
ಚಂಡೀಗಢ, ಜುಲೈ 16: ಭಾರತೀಯ ರೈಲ್ವೆ ಇತಿಹಾಸದಲ್ಲಿ ನಾಳೆ (ಜುಲೈ 17) ಮತ್ತೊಂದು ಸುವರ್ಣ ಅಧ್ಯಾಯ ಸೃಷ್ಟಿಯಾಗಲಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ತಯಾರಾಗಿರುವ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ (Hydrogen-powered train) ನಾಳೆ ಹರಿಯಾಣದ ಜಿಂದ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಹಸಿರು ನಿಶಾನೆ ತೋರಿಸಲಿದ್ದಾರೆ. ಚೆನ್ನೈನ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಲ್ಲಿ (ICF) ವಿನ್ಯಾಸಗೊಳಿಸಲಾದ ಈ ರೈಲಿನ ಉದ್ಘಾಟನೆಯೊಂದಿಗೆ, ಪರಿಸರಸ್ನೇಹಿ ರೈಲು ಸಾರಿಗೆಗಾಗಿ ಹೈಡ್ರೋಜನ್ ತಂತ್ರಜ್ಞಾನ ಬಳಸುತ್ತಿರುವ ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕದಂತಹ ವಿಶ್ವದ ಆಯ್ದ ದೇಶಗಳ ಸಾಲಿಗೆ ಭಾರತವೂ ಸೇರಲಿದೆ. ಈ ಪ್ರತಿ ರೈಲಿಗೆ ಸುಮಾರು 80 ಕೋಟಿ ವೆಚ್ಚವಾಗಲಿದೆ.
ಈ ರೈಲಿನ ವಿಶೇಷತೆಯೇನು?:
ಪರಿಸರ ಮಾಲಿನ್ಯ ಮುಕ್ತ ಮತ್ತು ಇಂಧನ ದಕ್ಷತೆಯ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯ ಈ ಪ್ರಾಯೋಗಿಕ ಯೋಜನೆ ದೇಶದ ಮೂಲಸೌಕರ್ಯ ರಂಗದಲ್ಲಿ ದೊಡ್ಡ ಮೈಲಿಗಲ್ಲಾಗಿದೆ. ಸಾಂಪ್ರದಾಯಿಕ ಡೀಸೆಲ್ ರೈಲುಗಳಿಗಿಂತ ಈ ಹೈಡ್ರೋಜನ್ ರೈಲುಗಳು ಅತ್ಯಂತ ಶಬ್ದರಹಿತವಾಗಿ ಚಲಿಸಲಿವೆ. ಘಟಕದಲ್ಲಿ ಹೈಡ್ರೋಜನ್ ಸೋರಿಕೆ ಪತ್ತೆಹಚ್ಚುವ ಯಂತ್ರಗಳು ಮತ್ತು ಜ್ವಾಲೆ ಪತ್ತೆಹಚ್ಚುವ ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, ಧೂಳು ಕುಳಿತುಕೊಳ್ಳದಂತೆ ಇವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತದೆ. ಇಲ್ಲಿ ನಿಯೋಜಿಸಲಾದ ಸಿಬ್ಬಂದಿ ಮತ್ತು ರೈಲು ಚಾಲಕರಿಗೆ ಕಟ್ಟುನಿಟ್ಟಾದ ವಿಶೇಷ ತರಬೇತಿ ನೀಡಿ ಸಾಮರ್ಥ್ಯ ಪ್ರಮಾಣಪತ್ರಗಳನ್ನು ನೀಡಲಾಗಿದೆ.
