ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಜತೆ ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ. ಎಸ್‌ಸಿಒ ಶೃಂಗಸಭೆಯ (SCO Summit) ಹಿನ್ನಲೆಯಲ್ಲಿ ಸಮರ್‌ಕಂಡ್‌ನಲ್ಲಿ ತಮ್ಮ ಸಭೆಯ ನಂತರ, ಉಭಯ ನಾಯಕರು ಇಂಧನ ಸಹಕಾರ, ವ್ಯಾಪಾರ ಮತ್ತು ಹೂಡಿಕೆಗಳು, ರಕ್ಷಣೆ ಮತ್ತು ಭದ್ರತಾ ಸಹಕಾರ ಮತ್ತು ಇತರ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಂತೆ ದ್ವಿಪಕ್ಷೀಯ ಸಂಬಂಧದ ಹಲವಾರು ಅಂಶಗಳ ಬಗ್ಗೆ ಮಾತನಾಡಿದ್ದಾರೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಸಂದರ್ಭದಲ್ಲಿ, ಮಾತುಕತೆ ಮತ್ತು ರಾಜತಾಂತ್ರಿಕತೆ ಏಕೈಕ ಮಾರ್ಗವಾಗಿದೆ ಎಂದು ಮೋದಿ ಪುಟಿನ್ ಅವರಲ್ಲಿ ಹೇಳಿದ್ದಾರೆ. ಮೋದಿ, ಪುಟಿನ್ ಅವರಿಗೆ ಜಿ-20 ರ ಭಾರತದ ಪ್ರಸ್ತುತ ಅಧ್ಯಕ್ಷೀಯತೆಯ ಬಗ್ಗೆ ವಿವರಿಸಿದರು. ಅದರ ಪ್ರಮುಖ ಆದ್ಯತೆಗಳನ್ನು ಎತ್ತಿ ತೋರಿಸಿದರು. ಶಾಂಘೈ ಸಹಕಾರ ಸಂಘಟನೆಯ ಭಾರತದ ಅಧ್ಯಕ್ಷತೆಯಲ್ಲಿ ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದ ನಾಯಕರು ಪರಸ್ಪರ ನಿಯಮಿತ ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದಾರೆ ಎಂದ ಅಧಿಕಾರಿಗಳು ಹೇಳಿದ್ದಾರೆ.
PM Modi and President Putin reviewed bilateral ties in areas of energy, trade and investments, defence cooperation: Officials
— Press Trust of India (@PTI_News) December 16, 2022
ಈ ವರ್ಷ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಮೋದಿ ಅವರು ರಷ್ಯಾಕ್ಕೆ ಪ್ರಯಾಣಿಸುವುದಿಲ್ಲ ಎಂಬ ಸುದ್ದಿ ಹೊರಬಿದ್ದ ದಿನಗಳ ನಂತರ ಫೋನ್ ಸಂಭಾಷಣೆ ನಡೆದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:41 pm, Fri, 16 December 22