ಕೇದಾರನಾಥಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ; 130 ಕೋಟಿ ರೂ. ಮೌಲ್ಯದ ಯೋಜನೆಗಳ ಉದ್ಘಾಟನೆ
Adi Guru Shankaracharya: ಉತ್ತರಾಖಂಡದಲ್ಲಿ 2013ರಲ್ಲಿ ಉಂಟಾದ ಭಾರೀ ಪ್ರವಾಹದ ವೇಳೆ ಆದಿ ಗುರು ಶಂಕರಾಚಾರ್ಯರ ಸಮಾಧಿ ಸಂಪೂರ್ಣ ಹಾನಿಯಾಗಿತ್ತು. ಆ ಸಮಾಧಿಯನ್ನು ಮರು ನಿರ್ಮಾಣ ಮಾಡಲಾಗಿದ್ದು, ನಾಳೆ ಲೋಕಾರ್ಪಣೆಯಾಗಲಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಾಳೆ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದಾದ ಕೇದಾರನಾಥಕ್ಕೆ ಭೇಟಿ ನೀಡಲಿದ್ದು, ಉತ್ತರಾಖಂಡದಲ್ಲಿ 130 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಶುಕ್ರವಾರ ಬೆಳಗ್ಗೆ 6.30ಕ್ಕೆ ಉತ್ತರಾಖಂಡ್ ತಲುಪಲಿರುವ ಪ್ರಧಾನಿ ಮೋದಿ ಮರುನಿರ್ಮಾಣಗೊಂಡ ಆದಿ ಗುರು ಶಂಕರಾಚಾರ್ಯರ ಸಮಾಧಿ ಸ್ಥಳವನ್ನು ಅನಾವರಣಗೊಳಿಸಲಿದ್ದು, ಶಂಕರಾಚಾರ್ಯರ ಪ್ರತಿಮೆ ಉದ್ಘಾಟಿಸಲಿದ್ದಾರೆ.
ಹಾಗೇ, ಯಾತ್ರಾರ್ಥಿಗಳ ನಿವಾಸ ಸರಸ್ವತಿ ಘಾಟ್, ಸರಸ್ವತಿ ರಿಟೈನಿಂಗ್ ವಾಲ್ ಆಸ್ಥಾಪಥ್ ಮತ್ತು ಘಾಟ್‌ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮಂದಾಕಿನಿ ರಿಟೈನಿಂಗ್ ವಾಲ್ ಆಸ್ಥಾಪತ್ ಎಂಬ ಅರ್ಚಕರ ಮನೆ, ಮಂದಾಕಿನಿ ನದಿಯ ಗರುಡ್ಚಟ್ಟಿ ಸೇತುವೆ ಸೇರಿದಂತೆ ಮೂಲಸೌಕರ್ಯ ಯೋಜನೆಗಳನ್ನು ಮೋದಿ ಉದ್ಘಾಟನೆ ಮಾಡಲಿದ್ದಾರೆ. ಕೇದಾರನಾಥದ ಭೇಟಿ ವೇಳೆ ಸಾರ್ವಜನಿಕ ಱಲಿ ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.
ಕೇದಾರನಾಥ ದೇಗುಲದಲ್ಲಿ ಮಹಾ ರುದ್ರಾಭಿಷೇಕದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಕೇದಾರನಾಥದಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ಬಗೆಬಗೆಯ ಹೂಗಳಿಂದ ಕೇದಾರನಾಥ ಮಂದಿರಕ್ಕೆ ಅಲಂಕಾರ ಮಾಡಲಾಗಿದೆ. ಉತ್ತರಾಖಂಡದಲ್ಲಿ 2013ರಲ್ಲಿ ಉಂಟಾದ ಭಾರೀ ಪ್ರವಾಹದ ವೇಳೆ ಆದಿ ಗುರು ಶಂಕರಾಚಾರ್ಯರ ಸಮಾಧಿ ಸಂಪೂರ್ಣ ಹಾನಿಯಾಗಿತ್ತು. ಆ ಸಮಾಧಿಯನ್ನು ಮರು ನಿರ್ಮಾಣ ಮಾಡಲಾಗಿದ್ದು, ನಾಳೆ ಲೋಕಾರ್ಪಣೆಯಾಗಲಿದೆ.
