‘ಅಗ್ನಿತೀರ್ಥ’ದಲ್ಲಿ ಪವಿತ್ರಸ್ನಾನ; ರಾಮೇಶ್ವರಂ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿ
ರುದ್ರಾಕ್ಷಿ ಮಾಲೆ ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡಿನ ಪುರಾತನ ಶಿವ ದೇವಾಲಯ ರಾಮನಾಥಸ್ವಾಮಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರಿಗೆ ಪುರೋಹಿತರು ಸಾಂಪ್ರದಾಯಿಕ ಗೌರವ ನೀಡುದ್ದು, ದೇಗುಲದಲ್ಲಿ ನಡೆಯುವ ‘ಭಜನೆ’ಯಲ್ಲಿಯೂ ಮೋದಿ ಭಾಗವಹಿಸಿದ್ದಾರೆ.
ರಾಮೇಶ್ವರಂ ಜನವರಿ 20: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಶನಿವಾರ ‘ಅಗ್ನಿ ತೀರ್ಥ’ದಲ್ಲಿ(Angi theerth) ಪವಿತ್ರ ಸ್ನಾನ ಮಾಡಿದ ನಂತರ ಶ್ರೀ ರಾಮನಾಥಸ್ವಾಮಿ ದೇವಸ್ಥಾನದಲ್ಲಿ (Lord Ramanathaswamy temple)ಪೂಜೆ ಸಲ್ಲಿಸಿದರು. ರುದ್ರಾಕ್ಷಿ ಮಾಲೆ ಧರಿಸಿದ್ದ ಮೋದಿ, ತಮಿಳುನಾಡಿನ ಪುರಾತನ ಶಿವ ದೇವಾಲಯ ರಾಮನಾಥಸ್ವಾಮಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರಿಗೆ ಪುರೋಹಿತರು ಸಾಂಪ್ರದಾಯಿಕ ಗೌರವಗಳನ್ನು ನೀಡಿದ್ದಾರೆ. ದೇಗುಲದಲ್ಲಿ ನಡೆಯುವ ‘ಭಜನೆ’ಯಲ್ಲಿಯೂ ಮೋದಿ ಭಾಗವಹಿಸಿದ್ದರು.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದಲ್ಲಿರುವ ಶಿವ ದೇವಾಲಯವು ರಾಮಾಯಣದೊಂದಿಗೆ ಸಂಪರ್ಕವನ್ನು ಹೊಂದಿದೆ.ಇಲ್ಲಿರುವ ಶಿವಲಿಂಗವನ್ನು ಶ್ರೀರಾಮನು ಸ್ಥಾಪಿಸಿದ್ದ ಎಂದು ನಂಬಲಾಗಿದೆ. ಶ್ರೀರಾಮ ಮತ್ತು ಸೀತಾದೇವಿ ಇಲ್ಲಿ ಪ್ರಾರ್ಥಿಸಿದ್ದರಂತೆ.
#Watch | Prime Minister @narendramodi takes a holy dip at Ramanathaswamy temple in Rameshwaram,Tamil Nadu. PM Modi followed a 22 step purification process through 22 tirthas. pic.twitter.com/XupqGlPJJr
— DD News (@DDNewslive) January 20, 2024
ತಿರುಚಿರಾಪಳ್ಳಿ ಜಿಲ್ಲೆಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ, ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಇಲ್ಲಿಗೆ ಆಗಮಿಸಿದ ಮೋದಿ ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಜನರು ಅದ್ದೂರಿ ಸ್ವಾಗತ ನೀಡಿದ್ದಾರೆ.
ದೇವಾಲಯದಲ್ಲಿ ಪೂಜಿಸಲ್ಪಡುವ ಮುಖ್ಯ ದೇವರು ಶ್ರೀ ರಾಮನಾಥಸ್ವಾಮಿ, ಇದು ಶಿವನ ರೂಪವಾಗಿದೆ. ಈ ದೇವಾಲಯದಲ್ಲಿನ ಮುಖ್ಯ ಲಿಂಗವನ್ನು ಶ್ರೀ ರಾಮ ಮತ್ತು ಮಾತೆ ಸೀತೆ ಪ್ರತಿಷ್ಠಾಪಿಸಿ ಪೂಜಿಸಿದರು ಎಂಬುದು ವ್ಯಾಪಕವಾದ ನಂಬಿಕೆಯಾಗಿದೆ.