First things first… 👀
𝐈𝐧𝐝𝐢𝐚’𝐬 𝐟𝐢𝐫𝐬𝐭 𝐡𝐲𝐝𝐫𝐨𝐠𝐞𝐧-𝐩𝐨𝐰𝐞𝐫𝐞𝐝 𝐭𝐫𝐚𝐢𝐧 𝐢𝐬 𝐡𝐞𝐫𝐞! 🚆
Don’t miss this journey. 😎⬇️ pic.twitter.com/LqIze7ydkg
— BJP (@BJP4India) July 16, 2026
ಇದನ್ನೂ ಓದಿ: ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಜುಲೈ 17 ಕ್ಕೆ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ
ಜಾಗತಿಕವಾಗಿ ಚಲಿಸುವ ಬಹುತೇಕ ಹೈಡ್ರೋಜನ್ ರೈಲುಗಳು ಕೇವಲ 2ರಿಂದ 4 ಬೋಗಿಗಳನ್ನು ಹೊಂದಿದ್ದು, ಸಣ್ಣ ಪ್ರಾದೇಶಿಕ ಮಾರ್ಗಗಳಲ್ಲಿ ಮಾತ್ರ ಸಂಚರಿಸುತ್ತವೆ. ಆದರೆ, ಭಾರತದ ಈ ಹೊಸ ರೈಲು 10 ಬೋಗಿಗಳನ್ನು ಹೊಂದಿದ್ದು, ವಿಶ್ವದ ಅತಿ ದೊಡ್ಡ ಹೈಡ್ರೋಜನ್ ಚಾಲಿತ ಪ್ರಯಾಣಿಕ ರೈಲುಗಳಲ್ಲಿ ಒಂದಾಗಿದೆ. ಈ ಯೋಜನೆಯ ಅಂಗವಾಗಿ ದೇಶದ ಅತಿ ದೊಡ್ಡ ರೈಲ್ವೆ ಹೈಡ್ರೋಜನ್ ಸಂಗ್ರಹಣೆ ಮತ್ತು ಇಂಧನ ಮರುಪೂರಣ ಘಟಕವನ್ನು ಹರಿಯಾಣದ ಜಿಂದ್‌ನಲ್ಲಿ ಸ್ಥಾಪಿಸಲಾಗಿದೆ. ಈ 10 ಬೋಗಿಗಳ ರೈಲು ಗಂಟೆಗೆ 75 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಆದರೆ, ಇದನ್ನು ಗರಿಷ್ಠ 110 ಕಿಲೋಮೀಟರ್ ವೇಗದಲ್ಲಿಯೂ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ.
ಬೋಗಿಗಳ ವಿನೂತನ ವಿನ್ಯಾಸ:
ಈ ರೈಲಿನಲ್ಲಿ ಎರಡು ಹೈಡ್ರೋಜನ್ ಡ್ರೈವಿಂಗ್ ಪವರ್ ಕಾರ್‌ಗಳು (DPCs) ಮತ್ತು 8 ಟ್ರೈಲರ್ ಕೋಚ್‌ಗಳು (TCs) ಇರಲಿದ್ದು, ಏಕಕಾಲಕ್ಕೆ ಸುಮಾರು 2,600 ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದು. ಪ್ರತಿ ಪವರ್ ಕಾರ್‌ನಲ್ಲಿ ಇಂಧನ ಕೋಶಗಳು, ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿಗಳು ಮತ್ತು ಹೈಡ್ರೋಜನ್ ಸಂಗ್ರಹಣಾ ಸಿಲಿಂಡರ್‌ಗಳನ್ನು ಅಳವಡಿಸಲಾಗಿದೆ. ಈ ರೈಲು 89 ಕಿಲೋಮೀಟರ್ ಉದ್ದದ ಜಿಂದ್-ಸೋನಿಪತ್ ಪ್ರತ್ಯೇಕ ರೈಲು ಮಾರ್ಗದಲ್ಲಿ ಸಂಚರಿಸಲಿದೆ.
#WATCH | Jind, Haryana: Prime Minister Narendra Modi will flag off India’s first hydrogen-powered train between Jind and Sonipat tomorrow
The train has been developed using indigenous technology. The train is powered by hydrogen fuel cell technology, which converts hydrogen into… pic.twitter.com/JUbWycjE9N
— ANI (@ANI) July 16, 2026
ರೈಲಿನ ವೇಳಾಪಟ್ಟಿ:
ಈ ರೈಲು ತನ್ನ ನಿಯಮಿತ ಸೇವೆಯ ಅವಧಿಯಲ್ಲಿ ಜಿಂದ್ ರೈಲು ನಿಲ್ದಾಣದಿಂದ ಬೆಳಿಗ್ಗೆ 7.40ಕ್ಕೆ ಹೊರಟು, ಬೆಳಿಗ್ಗೆ 9.40ಕ್ಕೆ ಸೋನಿಪತ್ ತಲುಪಲಿದೆ. ಈ ರೈಲು ತನ್ನ ಪ್ರಯಾಣದ ಅವಧಿಯಲ್ಲಿ ಜಿಂದ್ ಸಿಟಿ, ಪಾಂಡು ಪಿಂಡಾರಾ, ಲಲಿತ್ ಖೇರಾ, ಭಾಂಬೇವಾ, ಇಶಾಪುರ್ ಖೇರಿ, ಬುಟಾನಾ, ಖಾಂದ್ರೈ, ಗೋಹಾನಾ, ರಾಭ್ರಾ, ಲಾತ್, ಮೋಹಾನಾ ಹರಿಯಾಣ ಮತ್ತು ಬರ್ವಾಸ್ನಿ ಸೇರಿದಂತೆ ಒಟ್ಟು 12 ನಿಲ್ದಾಣಗಳನ್ನು ಕವರ್ ಮಾಡಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:44 pm, Thu, 16 July 26