ದೆಹಲಿ: ಕೊವಿಡ್ 19 ಸಾಂಕ್ರಾಮಿಕದಿಂದ ಬಿಕ್ಕಟ್ಟಿನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ದೀಪಾವಳಿವರೆಗೂ ಮುಂದುವರಿಸುವುದಾಗಿ ಪ್ರಧಾನಿ ಮೋದಿ ನಿನ್ನೆ ಘೋಷಣೆ ಮಾಡಿದ್ದಾರೆ. ಅದರ ಅನ್ವಯ ದೇಶದ 80 ಕೋಟಿ ನಾಗರಿಕರಿಗೆ ದೀಪಾವಳಿಯವರೆಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡುತ್ತೇವೆ. ಇಲ್ಲಿರುವ ಬಡವರು ಯಾರೂ ಹಸಿವಿನಿಂದ ಮಲಗಬಾರದು ಎಂಬುದೇ ನಮ್ಮ ಉದ್ದೇಶ ಎಂದು ನಿನ್ನೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದಾರೆ.
2020ರ ಅಕ್ಟೋಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಈ ಉಚಿತ ಆಹಾರ ಧಾನ್ಯ ವಿತರಣೆಯ ಘೋಷಣೆ ಮಾಡಿದ್ದರು. 1.5 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ, 80 ಕೋಟಿ ಬಡವರಿಗೆ, ಏಳುತಿಂಗಳವರೆಗೆ ಉಚಿತ ಆಹಾರ-ಧಾನ್ಯವನ್ನು ಕೇಂದ್ರಸರ್ಕಾರ ಪೂರೈಸಲಿದೆ ಎಂದು ಹೇಳಿದ್ದರು. ಅದನ್ನೀಗ ದೀಪಾವಳಿಯವರೆಗೂ ಮುಂದುವರಿಸಿದ್ದಾರೆ. ಹಾಗೇ, ಜೂನ್ 21ರ ನಂತರ ದೇಶದ ಎಲ್ಲರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿಯೂ ನರೇಂದ್ರ ಮೋದಿ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ದೇಶದಲ್ಲಿ ಲಸಿಕೆ ಉತ್ಪಾದನೆ ಪ್ರಮಾಣ ಜಾಸ್ತಿಯಾಗಲಿದೆ. ಸದ್ಯ ದೇಶದ 7 ವಿವಿಧ ಕಂಪನಿಗಳು ವಿವಿಧ ರೀತಿಯ ಲಸಿಕೆ ಉತ್ಪಾದನೆಯಲ್ಲಿ ತೊಡಗಿವೆ. ಮೂರು ಲಸಿಕೆಗಳ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ ಎಂದೂ ಪ್ರಧಾನಿ ನರೇಂದ್ರ ಮೋದಿ ನಿನ್ನೆ ತಿಳಿಸಿದ್ದಾರೆ.
ಇದೀಗ ಮುಂದುವರಿದಿರುವ ಗರೀಬ್ ಕಲ್ಯಾಣ್ ಯೋಜನೆಯಿಂದ ಬಡವರು ನಿಟ್ಟುಸಿರು ಬಿಡುವಂತಾಗಿದೆ. ಪ್ರಸ್ತುತ ಬಹುತೇಕ ರಾಜ್ಯಗಳಲ್ಲಿ ಲಾಕ್ಡೌನ್, ಕರ್ಫ್ಯೂದಂತ ಕೊವಿಡ್ 19 ನಿಯಂತ್ರಣ ಕ್ರಮಗಳನ್ನು ಹೇರಲಾಗಿದ್ದರಿಂದ ದುಡಿಮೆ ಕಷ್ಟವೇ ಆಗಿತ್ತು. ಹೀಗಿರುವಾಗ ಗರೀಬ್ ಕಲ್ಯಾಣ್ ಯೋಜನೆ ತುಂಬ ಅನುಕೂಲವಾಗಿದ್ದು, ಇದಕ್ಕಾಗಿ
ಆನ್ಲೈನ್ನಲ್ಲಿ ಅಪ್ಲೈ ಮಾಡುವ ವಿಧಾನ ಇಲ್ಲಿದೆ..
1. ಮೊದಲು https://pmuy.gov.in ವೆಬ್ಸೈಟ್ಗೆ ಭೇಟಿಕೊಡಿ
2. ಅಲ್ಲಿ ಹೋಂ ಪೇಜ್ನಲ್ಲಿ ಕಾಣಿಸುವ ಸ್ಕೀಮ್ ಆಯ್ಕೆ ಮಾಡಿ, ಅದರ ಫಾರ್ಮ್ನ್ನು ಡೌನ್ಲೋಡ್ ಮಾಡಿ.
3. ಉಜ್ವಲ ಯೋಜನೆ ಫಾರ್ಮ್ನ್ನು ಸರಿಯಾಗಿ ತುಂಬಿ ನಂತರ ಸಬ್ಮಿಟ್ ಬಟನ್ ಒತ್ತಿ.
4. ಈ ಯೋಜನೆಗೆ ಅಪ್ಲೈ ಮಾಡುವಾಗ ಆಧಾರ್ಕಾರ್ಡ್, ರೇಶನ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಮತ್ತು ವೋಟರ್ ಐಡಿ ಕಾರ್ಡ್ಗಳ ದೃಢೀಕರಣ ಅತ್ಯಗತ್ಯವಾಗಿದೆ.
5. ಅತಿಮುಖ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಯೋಜನೆ ಅನ್ವಯ ಆಗುತ್ತದೆ.
ಇದನ್ನೂ ಓದಿ: ಕೊರೊನಾದಿಂದ ಗುಣಮುಖರಾದ ಮಕ್ಕಳಲ್ಲಿ ‘ಮಿಸ್ಸಿ’ ಸಮಸ್ಯೆ, ಬಾಗಲಕೋಟೆಯಲ್ಲಿ ಐವರಿಗೆ ಚಿಕಿತ್ಸೆ
(PM Narendra Modi extends Pradhan Mantri Garib Kalyan Yojana check here to know apply method)
Published On - 10:15 am, Tue, 8 June 21