#WATCH | Prime Minister Narendra Modi offers prayers at Sri Arulmigu Ramanathaswamy Temple in Rameswaram
The main deity worshipped in this temple is Sri Ramanathaswamy, which is a form of Bhagwan Shiva. It is a widely held belief that the main lingam in this temple was… pic.twitter.com/EF7YBMV87P
— ANI (@ANI) January 20, 2024
ಇದು ಚಾರ್ ಧಾಮಗಳಲ್ಲಿ ಒಂದಾಗಿದೆ- ಬದರಿನಾಥ್, ದ್ವಾರಕಾ, ಪುರಿ ಮತ್ತು ರಾಮೇಶ್ವರಂ. ಇದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಮಧ್ಯಾಹ್ನ 2.10ಕ್ಕೆ ಹೆಲಿಕಾಪ್ಟರ್ ಮೂಲಕ ರಾಮೇಶ್ವರಂ ಪಕರುಂಬುವಿನ ಅಮೃತಾನಂದ ಶಾಲಾ ಆವರಣಕ್ಕೆ ಪ್ರಧಾನಿ ಮೋದಿ ಆಗಮಿಸಿದರು. ಅಲ್ಲಿಂದ ಮಧ್ಯಾಹ್ನ 3.10ಕ್ಕೆ ಅಗ್ನಿತೀರ್ಥದಲ್ಲಿ ಪುಣ್ಯಸ್ನಾನ ಮಾಡಿದರು. ನಂತರ ದೇವಸ್ಥಾನದಲ್ಲಿ ರಾಮಾಯಣ ಪಥ ಮತ್ತು ಭಜನಾ ಸಂಧ್ಯಾ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡರು.
ಪ್ರಸ್ತುತ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಅವರ ‘ಪ್ರಾಣ ಪ್ರತಿಷ್ಠಾ’ದವರೆಗೆ 11 ದಿನಗಳ ವ್ರತಾಚರಣೆಯಲ್ಲಿರುವ ಪ್ರಧಾನಿ ಮೋದಿ ಶನಿವಾರ ತಿರುಚಿರಾಪಳ್ಳಿಗೆ ಆಗಮಿಸಿದರು. ಇದಕ್ಕೂ ಮುನ್ನ ಪ್ರಧಾನಿಯವರು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ, ತಮ್ಮ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ದೇವಾಲಯದ ಆವರಣದಲ್ಲಿ ‘ಆಂಡಾಳ್’ ಎಂಬ ಆನೆಯ ಬಳಿ ಆಶೀರ್ವಾದ ಪಡೆದರು.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ: ಜನವರಿ 22ರ ಪ್ರಧಾನಿ ಮೋದಿ ದಿನಚರಿ ಇಲ್ಲಿದೆ
ಪ್ರಧಾನಿ ಮೋದಿ ಅವರು ಭಾನುವಾರ ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ದರ್ಶನಕ್ಕೆ ನಿಗದಿಯಾಗಿದ್ದು, ದೇಗುಲದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ರಾಮಸೇತು ನಿರ್ಮಿಸಿದ ಸ್ಥಳ ಎಂದು ಹೇಳಲಾಗುವ ಅರಿಚಲ್ ಮುನೈಗೆ ಭೇಟಿ ನೀಡಲಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ, ಎಂಟು ವಿಭಿನ್ನ ಸಾಂಪ್ರದಾಯಿಕ ಮಂಡಲಿಗಳು ಸಂಸ್ಕೃತ, ಅವಧಿ, ಕಾಶ್ಮೀರಿ, ಗುರುಮುಖಿ, ಅಸ್ಸಾಮಿ, ಬೆಂಗಾಲಿ, ಮೈಥಿಲಿ ಮತ್ತು ಗುಜರಾತಿ ರಾಮಕಥೆಗಳನ್ನು ಪಠಿಸುತ್ತಾರೆ. ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ಪ್ರಧಾನಿ ಮೋದಿ ಅವರು ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳದ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:47 pm, Sat, 20 January 24