಲಿ, ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಶೇ. 15,000ರಷ್ಟು ಹೆಚ್ಚಾಗಿದೆ. ಕಳೆದ ವರ್ಷ, ಭಾರತವು 83 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ದಾಖಲೆಯ ಎಫ್‌ಡಿಐ ಅನ್ನು ಸ್ವೀಕರಿಸಿದೆ. ನಮ್ಮ ಸ್ಟಾರ್ಟ್‌ಅಪ್‌ಗಳು ಸಹ ಕೊವಿಡ್ ಸಾಂಕ್ರಾಮಿಕ ನಂತರದ ದಾಖಲೆಯ ಹಣವನ್ನು ಸಂಪಾದಿಸುತ್ತಿವೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
Delighted to join the 42nd convocation ceremony of Anna University in Chennai. https://t.co/FYxoDnfxi3
— Narendra Modi (@narendramodi) July 29, 2022
ಮೊದಲು ಸಮಾಜದಲ್ಲಿ ಒಬ್ಬ ಯುವಕ ತಾನು ಉದ್ಯಮಿ ಎಂದು ಹೇಳುವುದು ಕಷ್ಟಕರವಾಗಿತ್ತು. ಜನರೆಲ್ಲರೂ ಆತನಿಗೆ ಈ ಕೈ ಸುಟ್ಟುಕೊಳ್ಳುವ ಉದ್ಯಮ ಬಿಟ್ಟು ಒಳ್ಳೆ ಉದ್ಯೋಗ ಹುಡುಕಿಕೊಂಡು ಬೇಗ ಸೆಟಲ್ ಆಗು ಎಂದು ಸಲಹೆ ನೀಡುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿದೆ. ಯುವಕರು ಹೆಚ್ಚೆಚ್ಚು ಸ್ಟಾರ್ಟ್ಅಪ್ಗಳನ್ನು ಆರಂಭಿಸುತ್ತಿದ್ದಾರೆ. ತಮ್ಮದೇ ಸ್ವಾವಲಂಬಿ ಉದ್ಯಮವನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.