Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಕಚೇರಿಗೆ ಭೇಟಿ ನೀಡಿದ ಮಕ್ಕಳು; ವಿಡಿಯೊ ಹಂಚಿಕೊಂಡ ನರೇಂದ್ರ ಮೋದಿ

ಪ್ರಧಾನಿ ಕಚೇರಿಗೆ ಭೇಟಿ ನೀಡಿದ ಬಾಲಕಿಯೊಬ್ಬಳು ಇದೊಂದು ಉತ್ತಮ ಅವಕಾಶವಾಗಿತ್ತು. ಮುಂದೆ ಈ ರೀತಿಯ ಹಲವು ಅವಕಾಶಗಳಿವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾಳೆ.  ಕ್ರಿಶ್ಚಿಯನ್ ಸಮುದಾಯದ ಸದಸ್ಯರೊಂದಿಗೆ ಪ್ರಧಾನ ಮಂತ್ರಿ ನಡೆಸಿದ ಸಂವಾದದ ಸಮಯದಲ್ಲಿ ವಿದ್ಯಾರ್ಥಿಗಳ ಗುಂಪು ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಹಾಡುವುದು ಸಹ ವಿಡಿಯೊದಲ್ಲಿದೆ.

ಪ್ರಧಾನಿ ಕಚೇರಿಗೆ ಭೇಟಿ ನೀಡಿದ ಮಕ್ಕಳು; ವಿಡಿಯೊ ಹಂಚಿಕೊಂಡ ನರೇಂದ್ರ ಮೋದಿ
ಮೋದಿ ಕಚೇರಿಯಲ್ಲಿ ಮಕ್ಕಳು
Follow us
ರಶ್ಮಿ ಕಲ್ಲಕಟ್ಟ
|

Updated on: Dec 27, 2023 | 3:11 PM

ದೆಹಲಿ ಡಿಸೆಂಬರ್ 27: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕ್ರಿಸ್‌ಮಸ್‌ (Christmas) ಪ್ರಯುಕ್ತ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಹೊತ್ತಲ್ಲಿ ಶಾಲಾ ವಿದ್ಯಾರ್ಥಿಗಳು ತಮ್ಮ ಸಂತಸ ಹಂಚಿಕೊಂಡಿರುವ ವಿಡಿಯೊವನ್ನು ಬುಧವಾರ ಹಂಚಿಕೊಂಡಿದ್ದಾರೆ. ಮಕ್ಕಳು ಥಂಬ್ಸ್-ಅಪ್ ನೀಡಿದ ಕಾರಣ ನಮ್ಮ ಕಚೇರಿ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಪ್ರಧಾನ ಮಂತ್ರಿ ಕಚೇರಿ ಮತ್ತು ಕೇಂದ್ರ ಸಂಪುಟ ಸಭೆಗಳನ್ನು ಆಯೋಜಿಸುವ ಕಾನ್ಫರೆನ್ಸ್ ಕೊಠಡಿ ಸೇರಿದಂತೆ ಅವರ ನಿವಾಸದ ವಿವಿಧ ಭಾಗಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿರುವುದು ವಿಡಿಯೊದಲ್ಲಿದೆ.