Glimpses of the 12-foot Murti of Adi Guru Adi Shankaracharya to be inaugurated by PM Sh @narendramodi ji in Kedarnath tomorrow, Nov 5th.
On this occasion, pogrammes are being organized at Jyotirlingas, Jyotishpeeth & at the birthplace of the Jagadguru in Kalady, Kerala. pic.twitter.com/H71CHtX3af
— G Kishan Reddy (@kishanreddybjp) November 4, 2021
ನಾಳೆಯೇ ಶ್ರೀನಗರದ ಪ್ರಸಿದ್ಧ ಶಂಕರಾಚಾರ್ಯ ದೇವಸ್ಥಾನದಿಂದ ಹಿಡಿದು ಕೇರಳದ ಎರ್ನಾಕುಲಂನ ಆದಿ ಶಂಕರಾಚಾರ್ಯರ ಜನ್ಮಸ್ಥಳ ಮತ್ತು ಗುಜರಾತ್‌ನ ಸೋಮನಾಥ ದೇವಸ್ಥಾನದವರೆಗೆ ಬಿಜೆಪಿಯ ಹಲವಾರು ಕೇಂದ್ರ ಸಚಿವರು, ಬಿಜೆಪಿ ಸಂಸದರು ಮತ್ತು ಬಿಜೆಪಿಯ ಹಿರಿಯ ನಾಯಕರು ದೇಶದ 100ಕ್ಕೂ ಹೆಚ್ಚು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಶುಕ್ರವಾರ ಉತ್ತರಾಖಂಡದ ಕೇದಾರನಾಥಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಅಂದೇ 100ಕ್ಕೂ ಹೆಚ್ಚು ಪವಿತ್ರ ಸ್ಥಳಗಳಿಗೆ ಬಿಜೆಪಿ ನಾಯಕರು ಭೇಟಿ ನೀಡುವಂತೆ ಸೂಚನೆ ನೀಡಲಾಗಿದೆ. ಇದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಬಿಜೆಪಿ ಮಾಡಿಕೊಂಡಿದೆ.
ರಾಷ್ಟ್ರವ್ಯಾಪಿ ಕಾರ್ಯಕ್ರಮದ ಭಾಗವಾಗಿ, ಬಿಜೆಪಿಯು 12 ಜ್ಯೋತಿರ್ಲಿಂಗಗಳನ್ನು ಹೊರತುಪಡಿಸಿ ಪುರಿ (ಒಡಿಶಾ), ಶೃಂಗೇರಿ (ಕರ್ನಾಟಕ), ದ್ವಾರಕಾ (ಗುಜರಾತ್) ಮತ್ತು ಜ್ಯೋತಿರ್ಮಠ (ಉತ್ತರಾಖಂಡ)ದಲ್ಲಿರುವ ಆದಿ ಶಂಕರಾಚಾರ್ಯರಿಗೆ ಸಂಬಂಧಿಸಿದ ನಾಲ್ಕು ಧಾಮಗಳಿಗೆ ಸಾಧುಗಳು ಮತ್ತು ಭಕ್ತರನ್ನು ಆಹ್ವಾನಿಸಿದೆ. ಗುಜರಾತಿನ ಸೋಮನಾಥ ದೇವಾಲಯ ಮತ್ತು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಮತ್ತು 87 ಇತರ ಪ್ರಮುಖ ದೇವಾಲಯಗಳನ್ನು ಆದಿ ಶಂಕರಾಚಾರ್ಯರು ದೇಶಾದ್ಯಂತ ತಮ್ಮ ಪ್ರಯಾಣದ ಸಮಯದಲ್ಲಿ ನಡೆದ ಮಾರ್ಗದಲ್ಲಿ ಸ್ಥಾಪಿಸಲಾಯಿತು.
ಇದನ್ನೂ ಓದಿ: Kedarnath: ನ. 5ರಂದು ಕೇದಾರನಾಥಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಶಂಕರಾಚಾರ್ಯರ ಸಮಾಧಿ ಸ್ಥಳದ ಅನಾವರಣ