ಇದೊಂದು ಉತ್ತಮ ಅವಕಾಶವಾಗಿತ್ತು. ಮುಂದೆ ಈ ರೀತಿಯ ಹಲವು ಅವಕಾಶಗಳಿವೆ ಎಂದು ನಾನು ಭಾವಿಸುತ್ತೇನೆ ಎಂದು ಬಾಲಕಿಯೊಬ್ಬಳು ಹೇಳಿದ್ದಾಳೆ.  ಕ್ರಿಶ್ಚಿಯನ್ ಸಮುದಾಯದ ಸದಸ್ಯರೊಂದಿಗೆ ಪ್ರಧಾನ ಮಂತ್ರಿ ನಡೆಸಿದ ಸಂವಾದದ ಸಮಯದಲ್ಲಿ ವಿದ್ಯಾರ್ಥಿಗಳ ಗುಂಪು ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಹಾಡುವುದು ಸಹ ವಿಡಿಯೊದಲ್ಲಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿ, “ಕುತೂಹಲದ ಯುವ ಮನಸ್ಸುಗಳು 7, LKMಗೆ ಭೇಟಿ ನೀಡಿದ್ದಾರೆ. ನನ್ನ ಕಚೇರಿಯು ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಎಂದು ತೋರುತ್ತದೆ ಅವರು ಅದನ್ನು ಥಂಬ್ಸ್ ಅಪ್ ಕೊಟ್ಟಿದ್ದಾರೆ ಎಂದಿದ್ದಾರೆ.

ಕಚೇರಿ ಒಳಗೆ ಮಕ್ಕಳು ನೋಡಿದ್ದೇನು?

ನಟರಾಜ ಪ್ರತಿಮೆ, ಅಶೋಕ ಸ್ತಂಭದ ಪ್ರತಿಕೃತಿ, ಅನೇಕ ಸುಂದರವಾದ ವರ್ಣಚಿತ್ರಗಳು, ಕಚೇರಿ ಛಾವಣಿಯ ಮೇಲೆ ವಿಶ್ವ ನಕ್ಷೆ, ದೀಪಗಳ ಮೂಲಕ ಭವ್ಯ ಅಲಂಕಾರ, ವಿಶೇಷ ಅತಿಥಿ ಕೊಠಡಿಗಳು, ಎಲ್ಲಿ, ಏನು ಮತ್ತು ಹೇಗೆ ಕೆಲಸ ಮಾಡಲಾಗುತ್ತದೆ? ಕ್ಯಾಬಿನೆಟ್ ಮೀಟಿಂಗ್ ಹಾಲ್ ಇತ್ಯಾದಿ.

ಇದನ್ನೂ ಓದಿ: Viksit Bharat Sankalp Yatra: ಸರ್ಕಾರದ ಯೋಜನೆಗಳಿಂದ ವಂಚಿತರಾಗಿರುವವರ ಬಳಿ ತಲುಪುವುದೇ ನಮ್ಮ ಉದ್ದೇಶ: ಮೋದಿ

ವಿಡಿಯೊದಲ್ಲೇನಿದೆ

ಪ್ರಧಾನಮಂತ್ರಿ ಅವರು ಹಂಚಿಕೊಂಡಿರುವ ವಿಡಿಯೊದ ಆರಂಭದಲ್ಲಿ, ವಿದ್ಯಾರ್ಥಿಗಳು ಮೆರ್ರಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಹಾಡುವುದನ್ನು ಕೇಳಬಹುದು. ಈ ವೇಳೆ ಪ್ರಧಾನಿಯವರು ಕ್ರೈಸ್ತ ಸಮುದಾಯದವರೊಂದಿಗೆ ಮಾತನಾಡುತ್ತಿದ್ದಾರೆ. ಅವರು ಕೆಲವು ಮಕ್ಕಳೊಂದಿಗೆ ಮಾತನಾಡಿ, ಅವರು ಪ್ರಧಾನಿಯವರ ಮನೆಯನ್ನು ನೋಡಿದ್ದೀರಾ? ಎಂದು ಕೇಳುತ್ತಾರೆ. ಇದಕ್ಕೆ ಮಕ್ಕಳು ಇಲ್ಲ ಎಂದು ಉತ್ತರಿಸಿದರು. ಈ ಕುರಿತು ಪ್ರಧಾನಿ ಮೋದಿ ಅವರು, ನನ್ನ ತಂಡವು ನಿಮ್ಮನ್ನು ಅಲ್ಲಿಗೆ ಪ್ರವಾಸಕ್ಕೆ ಕರೆದೊಯ್ಯುತ್ತದೆ ಎಂದು ಹೇಳಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